ರಾಷ್ಟ್ರೀಯ
Baba Ramdev | ಮಹಿಳೆಯರು ಸೀರೆಯಲ್ಲಿ , ಸಲ್ವಾರ್ ಸೂಟ್ ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ , ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣುತ್ತಾರೆ : ದೇವೇಂದ್ರ ಫಡ್ನವೀಸ್ ಪತ್ನಿ ಮುಂದೆಯೇ ವಿವಾದಾತ್ಮಕ ಹೇಳಿಕೆ ನೀಡಿದ ಬಾಬಾ ರಾಮ್ ದೇವ್

ಮುಂಬೈ: ತಮ್ಮ ಹೇಳಿಕೆಗಳಿಂದ ಆಗಾಗ ಸುದ್ದಿಯಾಗುವ ಪತಂಜಲಿ ಮುಖ್ಯಸ್ಥ, ಯೋಗ ಗುರು ಬಾಬಾ ರಾಮ್‌ದೇವ್ (Baba Ramdev) ಇದೀಗ ಮಹಿಳೆಯರ ಉಡುಪುಗಳ (Women’s Clothing) ಕುರಿತಾಗಿ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದೆ.
ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ (Thane) ನಡೆದ ಯೋಗ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ರಾಮ್ ದೇವ್ ಬಾಬಾ, ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್ ಸೂಟ್‌ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.ರಾಮ್‌ದೇವ್ ಅವರು ಈ ಹೇಳಿಕೆಯನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಸಮ್ಮುಖದಲ್ಲಿಯೇ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಹಾಗೂ ಸಂಸದ ಶ್ರೀಕಾಂತ್ ಶಿಂಧೆ ಕೂಡಾ ಭಾಗಿಯಾಗಿದ್ದರು.ವರದಿಗಳ ಪ್ರಕಾರ ಮಹಿಳೆಯರಿಗಾಗಿ ಯೋಗ ತರಬೇತಿ ಕಾರ್ಯಕ್ರಮ ನಡೆಸಲಾಗಿತ್ತು. ಇದಾದ ಬಳಿಕ ಸಮಾವೇಶ ಆಯೋಜಿಸಲಾಗಿತ್ತು. ಯೋಗ ತರಬೇತಿಯಲ್ಲಿ ಭಾಗಿಯಾಗಿದ್ದ ಮಹಿಳೆಯರು ಸಮಾವೇಶಕ್ಕಾಗಿ ಸೀರೆಯನ್ನೂ ತಂದಿದ್ದರು.
ಆದರೆ ಯೋಗ ತರಬೇತಿ ಮುಗಿದ ತಕ್ಷಣವೇ ಸಭೆ ಆರಂಭವಾಗಿತ್ತು. ಇದರಿಂದ ಮಹಿಳೆಯರಿಗೆ ಸೀರೆ ಉಟ್ಟುಕೊಳ್ಳಲು ಸಮಯ ಸಿಕ್ಕಿರಲಿಲ್ಲ. ಈ ಕುರಿತು ಹೇಳಿಕೆ ನೀಡಿದ ಬಾಬಾ ರಾಮ್‌ದೇವ್, ಸೀರೆ ಉಡಲು ಸಮಯವಿಲ್ಲದಿದ್ದರೂ ಸಮಸ್ಯೆ ಇಲ್ಲ. ಈಗ ನೀವು ಮನೆಗೆ ಹೋಗಿ ಸೀರೆ ಉಟ್ಟುಕೊಳ್ಳಿ.
ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್ ಸೂಟ್‌ಗಳಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಪತಂಜಲಿ ಯೋಗ ಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿ ವತಿಯಿಂದ ಶುಕ್ರವಾರ ಥಾಣೆಯ ಹೈಲ್ಯಾಂಡ್ ಪ್ರದೇಶದಲ್ಲಿ ಯೋಗ ವಿಜ್ಞಾನ ಶಿಬಿರ ಮತ್ತು ಮಹಿಳಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಅಮೃತಾ ಫಡ್ನವೀಸ್ ಉಪಸ್ಥಿತರಿದ್ದರು. ಈ ವೇಳೆ ಬಾಬಾ ರಾಮದೇವ್ ಮಹಿಳೆಯರೊಂದಿಗೆ ಸಂವಾದ ನಡೆಸುತ್ತಿದ್ದಾಗ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಬಾ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.
ರಾಷ್ಟ್ರೀಯ
online priest Fraud ಪೂಜೆಗೆಂದು ದುಡ್ಡು ಪಡೆದು ಪಂಗನಾಮ: 80 ಲಕ್ಷ ರೂ ವಂಚಿಸಿದ ‘ಆನ್‌ಲೈನ್ ʼ ಆರ್ಚಕ

ಬೆಂಗಳೂರು: ಇತ್ತೀಚಿಗೆ ಸಾಕಷ್ಟು ಆನ್ಲೈನ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಆತಂಕಕಾರಿಯಾಗಿದೆ. ಪ್ರತಿದಿನ ಹೊಸ ಹೊಸ ನಮೂನೆಯ ಮೋಸಗಳನ್ನು ಕಾಣಬಹುದಾಗಿದೆ. ಈ ವಂಚನೆ ಈಗ ಧಾರ್ಮಿಕ ಕ್ಷೇತ್ರಕ್ಕೂ ಕಾಲಿಟ್ಟಿದೆ. ಆರ್ಚಕರ ಸೋಗಿನಲ್ಲಿ ವ್ಯಕ್ತಿಯೊಬ್ಬರು ಆನ್‌ಲೈನ್ ಮೂಲಕ ₹ 80 ಸಾವಿರ ಪಡೆದು ಮಹಿಳೆಯೊಬ್ಬರಿಗೆ ವಂಚಿಸಿರುವ ಘಟನೆ ಬೆಂಗಳೂರು ನಗರದ ಬನ್ನೇರುಘಟ್ಟ ಬಳಿ ನಡೆದಿದೆ.
‘ಬನ್ನೇರುಘಟ್ಟ ರಸ್ತೆಯ ನಿವಾಸಿಯಾಗಿರುವ 36 ವರ್ಷದ ಮಹಿಳೆಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
ಈ ವಂಚನೆ ಪ್ರಕರಣದ ಬಗ್ಗೆ ಮಹಿಳೆ ಕೊಟ್ಟಿರುವ ಮಾಹಿತಿಯ ಪ್ರಕಾರ, ಮಹಿಳೆ ತಮ್ಮ ಮನೆಯಲ್ಲಿ ಪೂಜೆ ಮಾಡಿಸಲು ತೀರ್ಮಾನಿಸಿದ್ದರು. ಇದಕ್ಕಾಗಿ ಪೂಜಾರಿ ಅವರನ್ನು ಹುಡುಕುತ್ತಿದ್ದರು. ಸ್ನೇಹಿತರೊಬ್ಬರು ಪೂಜಾರಿ ಶರಣ್ ಭಟ್ ಎಂಬುವರ ಮೊಬೈಲ್ ನಂಬರ್ ನೀಡಿದ್ದರು. ಅದಕ್ಕೆ ಕರೆ ಮಾಡಿದ್ದ ಮಹಿಳೆ, ಪೂಜೆ ಮಾಡಿಕೊಡುವಂತೆ ವಿನಂತಿಸಿದ್ದರು.’
ಪೂಜೆ ಮಾಡಲು ಒಪ್ಪಿದ್ದ ಪೂಜಾರಿ, ‘ನನ್ನ ಖಾತೆಗೆ ₹ 50,000 ಕಳುಹಿಸಿ. ಅದನ್ನು ದೇವರ ಮುಂದೆ ಇರಿಸಿ ಕೆಲದಿನ ಪೂಜೆ ಮಾಡುತ್ತೇನೆ. ನಂತರ, ನಿಮ್ಮ ಮನೆಗೂ ಅದೇ ಹಣವನ್ನು ತಂದಿಟ್ಟು ಪುನಃ ಪೂಜೆ ಮಾಡುತ್ತೇನೆ’ ಎಂದಿದ್ದ. ಅದನ್ನು ನಂಬಿದ್ದ ಮಹಿಳೆ, ಹಣ ಕಳುಹಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಪೂಜೆ ಸಾಮಗ್ರಿಗಳನ್ನು ಖರೀದಿಸಬೇಕೆಂದು ಹೇಳಿದ್ದ ಆರೋಪಿ, ಪುನಃ ₹ 30 ಸಾವಿರ ಪಡೆದಿದ್ದ. ಇದಾದ ನಂತರ ಆರೋಪಿ, ಪೂಜೆ ಮಾಡಲು ಬಂದಿದ್ದ. ಹಣವನ್ನೂ ವಾಪಸು ಕೊಡದೇ ಪರಾರಿಯಾಗಿದ್ದಾನೆ’ ಎಂದು ಹೇಳಿದರು.
ಸಿನೆಮಾ
Lakshmika Sajeevan ಹಠಾತ್ ಹೃದಯಾಘಾತ – 24ರ ಹರೆಯದ ಮಲಯಾಳಂ ನಟಿ ಲಕ್ಷ್ಮಿಕಾ ಸಜೀವನ್ ಮೃತ್ಯು

ಚಲನಚಿತ್ರ ಹಾಗೂ ಟೆಲಿಫಿಲ್ಮ್ʼ ಗಳ ನಟನೆಯ ಮೂಲಕ ಮನೆಮಾತಾಗಿದ್ದ ಮಲಯಾಳಂ ನಟಿ (Mollywood Actress) ಲಕ್ಷ್ಮಿಕಾ ಸಜೀವನ್ (Lakshmika Sajeevan) ಅವರು ಹಠಾತ್ ಅಸ್ವಸ್ಥಗೊಂಡು ಶಾರ್ಜಾದಲ್ಲಿ ನಿಧನರಾದರು. 24ರ ಹರೆಯದ ಉದಯೋನ್ಮುಖ ಪ್ರತಿಭೆ ಹಠಾತ್ ಹೃದಯಘಾತಕ್ಕೆ (Heart Attack) ತುತ್ತಾಗಿ ಮೃತಪಟ್ಟಿರುವುದಾಗಿ ವರದಿ ತಿಳಿಸಿವೆ.
ಶೋಷಿತ ಸಮುದಾಯಗಳ ಹೋರಾಟಗಳ ಮೇಲೆ ಬೆಳಕು ಚೆಲ್ಲುವ ಸಿನಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ಟೆಲಿಫಿಲ್ಮ್ ‘ಕಕ್ಕ’ದಲ್ಲಿ ಪಂಚಮಿಯ ಪಾತ್ರ ಲಕ್ಷ್ಮಿಕಾಗೆ ಭಾರೀ ಜನಪ್ರಿಯತೆ ತಂದು ಕೊಟ್ಟಿತ್ತು. ಅದರಲ್ಲಿ ಆಕೆ ಮನೋಜ್ಞವಾಗಿ ನಟಿಸಿದ್ದು, ಚಿತ್ರದಲ್ಲಿನ ಆಕೆಯ ಅಭಿನಯವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಪಾತ್ರದ ನಟನೆಗೆ ಪ್ರೇಕ್ಷಕರಿಂದ ಲೂ ಭರಫುರ ಮನ್ನಣೆ ಮತ್ತು ಮೆಚ್ಚುಗೆ ದೊರಕಿತ್ತು.

ದುಲ್ಕರ್ ಸಲ್ಮಾನ್ ಅವರ ‘ಒರು ಯಮಂದನ್ ಪ್ರೇಮಕಥಾ,’ ‘ಪಂಚವರ್ಣತಥಾ,’ ‘ಸೌದಿ ವೆಲ್ಲಕ್ಕ,’ ‘ಪುಜಯಮ್ಮ,’ ‘ಉಯರೆ,’ ‘ಒರು ಕುಟ್ಟನಾಡನ್ ಬ್ಲಾಗ್,’ ಮತ್ತು ‘ನಿತ್ಯಹರಿತ ನಾಯಕನ್’ ಆಕೆ ನಟಿಸಿದ ಪ್ರಮುಖ ಸಿನಿಮಾಗಳು. ಕೊಚ್ಚಿಯ ವಜವೇಲಿಲ್ ಮೂಲದ ಲಕ್ಷ್ಮಿಕಾ ಶಾರ್ಜಾದ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಪ್ರಶಾಂತ್ ಬಿ ಮೊಲಿಕಲ್ ನಿರ್ದೇಶನದ ಮತ್ತು ಅಮಲ್ ಮೋಹನ್ ಬರೆದ ಥ್ರಿಲ್ಲರ್ ‘ಕೂನ್’ ಚಿತ್ರದಲ್ಲಿ ಲಕ್ಷ್ಮಿಕಾ ನಟಿಸಿದ್ದರು. ವಿಜೀಶ್ ಮಣಿ ನಿರ್ದೇಶನದ ‘ಪುಳಯಮ್ಮ’ ನಾಟಕ ಚಿತ್ರದಲ್ಲಿನ ದೇವಯಾನಿ ಟೀಚರ್ ಪಾತ್ರಕ್ಕಾಗಿ ಅವರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದರು.

ಅಪರಾಧ
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?

ತಿರುವನಂತಪುರಂ : ಕಳೆದ ವರ್ಷ ಕೇರಳದಲ್ಲಿ ದೊಡ್ಡ ಅಭಿಯಾನಕ್ಕೆ ಕಾರಣವಾಗಿದ್ದ ವರದಕ್ಷಿಣೆ ಕಿರುಕುಳ ಮತ್ತೆ ಆ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣವಾಗಿರುವುದು ಎರಡು ದಿನಗಳ ಹಿಂದೆ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಕೇರಳದ (Kerala) ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು. ಮೃತಳನ್ನು ಶಹನಾ (Shahana) (26) ಎಂದು ಗುರುತಿಸಲಾಗಿದೆ̤ ಈಕೆಯ ಆತ್ಮಹತ್ಯೆಗೆ ಪ್ರಚೊಧನೆ ನೀಡಿದ ಆರೋಪದಡಿ ಆಕೆಯ ಬಾಯ್ ಫ್ರೆಂಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಹಾನಾ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಪಿಜಿ ವಿದ್ಯಾರ್ಥಿನಿ. ಈಕೆಯ ಮೃತ ದೇಹ ಮಂಗಳವಾರ ಬೆಳಗ್ಗೆ ಕಾಲೇಜ್ ಬಳಿಯ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ. ಡಾ. ಸಹನಾ, ತಮ್ಮ ತಾಯಿ ಮತ್ತು ಇಬ್ಬರು ಒಡಹುಟ್ಟಿದವರ ಜತೆ ವಾಸವಿದ್ದರು. ಗಲ್ಫ್ನಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರು ಡಾ. ಇಎ ರುವಾಯಿಸ್ನನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.
ಬಳಿಕ ಆ ಯುವಕನ ಕುಟುಂಬ ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದ ಹಿನ್ನಲೆಯಲ್ಲಿ ಅ ಮದುವೆ ಮುರಿದು ಬಿದ್ದಿತ್ತು. ಇದರಿಂದ ಮಾನಸಿಕ ಖಿನ್ನತೆ ಅನುಭವಿಸಿದ ಅಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ. ಈ ವಿಚಾರ ಕೇರಳದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಅವರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ.
ತರುವಾಯ, ವೈದ್ಯಕೀಯ ಕಾಲೇಜು ಪೊಲೀಸರು ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಶಹಾನಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅದೇ ಸಂಸ್ಥೆಯಲ್ಲಿ ಪಿಜಿ ವಿದ್ಯಾರ್ಥಿಯಾಗಿರುವ ಯುವಕ ಪ್ರಕರಣದ ಆರೋಪಿ. ಈತ ಮೂಳೆ ಚಿಕಿತ್ಸೆಯಲ್ಲಿ ಪಿಜಿ ಮಾಡುತ್ತಿರುವ ವೈದ್ಯ.ಈತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ವರದಕ್ಷಿಣೆಗಾಗಿ ಕಿರುಕುಳ ಪ್ರಕರಣ ದಾಖಲಾಗಿದೆ.
ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಾವು ದಾಖಲಿಸಿಕೊಂಡಿರುವ ವಿವಿಧ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದೆ. ಆ ಬಳಿಕವಷ್ಟೇ ಯುವಕನ ಬಂಧನ ಸೇರಿದಂತೆ ಮುಂದಿನ ಪ್ರಕ್ರಿಯೆಗಳ ಕುರಿತಾಗಿ ನಿರ್ಧರಿಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ಶಹನಾ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಶಹಾನಾ ಅವರ ಕುಟುಂಬಸ್ಥರು ದೂರು ನೀಡಿದ ಬಳಿಕ ಅದರಂತೆ ಐಪಿಸಿ ಸೆಕ್ಷನ್ಗಳನ್ನು ಬದಲಾಯಿಸಿದರು.

ವರದಕ್ಷಿಣೆಯಾಗಿ 150 ಪವನ್ ಚಿನ್ನ, ಐಷಾರಾಮಿ BMW ಕಾರು ಮತ್ತು 15 ಎಕ್ರೆ ಜಮೀನು ನೀಡುವಂತೆ ಆರೋಪಿ ಕುಟುಂಬ ಬೇಡಿಕೆಯಿಟ್ಟಿತ್ತು. ಆದರೆ, ಶಹನಾಳ ಮನೆಯವರಿಗೆ ಅಷ್ಟು ದೊಡ್ಡ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ . ಈ ಬಳಿಕ ವೈದ್ಯಕೀಯ ಪಿಜಿ ವೈದ್ಯರ ಸಂಘದ ಪ್ರತಿನಿಧಿಯೂ ಆಗಿದ್ದ ಆರೋಪಿ ವೈದ್ಯ ಶಹಾನಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿದ್ದಾನೆ.
ಪೊಲೀಸರು ಮೃತಳು ವಾಸ್ತವ್ಯವಿದ್ದ ಕೊಠಡಿಯಿಂದ ಡೆತ್ ನೋಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ “ಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಎಂದು ಬರೆದು ಕೊಂಡಿದ್ದಾಳೆ . ತಾನೇ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಗೆಳೆಯನ ಜತೆ ಮದುವೆಗೆ ಸಿದ್ಧತೆ ನಡೆಸಿದ್ದ ಡಾ. ಸಹನಾಗೆ ಇದು ಭಾರಿ ಆಘಾತ ಉಂಟುಮಾಡಿತ್ತು. ಇದರಿಂದ ತೀವ್ರ ನೊಂದಿದ್ದ ಸಹನಾ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಮತ್ತು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ
-
ಮಂಗಳೂರು2 days ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ಮಂಗಳೂರು1 day ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್1 day ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸುಳ್ಯ1 day ago
Kukke subrahmnya Temple ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಗಮನಕ್ಕೆ : ಡಿ.8ರಿಂದ 24ರ ತನಕ ಕ್ಷೇತ್ರದಲ್ಲಿ ಪ್ರಧಾನ ಸೇವೆ ಸಹಿತ ಹಲವು ಸೇವೆಗಳು ಅಲಭ್ಯ, ವ್ಯತ್ಯಯ – ಇಲ್ಲಿದೆ ಮಾಹಿತಿ
-
ಸುಳ್ಯ1 day ago
Kukke Shri Subrahmanya Temple ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ ಪ್ರಸಾದ ವಿತರಣೆ – ಇಲ್ಲಿದೆ ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ ಪ್ರಸಾದದ ಮಹತ್ವ
-
ರಾಜ್ಯ2 days ago
ಭೂತ ಕೋಲ ಹೆಸರಿನಲ್ಲಿ ಟ್ರಾವೆಲ್ ಏಜನ್ಸಿಯಿಂದ ಟೂರ್ ಪ್ಯಾಕೇಜ್ : ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ : ಹಲವರ ವಿರೋಧ – ಕೆಲವರ ಸಮರ್ಥನೆ | ದೈವಾರಾಧನೆ ಟೂರ್ ಪ್ಯಾಕೇಜ್ ಭಾಗವಾಗುವುದು ತಪ್ಪೇ? ಸರಿಯೇ?
-
Uncategorized1 day ago
Leelavathi | ಪ್ರಖ್ಯಾತ ಹಿರಿಯ ನಟಿ ಲೀಲಾವತಿ ವಿಧಿವಶ – ದಕ್ಷಿಣಕನ್ನಡದ ಕುಗ್ರಾಮದಿಂದ ಹೋಗಿ ಸಿನಿಮಾ ರಂಗದಲ್ಲಿ ಅಪಾರ ಸಾಧನೆ ಮೆರೆದ ನಟಿ
-
ವೈರಲ್ ನ್ಯೂಸ್1 day ago
Arjuna Elephant | ಅರ್ಜುನನಿಗೆ ತಪ್ಪಾಗಿ ಗುಂಡೇಟು ಬಿದ್ದದ್ದಲ್ಲ ಕಾದಾಡುವಾಗ ಚೂಪಾದ ಮರದ ತುಂಡು ಚುಚ್ಚಿ ಗಾಯವಾಗಿದ್ದು : ಅರಣ್ಯ ಇಲಾಖೆ ಸ್ಪಷ್ಟನೆ