Connect with us

Uncategorized

ಉಡುಪಿಯಲ್ಲೊಂದು ಕರುಳು ಹಿಂಡುವ ಘಟನೆ : ಅಪಘಾತದ ಗಾಯಾಳು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದರೂ ನೆರವಿಗೆ ಬಾರದೇ ಮಾನವೀಯತೆ ಮರೆತ ಸಾರ್ವಜನಿಕರು..! ಆತನನ್ನು ಹಿಡಿದು ಆಕ್ರಂದಿಸುವ ಗೆಳೆಯರ ವಿಡಿಯೋ ವೈರಲ್

Ad Widget

Ad Widget

Ad Widget

Ad Widget Ad Widget

ಕಾಪು: ಸಾರ್ವಜನಿಕರು ನೆರವಿಗೆ ಬಾರದೇ ಮಾನವೀಯತೆ ಮರೆತ ಕರಳು ಹಿಂಡುವ ಘಟನೆ ಉಡುಪಿಯ ಕಟಪಾಡಿ ಸಮೀಪ ಡಿ 2 ರಂದು ನಡೆದಿದೆ. ಗಾಯಾಳನ್ನು ಕೊಂಡೊಯ್ಯವಂತೆ ಆತನ ಇಬ್ಬರು ಗೆಳೆಯರು ಗೊಗರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Ad Widget

Ad Widget

Ad Widget

Ad Widget

Ad Widget

ಉದ್ಯಾವರದಿಂದ ಉಚ್ಚಿಲಕ್ಕೆ ತೆರಳುತ್ತಿದ್ದ ಸ್ಕೂಟಿಗೆ ಟಿಪ್ಪರ್ ಢಿಕ್ಕಿಯಾಗಿ ಸಹ ಸವಾರ ಸುಶಿಕ್ಷಿತ್ ಭಂಡಾರಿ (20) ಮೃತಪಟ್ಟು, ಸವಾರ ಜಯದೀಪ್ ಗಂಭೀರವಾಗಿ ಗಾಯಗೊಂಡ ಘಟನೆ ರಾ.ಹೆ. 66ರ ಕಟಪಾಡಿ ಜಂಕ್ಷನ್ ಬಳಿ ಶುಕ್ರವಾರ ಸಂಭವಿಸಿತ್ತು.

Ad Widget

Ad Widget

ಅಪಘಾತದ ವೇಳೆ ಸುಶಿಕ್ಷಿತ್ ಭಂಡಾರಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಇದನ್ನು ನೋಡಲು ಅಲ್ಲಿ ಸುತ್ತ ಸಾರ್ವಜನಿಕರು ನೆರೆದಿದ್ದರು ಆದರೆ ರಕ್ತದ ಮಡುವಿನಲ್ಲಿ ಗಾಯಾಳು ಅಪಘಾತಗೊಂಡ ಸ್ಥಳದಲ್ಲೆ ಬಿದ್ದು ಒದ್ದಾಡುತ್ತಿದ್ದರೂ, ಅವರನ್ನು ಮೇಲಕ್ಕೆ ಎತ್ತಲು ಯಾರೊಬ್ಬರು ಮುಂದೆ ಬಂದಿರಲಿಲ್ಲ ಎನ್ನುವುದು ನಾಗರೀಕ ಸಮಾಜ ತಲೆ ತಗ್ಗಿಸವಂತಹ ವಿಚಾರ.

Ad Widget

Ad Widget

ಪುತ್ತೂರಿನ ಮಹಿಳೆ ಉಪ್ಪಳದ ಪತಿಯ ಮನೆಯಲ್ಲಿ ಕೆರೆಗೆ ಬಿದ್ದು ಮೃತ್ಯು

Ad Widget

Ad Widget

ಗೊಗರೆದರು ನೆರವಿಗೆ ಬಾರದ ಜನ

ಗಾಯಾಳುವಿನ ಇಬ್ಬರು ಸ್ನೇಹಿತರು ಕಣ್ಣೀರು ಹಾಕಿ ಗೊಗರೆಯುತ್ತಿದ್ದರೂ, ದೂರವೇ ನಿಂತು ಎಲ್ಲವನ್ನು ಮೌನವಾಗಿ ಜನರು ನೋಡುತ್ತಿದ್ದರು. ರಿಕ್ಷಾ ಆದ್ರೂ ಕರೆ ತನ್ನಿ ಅಂದ್ರೂ, ಸಾರ್ವಜನಿಕರು ದೂರವೇ ನಿಂತಿದ್ದರು. ಪೊಲೀಸರು ಅಪಘಾತಗೊಂಡ ಸ್ಥಳದ ಬಳಿಯೇ ಇದ್ದರೂ ಗಾಯಾಳು ಬಳಿ ಬಂದಿರಲಿಲ್ಲ. ಕೊನೆಗೆ ಕಾಡಿ ಬೇಡಿ ಆಟೋದಲ್ಲಿ ಗಾಯಾಳು ಗೆಳೆಯನನ್ನು ಆತನ ಸ್ನೇಹಿತರು ಕರೆದುಕೊಂಡು ಹೋಗಿದ್ದಾರೆ . ಆದರೇ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸುಶಿಕ್ಷಿತ್ ಭಂಡಾರಿ ಮೃತಪಟ್ಟಿದ್ದಾರೆ. ಇನ್ನೊಬ್ಬ ಗಾಯಾಳು ಜಯದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಯಾಟರಿಂಗ್ ನಲ್ಲಿ ಬಡಿಸಲೆಂದು ಹೋಗುತ್ತಿದ್ದರು :

ಕ್ಯಾಟರಿಂಗ್ನಲ್ಲಿ ಬಡಿಸಲೆಂದು ಸ್ನೇಹಿತನ ಜತೆಗೆ ಸ್ಕೂಟಿಯಲ್ಲಿ ಉಚ್ಚಿಲಕ್ಕೆ ತೆರಳುತ್ತಿದ್ದ ಅವರು ಕಟಪಾಡಿ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವ ವೇಳೆ ಕಟಪಾಡಿಯಿಂದ ಶಿರ್ವದತ್ತ ತೆರಳುತ್ತಿದ್ದ ಟಿಪ್ಪರ್ ಲಾರಿ ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಗಾಯಾಳು ಗೆಳೆಯನ್ನು ಹಿಡಿದು ಆಕ್ರಂದಿಸುವ ಗೆಳೆಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್‌ ವಿಡಿಯೋ ನೋಡಿ :

ಏಕೈಕ ಪುತ್ರ

ಉದ್ಯಾವರ ಪೇಟೆಯಲ್ಲಿ ಸೆಲೂನ್ ಅಂಗಡಿ ಹೊಂದಿರುವ ಶಿವಣ್ಣ ಭಂಡಾರಿ ಮತ್ತು ಸುಜಯಾ ಭಂಡಾರಿ ದಂಪತಿಯ ಏಕೈಕ ಪುತ್ರನಾಗಿದ್ದ ಸುಶಿಕ್ಷತ್, ಪದವಿ ಶಿಕ್ಷಣ ಮುಗಿಸಿ ಕೆಲಸದ ಹುಡು ಕಾಟದಲ್ಲಿದ್ದ. ಮನೆಯಲ್ಲಿ ಇದ್ದೊಬ್ಬ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಹೇಳತೀರದು.

ಪುತ್ತೂರು : ಜಾಗದ ತಕರಾರಿನ ಬಗ್ಗೆ ಕೋರ್ಟಿನ ತೀರ್ಪಿನ ಬಳಿಕ ಕೆಲಸ ಮಾಡಿಸಲು ಹೋದಾಗ ಎದುರು ತಂಡದಿಂದ ಹಲ್ಲೆ – ವಯೋವೃದ್ದೆ ಆಸ್ಫತ್ರೆಗೆ ದಾಖಲು | ಆರೋಪಿಗಳ ಪರ ಶಾಸಕ ಮಠಂದೂರು ಬ್ಯಾಟಿಂಗ್ – ಆರೋಪ

Click to comment

Leave a Reply

Uncategorized

ಮಠಂತಬೆಟ್ಟು ಗುಲಾಬಿ ಅನಂತ ರೈ  ನಿಧನ

Ad Widget

Ad Widget

Ad Widget

Ad Widget Ad Widget

 ಕೋಡಿಂಬಾಡಿ ಮಠಂತಬೆಟ್ಟು  ಗುಲಾಬಿ ಅನಂತ ರೈ(88) ಯವರು ವಯೋಸಹಜ,ಅಲ್ಪಕಾಲದ ಅಸೌಖ್ಯದಿಂದಾಗಿ ಇಂದು (ಏ 23 ರಂದು ) ನಿಧನರಾದರು.    ಇವರು ಮಠಂತಬೆಟ್ಟು  ದೀ. ಪಟೇಲ್ ಅನಂತ ರೈಯವರ ಧರ್ಮಪತ್ನಿ.

Ad Widget

Ad Widget

Ad Widget

Ad Widget

Ad Widget

 ಮೃತರು ಹಲವು ದಶಕಗಳ ಹಿಂದೆ  ಕೋಡಿಂಬಾಡಿ ಪಂಚಾಯತ್ ಪ್ರತಿನಿಧಿಯಾಗಿದ್ದರು,ಕೋಡಿಂಬಾಡಿ ವನಿತಾ ಸಮಾಜದ ಸ್ಥಾಪಕ ಸದಸ್ಯರಾಗಿದ್ದು,ಧಾರ್ಮಿಕ, ಶೈಕ್ಷಣಿಕ, ಸಾರ್ವಜನಿಕ ಕ್ಷೇತ್ರದಲ್ಲಿ ಜನಾನುರಾಗಿಯಾಗಿದ್ದರು.  

Ad Widget

Ad Widget

ದಕ್ಷಿಣ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾದ ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ನಿರಂಜನ ರೈ ಮಠಂತಬೆಟ್ಟು,ಮತ್ತು ಕೃಷಿಕರಾದ ರಾಜಮಣಿ ರೈ ಯೆಂಬ ಮೂರು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು ಹಾಗೂ ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವರು.
ನಾಳೆ (ಏ 24 ರಂದು) ಸ್ವಗೃಹ ಮಠಂತಬೆಟ್ಟು ಮನೆಯಲ್ಲಿ ಅಂತ್ಯ ಸಂಸ್ಕಾರ ವಿಧಿವಿಧಾನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

Ad Widget

Ad Widget
Continue Reading

Uncategorized

ಸಂತೋ಼ಷ  ವೈವಿಧ್ಯಮಯ ಮಿನುಗುವ ಚಿನ್ನದ ಹಬ್ಬ- ಮುಳಿಯ ಚಿನ್ನೋತ್ಸವಕ್ಕೆ ಚಾಲನೆ – ಹೊಸ ವಿನ್ಯಾಸಗಳನ್ನು ಅನಾವರಣ

Ad Widget

Ad Widget

Ad Widget

Ad Widget Ad Widget

ಪುತ್ತೂರು: 24 ವರ್ಷಗಳ ಹಿಂದೆ ವಜ್ರರತ್ನಗಳ ಪ್ರದರ್ಶನ ಹಬ್ಬದ ಮೂಲಕ ಗ್ರಾಹಕರಿಗೆ ಹತ್ತಿರವಾದ ಪ್ರಸಿದ್ದ ಚಿನ್ನಾಭರಣ ಮಳಿಗೆ ಪುತ್ತೂರಿನ ಮುಳಿಯ ಜ್ಯುವೆಲ್ಸ್ ನಲ್ಲಿ ಪ್ರತಿ ವರ್ಷ ಮುಳಿಯ ಚಿನ್ನೋತ್ಸವ  ಆಯೋಜಿಸಲಾಗಿದ್ದು, ಈ ಬಾರಿಯ ಚಿನ್ನದ ಹಬ್ಬ ” ಮುಳಿಯ ಚಿನ್ನೋತ್ಸವ” ಕ್ಕೆ ಎ.22 ರಂದು ಚಾಲನೆ ನೀಡಲಾಯಿತು.

Ad Widget

Ad Widget

Ad Widget

Ad Widget

Ad Widget

ಮೇ 20ರ ತನಕ ನಡೆಯುವ ಈ ಚಿನ್ನೋತ್ಸವವನ್ನು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಆಫ್ ಸಯನ್ಸ್‌ ನ  ಪ್ರೊ. ಡಾ. ಸೌಮ್ಯ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಚಿನ್ನಾಭರಣದ ಹೊಸ ವಿನ್ಯಾಸಗಳನ್ನು ಅನಾವರಣಗೊಳಿಸಿದರು.

Ad Widget

Ad Widget

ಆಭರಣದಲ್ಲಿ ಹೊಸ ವಿನ್ಯಾಸದ ಆಕಾಂಕ್ಷೆಯನ್ನು ಮುಳಿಯ ಪೂರೈಸುತ್ತಿದೆ:

Ad Widget

Ad Widget

ಮುಳಿಯ ಚಿನ್ನೋತ್ಸವವನ್ನು ಉದ್ಘಾಟಿಸಿದ ವಿವೇಕಾನಂದ ಇಂಜಿನಿಯರಿಂಗ್ ಆಫ್ ಸಯನ್ಸ್ ಇದರ ಪ್ರೊ. ಡಾ. ಸೌಮ್ಯ ಅವರು ಮಾತನಾಡಿ ನನ್ನ ಸುಮಾರು 30 ವರ್ಷದ ಅನುಭವದಲ್ಲಿ ಮುಳಿಯ ಜ್ಯುವೆಲ್ಸ್ನೊಂದಿಗೆ ಉತ್ತಮ ಸಂಬಂಧವಿದೆ. ಯಾಕೆಂದರೆ ನಮ್ಮ ಕುಟುಂಬ ಸಮೇತ ಇಲ್ಲಿನ ಗ್ರಾಹಕರಾಗಿದ್ದೇವೆ. ಇದಕ್ಕೆ ಕಾರಣ ಮುಳಿಯ ನಂಬಿಕೆಯನ್ನು ಉಳಿಸಿಕೊಂಡಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ ನನ್ನ ಆಭರಣ ಇತರರಿಗಿಂತ ಭಿನ್ನ ಹೊಸತನ ಹೊಸ ಶೈಲಿಯಲ್ಲಿರಬೇಕೆಂಬ ಆಸೆ ಇರುತ್ತದೆ. ಅದಕ್ಕೆ ತಕ್ಕಂತೆ ಮುಳಿಯ ಜ್ಯುವೆಲ್ಸ್ ಆ ಹೊಸತನದ ಆಕಾಂಕ್ಷೆಯನ್ನು ಪೂರೈಸುತ್ತಿದೆ ಎಂದ ಅವರು ಇದರ ಜೊತೆಗೆ ಸಿಬ್ಬಂದಿಗಳ ನಗುಮೊಗದ ಸೇವೆ ನಾವು ಚಿನ್ನಾಭರಣ ನೋಡಲು ಬಂದವರು ಖರೀದಿಸುವಷ್ಟರ ಮಟ್ಟಿಗೆ ಹೋಗುತ್ತೇವೆ ಎಂದರು.

Ad Widget

Ad Widget

ಚಿನ್ನೋತ್ಸವದಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಲಭ್ಯ:

ಮುಳಿಯ ಜ್ಯುವೆಲ್ಸ್‌ʼನ  ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ ಉತ್ಸವಗಳನ್ನು ಪುತ್ತೂರಿಗೆ ಪರಿಚಯಿಸಿದ್ದು ಮುಳಿಯದ ವಿಶೇಷತೆ. ಹಿಂದೆ ಗ್ರಾಹಕರು ಹೊಸ  ಶೈಲಿಯ ಚಿನ್ನಾಭರಣ ನೋಡುವ ಆಸೆ ಇದ್ದರೂ ಅದನ್ನು ನೋಡಲು ಬರುತ್ತಿರಲಿಲ್ಲ. ಯಾಕೆಂದರೆ ಅಲ್ಲಿಗೆ ಹೋದರೆ ಏನಾದರೂ ಒಂದು ತೆಗೆದು ಕೊಳ್ಳಬೇಕಾದಿತು ಎಂಬ ಮನೋಭಾವನೆ ಇತ್ತು. ಈ ಕುರಿತು ಅರಿತ ಮುಳಿಯ ಸಂಸ್ಥೆ 2000 ಇಸವಿಯಲ್ಲಿ ಪ್ರಥಮವಾಗಿ ವಜ್ರೋತ್ಸವ ಎಂಬ ಪ್ರದರ್ಶನವನ್ನು ಮುಳಿಯದಲ್ಲಿ  ಆರಂಭಿಸಲಾಯಿತು. ಈ ಪ್ರದರ್ಶನ ಚಿನ್ನದಾಭರಣ ನೋಡುವ ಗ್ರಾಹಕರಿಗೆ ಅನುಕೂಲವಾಯಿತು” ಎಂದರು.  

ಇದೀಗ ಅದನ್ನು ಪ್ರತಿ ವರ್ಷ ಎರಡು ಬಾರಿ ಆಚರಿಸುತ್ತಾ ಬಂದಿದ್ದೇವೆ. ಈ ಚಿನ್ನೋತ್ಸವದಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಸಿಗುತ್ತಿದೆ. ಸೇವೆಗಳು ಉತ್ತಮವಾಗಿರುತ್ತದೆ. ಪ್ರತಿಭಾರಿ ಹೊಸತನವನ್ನು ಪರಿಚಯಿಸುವುದು ನಮ್ಮ ವಿಶೇಷ. ಅದನ್ನು ಈ ಭಾರಿಯೂ ಮಾಡಿದ್ದೇವೆ.  ಈ ಭಾರಿಯೂ 4 ವಿಶೇಷ ಹೊಸ ಶೈಲಿ ಆಭರಣವನ್ನು ಗ್ರಾಹಕರಿಗೆ ಪರಿಚಯ ಮಾಡಲಿದ್ದೇವೆ. ಹಾಗಾಗಿ ಗ್ರಾಹಕರು ಈ ಚಿನ್ನೋತ್ಸವದ ಪ್ರಯೋಜವನ್ನು ಪಡೆಯುವಂತೆ ವಿನಂತಿಸಿದರು.

ಮುಳಿಯ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೌಮ್ಯ ಅತಿಥಿಯನ್ನು ಗೌರವಿಸಿದರು. ಕು.ಪೂಜಿತಾ ಪ್ರಾರ್ಥಿಸಿದರು. ಸಹಪ್ರಭಂದಕ ಯತೀಶ್ ಸ್ವಾಗತಿಸಿದರು. ಪ್ಲೋರ್ ಮೆನೆಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಆನಂದ ಕುಲಾಲ್ ವಂದಿಸಿದರು. ಪ್ರಬಂಧಕ ರಾಘವೇಂದ್ರ ಪಾಟೀಲ್, ಪ್ರೊಡಕ್ಟ್ ಮೆನೇಜರ್ ಪ್ರಶಾಂತ್, ಮಾರುಕಟ್ಟೆ ಪ್ರಬಂಧಕ ಸಂಜೀವ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ಮಹೇಂದ್ರ ಸಹಕರಿಸಿದರು.

Continue Reading

Uncategorized

‘ಬಿಂದು’ ಸೇರಿದಂತೆ ಹಲವು ಪ್ಯಾಕ್ಟರಿಗಳಲ್ಲಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್

Ad Widget

Ad Widget

Ad Widget

Ad Widget Ad Widget

ಪುತ್ತೂರು: ಪುತ್ತೂರಿನ ಪುರುಷರಕಟ್ಟೆ ಬಿಂದು ಫ್ಯಾಕ್ಟರಿಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ, ಸಿಬ್ಬಂಧಿಗಳ ಜೊತೆ ಮಾತುಕತೆ ನಡೆಸಿದರು. ಸಂಸ್ಥೆಯ ಎಂಡಿ ಸತ್ಯಶಂಕರ್ ಕೆ ಸ್ವಾಗತಿಸಿದರು.

Ad Widget

Ad Widget

Ad Widget

Ad Widget

Ad Widget

ಚಂದಳಿಕೆ ವೆಂಕಟೇಶ್ವರ ಕ್ಯಾಶ್ಯೂ ಪ್ರಾಸೆಸಿಂಗ್, ಉಕ್ಕುಡ ಶ್ರೀ ಶಾರದಾ ಪ್ರಾಸೆಸರ್ಸ್ ಗೇರುಬೀಜ ಸಂಸ್ಕರಣಾ ಘಟಕ ಹಾಗೂ ನೆಹರುನಗರ ಮಾಸ್ಟರ್ ಪ್ಲಾನರಿಗೆ ಲೋಕಸಭಾ‌ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರು ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದರು.

Ad Widget

Ad Widget

ಮಾಸ್ಟರ್ ಪ್ಲಾನರಿಯ ಆನಂದ್ ಎಸ್.ಕೆ., ಅಕ್ಷಯ್ ಎಸ್.ಕೆ., ಅರ್ಜುನ್ ಎಸ್.ಕೆ., ಆಕಾಶ್ ಎಸ್.ಕೆ., ಪ್ರಭಾಕರ್ ಎಂಎನ್., ಚಂದ್ರಶೇಖರ್ ಭಟ್, ಕ್ಯಾಶ್ಯೂ ಫ್ಯಾಕ್ಟರಿ ಮ್ಯಾನೇಜರ್ ಅಮರನಾಥ್ ಪೈ, ದೀಕ್ಷಿತ್ ರಾಜ್, ಮಾಜಿ ಶಾಸಕಿ ಶಕುಂತಲ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೇಸ್‍ನ ಅಧ್ಯಕ್ಷರಾದ ಎಂಬಿ ವಿಶ್ವನಾಥ ರೈ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್, ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಸೇವಾದಳ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಮುರಳೀಧರ ರೈ ಮಠಂತಬೆಟ್ಟು, ಕೌಶಲ್ ಪ್ರಸಾದ್, ರಮಾನಾಥ ವಿಟ್ಲ, ವಿ.ಕೆ.ಎಂ. ಅಶ್ರಫ್, ಅಬ್ದುಲ್ ರಹಿಮಾನ್, ರಾಮಣ್ಣ ಪಿಲಿಂಜ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಅಧ್ಯಕ್ಷ, ವಿಟ್ಲ ನಗರ ಉಸ್ತುವಾರಿ ಉಲ್ಲಾಸ್ ಕೋಟ್ಯಾನ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ವಿ.ಎ. ರಶೀದ್ ವಿಟ್ಲ, ಮೊದಲಾದವರು ಉಪಸ್ಥಿತರಿದ್ದರು.

Ad Widget

Ad Widget

ಬಿಂದು ಪ್ಯಾಕ್ಟರಿಗೆ ಹೋಗುವ ಸಂದರ್ಭ ಚುನಾವಣಾ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಅನಿತಾ ಹೇಮನಾಥ ಶೆಟ್ಟಿ, ಅಮಲ ರಾಮಚಂದ್ರ, ಮಹೇಶ್ ಅಂಕೊತ್ತಿಮಾರ್, ಪ್ರಸಾದ್ ಕೌಶಲ್ ಶೆಟ್ಟಿ, ಹೊನ್ನಪ್ಪ ಪೂಜಾರಿ, ವೇದನಾಥ ಸುವರ್ಣ, ಪ್ರಕಾಶ ಪುರುಷರಕಟ್ಟೆ, ರವಿಪ್ರಸಾದ್ ಶೆಟ್ಟಿ ಬನ್ನೂರು, ವಿಜಯ್ ಕುಮಾರ್ ಸೊರಕೆ, ಕೃಷ್ಣಪ್ರಸಾದ್ ಆಳ್ವ, ಮೊದಲಾದವರು ಉಪಸ್ಥಿತರಿದ್ದರು ‌

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading