Ad Widget

Agnipath | ಅಗ್ನಿಪಥ್ ಸೇನಾ ನೇಮಕಾತಿಗೆ ವಿದ್ಯಾಮಾತಾ ಅಕಾಡೆಮಿಯ ಐದು ವಿದ್ಯಾರ್ಥಿಗಳು ಆಯ್ಕೆ

InShot_20221129_172219263
Ad Widget

Ad Widget

Ad Widget

ಹಾವೇರಿಯಲ್ಲಿ ನಡೆದಿದ್ದ ರ್ಯಾಲಿಯಲ್ಲಿ ದೈಹಿಕ ಪರೀಕ್ಷೆ ಪಾಸಗಿದ್ದ ಐದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಗ್ನಿವೀರರಾಗಿದ್ದಾರೆ (Agnipath ).

Ad Widget

Ad Widget

Ad Widget

Ad Widget
ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಭಾರತೀಯ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ನಡೆದ ಪ್ರಪ್ರಥಮ ಸೇನಾ ರ್ಯಾಲಿಯಲ್ಲಿ ದೈಹಿಕ ಕ್ಷಮತೆಯ ಮತ್ತು ಲಿಖಿತ ಪರೀಕ್ಷೆಯ ತರಬೇತಿಯನ್ನು ನೀಡಿದ್ದು ಪ್ರಥಮ ನೇಮಕಾತಿಯಲ್ಲೇ ಓಟ್ಟು 7 ಜನ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. 

ಕಳೆದ ಕೆಲವು ದಿನಗಳ ಹಿಂದಷ್ಟೇ ನೌಕಾ ಸೇನೆಗೆ ಪೌರ್ಷಿ ರೈ, ಭಾರತೀಯ ಭೂಸೇನೆಗೆ ವೈಭವ್ ನಾಣಯ್ಯ ಆಯ್ಕೆಯಾಗಿದ್ದನ್ನು ಸ್ಮರಿಸಿಕೊಳ್ಳಬಹುದು. ಇದೀಗ ಹಾವೇರಿ ರ್ಯಾಲಿಯಲ್ಲಿ  ಉತ್ತೀರ್ಣರಾಗಿದ್ದ ಅಳಿಕೆ ಗ್ರಾಮದ 

ಎರುಂಬು ಮನೆಯ ರವೀಂದ್ರ ಶೆಟ್ಟಿ ಮತ್ತು ಗೀತಾ ರೈ ದಂಪತಿಗಳ ಪುತ್ರ ಲಕ್ಷ್ಮೀಸಾಗರ್ . ಗೋಳಿತೊಟ್ಟು ಗ್ರಾಮದ ಅರಂತ ಬೈಲಿನ ಕುಂಞಣ್ಣ ಗೌಡ ಮತ್ತು ಗೀತಾ ಗೌಡ ದಂಪತಿಗಳ ಪುತ್ರ ಜಯಪ್ರಕಾಶ್.ಎ. ಬೆಳಂದೂರು ಗ್ರಾಮದ ಅಮೈ ಮನೆಯ ಕೇಶವ ಗೌಡ ಮತ್ತು ನಿರ್ಮಲಾ ದಂಪತಿಗಳ ಪುತ್ರ ಭವನ್ ಕುಮಾರ್ ಎ. ಕೆ. ಕಾರಿಂಜ ಗ್ರಾಮ ಚಾವಡಿ ಮನೆಯ ದೂಮಪ್ಪ ಗೌಡ ಮತ್ತು ಲಲಿತಾ ದಂಪತಿಯ ಪುತ್ರ ಸಚಿನ್ ಹಾಗೂ ಸೆಸನಡ್ಕ ಕೃಷ್ಣಪ್ಪ ಮತ್ತು ಪ್ರೇಮ ದಂಪತಿಯ ಪುತ್ರ ಕಿಶೋರ್ ಭಾರತೀಯ ಭೂಸೇನೆ ಗೆ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. ವಿದ್ಯಾಮಾತಾ ಅಕಾಡೆಮಿಯಲ್ಲಿ ಹತ್ತು ದಿನಗಳ ಕಾಲ ರಾತ್ರಿ ಹಗಲು ಸರಣಿ ತರಬೇತಿಯನ್ನು ನೀಡಲಾಗಿತ್ತು.

Ad Widget

Ad Widget

Ad Widget

Ad Widget
ಭಾರತೀಯ ಸೇನೆ, ಪೋಲೀಸ್ ಇಲಾಖೆ, ಬ್ಯಾಂಕಿಂಗ್ ನಿಂದು ಹಿಡಿದು  ಕೆ.ಎ.ಎಸ್/ ಐ.ಎ.ಎಸ್ ವರೆಗೆ ವಿವಿಧ ನೇಮಕಾತಿಗಳಿಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತಿದ್ದು ಅಗ್ನಿಪಥ್ ಯೋಜನೆಯ ಪ್ರಥಮ ನೇಮಕಾತಿಯಲ್ಲಿ ಉತ್ತಮ ಫಲಿತಾಂಶ ಲಭ್ಯವಾಗಿರುವುದಕ್ಕೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ  ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

 ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ತರಬೇತಿಗಾಗಿ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಬಹುದು. 

ಸ್ಥಳ : ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೆಕ್ಸ್ ಮೊದಲ ಮಹಡಿ, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ , ಪುತ್ತೂರು ತಾಲೂಕು,ದ.ಕ

ಫೋನ್ ನಂ: 9620468869 / 9148935808

Ad Widget

Ad Widget
Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: