Gold Silver Price on 29th November 2022 | ಬೆಂಗಳೂರು: ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಚಿನ್ನದ ದರ (Gold Price) ಸತತ ಮೂರನೇ ದಿನವೂ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಳ್ಳಿ ದರ (Silver Price) ಮತ್ತೆ ಇಳಿಕೆಯಾಗಿದೆ.
ಏಪ್ರಿಲ್ ಹಾಗೂ ಅಕ್ಟೋಬರ್ ನಡುವಣ ಅವಧಿಯಲ್ಲಿ ದೇಶದ ಚಿನ್ನದ ಆಮದು ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಈ ಮಾಹಿತಿ ನಿನ್ನೆಯಷ್ಟೇ ಪ್ರಕಟಗೊಂಡಿದ್ದು ಹಾಗಾಗಿಯೂ ಇಂದು ಹಳದಿ ಲೋಹದ ದರದಲ್ಲಿ ವ್ಯತ್ಯಾಸವಾಗದಿರುವುದು ವಿಶೇಷ.
ಏಪ್ರಿಲ್ ಮತ್ತು ಅಕ್ಟೋಬರ್ ಅವಧಿಯಲ್ಲಿ 1.96 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನ ಆಮದು ಮಾಡಲಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಮಾಡಿದ್ದ ಆಮದಿಗೆ ಹೋಲಿಸದರೆ ಇದು ಶೇಕಡಾ 17.38ರಷ್ಟು ಕಡಿಮೆಯಾಗಿದೆ. ಆದರೆ ಈ ಅವಧಿಯಲ್ಲಿ ಬೆಳ್ಳಿ ಆಮದು 39,201ಕೋಟಿ ರೂ.ಗೆ ಹೆಚ್ಚಾಗಿದೆ.
ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 48,560 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 52,980 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂ. ಇಳಿಕೆಯಾಗಿ 61,400 ರೂಪಾಯಿ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ :
ಚೆನ್ನೈ- 49,210 ರೂ.
ಮುಂಬೈ- 48,560 ರೂ,
ದೆಹಲಿ- 48,710 ರೂ,
ಕೊಲ್ಕತ್ತಾ- 48,560 ರೂ,
ಬೆಂಗಳೂರು- 48,610 ರೂ,
ಹೈದರಾಬಾದ್- 48,560 ರೂ,
ಕೇರಳ- 48,560 ರೂ,
ಪುಣೆ- 48,560 ರೂ,
ಮಂಗಳೂರು- 48,610 ರೂ,
ಮೈಸೂರು- 48,610 ರೂ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಚೆನ್ನೈ- 53,670 ರೂ,
ಮುಂಬೈ- 52,980 ರೂ,
ದೆಹಲಿ- 53,140 ರೂ,
ಕೊಲ್ಕತ್ತಾ- 52,980 ರೂ,
ಬೆಂಗಳೂರು- 53,030 ರೂ, ಹೈದರಾಬಾದ್- 52,980 ರೂ,
ಕೇರಳ- 52,980 ರೂ,
ಪುಣೆ- 52,980 ರೂ,
ಮಂಗಳೂರು- 53,030 ರೂ,
ಮೈಸೂರು- 53,030 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,500 ರೂ,
ಮೈಸೂರು- 67,500 ರೂ,
ಮಂಗಳೂರು- 67,500 ರೂ,
ಮುಂಬೈ- 61,400 ರೂ,
ಚೆನ್ನೈ- 67,500 ರೂ,
ದೆಹಲಿ- 61,400 ರೂ,
ಹೈದರಾಬಾದ್- 67,500 ರೂ,
ಕೊಲ್ಕತ್ತಾ- 61,400 ರೂ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡುಬಂದಿದ್ದರೆ, ಬೆಳ್ಳಿ ಬೆಲೆಯಲ್ಲೂ ತಟಸ್ಥತೆ ಕಂಡುಬಂದಿದೆ. ಎಂದಿನಂತೆ ಬೆಳಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ನಿಮ್ಮ ನಗರಗಳಲ್ಲಿ ಇಂದಿನ ದಿನ ಚಿನ್ನ ಮತ್ತು ಬೆಳ್ಳಿಗೆ ಎಷ್ಟು ದರ ಇವೆ ಅನ್ನೋದನ್ನು ಇಲ್ಲಿ ನೀವು ಪ್ರತಿ ದಿನ ತಿಳಿದುಕೊಳ್ಳಬಹುದು.