Ad Widget

Puttur | ಬೆಳ್ಳಿಪ್ಪಾಡಿ: ಅರ್ಥ್ ವರ್ಕ್ ಮಾಡದೇ ಡಾಮಾರ್‌ ಬಳಸಿ ಕಾಂಕ್ರಿಟ್ : ಆಪ್‌ ಕಾರ್ಯಾಚರಣೆ ಹಾಗೂ ‘ನಿಖರ’ ವರದಿಯ ಬಳಿಕ ಟೆಂಡರ್‌ ನಿಯಮದಂತೆ ಕಾಮಗಾರಿ…! ‘ಇವರು ಮೊದಲೇ ಬರಬೇಕಿತ್ತು – ಅದಕ್ಕೂ ಮೊದಲು ಆದ ಕಳಪೆ ಕಾಂಕ್ರಿಟಿಕರಣಕ್ಕೆ ಯಾರೂ ಹೊಣೆ..?’ ಊರವರ ಪ್ರಶ್ನೆ | ಸ್ಥಳಕ್ಕೆ ರೈತ ಸಂಘ ಭೇಟಿ

IMG-20221125-WA0033
Ad Widget

Ad Widget

Ad Widget

ಪುತ್ತೂರು: ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಗಂಭೀರವಾಗಿ ಕೇಳಿಬರುತ್ತಿರುವಾಗ ಪುತ್ತೂರು (Puttur) ತಾಲೂಕಿನ ಬೆಳ್ಳಿಪ್ಪಾಡಿಯಲ್ಲಿ ಹಳೆ ಡಾಮರಿನ ಮೇಲೆಯೇ ಸುರಿಯುತ್ತಿದ್ದ ಕಾಂಕ್ರಿಟಿಕರಣದ ವಿರುದ್ಧ ಆಮ್ ಆದ್ಮಿ ಪಕ್ಷ ನಡೆಸಿದ ಕಾರ್ಯಾಚರಣೆ ಮತ್ತು ‘ನಿಖರ ನ್ಯೂಸ್’ ವರದಿಯ ಫಲಶ್ರುತಿಯಾಗಿ ಇಂದು ಟೆಂಡರ್ ನಿಯಮದಂತೆ ಕಾಂಕ್ರಿಟಿಕರಣ ನಡೆಯುತ್ತಿದೆ.

Ad Widget

Ad Widget

Ad Widget

Ad Widget

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಅನುದಾನದಲ್ಲಿ 1 ಕೋಟಿ 70 ಲಕ್ಷ ಅನುದಾನದಲ್ಲಿ ಬೆಳ್ಳಿಪ್ಪಾಡಿ ಮುಖ್ಯ ರಸ್ತೆಗೆ ಕಾಂಕ್ರಿಟಿಕರಣ ಮಂಜೂರುಗೊಂಡು ಹೊಸ ಅವಿಷ್ಕಾರದ ಕಾಂಕ್ರಿಟಿಕರಣ ಕಾಮಗಾರಿ ನಡೆಯುತ್ತಿದೆ.

Ad Widget

Ad Widget

Ad Widget

Ad Widget

ಸಾಮಾನ್ಯ ಕಾಂಕ್ರಿಟಿಕರಣ ಅಂದರೆ ಇಂಜಿನಿಯರ್ ಅಂದಾಜುಪಟ್ಟಿ ಕೊಡುವಾಗಲೇ ಅದರಲ್ಲಿ ಅರ್ಥ್ ವರ್ಕ್ , ನಂತರ ಜಲ್ಲಿ ಹಾಕಿ ರೋಲರ್ ಹಾಕಿ ಅದರ ಮೇಲೆ ಜಿಎಸ್ಬಿ ಮಿಕ್ಸ್ ಹಾಕಿ ನಂತರ ಪ್ಲಾಸ್ಟಿಕ್ ಹಾಕಿ ಕಾಂಕ್ರಿಟಿಕರಣ ನಡೆಯುವುದು ಸರ್ಕಾರದ ನಿಯಮ

ಬೆಳ್ಳಿಪ್ಪಾಡಿ ರಸ್ತೆಯಲ್ಲಿ ಹೇಗೆ ನಡೆಯುತ್ತಿತ್ತು ಎಂದರೆ ಹಳೆಯ ಡಾಮರನ್ನು ಜೆಸಿಬಿ ಮೂಲಕ ತೆಗೆದು ಅದನ್ನೇ ಹುಡಿ ಮಾಡಿ ಅದಕ್ಕೆ ಸ್ವಲ್ಪ ಜಲ್ಲಿ ಮಿಕ್ಸ್ ಮಾಡಿ ಅದರ ಮೇಲೆ ಮಿಕ್ಸ್ ಹಾಕಿ ಕಾಂಕ್ರಿಟಿಕರಣ
ನಡೆಯುತ್ತಿದೆ.

Ad Widget

Ad Widget

ಹೀಗೆ ನಡೆಯುತ್ತಿದ್ದರೂ ಯಾರೂ ಇದರ ಬಗ್ಗೆ ಮಾತನಾಡದಿದ್ದಾಗ ಮಾಹಿತಿ ಪಡೆದ ಪುತ್ತೂರಿನ ಆಮ್ ಆದ್ಮಿ ಪಕ್ಷದ ನಾಯಕರು ದಿಡೀರ್ ಕಾರ್ಯಚರಣೆ ನಡೆಸಿ ಸ್ಥಳದ ಅವ್ಯವಸ್ಥೆಯ ವಿಡಿಯೋ ಮಾಡಿದ್ದಾರೆ. ಆ ವಿಡಿಯೊ ಆಧರಿಸಿ ನಿಖರ ನ್ಯೂಸ್ ವಿಸ್ತೃತ ವರದಿ ಬಿತ್ತರಿಸಿದೆ.

ಆಗ ಕಳಪೆ ಗುಣಮಟ್ಟದ ಸಿಮೆಂಟ್ , ಮರಳು ಉಪಯೋಗಿಸುವುದು ಆಪ್ ನಾಯಕರು ಪತ್ತೆ ಹಚ್ಚಿದ್ದಾರೆ. ಡಾಮರನ್ನೇ ಹುಡಿ ಮಾಡಿ ಹಾಕುವ ಈ ಕಾಂಕ್ರಿಟಿಕರಣ ಬಗ್ಗೆ ಆಪ್ ನಾಯಕರು ಗಂಭೀರ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.

ಆಪ್ ನವರ ದಾಳಿ ನಂತರ ಅಂದೇ ರಾತ್ರೋರಾತ್ರಿ ಕಾಂಕ್ರೀಟ್ ಗೆ ಉಪಯೋಗಿಸುವ ಸಿಮೆಂಟ್ ಬದಲಾಯಿಸಲಾಗಿದೆ ಎಂದು ಪುತ್ತೂರು ಆಪ್ ನಾಯಕರು ನಿಖರ ನ್ಯೂಸ್ ಗೆ ಹೇಳಿದ್ದಾರೆ.

ಈ ನಡುವೆ ವರದಿಗೆ ಭಾರಿ ವೈರಲ್ ಆಗಿದ್ದು , ಇಂದು (ನ.25) ರಂದು ಟೆಂಡರ್ ನಿಯಮದಂತೆ ಕಾಂಕ್ರಿಟಿಕರಣ ಕಾಮಗಾರಿ ನಡೆಯುತ್ತಿದೆ.

ಕೇವಲ ಡಾಮರು ಪುಡಿ ಮಾಡಿ ಅಡಿಯಲ್ಲಿ ಹಾಕಿ ಕಾಂಕ್ರಿಟಿಕರಣ ನಡೆಯುತ್ತಿದ್ದ ದೃಶ್ಯ – ಆಪ್ ಆರೋಪ

ಇಂದು ಸಂಜೆ ಕಾಂಕ್ರಿಟಿಕರಣ ನಡೆಯುವ ಜಾಗಕ್ಕೆ ರೈತ ಸಂಘ ಭೇಟಿ ಮಾಡಿದೆ. ಆ ಸಂದರ್ಭ ಕಾಮಾಗಾರಿಯ ಸ್ಥಳದಲ್ಲಿ ಪುತ್ತೂರು ಪಿಡ್ಲ್ಯೂಡಿ ಇಂಜಿನಿಯರ್ ಹಾಜರಿದ್ದರು.

ರೈತ ಸಂಘ ಭೇಟಿ ನೀಡಿದಾಗ ಜಲ್ಲಿ ಹಾಕಿ ವ್ಯವಸ್ಥಿತವಾಗಿ ಕಾಂಕ್ರೀಟಿಕರಣ

ರೈತ ಸಂಘದ ನಾಯಕರು ಭೇಟಿ ನೀಡುವಾಗ ಜಲ್ಲಿ ಹಾಕಿ ಮಿಕ್ಸ್ ಹಾಕಿ ಅದರ ಮೇಲೆ ಪ್ಲಾಸ್ಟಿಕ್ ಹಾಕಿ ಗುಣಮಟ್ಟದ ಸಿಮೆಂಟ್ ಬಳಸಿ ಕಾಂಕ್ರಿಟಿಕರಣ ಭರದಿಂದ ಸಾಗುತ್ತಿದೆ ಎಂದು ನಿಖರ ನ್ಯೂಸ್ ಗೆ ರೈತ ಸಂಘದ ನಾಯಕರು ತಿಳಿಸಿದ್ದಾರೆ.

ಇವರು ಮೊದಲೇ ಬರಬೇಕಿತ್ತು…! :
ಆಪ್ ನಾಯಕರ ದಾಳಿ ನಂತರ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಕಳಪೆ ಕಾಮಗಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆಪ್ ನಾಯಕರು ಮೊದಲೇ ಬಂದಿದ್ದರೆ ಜನರ ತೆರಿಗೆಯಿಂದ ನಡೆಯುವ ಈ ಕಾಂಕ್ರಿಟಿಕರಣ ಗುಣಮಟ್ಟದಿಂದ ಸಾಗುತ್ತಿತ್ತು ಎನ್ನುತ್ತಿದ್ದಾರೆ. ನಿನ್ನೆಯವರೆಗೆ ನಡೆದ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದಕ್ಕೆ ಯಾರೂ ಹೊಣೆ ಎಂದು ಊರವರು ಪ್ರಶ್ನಿಸುತಿದ್ದಾರೆ.

ಈ ಕಾಮಗಾರಿಯ ವಿರುದ್ಧ ಆಪ್ ನಾಯಕರು ಲೋಕಾಯುಕ್ತ ದೂರು ನೀಡುವ ಬಗ್ಗೆ ನಿರ್ಧರಿಸಿದ್ದಾರೆ.

Ad Widget

Leave a Reply

Recent Posts

error: Content is protected !!
%d bloggers like this: