ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಸಿನಿಮಾ ವಿಶ್ವಾದ್ಯಂತ ಎಂಥ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡ ಈ ಸಿನಿಮಾ ಈಗ ಓಟಿಟಿಯಲ್ಲೂ ರಿಲೀಸ್ ಆಗಿದೆ. ನವೆಂಬರ್ 24ರಿಂದ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ‘ಕಾಂತಾರ’ ರಿಲೀಸ್ ಆಗಿದೆ. ಆದರೆ ಒಂದು ಅಂಶ ಮಾತ್ರ ಸಿನಿಪ್ರಿಯರಿಗೆ ಬೇಸರ ಉಂಟು ಮಾಡಿದೆ. ಅಷ್ಟಕ್ಕೂ ಏನದು ಬೇಸರದ ವಿಷಯ? ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ‘ವರಾಹ ರೂಪಂ..’ ಹಾಡು ಸಖತ್ ಫೇಮಸ್ ಆಗಿತ್ತು. ಇದೀಗ ಕಾಂತಾರ ಚಿತ್ರದ ಓಟಿಟಿ ವರ್ಷನ್‌ನಲ್ಲಿ ಆ ಹಾಡನ್ನು ತೆಗೆದು ಹಾಕಲಾಗಿದೆ. ಬೇರೆ ಹಾಡನ್ನು ಬಳಸಲಾಗಿದೆ. ಇದು ನೋಡುಗರಿಗೆ ಬೇಸರ ಉಂಟು ಮಾಡಿದೆ.
‘ಕಾಂತಾರ’ ಸಿನಿಮಾದ ಆತ್ಮದಂತೆ ‘ವರಾಹ ರೂಪಂ..’ ಹಾಡು ಇತ್ತು. ಅದನ್ನು ಮರಳಿ ಬಳಸಬೇಕು ಎಂದು ನೆಟ್ಟಿಗರು ಅಭಿಯಾನ ಶುರು ಮಾಡಿದ್ದಾರೆ.
ಎಂಬ ಹ್ಯಾಷ್‌ಟ್ಯಾಗ್ ಬಳಸಿ, ಟ್ವಿಟರ್‌ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ‘ವರಾಹ ರೂಪಂ.. ಹಾಡು ಇಲ್ಲದೇ ಹೋದರೆ, ಕಾಂತಾರ, ಕಾಂತಾರವೇ ಅಲ್ಲ. ಆ ಹಾಡಿಲ್ಲದಿದ್ದರೆ ಅದರ ತಿರುಳು ಚೆನ್ನಾಗಿರುವುದಿಲ್ಲ. ಬೇಕೇ ಬೇಕು ‘ವರಾಹ ರೂಪಂ..’ ಹಾಡು ಬೇಕು..’ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ‘ಒಂದು ಹಾಡಿನಿಂದ ಒಂದು ಸಿನಿಮಾವಾಗುವುದಿಲ್ಲ. ಆದರೆ ಆ ಒಂದು ಹಾಡೇ ಇಡೀ ಸಿನಿಮಾವನ್ನು ಕಂಪ್ಲೀಟ್ ಮಾಡುತ್ತದೆ. ದಯವಿಟ್ಟು ವರಾಹ ರೂಪಂ ಹಾಡನ್ನು ಮರುಬಳಕೆ ಮಾಡಿ..’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕಾನುನೂ ಕ್ರಮ ಕೈಗೊಳ್ಳುತ್ತೇವೆ. ಹಾಡಿನ ಹಕ್ಕುಗಳ ಕುರಿತಂತೆ ಕಾಂತಾರ ತಂಡ ನಮಗೆ ಯಾವುದೇ ಕ್ರೆಡಿಟ್ ನೀಡಿಲ್ಲ, ಈ ಹಾಡನ್ನು ತಮ್ಮ ಸ್ವಂತ ಸೃಷ್ಟಿ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು, ಅಷ್ಟೇ ಅಲ್ಲದೆ ಎಲ್ಲ ಸಂಗೀತಕಾರರು ಮ್ಯೂಸಿಕ್ ರೈಟ್ ಉಳಿಸಿಕೊಳ್ಳಲು ಸಹಾಯ ಮಾಡಿ ಎಂದು ‘ತೈಕ್ಕುಡಂ ಬ್ರಿಡ್ಜ್’ ತಂಡವು ಹೇಳಿಕೊಂಡಿತ್ತು. ಜೊತೆಗೆ ಕಾನೂನು ಸಮರಕ್ಕೆ ಇಳಿದಿತ್ತು.
ಆನಂತರ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್‌ನ ಅನುಮತಿ ಇಲ್ಲದೆ ‘ವರಾಹ ರೂಪಂ’ ಹಾಡನ್ನು ಬಳಕೆ ಮಾಡುವಂತಿಲ್ಲ ಎಂದು ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಓಟಿಟಿಯಲ್ಲಿ ಅಮೇಜಾನ್ ಪ್ರೈಮ್ ವಿಡಿಯೋ ವರಾಹಂ ರೂಪಂ ಹಾಡನ್ನು ಕೈಬಿಟ್ಟು, ಬೇರೆ ಹಾಡನ್ನು ಬಳಿಸಿದೆ. ಈ ಕುರಿತು ಕೂಡ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ ಪೋಸ್ಟ್ ಹಾಕಿದ್ದು, ಇದು ನಮಗೆ ಸಿಕ್ಕ ಜಯ ಎಂದು ಹೇಳಿಕೊಂಡಿದೆ,.
ಕಾಂತರಾ ಬಿಡುಗಡೆಗೆ ಮೊದಲು ನಮ್ಮನ್ನು ಮಾತನಾಡಿದ್ದರೆ, ಬ್ಯಾಂಡ್ ನ ಉಲ್ಲೇಖ ನೀಡಿದ್ದರೆ ನಾವು ಅದನ್ನು ಒಪ್ಪಿಕೊಳ್ಳುತಿದ್ದೆವು ಎಂದು ಥೈಕುಡಂ ಬ್ರಿಡ್ಜ್ ಸಂಸ್ಥೆ ಮ್ಯೂಸಿಕ್ ಸಂಸ್ಥೆಯ ಮುಖ್ಯಸ್ಥ ವಿಯಾನ್ ಫೆರ್ನಾಂಡೀಸ್ ಹೇಳಿದ್ದಾರೆ .