Ad Widget

ಸುಳ್ಯ : ಗೋಣಿ ಚೀಲದಲ್ಲಿ ಮಹಿಳೆಯ ಮಹಿಳೆಯ ಮೃತದೇಹ ಪತ್ತೆ ಪ್ರಕರಣ – ಪ. ಬಂಗಾಲದಲ್ಲಿ ಓರ್ವ ಪೊಲೀಸರ ವಶ

WhatsApp Image 2022-11-22 at 17.55.58
Ad Widget

Ad Widget

Ad Widget

ಸುಳ್ಯದ ಬೀರಮಂಗಲದಲ್ಲಿ ಬಾಡಿಗೆ ಮನೆಯೊಂದರಲ್ಲಿ  ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪಶ್ಚಿಮ ಬಂಗಾಲದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಪಶ್ಚಿಮ ಬಂಗಾಲ ಮೂಲದ  ಇಮ್ರಾನ್ ಪೊಲೀಸರು ವಶಕ್ಕೆ ಪಡೆದಿರುವ ವ್ಯಕ್ತಿ.  ಮೃತದೇಹ ಪತ್ತೆಯಾದ ಮನೆಯನ್ನು ಆತ ಬಾಡಿಗೆಗೆ ಪಡೆದಿದ್ದ. ಕಳೆದ 8 ತಿಂಗಳಿನಿಂದ ಇಮ್ರಾನ್‌ ಶೇಕ್‌ ಸುಳ್ಯದ ಪ್ರತಿಷ್ಟಿತ ಹೋಟೇಲ್‌ ಒಂದರಲ್ಲಿ  ಹೆಲ್ಪರ್‌ಆಗಿ ಕೆಲಸ ಮಾಡಿಕೊಂಡು ಆ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ

Ad Widget

Ad Widget

Ad Widget

Ad Widget

 ಬಾಡಿಗೆ ಮನೆಯಲ್ಲಿ ಗೋಣಿ ಚಿಲದಲ್ಲಿ ಮೃತದೇಹ ಪತ್ತೆಯಾದ ಬಳಿಕ ಪುತ್ತೂರು ಉಪವಿಭಾಗ ಡಿ.ವೈ.ಎಸ್‌.ಪಿ. ನೇತೃತ್ವದಲ್ಲಿ ನಾಲ್ಕು ಪೊಲೀಸರ  ತಂಡಗಳನ್ನು ರಚಿಸಿ ಆರೋಪಿಯ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.  ಇಮ್ರಾನ್‌  ಪತ್ನಿಯನ್ನು ಕೊಂದು ಗೋಣಿಯಲ್ಲಿ ಪರಾರಿಯಾಗಿದ್ದಾನೆಂದು ಆರೋಪ ಕೇಳಿ ಬಂದಿತ್ತು . ಇಮ್ರಾನ್ ನ ಜಾಡು ಹಿಡಿದು ಹೊರಟ ಪೊಲೀಸರ ತಂಡ ಆತನ ಹುಟ್ಟೂರು ಪಶ್ಚಿಮ ಬಂಗಾಲಕ್ಕೆ ತೆರಳಿದ್ದು ಅಲ್ಲಿ ಅಲ್ಲಿನ ಪೊಲೀಸರ ನೆರವಿನಿಂದ  ವಶಕ್ಕೆ ಪಡೆದು  ನ.24ರಂದು ಸಂಜೆ ಸುಳ್ಯಕ್ಕೆ ಕರೆತಂದಿರುವುದಾಗಿ ತಿಳಿದು ಬಂದಿದೆ.

Ad Widget

Ad Widget

Ad Widget

Ad Widget

ಏನಿದು ಪ್ರಕರಣ ?

ಘಟನೆಯ ಬಗ್ಗೆ  ಸಂತೋಷ್‌  ಎಂಬವರು  ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 8 ತಿಂಗಳಿನಿಂದ ಇಮ್ರಾನ್‌ ಶೇಕ್‌ ಹೆಲ್ಪರ್‌ಆಗಿ ತನ್ನ ಬಳಿ  ಕೆಲಸ ಮಾಡಿಕೊಂಡಿದ್ದು, ಬೀರಮಂಗಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕೆಲಸಕ್ಕೆ ಸೇರಿದ ಹದಿನೈದು ದಿನಗಳಲ್ಲಿ ತನ್ನ ಊರಾದ ಪಶ್ಚಿಮ ಬಂಗಾಳಕ್ಕೆ ಹೋಗಿ ಮದುವೆಯಾಗಿ ತನ್ನ ಹೆಂಡತಿಯೊಂದಿಗೆ ಬಂದವನು ಬಾರ್‌ಇರುವ ಕಾಂಪ್ಲೆಕ್ಸ್ ನಲ್ಲಿಯೇ ರೂಮಿನಲ್ಲಿ ಹೆಂಡತಿ ಜೊತೆ 15 ದಿವಸ ಇದ್ದ. ಆತನ ಹೆಂಡತಿ ಅಂಗವಿಕಲೆಯಾಗಿದ್ದು ಊರುಗೋಲಿನ ಸಹಾಯದಲ್ಲಿ ನಡೆದಾಡುತ್ತಿದ್ದು, ಕಪ್ಪು ಬಣ್ಣದ ಬುರ್ಖಾವನ್ನು ಧರಿಸುತ್ತಿದ್ದಳು. ಬಳಿಕ ಇಮ್ರಾನ್‌ ಶೇಕ್‌ ಹೆಂಡತಿ ಜತೆ ಮೊದಲಿದ್ದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಲ್ಲಿಂದಲೇ ಬಾರ್‌ ಗೆ ಕೆಲಸಕ್ಕೆ ಹೋಗಿ ಬರುತ್ತಿದ್ದ.

Ad Widget

Ad Widget

ತಿಂಗಳ ಹಿಂದೆ ಇಮ್ರಾನ್‌ ಶೇಕ್‌ ಬಾರ್‌ಮಾಲಕರಲ್ಲಿ ತನ್ನ ಪತ್ನಿ ಗರ್ಭಿಣಿಯಾಗಿದ್ದು ಆಕೆಗೆ ಯಾರೂ ಇಲ್ಲದೇ ಇರುವುದರಿಂದ ತನ್ನ ಊರಿನ ಮನೆಯಲ್ಲಿ ಬಿಟ್ಟು ವಾಪಾಸು ಕೆಲಸಕ್ಕೆ ಬರುವುದಾಗಿ ಹೇಳಿದ್ದು, ನ. 19ರಂದು ಸಂಬಳ ಪಡೆದು ಹೋಗಿದ್ದ. ಇಮ್ರಾನ್‌ ಶೇಕ್‌ನನ್ನು ಹೆಚ್ಚಾಗಿ ಬಾರ್‌ ನಲ್ಲಿ ವೈಟರ್‌ಆಗಿ ಕೆಲಸ ಮಾಡುವ ಬೆಟ್ಟಂಪಾಡಿಯ ನಿವಾಸಿ ಕೀರ್ತನ್‌ ಎಂಬವರು ಅವರ ಬೈಕಿನಲ್ಲಿ ರಾತ್ರಿ ಬಾಡಿಗೆ ಮನೆಗೆ ಬಿಡುತ್ತಿದ್ದರು.

ಸುಳ್ಯದಲ್ಲೂಂದು ದೆಹಲಿಯ ಶ್ರದ್ದಾ ಮಾದರಿ ಕೃತ್ಯ ಬೆಳಕಿಗೆ : ಗೋಣಿ ಚೀಲದಲ್ಲಿ ಯುವತಿಯ ಮೃತ ದೇಹ – ಪತಿ ಇಮ್ರಾನ್ ಪರಾರಿ

 ನ.21ರಂದು ಕೀರ್ತನ್‌ ಸಂತೋಷ್‌ ಅವರಲ್ಲಿ, ಇಮ್ರಾನ್‌ ಶೇಕ್‌ ನ ಬಾಡಿಗೆ ಮನೆಯ ಪಕ್ಕದ ಬಾಡಿಗೆ ಮನೆಯಲ್ಲಿ ವಾಸವಿರುವ ರೋಹಿತ್‌ರವರು ಇಮ್ರಾನ್‌ನ ಮನೆಯಿಂದ ನ.20ರಂದು ರಾತ್ರಿ 7.30 ಗಂಟೆಗೆ ಜೋರಾಗಿ ಹೆಂಗಸು ಕಿರುಚಿದ ಶಬ್ದ ಕೇಳಿಸಿದ್ದು, ಅವರ ಮನೆಗೆ ಹೋದ ರೋಹಿತ್‌ ಬಾಗಿಲು ತಟ್ಟಿದಾಗ ಅಲ್ಲಿದ್ದ ಇಮ್ರಾನ್‌ ಶೇಕ್‌ ಹೆಂಡತಿಯು ಶೌಚಾಲಯದಲ್ಲಿ ಬಿದ್ದರು ಎಂದು ಹೇಳಿರುವುದಾಗಿ ತನಗೆ ಹೇಳಿದ್ದರು” ಎಂಬ ಮಾಹಿತಿ ನೀಡಿದರು.

ಈ ವಿಚಾರ ಗೊತ್ತಾದ ಸಂತೋಷ್‌ ಅವರು ಮಂಗಳವಾರ ಬೆಳಿಗ್ಗೆ ಇಮ್ರಾನ್‌ ಗೆ ಕರೆ ಮಾಡಿದಾಗ ಸ್ವಿಚ್‌ ಅಫ್‌ ಬರುತ್ತಿತ್ತು. ಸಂಜೆ ಕೀರ್ತನ್‌ ಜೊತೆ ಬೀರಮಂಗಲದ ಇಮ್ರಾನ್‌ ಶೇಕ್‌ ನ ಬಾಡಿಗೆ ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿಕೊಂಡಿದ್ದು, ಕಿಟಕಿ ತೆರೆದಿತ್ತು. ಒಳಗಡೆ ವಿದ್ಯುತ್‌ ದೀಪ ಉರಿಯುತ್ತಿತ್ತು, ಕಿಟಕಿಯಲ್ಲಿ ನೋಡಿದಾಗ ಮೊಬೈಲ್‌ ಫೋನ್‌ ಟೇಬಲ್‌ನ ಮೇಲಿದ್ದು, ಶೌಚಾಲಯದಲ್ಲಿ ಲೈಟ್‌ ಹಾಕಲಾಗಿತ್ತು, ಅದರೊಳಗೆ ಪ್ಲಾಸ್ಟಿಕ್‌ ಗೋಣಿ ಚೀಲ ಕಟ್ಟಿ ಇಟ್ಟದ್ದು ಕಂಡು ಬಂದಿದ್ದು, ಅದನ್ನು ನೋಡಿ ಸಂಶಯ ಮೂಡಿದೆ.

ಈ ಹಿನ್ನಲೆಯಲ್ಲಿ ಸಂತೋಷ್‌ ಅವರು  ರೋಹಿತ್‌ರಲ್ಲಿ ವಿಚಾರಿಸಿದಾಗ ನ.20 ರಂದು ರಾತ್ರಿ 8.30 ಗಂಟೆ ಸಮಯಕ್ಕೆ ಇಮ್ರಾನ್‌ ಶೇಕ್‌ ಮಾತ್ರ ಕೈಯಲ್ಲಿ ಬ್ಯಾಗ್‌ ಹಿಡಿದುಕೊಂಡು ಹೋಗಿರುವುದನ್ನು ನೋಡಿರುವುದಾಗಿಯೂ ಆತನ ಜೊತೆ ಆತನ ಹೆಂಡತಿ ಹೋಗಿಲ್ಲ ಎಂದೂ ಮಾಹಿತಿ ನೀಡಿದರು.

ಇಮ್ರಾನ್‌ ಶೇಕ್‌ ಆತನ ಪತ್ನಿಗೆ ಹಲ್ಲೆ ನಡೆಸಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಮನೆಗೆ ಬೀಗ ಹಾಕಿ ಹೋಗಿರುವ ಸಂಶಯದ ಹಿನ್ನೆಲೆಯಲ್ಲಿ ಸಂತೋಷ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಾಡಿಗೆ ಮನೆ ಬಾಗಿಲು ಒಡೆದು ಪರಿಶೀಲಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: