Ad Widget

Bangalore Serial Accident | ಬೆಂಗಳೂರು : ಸರಣಿ ಅಪಘಾತ – 9 ಕ್ಕೂ ಹೆಚ್ಚು ವಾಹನ ಜಖಂ : ಬೃಹತ್ ಟ್ರಾಫಿಕ್ ಜಾಮ್

FB_IMG_1670082704501
Ad Widget

Ad Widget

Ad Widget

ಬೆಂಗಳೂರಿನ ನಗರ ಸಮೀಪದ ಬೊಮ್ಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರ ಬಳಿ ವೇಗವಾಗಿ ಬಂದ ಲಾರಿ 9ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೃಹತ್‌ ಸರಣಿ ಅಪಘಾತಕ್ಕೆ (Bangalore Serial Accident) ಕಾರಣವಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Ad Widget

Ad Widget

Ad Widget

Ad Widget

ಬೆಂಗಳೂರು ಮಾರ್ಗವಾಗಿ ವೇಗವಾಗಿ ಬಂದ ತಮಿಳುನಾಡು ರಿಜಿಸ್ಟರ್‌ ಲಾರಿ ಟೋಲ್‌ ಸಮೀಪದ ಹಂಪ್ಸ್‌ ಬಳಿ ನಿಧಾನವಾಗಿ ಚಲಿಸುತ್ತಿದ್ದ ಕ್ಯಾಂಟರ್‌ ಸೇರಿದಂತೆ 9 ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮರಗಳನ್ನು ತುಂಬಿದ್ದ ಕ್ಯಾಂಟರ್‌ ಪಲ್ಟಿ ಹೊಡೆದಿದೆ. ಕ್ಯಾಂಟರ್‌ ಕೆಳಗೆ ಬೈಕ್‌ ಸಿಲುಕಿದ್ದು ಬೈಕ್‌ ಸವಾರನಿಗೆ ತೀವ್ರವಾಗಿ ಗಾಯವಾಗಿದೆ.

Ad Widget

Ad Widget

Ad Widget

Ad Widget

ಬೈಕ್‌ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಆತನ ಪರಿಸ್ಥಿತಿ ಗಂಭೀರ ಇದೆ ಎನ್ನಲಾಗಿದೆ. ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಆಟೋಗಳು, ಕಾರುಗಳು, ಬೈಕ್‌ಗಳು, ಕ್ಯಾಂಟರ್‌ ಸೇರಿದಂತೆ 12 ವಾಹನಗಳು ಜಖಂಗೊಂಡಿದೆ. ಕೆಲವು ವಾಹನ ಸವಾರರು ಅಪಘಾತ ತಪ್ಪಿಸಲು ಹೋಗಿ ರಸ್ತೆ ಪಕ್ಕದ ಡಿವೈಡರ್‌ಗಳಿಗೆ ಡಿಕ್ಕಿ ಹೊಡೆದಿದ್ದಾರೆ. ರಸ್ತೆ ಪಕ್ಕದಲ್ಲಿನ ಸೌತೆಕಾಯಿ ಮಾರಾಟ ಮಾಡುತ್ತಿದ್ದ ತಳ್ಳುವ ಗಾಡಿಗೂ ಲಾರಿ ಗುದ್ದಿದೆ.

ರಾಷ್ಟ್ರೀಯ ಹೆದ್ದಾರಿ 48ರ ಟೋಲ್‌ ಸಮೀಪದಲ್ಲಿ ಸರಣಿ ಅಪಘಾತವಾದ ಪರಿಣಾಮ ಬೆಂಗಳೂರು ಹಾಗೂ ತುಮಕೂರು ಮಾರ್ಗದ ಎರಡು ಕಡೆಯ ರಸ್ತೆಯಲ್ಲಿ ಬೃಹತ್‌ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಐದಾರು ಗಂಟೆಗಳ ಕಾಲ ಟ್ರಾಫಿಕ್‌ ಉಂಟಾದ ಪರಿಣಾಮ ಸಂಚಾರಿ ಪೊಲೀಸರು ಹರಸಾಹಸ ಪಟ್ಟರು. ವಾಹನಗಳ ತೆರವು ಮಾಡಲು ವಿಳಂಬವಾದ ಪರಿಣಾಮ ಹೆದ್ದಾರಿ ರಸ್ತೆಯಲ್ಲಿ ಆರೇಳು ಕಿಮೀ ದೂರ ಟ್ರಾಫಿಕ್‌ ಉಂಟಾಗಿತ್ತು. ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ಶಿವಕುಮಾರ್‌ ನೇತೃತ್ವದಲ್ಲಿ ಸಿಬ್ಬಂದಿ ನಿಯಂತ್ರಣ ಮಾಡಲು ಹರಸಾಹಸ ಪಟ್ಟರು.

Ad Widget

Ad Widget
Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: