ಬೆಂಗಳೂರು:ಡಿ 1: ಕರ್ನಾಟಕದ ಹೆಮ್ಮೆಯ ರಸ್ತೆ ಸಾರಿಗೆ ನಿಗಮ ಕೆಎಸ್ ಅರ್ ಟಿಸಿ (KSRTC Bus) ಸಾರ್ವಜನಿಕರಿಗೆ ಭರ್ಜರಿ ಅಫರ್ʼವೊಂದನ್ನು ನೀಡಿದೆ. ಬರೋಬ್ಬರಿ 35 ಸಾವಿರ ರೂಪಾಯಿ ಸಂಪಾದಿಸುವ ವಿಶೇಷ ಕೊಡುಗೆ ಡಿಸೆಂಬರ್ 5 ರವರೆಗೆ ಚಾಲ್ತಿಯಲ್ಲಿದೆ. ಹಾಗಾದರೇ ಈ ಆಫರ್ ಏನೂ ಗೊತ್ತಾ ?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತಾನು ಸಾರ್ವಜನಿಕ ಬಳಕೆಗೆ ಬಿಡುವ ವಿಶೇಷ ಸೌಲಭ್ಯಗಳುಳ್ಳ ಬಸ್ಸುಗಳಿಗೆ ವಿಶೇಷ ಹೆಸರುಗಳನ್ನು ಇಡುವ ಪರಿಪಾಠ ಇಟ್ಟುಕೊಂಢಿದೆ. ರಾಜಹಂಸ, ಐರಾವತ ಹೀಗೆ ಹಲವು ಹೆಸರುಗಳನ್ನು ಸಂಸ್ಥೆ ಈಗಾಗಲೇ ತನ್ನ ಬಸ್ಸುಗಳಿಗೆ ನೀಡಿದೆ.
ಇದೀಗ ಕೆಎಸ್ ಆರ್ ಟಿಸಿ ನೂತನವಾಗಿ ಆರಂಭಿಸಲಿರುವ ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಬ್ರಾಂಡ್ ಹೆಸರು ಟ್ಯಾಗ್‌ಲೈನ್ ಹಾಗೂ ಗ್ರಾಫಿಕ್ಸ್ ಆಹ್ವಾನಿಸಿದೆ.
ಪ್ರತಿ ಮಾದರಿಯ ವಾಹನಗಳಿಗೆ ಉತ್ತಮ ಬ್ರಾಂಡ್ ಹೆಸರನ್ನು ಸೂಚಿಸುವ ವಿಜೇತರಿಗೆ ₹10,000 ನಗದು ಬಹುಮಾನವನ್ನು ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ ತಲಾ ₹ 25,000 ಬಹುಮಾನವನ್ನು ನೀಡಲಾಗುವುದು. ಹೆಸರನ್ನು ಸೂಚಿಸಲು ಕಡೆಯ ದಿನಾಂಕ ಡಿಸೆಂಬರ್ 5 ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮ ಬ್ರ್ಯಾಂಡ್ ಐಡಿಯಾಗಳನ್ನು cpro @ksrtc.org ಇ–ಮೇಲ್ ಗೆ ಅಥವಾ ನಿಗಮದ ಫೇಸ್‌ಬುಕ್/ಟ್ವಿಟರ್ ಖಾತೆಗೆ ಸಲ್ಲಿಸಬಹುದು.