ಮಂಗಳೂರು : ನಗರದ ಖ್ಯಾತ ಸ್ತ್ರೀ ವೈದ್ಯೆ ಸಹಿತ ಮೂವರು ಹಿಂದೂ ಯುವತಿಯನ್ನು ಮತಾಂತರಗೊಳಿಸಿದ ಬಗ್ಗೆ ಹಾಗು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ನೀಡಿದ ದೂರಿನಂತೆ ಡಾ.ಜಮೀಲಾ, ಖಲೀಲ್ ಮತ್ತು ಇಮಾಮ್ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ದ ಐಪಿಸಿ 354, 354(ಎ), 506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವತಿ ಆಯೇಷಾ ಆಲಿಯಾಸ್ ಶಿವಾನಿ ದೂರು ನೀಡಿದ ಸಂತ್ರಸ್ತ ಯುವತಿ. ಆಕೆ ತನ್ನ ಮೇಲಾದ ಮತಾಂತರ ಯತ್ನ ಹಾಗೂ ಇತರ ದೌರ್ಜನ್ಯಗಳ ಬಗ್ಗೆ ವಿಶ್ವ ಹಿಂದೂ ಪರಿಷತ್ ನ ಮಹಿಳಾ ಘಟಕ ದುರ್ಗಾವಾಹಿನಿಯ ಕಾರ್ಯಕರ್ತರ ನೆರವಿನಿಂದ ಠಾಣೆಗೆ ದೂರು ನೀಡಿದ್ದಾರೆ, ಬಳಿಕ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಮಾಧ್ಯಮಗಳಿಗೂ ವಿವರಣೆ ನೀಡಿದ್ದಾರೆ.
ಮಾಧ್ಯಮದ ಮುಂದೆ ಹೇಳಿದ್ಧೇನು ?
ಹಲವು ಸಮಯಗಳ ಹಿಂದೆ ಸಂತ್ರಸ್ತ ಮಹಹಿಳೆಯೂ ಬಿಕರ್ನಕಟ್ಟೆಯಲ್ಲಿರುವ ಫ್ಯಾನ್ಸಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಆಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಆರೋಪಿ ಖಲೀಲ್ ಎಂಬಾತನ ಮೊಬೈಲ್ ಶಾಪ್ನಲ್ಲೇ ಯುವತಿಯೂ ಮೊಬೈಲ್ ರಿಚಾರ್ಜ್ ಮಾಡಿಸುತ್ತಿದ್ದರು. ಆಗ ಆಕೆಗೆ ಖಲೀಲ್ನ ಪರಿಚಯವಾಗಿದೆ.
2021ರ ಜ.14ರಂದು ಖಲೀಲ್ ಒಳ್ಳೆಯ ಕೆಲಸ ಮತ್ತು ಹಣ ಕೊಡುವುದಾಗಿ ಆಮಿಷವೊಡ್ಡಿ ಪುಸಲಾಯಿಸಿ ಆತನ ಕುಟುಂಬದ ಮನೆಯಾದ ಕಲ್ಲಾಪುಗೆ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲಿದ್ದ ಆತನ ಸಂಬಂಧಿಕ ಮಹಿಳೆಯರು ಕುರಾನ್ ಓದಲು ಮತ್ತು ನಮಾಜ್ ಮಾಡುವಂತೆ ಬಲವಂತ ಮಾಡಿದ್ದಾರೆ. ಹಣ ಕೊಟ್ಟು ಇಸ್ಲಾಂ ಧರ್ಮಕ್ಕೆ ಸೇರುವಂತೆ ಹೇಳಿ ನಮಾಜ್ ಮಾಡಿಸಿದ್ದಾರೆ. ಮೊದಲಿಗೆ ಐದು ಸಲ ನಾನು ನಮಾಜ್ ಮಾಡ್ತಾ ಇದ್ದೆ ನನಗೆ ಖಲೀಲ್ ಆಯೇಷಾ ಅಂತ ಹೆಸರಿಟ್ಟ, ಎಂದು ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸಿದರು
ನನ್ನನ್ನು ಖಲೀಲ್ ಆಟೋದಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆನಂತರ, ಫ್ಯಾನ್ಸಿ ಅಂಗಡಿ ಬಿಟ್ಟು ಬಲ್ಮಠದ ಯೇನಪೋಯ ಆಸ್ಪತ್ರೆ ಮಾಲಕರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದೆ. ಅಲ್ಲಿ ಎಂಟು ತಿಂಗಳ ಕಾಲ ಕೆಲಸ ಮಾಡಿದ್ದೇನೆ. ಅಲ್ಲಿ ಕೆಲಸ ಮಾಡುತ್ತಿದ್ದಾಗಲೇ ಸೈನಾಝ್ ಎಂಬವರು ಪರಿಚಯವಾಗಿದೆ
ಆ ಬಳಿಕ ಕೇರಳದ ಒಂದು ಮನೆಗೆ ಕೆಲಸಕ್ಕೆ ಹೋಗಿದ್ದೆ.ಆ ಬಳಿಕ ನಾನು ಕೋರೋನಾ ಸಮಯದಲ್ಲಿ ಕೆಲಸ ಬಿಟ್ಟು ಮನೆಗೆ ಬಂದೆ. ಆಗ ಸೈನಾಝ್ ನನ್ನನ್ನು ಡಾಕ್ಟರ್ ಜಮೀಲಾ ಮತ್ತು ಸೈಯದ್ ಅವರ ಮನೆಗೆ ಕರೆದೊಯ್ದು ಕೆಲಸಕ್ಕೆ ಸೇರಿಸಿದ್ದಾರೆ. ಅಲ್ಲಿ ಎಂಟು ತಿಂಗಳು ಕೆಲಸ ಮಾಡಿದ್ದೇನೆ. ಅಲ್ಲದೇ ಡಾ.ಜಮೀಲಾ ಮನೆಯಲ್ಲೂ ಬುರ್ಖಾ ಹಾಕಿಸಿದ್ದರು. ಜಮೀಲಾ ಕುರಾನ್ ಪುಸ್ತಕ ಕೊಟ್ಟು ಓದಲು ಹೇಳಿ ನಮಾಜ್ ಮಾಡಲು ಹೇಳ್ತಾ ಇದ್ದರು. ನಾನು ತುಳು ಭಾಷೆಯಲ್ಲಿ ಮಾತನಾಡ್ತಾ ಇದ್ದೆ, ಅಲ್ಲಿ ನಾನು ಮುಸ್ಲಿಂ ಭಾಷೆ ಕಲಿತೆ. ಎಲ್ಲರೂ ಮಾತನಾಡುವಾಗ ನಾನು ಬ್ಯಾರಿ ಭಾಷೆ ಕಲಿತೆ.
ಆ ಬಳಿಕ ಡಾ.ಜಮೀಲಾರ ಮನೆಯಲ್ಲಿ ಕೆಲಸ ಸಿಕ್ಕಿತ್ತು. ಅಲ್ಲಿ ನನಗೆ ಕ್ಲೀನಿಂಗ್ ಕೆಲಸ ಅಂತ ಕುಕ್ಕಿಂಗ್ ಕೆಲಸ ಕೊಟ್ಟರು.ಆ ಬಳಿಕ ಅವರು ನನಗೆ ತೊಂದರೆ ಕೊಟ್ಟ ಕಾರಣಕ್ಕೆ ಅ.25ಕ್ಕೆ ಕೆಲಸ ಬಿಟ್ಟು ತಪ್ಪಿಸಿಕೊಂಡು ಬಂದೆ
ಜಮೀಲಾ ಅವರ ಮನೆಯಲ್ಲಿದ್ದಾಗಲೇ ಭದ್ರಾವತಿ ಮೂಲದ ಐಮಾನ್ ಎಂಬಾತ ಪರಿಚಯವಾಗಿದ್ದು ಪ್ರೀತಿಸಲು ಒತ್ತಾಯ ಮಾಡಿದ್ದಾನೆ. ಅಲ್ಲದೆ, ಆಗಸ್ಟ್ 30 ರಂದು ತನ್ನ ಮನೆಗೆ ಬರುವಂತೆ ಒತ್ತಾಯ ಮಾಡಿದ್ದ. ಅದರಂತೆ, ಆತನ ಭದ್ರಾವತಿಯ ಮನೆಗೆ ಹೋಗಿ ಬಂದಿರುತ್ತೇನೆ.
ನನ್ನನ್ನು ಇಸ್ಲಾಂಗೆ ಮತಾಂತರ ಆಗಲು ಪ್ರಯತ್ನ ಪಟ್ಟ ಜಮೀಲಾ, ಐಮಾನ್ ಮತ್ತು ಲೈಂಗಿಕ ಕಿರುಕುಳ ನೀಡಿದ ಖಲೀಲ್ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಯುವತಿ ದೂರು ನೀಡಿದ್ದಾಳೆ. ಐಮಾನ್ ಎಂಬಾತ ಪ್ರೀತಿಸುವಂತೆ ಕಾಡಿದ್ದಲ್ಲದೇ ಕಿರುಕುಳವನ್ನೂ ನೀಡಿದ್ದಾನೆ. ಅಲ್ಲದೇ ಡಾ ಜಮೀಲಾ ಅವರ ಮನೆಯಲ್ಲೂ ನನ್ನನ್ನು ದುಡಿಸಿದ್ದಲ್ಲದೇ ನನ್ನ ವಿರುದ್ಧ ದೂರು ನೀಡುವುದಾಗಿ ಬೆದರಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.