ಹೊಸದಿಲ್ಲಿ: ರವೀಶ್ ಕುಮಾರ್ (Ravish Kumar) NDTV ಗೆ ರಾಜೀನಾಮೆ ನೀಡಿದ ಒಂದು ದಿನದ ಬೆನ್ನಲ್ಲೇ, ಅವರ ಅಧಿಕೃತ ಯೂಟ್ಯೂಬ್ ಚಾನೆಲ್ 16 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಗಳಿಸಿಕೊಂಡಿದ್ದು, 20 ಲಕ್ಷ ಗಡಿಯನ್ನು ತಲುಪಲು ಕೆಲವೇ ಸಂಖ್ಯೆಗಳು ಬಾಕಿ ಇವೆ.
ರಾಜೀನಾಮೆ ನೀಡಿದ ನಂತರ ತಮ್ಮ ಅಭಿಮಾನಿಗಳು ಮತ್ತು ವೀಕ್ಷಕರೊಂದಿಗೆ ಹಂಚಿಕೊಂಡ ಭಾವನಾತ್ಮಕ ಸಂದೇಶವನ್ನು ಗುರುವಾರ ಬೆಳಿಗ್ಗೆ ರವೀಶ್ ಪೋಸ್ಟ್ ಮಾಡಿದ್ದರು. ರವೀಶ್ ಅವರು ವೀಡಿಯೊ ಪೋಸ್ಟ್ ಮಾಡಿ 24 ಗಂಟೆಗಳು ದಾಟುವ ವೇಳೆಗಾಗಲೇ ಸುಮಾರು 39 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. ಅವರ ಟ್ವಿಟರ್ ಖಾತೆಯಲ್ಲೂ ಕೂಡ ಫಾಲೋವರ್ ಸಂಖ್ಯೆ ಏರಿಕೆ ಆಗಿ 2.3 ಮಿಲಿಯನ್ ತಲುಪಿದೆ.
ರವೀಶ್ ಕುಮಾರ್ NDTVಯಲ್ಲಿ ನಡೆಸಿಕೊಡುವ ಪ್ರೈಮ್ ಟೈಂ ಬಾರಿ ಯಶಸ್ಸು ಕಂಡಿತ್ತು. NDTV ಗೆ ರಾಜೀನಾಮೆ ನೀಡುವ ಮೊದಲು ರವೀಶ್ ಕುಮಾರ್ ಅವರ ಯೂಟ್ಯೂಬ್ ಚಾನೆಲ್ ಕೇವಲ ಅರ್ಧ ಮಿಲಿಯನ್ ಚಂದಾದಾರರನ್ನು ಹೊಂದಿತ್ತು. ಶುಕ್ರವಾರ ಸುಮಾರು 1 ಮಿಲಿಯನ್ (10 ಲಕ್ಷ) ಗೂ ಅಧಿಕ ಚಂದಾದಾರರು ಹೊಸದಾಗಿ ಸೇರಿಕೊಂಡಿದ್ದು, ಇದೀಗ ಒಟ್ಟು ಚಂದಾದಾರ ಸಂಖ್ಯೆ 16 ಲಕ್ಷ ದಾಟಿದೆ.
ಈ ವರದಿಯನ್ನು ಮಾಡುವ ಸಮಯದಲ್ಲಿ, ಚಾನಲ್ 1.62 ಮಿಲಿಯನ್ ಚಂದಾದಾರರನ್ನು ಹೊಂದಿ, ಒಟ್ಟು 99 ಲಕ್ಷ ವೀಕ್ಷಕರು ಇವರ ಚಾನೆಲ್ ವೀಕ್ಷಿಸಿದ್ದಾರೆ.
https://youtube.com/@ravishkumar.official
ಹಿರಿಯ ಪತ್ರಕರ್ತರಾದ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಒಡೆತನದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಕಂಪೆನಿಯು, ಸೋಮವಾರ ತನ್ನ ಈಕ್ವಿಟಿ ಬಂಡವಾಳದ 99.5 % ಅದಾನಿ ಗ್ರೂಪ್ ಒಡೆತನದ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್‌ಗೆ (ವಿಸಿಪಿಎಲ್) ವರ್ಗಾಯಿಸುವ ಮೂಲಕ ಎನ್ ಡಿ ಟಿ ವಿ ಮೇಲೆ ಪೂರ್ಣ ಸ್ವಾಧೀನ ಪಡೆಯುವ ಅದಾನಿ ಸಮೂಹದ ಪ್ರಯತ್ನಕ್ಕೆ ಜಯ ಸಿಕ್ಕಿದೆ.