ಉದ್ಯೋಗ
BSF | ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆ

ಪುತ್ತೂರು: ಪುತ್ತೂರಿನ ಕಾಲೇಜ್ ವಿದ್ಯಾರ್ಥಿನಿ ಭಾರತೀಯ ಗಡಿ ಭದ್ರತಾ ಪಡೆಗೆ (BSF) ಗೆ ಕಾನ್ ಸ್ಟೇಬಲ್ ಆಗಿ ಆಯ್ಕೆಯಾಗಿದ್ದಾರೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ -2021ರಲ್ಲಿ (Staff Selection Commission) ನಡೆಸಿದ ಪರೀಕ್ಷೆಯಲ್ಲಿ ಪುತ್ತೂರಿನ ಕರ್ಕುಂಜ ಮನೆಯ ಲಿಂಗಪ್ಪ ಗೌಡರ ಪುತ್ರಿ ಚೈತ್ರ (21) ಆಯ್ಕೆಯಾಗಿದ್ದಾರೆ.
ಚೈತ್ರ ರವರು ಪುತ್ತೂರಿನ ರಾಗಿಕುಮೇರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ , ಪ್ರೌಡಶಾಲೆಯನ್ನು ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಪೂರೈಸಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಪೂರ್ತಿಗೊಳಿಸಿದ ಚೈತ್ರ ಪ್ರಥಮ ವರ್ಷದ ಎಂಎಸ್ಸಿ ಓದುತಿದ್ದಾರೆ.
2021 ರ ನವೆಂಬರ್ ನಲ್ಲಿ ನಡೆದ ಸ್ಟಾಫ್ ಸೆಲೆಕ್ಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಚೈತ್ರ 2022ರ ಡಿಸೆಂಬರ್ 21 ರಂದು ಬೆಂಗಳೂರಿನ ಬಿಎಸ್ಎಫ್ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಸ್ಎಫ್ ಆದೇಶಿಸಿದೆ.
ಉದ್ಯೋಗ
SBI Recruitment 2023: ಎಸ್‌ಬಿಐ ನಿಂದ 8283 ಜೂನಿಯರ್ ಅಸೋಸಿಯೇಟ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ….ಈ ಕೂಡಲೇ ಅರ್ಜಿ ಸಲ್ಲಿಸಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು 8283 ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ. ಪದವಿ ಪಾಸ್ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಆಸಕ್ತರು ಆನ್ಲೈನ್ (Online) ಮೂಲಕ ಅಪ್ಲೈ ಮಾಡಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಲಿಂಕ್, ವೇತನ , ಆಯ್ಕೆ ಪ್ರಕ್ರಿಯೆಯ ಬಗ್ಗೆ ಈ ಕೆಳಗಿನಂತೆ ಮಾಹಿತಿ ನೀಡಲಾಗಿದೆ, ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
*ಅಪ್ಲಿಕೇಶನ್ ಸಲ್ಲಿಸಲು ಹಾಗೂ ಇತರೆ ಮಾಹಿತಿಗಾಗಿ ಎಸ್‌ಬಿಐ’ನ ಕರಿಯರ್ ವೆಬ್‌ಸೈಟ್ ವಿಳಾಸ https://sbi.co.in/web/careers ಗೆ ಭೇಟಿ ನೀಡಬಹುದು. ಒಬ್ಬ ಅಭ್ಯರ್ಥಿ ಒಂದು ರಾಜ್ಯದ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯನ್ನು ಜನವರಿ 2024 ರಲ್ಲಿ ನಡೆಸಲಾಗುತ್ತದೆ
*ನೇಮಕಾತಿ ಬ್ಯಾಂಕ್ : ಭಾರತೀಯ ಸ್ಟೇಟ್ ಬ್ಯಾಂಕ್
ಹುದ್ದೆ ಹೆಸರು: ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್)
ಹುದ್ದೆಗಳ ಸಂಖ್ಯೆ : 8283
ಕರ್ನಾಟಕದಲ್ಲಿ ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳ ಸಂಖ್ಯೆ : 450
- ಶೈಕ್ಷಣಿಕ ಅರ್ಹತೆ:
ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದಲ್ಲಿ ಪದವಿ ಪಾಸ್ ಮಾಡಿರಬೇಕು.
ಯಾವುದೇ ಪದವಿಯ ಅಂತಿಮ ಸೆಮಿಸ್ಟರ್ / ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ತಾತ್ಕಾಲಿಕವಾಗಿ ಆಯ್ಕೆಯಾದ ನಂತರ ಪದವಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
*ವಯಸ್ಸಿನ ಅರ್ಹತೆಗಳು:
ದಿನಾಂಕ 01-04-2023 ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ಮೀರಿರಬಾರದು.
ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಸರ್ಕಾರದ ಆದೇಶದಂತೆ ಅನ್ವಯವಾಗಲಿದೆ.
*ವೇತನ ಶ್ರೇಣಿ : ರೂ.17900 – 47920.
*ಸೆಲೆಕ್ಷನ್ ಪ್ರಕ್ರಿಯೆ ಹೇಗಿರುತ್ತದೆ?
ಆನ್‌ಲೈನ್ ಪ್ರಿಲಿಮ್ಸ್ ಪರೀಕ್ಷೆ, ಮೇನ್ಸ್ ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಪ್ರಿಲಿಮ್ಸ್ / ಮೇನ್ಸ್ ಪರೀಕ್ಷೆ ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ 1:3 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಇದರಲ್ಲಿ ಬ್ಯಾಂಕ್ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಅಭ್ಯರ್ಥಿಗಳು ಗಳಿಸಬೇಕು. ನಂತರ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
*ಪ್ರಮುಖ ದಿನಾಂಕಗಳು:
-ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 17-11-2023
-ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07-12-2023
*ಅಪ್ಲಿಕೇಶನ್ ಶುಲ್ಕ ವಿವರ:
ಸಾಮಾನ್ಯ ಕೆಟಗರಿ / ಇತರೆ ಹಿಂದುಳಿದ ವರ್ಗಗಳು / EWS ಅಭ್ಯರ್ಥಿಗಳಿಗೆ ರೂ.750.
ಇತರೆ ಅಭ್ಯರ್ಥಿಗಳಿಗೆ ಪ್ರೋಸೆಸಿಂಗ್ ಶುಲ್ಕ ಮಾತ್ರ ಇರುತ್ತದೆ.
ಉದ್ಯೋಗ
Job Alert: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ – ಸದ್ಯದಲ್ಲೆ ಸಾರಿಗೆ ಇಲಾಖೆಗೆ 9 ಸಾವಿರ ಸಿಬ್ಬಂದಿಗಳ ನೇಮಕ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ:ನಾನು ಸಾರಿಗೆ ಸಚಿವರಾಗಿದ್ದಾಗ ಸಾರಿಗೆ ಸಿಬ್ಬಂದಿಗಳ ನೇಮಕಾತಿ ನಡೆದಿತ್ತು.ಅಲ್ಲಿಂದ ಇಲ್ಲಿಯವರೆಗೆ ನೇಮಕಾತಿ ನಡೆದಿಲ್ಲ. ಕಳೆದ 7ವರ್ಷಗಳಿಂದ 13,888 ಸಿಬ್ಬಂದಿ ನಿವೃತ್ತಿಯಾಗಿದ್ದಾರೆ. ಈಗ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವಂತ 9,000 ಸಿಬ್ಬಂದಿಗಳ ನೇಮಕ ಮತ್ತು 5500 ಹೊಸಬಸ್ ಖರೀದಿ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಕ್ತಿ ಯೋಜನೆ ಜಾರಿಯಾದ ಮೇಲೆ ಮೇಲೆ ಜನರು ಹೆಚ್ಚು ಓಡಾಡುತ್ತಿದ್ದಾರೆ. ಮೊದಲು 85 ಲಕ್ಷ ಜನರು ಓಡಾಡುತ್ತಿದ್ದರು. ಈಗ 1 ಕೋಟಿ ಜನರು ಓಡಾಟ ಮಾಡುತ್ತಿದ್ದಾರೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಹಿಳೆಯರ ಓಡಾಟ ಕೂಡ ಹೆಚ್ಚಾಗಿದೆ ಎಂದರು.
ಇದಕ್ಕೆಲ್ಲಾ ಪ್ರಮುಖ ಕಾರಣ ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಹೊಸ ಬಸ್ ತಗೊಂಡು ಹಳೆಯ ಬಸ್ಸುಗಳನ್ನು ಸ್ಕ್ರ್ಯಾಪ್ ಮಾಡಬೇಕು. ಹೀಗೆ ಆಗಿದ್ದರೆ ಏನು ಸಮಸ್ಯೆ ಆಗುತ್ತಿರಲಿಲ್ಲ ಎಂದರು.
ಬೆಳಗಾವಿ ಸಾರಿಗೆ ವಿಭಾಗಕ್ಕೆ ಬಿಎಂಟಿಸಿ ಹಳೆ ಬಸ್ ಬಿಟ್ಟಿರುವುದಕ್ಕೆ ಇಲ್ಲಿ ಬಸ್ ಇಲ್ಲ ಎಂಬ ಕಾರಣಕ್ಕೆ ತೆಗೆದುಕೊಂಡಿದ್ದಾರೆ. ಮತ್ತೆ ಆ ಬಸ್ಸುಗಳನ್ನು ವಾಪಸ್ ಕಳುಹಿಸಿದ್ದಾರೆ. ಸತತವಾಗಿ ನಾಲ್ಕು ವರ್ಷ ಬಸ್ ಖರೀದಿ ಮಾಡಿಲ್ಲ, ಏಳು ವರ್ಷಗಳಿಂದ ನೇಮಕಾತಿ ಮಾಡಿಲ್ಲ, ಹೀಗಾಗಿ ಸಮಸ್ಯೆ ಆಗುತ್ತಿದೆ. ಹಾಗಾಗಿ 5500 ಹೊಸ ಬಸ್ ಖರೀದಿ ಮಾಡುತ್ತಿದ್ದು, 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದು ತಿಳಿಸಿದರು.
ಬೆಳಗಾವಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಅತಿಹೆಚ್ಚು ಬಸ್ ನಿಲ್ದಾಣವನ್ನು 2013ರಿಂದ 2017ರವರೆಗೆ ನಾನು ಸಾರಿಗೆ ಸಚಿವ ಇದ್ದಾಗ ಈ ಭಾಗಕ್ಕೆ ಹಲವು ಬಸ್ಸು ಕೊಟ್ಟಿದ್ದೇನೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಎರಡು ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ಹಾಕಲು ಸೂಚನೆ ನೀಡಿದ್ದೇನೆ. ಬೆಳಗಾವಿ ನಗರಕ್ಕೆ 100 ಹೊಸ ಬಸ್ ಖರೀದಿ ಮಾಡುತ್ತೇನೆ. ಮೂರು ತಿಂಗಳಲ್ಲಿ ಅವಧಿಯಲ್ಲಿ ಈ ಹೊಸ ಬಸ್ ಗಳು ಬರುತ್ತವೆ ಎಂದು ಹೇಳಿದ್ದಾರೆ.
ಉದ್ಯೋಗ
Colse Road Side Nonveg Hotel: ರಸ್ತೆ ಬದಿಯಿರುವ ನಾನ್ ವೆಜ್ ಹೋಟೆಲ್ಗಳನ್ನು ಮುಚ್ಚಿ : ಚುನಾವಣೆಯಲ್ಲಿ ಗೆಲ್ಲುತ್ತಲೇ ನೂತನ ಬಿಜೆಪಿ ಶಾಸಕನ ಆದೇಶ

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸೋಲನ್ನು ಕಂಡಿದೆ.
ತಾನು ಚುನಾವಣೆಯಲ್ಲಿ ಗೆದ್ದ ಬೆನ್ನಲೆ , ಜೈಪುರದ ಹವಾ ಮಹಾಲ್ ಕ್ಷೇತ್ರದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ತಮ್ಮ ಕ್ಷೇತ್ರದ ರಸ್ತೆಯ ಬದಿಗಳಲ್ಲಿರುವ ನಾನ್ ವೆಜ್ ಹೋಟೆಲ್ಗಳನ್ನು ಮುಚ್ಚುವಂತೆ ಆದೇಶ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿ, ರಸ್ತೆ ಬದಿಯಲ್ಲಿರುವ ನಾನ್ ವೆಜ್ ಹೋಟೆಲ್ಗಳನ್ನು ಸಂಜೆ ಒಳಗೆ ಮುಚ್ಚಿಸುವಂತೆ ಸೂಚನೆ ನೀಡಿದ್ದಾರೆ.
ನಾನ್ ವೆಜ್ ಅನ್ನು ರಸ್ತೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಬಹುದೇ? ಹೌದೋ ಅಥವಾ ಇಲ್ಲವೋ ಉತ್ತರಿಸಿ. ಹಾಗಾದ್ರೆ ನೀವು ಇದನ್ನು ಬೆಂಬಲಿಸುತ್ತೀರಿ. ಕೂಡಲೇ ರಸ್ತೆ ಬದಿಯ ಎಲ್ಲ ಮಾಂಸಾಹಾರಿ ಅಂಗಡಿಗಳನ್ನು ಮುಚ್ಚಬೇಕು. ಸಂಜೆ ನಿಮ್ಮಿಂದ ವರದಿ ತರಿಸಿಕೊಳ್ಳುತ್ತೇನೆ. ಅಧಿಕಾರಿ ಯಾರೆಂಬುದನ್ನು ಸಹ ನಾನು ನೋಡುವುದಿಲ್ಲ ಎಂದು ಬಾಲಮುಕುಂದ್ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ:
ಈ ಬಗ್ಗೆ ಪ್ರತಿಕ್ರಿಯಿಸಿದ ಅಸಾದುದ್ದೀನ್ ಓವೈಸಿ ಈ ಆದೇಶ ಸರಿಯಲ್ಲ ,ನಾನ್ವೆಜ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಯಾರಾದರೂ ಮಾಂಸಾಹಾರಿ ಆಹಾರದ ಮಳಿಗೆ ಸ್ಥಾಪಿಸಲು ಬಯಸಿದರೆ ಅದನ್ನು ತಡೆಯುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ರವರು ರಾಜಸ್ಥಾನದ ಹವಾ ಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಆರ್ಆರ್ ತಿವಾರಿ ಅವರನ್ನು 600 ಮತಗಳಿಂದ ಸೋಲಿಸುವ ಮೂಲಕ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ, ಕಾಂಗ್ರೆಸ್ 69 ಸ್ಥಾನಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿಯಿತು
-
ದಕ್ಷಿಣ ಕನ್ನಡ2 days ago
ಪುತ್ತೂರು : ಕುಡಿದು ಟೈಟಾಗಿದ್ದ ಚಾಲಕ ವಿವೇಕಾನಂದ ವಿದ್ಯಾ ಸಂಸ್ಥೆಯ ಬಸ್ಸನ್ನು ಯದ್ವಾತದ್ವಾ ಚಲಾಯಿಸಿ ಸರಣಿ ಅಪಘಾತ – ಮಾಜಿ ಶಾಸಕಿಯ ಪುತ್ರನ ಕಾರು ಸೇರಿ 3 ವಾಹನಕ್ಕೆ ಢಿಕ್ಕಿ – ಪಾನಮತ್ತ ಚಲಾಯಿಸುತ್ತಿದ್ದ ಬಸ್ಸಿನಲ್ಲಿದ್ದರು ವಿದ್ಯಾರ್ಥಿಗಳು..̆
-
ದಕ್ಷಿಣ ಕನ್ನಡ2 days ago
ವಿಟ್ಲ : ಅಡಿಕೆ ಮರ ಮುರಿದು ಬಿದ್ದು ಮಹಿಳೆ ಸಾವು
-
ಸುಳ್ಯ1 day ago
College student rape case ಪುತ್ತೂರು : ಕಾಲೇಜ್ ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ ಪ್ರಕರಣ – ಬಂಧಿತ ಆರೊಪಿಗೆ 2 ತಿಂಗಳ ಬಳಿಕ ಜಾಮೀನು
-
ರಾಜಕೀಯ2 days ago
CM Siddaramaiah: ಐಸಿಸ್ ಉಗ್ರ ಸಂಘಟನೆಯ ಬೆಂಬಲಿಗನ ಜತೆ ಹುಬ್ಬಳಿಯಲ್ಲಿ ವೇದಿಕೆ ಹಂಚಿಕೊಂಡ ಸಿ. ಎಂ.ಸಿದ್ದರಾಮಯ್ಯ : ಚಿತ್ರ ಸಹಿತ ಯತ್ನಾಳ್ ಗಂಭೀರ ಆರೋಪ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
-
ಉದ್ಯೋಗ1 day ago
Job Alert: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ – ಸದ್ಯದಲ್ಲೆ ಸಾರಿಗೆ ಇಲಾಖೆಗೆ 9 ಸಾವಿರ ಸಿಬ್ಬಂದಿಗಳ ನೇಮಕ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
-
Uncategorized2 days ago
loan write off ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂ. ರೈಟ್-ಆಫ್….
-
ಪುತ್ತೂರು1 day ago
Puthila Parivara | ಪುತ್ತೂರು ನಗರಸಭೆ 2 ವಾರ್ಡ್ ಮರುಮತದಾನ – ಬಿಜೆಪಿ ಕಾಂಗ್ರೇಸ್ ನಡುವೆ ಕಾರ್ಯಕರ್ತರ ಒತ್ತಾಯದಂತೆ ಪುತ್ತಿಲ ಪರಿವಾರ ಮತ್ತೊಂದು ಚುನಾವಣೆ ಎದುರಿಸುವುದು ಬಹುತೇಕ ಫಿಕ್ಸ್ : ವಿಧಾನಸಭಾ ಚುನಾವಣೆಯಲ್ಲಿ ಈ ವಾರ್ಡ್ ಗಳಲ್ಲಿ ಯಾರಿಗೆ ಎಷ್ಟು ಮತದಾನವಾಗಿತ್ತು ಗೊತ್ತೇ.?
-
ಅಪರಾಧ21 hours ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?