ಆಲಂಕಾರು: ಹಿಂದೂ ಯುವತಿಯೋರ್ವಳು ಅನ್ಯಕೋಮಿನ ಯುವಕನ ಜತೆಗಿದ್ದ ಹಾಗೂ ಈ ಮಾಹಿತಿ ಸ್ಥಳೀಯರಿಗೆ ದೊರಕುತ್ತಲೇ ಎಚ್ಚೆತ್ತ ಯುವಕ , ಯುವತಿಯನ್ನು ಬಿಟ್ಟು ಪರಾರಿಯಾದ ಘಟನೆ ಕಡಬ ತಾಲೂಕಿನ ಕೊಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ರವಿವಾರ ಸಂಜೆ ನಡೆದಿದೆ.
ಹಿಂದೂ ಯುವತಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದವಳೆಂದು ತಿಳಿದು ಬಂದಿದೆ. ಆಕೆಯ ಜತೆಗಿದ್ದ ಯುವಕ ಕೊಣಾಜೆ ಸಮೀಪದ ಮುಡಿಪುನವ ಎನ್ನಲಾಗಿದೆ. ಈತ ಅನ್ಯ ಕೋಮಿನವನಾಗಿದ್ದು, ಪ್ರಸ್ತುತ ಆತ ಕೆಲಸದ ನಿಮಿತ್ತ ಕೊಂತೂರು ಪೆರಾಬೆ ಕ್ರಾಮದ ಕೋಚಕಟ್ಟೆಯಲ್ಲಿ ಬಾಡಿಗೆ ರೂಮಿನಲ್ಲಿದ್ದ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಈ ಹಿಂದೂ ಯುವತಿ ಬಳಿಕ ಈ ಯುವಕನ ಜತೆ ನಿರಂತರ ಸಂಪರ್ಕದಲ್ಲಿದ್ದಳು ಎಂದು ಹೇಳಲಾಗುತ್ತಿದೆ.
ರವಿವಾರ ಆ ಯುವತಿಯನ್ನು ಕೋಚಕಟ್ಟೆಯ ತನ್ನ ರೂಮಿಗೆ ಆ ಯುವಕ ಬರಮಾಡಿಕೊಂಡಿದ್ದ. ಇದನ್ನು ಸ್ಥಳೀಯರು ಗಮನಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಹಿಂಜಾವೇ ಯುವಕರು ಜೋಡಿಯಿದ್ದ ರೂಮಿನ ಬಳಿ ಬರುತ್ತಿದ್ದಂತೆ, ಯುವಕನ ಸ್ತಳೀಯ ಸ್ನೇಹಿತನೊಬ್ಬ ಈ ಮಾಹಿತಿಯನ್ನು ಅವನಿಗೆ ರವಾನಿಸಿದ್ದಾನೆ. ಕೂಡಲೇ ಎಚ್ಚೆತ್ತ ಆತ ಯುವತಿಯನ್ನು ಹಿಂಬಾಗಿನ ಮೂಲಕ ಹೊರಗೆ ಕಳುಹಿಸಿ ಪರಾರಿಯಾಗಿದ್ದಾನೆ.
Gold Rate Today : ಮಂಗಳವಾರ ಚಿನ್ನದ ಬೆಲೆ ತಟಸ್ಥ – ಬೆಳ್ಳಿ ದರ ಇಳಿಕೆ
ಆದರೇ ಯುವತಿಗೆ ಊರಿನ ಪರಿಚಯ ಅಷ್ಟಾಗಿ ಇರದ ಹಿನ್ನಲೆಯಲ್ಲಿ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗದೇ ಹಿಂಜಾವೇ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದಿದ್ದಾಳೆ ಎನ್ನಲಾಗಿದೆ . ಜಾಗರಣ ವೇದಿಕೆಯ ಕಾರ್ಯಕರ್ತರು ಯುವತಿಯ ಬಗ್ಗೆ ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ಇಬ್ಬರು ಯುವಕರಿದ್ದರು!
ಸ್ಥಳೀಯರ ಮಾಹಿತಿ ಪ್ರಕಾರ ರೂಮಿನಲ್ಲಿ ಇಬ್ಬರು ಅನ್ಯಕೋಮಿನ ಯುವಕರಿದ್ದರು ಎನ್ನಲಾಗಿದ್ದು, ಯುವತಿಯನ್ನು ಕರೆತಂದ ಯುವಕನ ಹೆಸರು ಸವಾದ್ ಎಂದು ತಿಳಿಸಿದ್ದಾರೆ. ಅವರ ಮೂಲದ ಪ್ರಕಾರ ರೂಮಿನಲ್ಲಿದ್ದ ಇಬ್ಬರೂ ಯುವಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.