Ad Widget

Champa Shashti 2022 : ಕುಕ್ಕೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ವೈಭವದ ಬ್ರಹ್ಮ ರಥೋತ್ಸವ

317332501_520197043458163_1259317164678124485_n
Ad Widget

Ad Widget

Ad Widget

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ (Kukke Subrahmanya) ಚಂಪಾ ಷಷ್ಠಿ ಮಹೋತ್ಸವ (Champa Shashti 2022) ವೈಭವದಿಂದ ಜರುಗಿತು. ಮಂಗಳವಾರ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಭಕ್ತರು ಸಡಗರ ಸಂಭ್ರಮದಿಂದ ರಥೋತ್ಸವದಲ್ಲಿ ಭಾಗವಹಿಸಿ ಪುನೀತರಾದರು.

Ad Widget

Ad Widget

Ad Widget

Ad Widget

ರಥಾರೂಢರಾದ ಕುಕ್ಕೆ ಸುಬ್ರಹ್ಮಣ್ಯ ದೇವರು ರಥಬೀದಿಯಲ್ಲಿ ಸಂಚರಿಸಿದ್ದನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಬೆಳಗ್ಗೆ 7.05ರ ವೃಶ್ಚಿಕ ಲಗ್ನದಲ್ಲಿ ದೇವರ ವಿಗ್ರಹಗಳ ಬ್ರಹ್ಮರಥಾರೋಹಣ ನಡೆಯಿತು. ಉಮಾಮಹೇಶ್ವರ ದೇವರು ಆಸೀನರಾದ ಚಿಕ್ಕ ರಥೋತ್ಸವ ನೆರವೇರಿದ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಸೋಮವಾರ ರಾತ್ರಿ ಪಂಚಮಿ ರಥೋತ್ಸವ ನಡೆಯಿತು.

Ad Widget

Ad Widget

Ad Widget

Ad Widget

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾಷಷ್ಠಿಯಲ್ಲಿ ಭಾಗವಹಿಸಲೆಂದು ದೂರದ ಊರುಗಳಿಂದ ಸಾಕಷ್ಟು ಭಕ್ತರು ಬಂದಿದ್ದಾರೆ. ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ಆಸ್ಪತ್ರೆ ಆರಂಭಿಸಲಾಗಿದೆ. ಕೃಷಿಮೇಳವೂ ಜನರ ಗಮನ ಸೆಳೆಯುತ್ತಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಸುಬ್ರಹ್ಮಣ್ಯ ಪೇಟೆ ದೀಪಾಂಲಕೃತ ಗೊಂಡು ಸುಂದರವಾಗಿ ಕಂಗೊಳಿಸುತ್ತಿದೆ. ವಿವಿಧೆಡೆ ಅಳವಡಿಸಿರುವ ಪ್ರಭಾವಳಿಗಳು ಮತ್ತು ದೇವರ ಕಲಾಕೃತಿಗಳು ಜಾತ್ರೆಯ ವೈಭವವನ್ನು ಹೆಚ್ಚಿಸಿವೆ.

ಈ ಬಾರಿ ರಥಕ್ಕೆ ಬಳಸಿದ ಬೆತ್ತವನ್ನು ದೇವಳವೇ ಉಪಯೋಗಿಸಲು ನಿರ್ಧರಿಸಿದೆ. ದೇಗುಲದಲ್ಲಿ ವಿವಿಧ ಸೇವೆ ಸಲ್ಲಿಸಿದವರಿಗೆ ಕೊಡುವ ಪ್ರಸಾದದಲ್ಲಿ ಬೆತ್ತದ ತುಂಡನ್ನು ನೀಡಲಾಗುತ್ತದೆ. ಭಕ್ತರಲ್ಲಿ ಬೆತ್ತಕ್ಕಾಗಿ ಪೈಪೋಟಿ ನಡೆಯಬಾರದು, ಭಕ್ತರಿಗೆ ಕೊಡಲು ಬೆತ್ತದ ತುಂಡು ಕಡಿಮೆಯಾಗಬಾರದು ಎನ್ನುವ ಕಾರಣಕ್ಕೆ ದೇಗುಲ ಸಮಿತಿ ಈ ನಿರ್ಧಾರಕ್ಕೆ ಬಂದಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಬ್ರಹ್ಮರಥೋತ್ಸವಕ್ಕೆ ಹೆಚ್ಚಿನ ಜನರು ಸೇರಲು ಅವಕಾಶ ಸಿಕ್ಕಿರಲಿಲ್ಲ. ಆದರೆ, ಈ ಸಲ ಅದ್ಧೂರಿಯಾಗಿ ಬ್ರಹ್ಮರಥೋತ್ಸವ ಜರುಗಿದೆ.

Ad Widget

Ad Widget

ಪಂಚಮಿ ರಥೋತ್ಸವ!

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ವಾರ್ಷಿಕ ಜಾತ್ರೆ ಪ್ರಯುಕ್ತ ಮಾರ್ಗಶಿರ ಶುದ್ಧ ಪಂಚಮಿ ದಿನವಾದ ಸೋಮವಾರ ಶ್ರದ್ಧಾ ಭಕ್ತಿಯ ಪಂಚಮಿ ರಥೋತ್ಸವ ನೆರವೇರಿತು. ಸ್ಕಂದ ಪಂಚಮಿಯಂದು ಪಂಚಮಿ ರಥದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ನಡೆಯಿತು. ಜಗಮಗಿಸುವ ವಿದ್ಯುದ್ದೀಪಾಲಂಕಾರದ ನಡುವೆ ಶ್ರೀ ಸ್ವಾಮಿಯ ವೈಭವದ ರಥೋತ್ಸವ ನೆರವೇರಿತು. ಸಹಸ್ರಾರು ಭಕ್ತರು ಶ್ರೀದೇವರ ಉತ್ಸವವನ್ನು ವೀಕ್ಷಿಸಿದರು.

ರಾತ್ರಿ ಮಹಾಪೂಜೆ ಬಳಿಕ ಹೊರಾಂಗಣ ಉತ್ಸವ ಆರಂಭವಾಯಿತು. ವಿಶೇಷ ಹೂವಿನ ಅಲಂಕಾರದೊಂದಿಗೆ ರಾರಾಜಿಸುತ್ತಿದ್ದ ಪಲ್ಲಕ್ಕಿಯಲ್ಲಿ ಶ್ರೀ ದೇವರ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ನೆರವೇರಿತು. ಸಂಗೀತ, ಮಂಗಳವಾದ್ಯ, ಸ್ಯಾಕ್ಸೋಫೋನ್, ಬ್ಯಾಂಡ್ಗಳ ಸುಮಧುರ ಸುತ್ತುಗಳ ಉತ್ಸವದ ನಂತರ ರಥೋತ್ಸವ ನಡೆಯಿತು. ಬಳಿಕ ಸವಾರಿಕಟ್ಟೆಯಲ್ಲಿ ಕಟ್ಟೆ ಪೂಜೆ ನೆರವೇರಿತು. ಈ ಸಂದರ್ಭ ಆಕರ್ಷಕ ಕುಕ್ಕೆ ಬೆಡಿ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿತು.

ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಪಂಚಮಿ ದಿನವಾದ ಸೋಮವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ 163 ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದರು. ಷಷ್ಠಿ ದಿನ ಭಕ್ತಾದಿಗಳು ಎಡೆಸ್ನಾನ ಸೇವೆ ನೆರವೇರಿಸುವುದರೊಂದಿಗೆ ಸಮಾಪ್ತಿಯಾಗುತ್ತದೆ.

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: