Minor Driving Scooter ಬಂಟ್ವಾಳ: ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧ. ಅಪ್ರಾಪ್ತರು ವಾಹನ ಚಲಾಯಿಸಿ ನಿಯಮ ಉಲ್ಲಂಘಿಸಿದರೆ ಪೋಷಕರು ದುಬಾರಿ ದಂಡ ಕಟ್ಟಿರುವ ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಇದು ಜನರಿಗೆ ತಿಳಿದಿಲ್ಲ. ಅಪ್ರಾಪ್ತ ಬಾಲಕ ವಾಹನ ಚಲಾಯಿಸುವ ಮೂಲಕ ನಿಯಮ ಉಲ್ಲಂಘಿಸಿದ ಘಟನೆ ಪೋಷಕರಿಗೆ ದಂಡ ವಿಧಿಸಿದೆ.
ಅಪ್ರಾಪ್ತ ಬಾಲಕಿ ಚಲಾಯಿಸುತ್ತಿದ್ದ ವಾಹನ ಅಪಘಾತಕ್ಕಿಡಾದ ಪ್ರಕರಣದಲ್ಲಿ, ಆ ವಾಹನದ ಮಾಲಕಿ ಹಾಗೂ ಬಾಲಕಿಯ ತಾಯಿ ಗೆ ನ್ಯಾಯಾಲಯ ದಂಡ ವಿಧಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ವಾಹನ ಮಾಲಕರಿಗೆ ನ್ಯಾಯಾಲಯ 26 ಸಾವಿರ ರೂ. ದಂಡ ವಿಧಿಸಿದೆ.
ಸಿದ್ದಕಟ್ಟೆ ಎಂಬಲ್ಲಿ ಸ್ಕೂಟರ್ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿ ಸ್ಕೂಟರ್ ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕಿಗೆ ಗಾಯವಾಗಿತ್ತು. ಅಪ್ರಾಪ್ತ ಬಾಲಕಿ ದ್ವಿಚಕ್ರ ವಾಹನ ಚಲಾಯಿಸಿ ರಅಪಘಾತ ಸಂಭವಿಸಿರುವುದಾಗಿ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನಲೆಯಲ್ಲಿ ಮೆಲ್ಕಾರ್ ಟ್ರಾಫಿಕ್ ಎಎಸ್ಐ ವಿಜಯ್ ಸ್ಕೂಟರ್ ಮಾಲಕಿಗೆ ನೋಟಿಸ್ ಜಾರಿ ಮಾಡಿದ್ದರು.ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಾಲಕಿಯ ತಾಯಿಗೆ ದಂಡ ವಿಧಿಸಿ ಆದೇಶ ನೀಡಿದೆ