Ad Widget

Hejamadi Toll | ಟೋಲ್ ಫ್ರೀ ಅಂತ ಹೇಳಿದ ಮೇಲೆ 6 ವರ್ಷಗಳ ನಂತರ KA 19 ಗೆ ಟೋಲ್ ವಸೂಲಿ ಯಾಕೆ..? ನಾನು ತಂದ KA 62 ನೊಂದಣಿ ಯಾವಾಗ ಪ್ರಾರಂಭ..? : ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ

FB_IMG_1669902358162
Ad Widget

Ad Widget

Ad Widget

ಸುರತ್ಕಲ್: “ಹಿಂದೂ ನಾವೆಲ್ಲರೂ ಮುಂದು ಅಂತ ಹೇಳಿಕೊಂಡು ಶಾಂತಿಪ್ರಿಯ ಜನರ ಮಧ್ಯೆ ಅಡ್ಡಗೋಡೆ ನಿರ್ಮಾಣ ಮಾಡಿರುವುದು ಮಂಗಳೂರು ಉತ್ತರ ಶಾಸಕರ ಸಾಧನೆಯಾಗಿದೆ. ತಾಕತ್ತಿದ್ದರೆ ಅವರ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಷ್ಟು ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ, ಸಮುದಾಯ ಭವನಗಳಿಗೆ ಅನುದಾನ ನೀಡಿದ್ದಾರೆಂದು ಪಟ್ಟಿ ಬಿಡುಗಡೆ ಮಾಡಲಿ. ನಾನು ಶಾಸಕನಾಗಿದ್ದಾಗ 24 ನಾರಾಯಣ ಗುರುಗಳ ಮಂದಿರ, ಅಂಬೇಡ್ಕರ್ ಭವನಕ್ಕೆ ಅನುದಾನ ನೀಡಿದೆ. ಇವರೇನು ಮಾಡಿದ್ರು?” ಎಂದು ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, “ನಾನು ಶಾಸಕನಾಗಿದ್ದಾಗ ಬಹುಪಾಲು ಕಾಮಗಾರಿ ನಡೆದಿದ್ದ ಸುರತ್ಕಲ್ ನ ಸುಸಜ್ಜಿತ ಮಾರುಕಟ್ಟೆಯ ಕಾಮಗಾರಿಯನ್ನು ನಿಲ್ಲಿಸಿ 5 ವರ್ಷಗಳು ಆಗಿವೆ. ಈ ಐದು ವರ್ಷಗಳ ಸವಿನೆನಪಿಗಾಗಿ ಬೃಹತ್ ಪಾದಯಾತ್ರೆ, ಅನಿವರ್ಸರಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ” ಎಂದರು.

Ad Widget

Ad Widget

Ad Widget

Ad Widget

Ad Widget


“ಆರ್ ಟಿ ಓ ಕಚೇರಿಯನ್ನು ಸುರತ್ಕಲ್ ಗೆ ತರಲು ಶ್ರಮಿಸಿದೆ. ಕೆಎ 62 ನೋಂದಣಿಯೂ ಸಿಕ್ಕಿತು, ಅದರೆ ಅದಿನ್ನೂ ಪ್ರಾರಂಭವಾಗಿಲ್ಲ. 700 ಮನೆಗಳ ಆಶ್ರಯ ಕಾಲೋನಿ ಅಪಾರ್ಟ್ಮೆಂಟ್ ಗೆ ಅನುದಾನ ತಂದೆ, ಅದಿನ್ನೂ ಕಾರ್ಯರೂಪಕ್ಕೆ ಬರಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸಾಮಾಜಿಕ ಸಂಘಟನೆಗಳು ಹಾಗೂ ಜನಸಾಮಾನ್ಯರ ಹೋರಾಟದಿಂದ ಸುರತ್ಕಲ್ ಟೋಲ್ ಶಿಫ್ಟ್ ಆಗಿದೆ. ಆದರೆ ಕೆಎ 19 ವಾಹನಗಳಿಗೆ ಟೋಲ್ ಪಡೆಯುವುದು ಎಲ್ಲಿಯ ನ್ಯಾಯ? ಟೋಲ್ ಫ್ರೀ ಅಂತ ಹೇಳಿದ ಮೇಲೆ 6 ವರ್ಷಗಳ ನಂತರ ಟೋಲ್ ವಸೂಲಿ ಯಾಕೆ? ಈ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಧ್ವನಿ ಎತ್ತಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿ ರದ್ದು ಆಗಿ ಅಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡಿದರೆ ಎಲ್ಲಾ ಪಕ್ಷಗಳ ನಾಯಕರು, ಕಾರ್ಯಕರ್ತರು ಸೇರಿಕೊಂಡು ಉಗ್ರ ಹೋರಾಟ ನಡೆಸುತ್ತೇವೆ” ಎಂದು ಬಾವಾ ಹೇಳಿದರು.

Ad Widget

Ad Widget

Ad Widget

Ad Widget

ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ, ಬಶೀರ್ ಬೈಕಂಪಾಡಿ, ವೈ.ರಾಘವೇಂದ್ರ ರಾವ್, ಬಿ.ಕೆ ತಾರಾನಾಥ್, ರಾಜೇಶ್ ಕುಳಾಯಿ, ಹ್ಯಾರಿಸ್ ಬೈಕಂಪಾಡಿ ಉಪಸ್ಥಿತರಿದ್ದರು.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: