ಹೊಸದಿಲ್ಲಿ: ದೇಶವನ್ನೇ ಬಿಚ್ಚಿ ಬೀಳಿಸಿದ ಶೃದ್ಧಾ ವಾಲ್ಕರ್ ಪ್ರಕರಣ ಬೆನ್ನಲ್ಲೇ ರಾಷ್ಟ್ರರಾಜಧಾನಿಯಲ್ಲಿ (Delhi Murder) ಮತ್ತೊಂದು ಘಟನೆ ನಡೆದಿದೆ. ಶೃದ್ಧಾ ರೀತಿಯ ಪ್ರಕರಣವೇ ನಡೆದಿದ್ದು, ವ್ಯಕ್ತಿಯೊಬ್ಬನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಪ್ರಿಡ್ಜ್ ನಲ್ಲಿ ಇಡಲಾಗಿದೆ.
ದಿಲ್ಲಿ ಪೊಲೀಸರ ಅಪರಾಧ ವಿಭಾಗವು ಮಹಿಳೆ ಮತ್ತು ಆಕೆಯ ಪುತ್ರನನ್ನು ಬಂಧಿಸಿದೆ. ಅವರು ಒಬ್ಬ ವ್ಯಕ್ತಿಯನ್ನು ಕೊಂದು, ದೇಹವನ್ನು ಕತ್ತರಿಸಿ, ರೆಫ್ರಿಜರೇಟರ್‌ನಲ್ಲಿ ತುಂಡುಗಳನ್ನು ಸಂಗ್ರಹಿಸಿಟ್ಟು ನಂತರ ಪೂರ್ವ ದೆಹಲಿಯ ಹಲವಾರು ಪ್ರದೇಶಗಳಲ್ಲಿ ಅವುಗಳನ್ನು ವಿಲೇವಾರಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಜೂನ್ ನಲ್ಲಿ ಪೊಲೀಸರು ಪಾಂಡವ ನಗರದಲ್ಲಿ ಮಾನವ ದೇಹದ ತುಂಡೊಂದನ್ನು ಪತ್ತೆ ಮಾಡಿದ್ದರು. ಆದರೆ ಅದು ಕೊಳೆತ ಸ್ಥಿತಿಯಲ್ಲಿ ಇದ್ದಿದ್ದರಿಂದ ಅದರ ತನಿಖೆ ಸಾಧ್ಯವಾಗಿರಲಿಲ್ಲ. ಕೆಲ ದಿನಗಳ ಹಿಂದೆ ಶೃದ್ದಾ ಪ್ರಕರಣ ಬೆಳಕಿಗೆ ಬಂದ ಬಳಿಕ ಪಾಂಡವ ನಗರದಲ್ಲಿ ಸಿಕ್ಕ ಭಾಗವು ಆಕೆಯದ್ದೇ ಆಗಿರಬಹುದು ಎಂಬ ದಿಕ್ಕಿನಲ್ಲಿ ತನಿಖೆ ಮಾಡಲಾಗಿತ್ತು. ಆದರೆ ಇದೀಗ ಅದು ಪಾಂಡವ ನಗರದ ನಿವಾಸಿ ಅಂಜನ್ ದಾಸ್ ಎಂಬವನದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಪೂನಂ ಮತ್ತು ಆಕೆಯ ಮಗ ದೀಪಕ್ ಜೂನ್ ನಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ದಾಸ್ ನನ್ನು ಕೊಂದಿದ್ದಾರೆ. ಅಂಜನ್ ದಾಸ್ ಗೆ ಮೊದಲು ನಿದ್ರೆ ಮಾತ್ರೆಗಳನ್ನು ನೀಡಿ ನಂತರ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆರೋಪಿಗಳು ಆತನ ದೇಹವನ್ನು ಕತ್ತರಿಸಿ, ರೆಫ್ರಿಜರೇಟರ್ ನಲ್ಲಿ ತುಂಡುಗಳನ್ನು ಸಂಗ್ರಹಿಸಿಟ್ಟಿದ್ದರು. ಬಳಿಕ ಅವುಗಳನ್ನು ಪಾಂಡವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಲೇವಾರಿ ಮಾಡಿದ್ದರು.
ರಾಮಲೀಲಾ ಮೈದಾನದಲ್ಲಿ 5 ಭಾಗ, ತೊಡೆ ಮತ್ತು ತಲೆಬುರುಡೆ ಬೇರೆ ಕಡೆ ಪತ್ತೆಯಾಗಿದೆ ಇದೊದು ಭೀಕರ ಕೊಲೆ ಎಂದು ದೆಹಲಿ ಕ್ರೈಂ ವಿಭಾಗದ ಡಿಸಿಪಿ ಅಮಿತ್ ಗೋಯಲ್ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಪೂನಂ 2017 ರಲ್ಲಿ ಅಂಜನಾ ದಾಸ್ ಎನ್ನುವವರನ್ನು ಮದುವೆಯಾಗಿದ್ದರು. ಅವಳ ಗಂಡ ಕುಳ್ಳು ಎನ್ನುವವರ 2016 ರಲ್ಲಿ ಮೃತಪಟ್ಟಿದ್ದ, ಕುಳ್ಳು ಮಗ ಈಗ ಬಂದಿತ ಆರೋಪಿ ದೀಪಕ್ . ಈ ಘಟನೆ 2022 ರ ಮೇ 30 ರಂದು ನಡೆದಿದ್ದು ಇದೀಗ ಶ್ರದ್ಧಾ ಕೊಲೆ ತನಿಖೆ ಸಂದರ್ಭ ಮತ್ತೊಂದು ಭಯಾನಕ ಕೊಲೆ ಪ್ರಕರಣ ಹೊರ ಬಿದ್ದಿದೆ.
ಇದೀಗ ತಾಯಿ ಪೂನಂ ಮತ್ತು ಮಗ ದೀಪಕ್ ಬಂಧಿತರಾಗಿದ್ದಾರೆ.
A woman along with her son arrested by Crime Branch in Delhi's Pandav Nagar for murdering her husband. They chopped off body in several pieces,kept in refrigerator & used to dispose of pieces in nearby ground: Delhi Police Crime Branch
— ANI (@ANI) November 28, 2022
(CCTV visuals confirmed by police) pic.twitter.com/QD3o5RwF8X