Ad Widget

Hejamadi Toll | ಸುರತ್ಕಲ್ ಟೋಲ್ ನಲ್ಲಿ ಸಂಗ್ರಹಿಸುತಿದ್ದ ಮೊತ್ತವನ್ನು ಸೇರಿಸಿ ಹೆಜಮಾಡಿ ಸಂಗ್ರಹಿಸಿ ..! ಟೋಲ್ ಗೇಟ್ ಗೆ ಸೂಕ್ತ ಭದ್ರತೆ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೊಲೆ

FB_IMG_1669341100510
Ad Widget

Ad Widget

ಮಂಗಳೂರು: ಸುರತ್ಕಲ್ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ (Hejamadi Toll) ವಿಲೀನಗೊಳಿಸಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಟೋಲ್‌ಗೇಟ್‌ನ ದರವನ್ನು ಪರಿಷ್ಕೃರಿಸಿ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುವಾರ ಸುತ್ತೋಲೆಯೊಂದನ್ನು ಹೊರಡಿಸಿದೆ.

Ad Widget

Ad Widget

Ad Widget

Ad Widget

“ಕರ್ನಾಟಕ ಸರ್ಕಾರದ ನಿರಂತರ ವಿನಂತಿ/ಬೇಡಿಕೆ ಮೇರೆಗೆ, ಸ್ಥಳೀಯ ಸಾರ್ವಜನಿಕ/ವಿಐಪಿ ಒತ್ತಾಯಗಳ ಆಧಾರದ ಮೇಲೆ, ಸಕ್ಷಮ ಪ್ರಾಧಿಕಾರವು ಹೊಸ ಮಂಗಳೂರು ಬಂದರು ರಸ್ತೆಯ ಸುರತ್ಕಲ್ ಟೋಲ್ ಪ್ಲಾಜಾ (NITK ಹತ್ತಿರ, NH-66 ರ ಕ್ಯಾಂಪಸ್) ವಿಲೀನಕ್ಕೆ ಅನುಮೋದನೆ ನೀಡಿದೆ.  ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್‌ನ (ಟೋಲ್) ಯೋಜನೆಯ ಅಡಿಯಲ್ಲಿ ಬರುವ NH-66 ರ ಸುರತ್ಕಲ್‌ ಟೋಲ್ ಗೇಟಿನ ಶುಲ್ಕವನ್ನು ಹೆಜಮಾಡಿ ಟೋಲ್ ಪ್ಲಾಜಾದಿಂದ ಸಂಗ್ರಹಿಸಲಾಗುತ್ತದೆ” ಎಂದು ಸುತ್ತೋಲೆ ಹೇಳಿದೆ.

Ad Widget

Ad Widget

Ad Widget

Ad Widget

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿವೆ ಎಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳನ್ನು ಕೇಳಿಕೊಂಡಿದೆ. ಪೊಲೀಸ್ ರಕ್ಷಣೆ ಸೇರಿದಂತೆ ಅಗತ್ಯ ಜಿಲ್ಲಾಡಳಿತದ ನೆರವು ಹಾಗೂ ಬೆಂಬಲವನ್ನು ಒದಗಿಸುವಂತೆ ಸುತ್ತೋಲೆಯಲ್ಲಿ ಕೋರಲಾಗಿದೆ.

ಸುರತ್ಕಲ್ ಟೋಲ್ ಗೇಟ್ ನಲ್ಲಿ ಒಂದು ಕಾರಿನ ಏಕಮುಖ ಪಾಸ್ ಗೆ 60 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಹೆಜಮಾಡಿ ಟೋಲ್ ಗೇಟ್ ನಲ್ಲಿ 40 ರೂ. ವಿಧಿಸಲಾಗುತ್ತಿತ್ತು. ಇತ್ತೀಚಿನ ಸುತ್ತೋಲೆಯ ನಂತರ,  ಹೆಜಮಾಡಿ ಟೋಲ್ ಗೇಟ್‌ನಲ್ಲಿ ಏಕಮುಖ ಪಾಸ್‌ಗೆ ರೂ. 100 ಶುಲ್ಕ ವಿಧಿಸಲಾಗುತ್ತದೆ. ಅದೇ ರೀತಿ, ಬಸ್‌ಗಳು ಮತ್ತು ಟ್ರಕ್‌ಗಳಿಗೆ ಸುರತ್ಕಲ್ ಟೋಲ್ ಗೇಟ್ ನಲ್ಲಿ 210 ರೂ. ಹೆಜಮಾಡಿ ಟೋಲ್ ಗೇಟ್‌ನಲ್ಲಿ 145 ರೂ. ವಿಧಿಸಲಾಗುತ್ತಿತ್ತು. ಪರಿಷ್ಕೃತಗೊಂಡ ಬಳಿಕ ರೂ. 355 ವಿಧಿಸಲಾಗುತ್ತಿದೆ. 

Ad Widget

Ad Widget

ಭಾರೀ ನಿರ್ಮಾಣ ಯಂತ್ರೋಪಕರಣಗಳು, ಬೃಹತ್ ಉಪಕರಣಗಳು ಮತ್ತು ಮಲ್ಟಿಆಕ್ಸಲ್ ವಾಹನಗಳಿಗೆ ರೂ. ಸುರತ್ಕಲ್ ಟೋಲ್ ನಲ್ಲಿ 325 ರೂ., ಹೆಜಮಾಡಿ ಟೋಲ್‌ನಲ್ಲಿ 225, ವಿಧೀಸಲಾಗುತ್ತಿದ್ದರೆ ಇದೀಗ ಅದನ್ನು ರೂ. ಹೆಜಮಾಡಿ ಟೋಲ್ ಗೇಟ್ ನಲ್ಲಿ 550 ರೂ. ವಿಧಿಸಲಾಗುತ್ತಿದೆ. 

ಲಘು ವಾಣಿಜ್ಯ ಮತ್ತು ಲಘು ಸರಕು ವಾಹನಗಳಿಗೆ ಸುರತ್ಕಲ್ ಟೋಲ್ ನಲ್ಲಿ 100 ರೂ. ಹೆಜಮಾಡಿ ಟೋಲ್‌ನಲ್ಲಿ 70 ರೂ. ವಿಧಿಸಲಾಗುತ್ತಿತ್ತು. ಪ್ರಸ್ತುತ ಬದಲಾವಣೆ ಬಳಿಕ ಹೆಜಮಾಡಿ ಟೋಲ್ ಗೇಟ್ ನಲ್ಲಿ 170 ರೂ ವಿಧಿಸಲಾಗುತ್ತಿದೆ ಎಂದು ಸುತ್ತೋಲೆ ಹೇಳಿದೆ.

Ad Widget

Leave a Reply

Recent Posts

error: Content is protected !!
%d bloggers like this: