Uncategorized
ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ವಿವಾದ-‘ಅಗ್ನಿ ಸಾಕ್ಷಿ’ ಬೆಡಗಿಯ ವಿವಾಹ ಬಂಧಕ್ಕೆ ಅಡ್ಡಿಯಾದ ಆಡಿಯೋ ಸಾಕ್ಷಿ

ಕಳೆದೆರಡು ದಿನಗಳಿಂದ ಖ್ಯಾತ ಕಿರುತೆರೆ ನಟಿ ವೈಷ್ಣವಿ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಕುಟುಂಬ ಸದಸ್ಯರ ಜತೆ ವೈಷ್ಣವಿ ಹಾಗೂ ನಟ ವಿದ್ಯಾಭರಣ್ ಎಂವರು ಹಾರ ವಿನಿಮಯ ಮಾಡಿಕೊಂಡ ಫೋಟೊ ಕೂಡ ವೈರಲ್ ಆಗಿತ್ತು. ಆದರೇ ವಿವಾಹ ನಿಶ್ಚಿತಾರ್ಥವನ್ನು ಸ್ವತ: ವೈಷ್ಣವಿ ಅವರೇ ನಿರಾಕರಿಸಿದರು. ಇದು ನಿಶ್ಚಿತಾರ್ಥವಲ್ಲ, ಕೇವಲ ಕುಟುಂಬ ಮಾತನಾಡಿಕೊಂಡಿದೆ ಎಂದಿದ್ದರು. ಅದಾಗಿಎರಡು ದಿನವಾಗುತ್ತಲೇ ವೈಷ್ಣವಿ ಗೌಡರವರು ನಿಶ್ಚಿತಾರ್ಥ ಮುರಿದುಕೊಂಡಿರುವುದಾಗಿ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಖಚಿತಪಡಿಸಿದ್ದಾರೆ.
ಅದಕ್ಕೂ ಮುಂಚೆ ಇವರಿಬ್ಬರ ನಿಶ್ಚಿತಾರ್ಥದ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿತ್ತು . ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವ ವಿರಾಜ್ ಸಿನಿಮಾದ ನಟ ವಿದ್ಯಾಭರಣ್ ಸರಿಯಿಲ್ಲ ಎಂದು ಇಬ್ಬರು ಹುಡುಗಿಯರು ಪರಸ್ಪರ ಮಾತನಾಡಿ ಕೊಂಡಿರುವ ಆಡಿಯೋ ಇದಾಗಿತ್ತು. ಈ ಆಡಿಯೋ ವೈರಲ್ ಆಗುತ್ತಲೇ ಮಾಧ್ಯಮಗಳಲ್ಲಿ ಆರೋಪ-ಪ್ರತ್ಯಾರೋಪಗಳ ಚರ್ಚೆ ಆರಂಭಗೊಂಡಿತ್ತು . ಇದರಿಂದ ಮನನೊಂದಿರುವ ವೈಷ್ಣವಿ ಗೌಡ ಇನ್ಸ್ಟಾಗ್ರಾಂ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾ ಪೋಸ್ಟ್ ಏನು?
“ನಾವು ಇದನ್ನು ಇಲ್ಲಿಗೆ ಕೈಬಿಡುತ್ತಿದ್ದೇವೆ. ಈ ವಿಷಯವನ್ನು ಮತ್ತೆ ಎಳೆಯಬೇಡಿ, ಇಲ್ಲಿಗೆ ಬಿಡಿ ಎಂದು ಎಲ್ಲರ ಬಳಿ ಮನವಿ ಮಾಡುತ್ತಿದ್ದೇನೆ. ಎಲ್ಲರ ಶುಭಹಾರೈಕೆಗೆ ಧನ್ಯವಾದಗಳು” ಎಂದು ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಮಾಧ್ಯಮದ ಜೊತೆ ಸ್ಪಷ್ಟನೆ ನೀಡಿದ ವೈಷ್ಣವಿ ಗೌಡ
“ನಾನು, ವಿದ್ಯಾಭರಣ್ ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಎರಡು ಕುಟುಂಬದವರು ಮಾತನಾಡಿಕೊಂಡಿದ್ದೆವು ಅಷ್ಟೇ. ಮದುವೆ ಬಗ್ಗೆ ನಾವಿನ್ನೂ ಯಾವ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಈಗಲೇ ಎಲ್ಲ ವಿಷಯ ತಿಳಿದಿದ್ದು ಗೊತ್ತಾಗಿದೆ. ಹಾಗಾಗಿ ನಾನು ಈ ಬಗ್ಗೆ ಮುಂದೆ ಹೆಜ್ಜೆ ಇಡೋದಿಲ್ಲ” ಎಂದು ವೈಷ್ಣವಿ ಗೌಡ ಅವರು ಮಾಧ್ಯಮದ ಜೊತೆ ಹೇಳಿಕೊಂಡಿದ್ದಾರೆ.
ಇದು ನಿಶ್ಚಿತಾರ್ಥವಲ್ಲ :
ವೈಷ್ಣವಿ ಗೌಡ, ವಿದ್ಯಾಭರಣ್ ಹಾರ ಬದಲಾಯಿಸಿಕೊಂಡ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಫೋಟೋದಲ್ಲಿ ನಿವೃತ್ತ ಡಿಜಿ, ಐಜಿಪಿ ಶಂಕರ್ ಬಿದರಿ ಕೂಡ ಇದ್ದರು. ಹಾಗಾಗಿ ಎಲ್ಲರೂ ಇದು ನಿಶ್ಚಿತಾರ್ಥ ಎಂದುಕೊಂಡಿದ್ದರು. ಆದರೆ ಇದು ನಿಶ್ಚಿತಾರ್ಥವಲ್ಲ, ಕೇವಲ ಕುಟುಂಬ ಮಾತನಾಡಿಕೊಂಡಿದೆ ಎಂದು ವಿದ್ಯಾಭರಣ್, ವೈಷ್ಣವಿ ಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

ಮದುವೆ ಬಗ್ಗೆ ವೈಷ್ಣವಿ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ 8 ಶೋನಲ್ಲಿ ಭಾಗವಹಿಸಿದ್ದ ವೈಷ್ಣವಿ ಗೌಡ, “ನನಗೆ ಮದುವೆ ಬಗ್ಗೆ ತುಂಬ ನಂಬಿಕೆಯಿದೆ. ಮದುವೆ ತುಂಬ ಪವಿತ್ರವಾದುದು, ನನಗೆ ಮದುವೆಯಾಗಬೇಕು ಎಂಬ ಆಸೆ ಇದೆ. ಕಾಲ ಕೂಡಿ ಬಂದಕೂಡಲೇ ಮದುವೆಯಾಗುವೆ” ಎಂದು ಹೇಳಿದ್ದರು. ಇನ್ನು ಬಿಗ್ ಬಾಸ್ ಶೋ ನಂತರದಲ್ಲಿ ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಪ್ರಪೋಸಲ್ಗಳು ಬರುತ್ತಿದೆ ಎಂದು ಹೇಳಿದ್ದರು.
ಕಿರುತೆರೆಯಲ್ಲಿ ವೈಷ್ಣವಿ ಸಕ್ರಿಯ
‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ 6 ವರ್ಷಗಳಿಗೂ ಅಧಿಕ ಕಾಲ ಸನ್ನಿಧಿಯಾಗಿ ಮೆರೆದ ವೈಷ್ಣವಿ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ಶೋನಲ್ಲಿ ತಾಳ್ಮೆಯಿಂದ ಜನರ ಪ್ರೀತಿ ಗಳಿಸಿದರು. ಈ ಹಿಂದೆ ‘ದೇವಿ’, ‘ಪುನರ್ವಿವಾಹ’ ಸೇರಿದಂತೆ ಸಾಕಷ್ಟು ಧಾರಾವಾಹಿ, ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವೈಷ್ಣವಿ ಕಾಣಿಸಿಕೊಂಡಿದ್ದರು.ಶೀಘ್ರದಲ್ಲಿಯೇ ಅವರು ‘ಮಂಗಳಗೌರಿ ಮದುವೆ’ ಧಾರಾವಾಹಿ ನಟ ಗಗನ್ ಚಿನ್ನಪ್ಪ ಜೊತೆ ಹೊಸ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿದ್ಯಾಭರಣ್ ಸ್ಪಷ್ಟನೆ ಏನೂ ?
ವೈಷ್ಣವಿ ಜೊತೆಗೆ ನನ್ನ ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಪ್ರಾಥಮಿಕ ಮಾತುಕತೆಯಾಗಿತ್ತು. ಆದರೆ ಈ ಫೋಟೋ ಎಲ್ಲಿಂದ ವೈರಲ್ ಆಯಿತು ಎನ್ನುವುದು ಗೊತ್ತಿಲ್ಲ. ನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಪ್ಲಾನ್ ಮಾಡಿದ್ದಾರೆ ಎಂದು ವಿದ್ಯಾಭರಣ್ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪವನ್ನು ಮಾಡಬಹುದಿತ್ತು. ನನ್ನ ಮೊದಲ ಫಿಲ್ಮ್ ಬಂದಾಗಲೇ ಇವರು ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಆಕೆ ಆರೋಪ ಮಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.
ನಾಳೆ ಕಮೀಷನರ್ ಅವರಿಗೆ ದೂರು ನೀಡುತ್ತೇನೆ. ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಬದಲು ಆಕೆಯೇ ಕಂಪ್ಲೆಂಟ್ ಕೊಡಬಹುದಿತ್ತು. ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೇ ಇರುವ ಹಿತಶತ್ರುಗಳು ಹೀಗೆ ಮಾಡುತ್ತಿದ್ದಾರೆ. ನಾನು ಇನ್ಸ್ಟಾಗ್ರಾಮ್ ಅನ್ನು ಮೊದಲೇ ಡಿಲೀಟ್ ಮಾಡಿದ್ದೇನೆ.ನನ್ನ ಇನ್ಸ್ಟಾಗ್ರಾಮ್ ಹ್ಯಾಕ್ ಆಗಿತ್ತು. ತುಂಬಾ ಹಿಂದೆಯೇ ಡಿಲೀಟ್ ಆಗಿದೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

‘ಈ ಹಿಂದೆ ನನಗೆ ಗರ್ಲ್ಫ್ರೆಂಡ್ ಇದ್ದಿದ್ದು ನಿಜ.ಇದು ಗೊತ್ತಿರುವ ವಿಚಾರ. ನಾನು ಯಾವುದೇ ಹುಡುಗಿಯೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಡಿಯೋದಲ್ಲಿ ನನ್ನ ಬಗ್ಗೆ ಯುವತಿಯೊಬ್ಬರು ಮಾತನಾಡಿದ್ದಾರೆ. ಆಕೆ ನೇರವಾಗಿಯೇ ಬಂದು ಆರೋಪ ಮಾಡಬಹುದಿತ್ತು. ಆರೋಪ ಮಾಡುವ ಬದಲು ನನ್ನ ವಿರುದ್ಧ ದೂರು ಕೊಡಬಹುದಿತ್ತು. ನಮ್ಮ ಕುಟುಂಬದ ವರ್ಚಸ್ಸು ಹಾಳು ಮಾಡುವ ಪ್ರಯತ್ನ ನಡೆದಿದೆ ಎಂದು ದೂರಿದ್ದಾರೆ.
ಆಡಿಯೋದಲ್ಲಿ ಏನಿದೆ?
‘ವೈಷ್ಣವಿ ತುಂಬಾ ಒಳ್ಳೆ ಹುಡುಗಿ. ಆಕೆಗೆ ಅವನಿಂದ ಮೋಸ ಆಗಬಾರದು. ವೈಷ್ಣವಿ ಜೀವನ ಹಾಳಾಗುವುದಕ್ಕೆ ನಾವು ಬಿಡುವುದಿಲ್ಲ. ಆಕೆ ಜತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹುಡುಗ ಸರಿಯಿಲ್ಲ. ವೈಷ್ಣವಿಗೂ ಮೊದಲೇ ಆತ ಐದಾರು ಜನ ಹುಡುಗಿಯರ ಜತೆ ರಿಲೇಷನ್ಶಿಪ್ನಲ್ಲಿದ್ದ. ಅಲ್ಲದೆ, ಹುಡುಗಿಯರನ್ನು ಮನೆಗೂ ಸಹ ಕರೆದುಕೊಂಡು ಹೋಗುತ್ತಿದ್ದ. ಆತನ ಕೃತ್ಯಕ್ಕೆ ಅವರ ತಂದೆ-ತಾಯಿಯ ಫುಲ್ ಸಪೋರ್ಟ್ ಇದೆ’ ಎಂದು ಇಬ್ಬರು ಅನಾಮಧೇಯ ಹುಡುಗಿಯರು ಆರೋಪ ಮಾಡಿದ್ದಾರೆ,
ಮಾತು ಮುಂದುವರಿಸಿರುವ ಹುಡುಗಿಯರು, ‘ಈಗ ನೋಡಿದರೆ ವೈಷ್ಣವಿ ಅವರ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾನೆ. ತಾನು 150 ಕೋಟಿಗೆ ಬಾಳುತ್ತೇನೆ ಅಂತಾ ಹೇಳಿದ್ದಾರೆ. ಹೀಗಿರುವಾಗ ಅಷ್ಟು ಸಿಂಪಲ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದೇಕೆ? ವೈಷ್ಣವಿಗೆ ಹಾಗೂ ಅವರ ಕುಟುಂಬಕ್ಕೆ ಈ ವಿದ್ಯಾಭರಣ ಎಂತವನು ಅಂತ ಇನ್ನೂ ಗೊತ್ತಿಲ್ಲ ಅನ್ಸುತ್ತೆ! ಒಂದು ವೇಳೆ ಗೊತ್ತಾದರೆ ವೈಷ್ಣವಿ ಉಗಿದು ಉಪ್ಪಿನಕಾಯಿ ಹಾಕ್ತಾರೆ. ಯಾವುದೇ ಕಾರಣಕ್ಕೂ ವೈಷ್ಣವಿ, ವಿದ್ಯಾಭರಣ್ ಮದುವೆ ಆಗಬಾರದು. ಒಂದ್ವೇಳೆ ಅವರಿಬ್ಬರು ಮದುವೆ ಆದರೆ, ಮೂರು ವರ್ಷವೂ ಸಂಸಾರ ಮಾಡಲ್ಲ. ಯಾವುದೇ ಕಾರಣಕ್ಕೂ ವಿರಾಜ್, ವೈಷ್ಣವಿ ಗೌಡ ಅವರನ್ನು ಬಾಳಸಲ್ಲ. ಅವರಿಬ್ಬರು ಡಿವೋರ್ಸ್ ತೆಗೆಕೊಳ್ಳೋದು ಗ್ಯಾರಂಟಿ’ ಎಂದಿದ್ದಾರೆ.
‘ಮುಂದೆಂದೋ ಅವರ ಲೈಫ್ ಹಾಳಾಗುವ ಬದಲು ಈಗಲೇ ಮದುವೆ ನಿಂತು ಹೋಗಲಿ. ನಟಿ ವೈಷ್ಣವಿ ಗೌಡ ಬದುಕು ಅಲ್ಲೋಲ-ಕಲ್ಲೋಲ ಆಗಬಾರದು. ನಾವು ಇಷ್ಟು ಹೇಳಿದ ಮೇಲೂ ಕೂಡ ವೈಷ್ಣವಿ ಹಾಗೂ ಅವರ ಕುಟುಂಬಸ್ಥರು ವಿದ್ಯಾಭರಣ್ (ಕಡೆ ಮಾತನಾಡಿದರೆ ನಾವು ತಾನೇ ಏನು ಮಾಡುವುದಕ್ಕೆ ಆಗುತ್ತೆ? ಯಾರಾದರೂ ಹಾಳಾಗಿ ಹೋಗಲಿ ಅಂತ ಸುಮ್ಮನಾಗುತ್ತೇವೆ’ ಎಂದು ಆ ಇಬ್ಬರು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಆದರೆ, ಇದರಲ್ಲಿ ಎಷ್ಟು ಸತ್ಯ? ಎಷ್ಟು ಮಿತ್ಯ? ಎಂಬುದೇ ಇದೀಗ ಕಾಡುತ್ತಿರುವ ದೊಡ್ಡ ಪ್ರಶ್ನೆ.
Uncategorized
New Simcard Rules :ಸಿಮ್ ಕಾರ್ಡ್ ಖರೀದಿಗೆ ಕೇಂದ್ರ ಸರಕಾರ ಜಾರಿಗೆ ತಂದಿದೆ ಕಠಿಣ ನಿಯಮಗಳು – ಬೇಕಾಬಿಟ್ಟಿ ಅಕ್ಟಿವೇಶನ್ ಗೆ ಕಡಿವಾಣ – ಇಲ್ಲಿದೆ ಕಂಪ್ಲಿಟ್ ಡಿಟೈಲ್

New simcard Rules: ಒಂದು ಕಾಲದಲ್ಲಿ ನಾಯಿ ಕೊಡೆಗಳಂತೆ ಬೇಕಾಬಿಟ್ಟಿಯಾಗಿ ಸಿಗುತ್ತಿದ್ದ ಮೊಬೈಲ್ ಸಿಮ್ ಕಾರ್ಡ್ (Sim card) ಗಳ ಖರೀದಿ ಎನ್ನುವುದು ಮುಂದಿನ ದಿನಗಳಲ್ಲಿ ಗಜ ಪ್ರಸವ ಆಗಲಿದೆ. ಈ ಹಿಂದೆ ಯಾರು ಯಾರದೋ ಗುರುತಿನ ಚೀಟಿ (ID Card) ಭಾವಚಿತ್ರಕ್ಕೆ ಇನ್ಯಾರಿಗೋ ಸಿಮ್ ಕಾರ್ಡ್ ನೀಡುತ್ತಿದ್ದ ಹಲವು ನಿದರ್ಶನಗಳು ಕಂಡು ಬಂದಿದ್ದವು . ವಂಚಕರು ಕಾಳ ಸಂತೆಯಲ್ಲಿ ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿ , ಅದನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದನ್ನು ನಾವು ಕಾಣಬಹುದು . ಸದ್ಯ ಪೊಲೀಸರಿಗೆ ಅಪರಾಧ ತನಿಖೆಯಲ್ಲಿ ಸಿಮ್ ಕಾರ್ಡ್ ಅತೀ ದೊಡ್ಡ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಅಲ್ಲದೇ ದೇಶದಲ್ಲಿ ದಿನೇದಿನೆ ಸೈಬರ್ ಪ್ರಾಡ್ ಗಳು ಹೆಚ್ಚುತ್ತಿದ್ದು, ವಂಚಕರು ಪೊಲೀಸ್ ತನಿಖೆಯಿಂದ ತಪ್ಪಿಸಿಕೊಳ್ಳಲು ನಕಲಿ ಸಿಮ್ ಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಸಿಮ್ ಕಾರ್ಡ್ಗಳ ಮೋಸದ ಮಾರಾಟವನ್ನು ತಡೆಯಲು ಭಾರತದ ಟೆಲಿಕಾಂ ಇಲಾಖೆ ಈ ವರ್ಷದ ಆಗಸ್ಟ್ನಲ್ಲಿ ಟೆಲಿಕಾಂ ಆಪರೇಟರ್ಗಳಿಗೆ ಹೊಸ ನಿಯಮಗಳನ್ನು ಘೋಷಿಸಿತ್ತು. ಆರಂಭದಲ್ಲಿ, ಈ ನಿಯಮಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ನಿಯಮಗಳ ಜಾರಿಯನ್ನು ಎರಡು ತಿಂಗಳ ಕಾಲ ಮುಂದೂಡಲಾಯಿತು.
ದೂರಸಂಪರ್ಕ ಇಲಾಖೆ (DoT) ನಕಲಿ ಸಿಮ್ ಕಾರ್ಡ್ಗಳಿಗೆ ಸಂಬಂಧಿಸಿದ ವಂಚನೆಗಳನ್ನು ತಡೆಗಟ್ಟಲು ಡಿಸೆಂಬರ್ 1, 2023 ರಿಂದ ಹೊಸ ಸಿಮ್ ಕಾರ್ಡ್ ನಿಯಮಗಳನ್ನು ಜಾರಿಗೆ ಬಂದಿದೆ. ನಕಲಿ ಸಿಮ್ ಕಾರ್ಡ್ಗಳಿಗೆ ಲಿಂಕ್ ಮಾಡಲಾದ ವಂಚನೆಗಳನ್ನು ಪರಿಹರಿಸಲು ಈ ನಿಯಮಗಳನ್ನು ರೂಪಿಸಲಾಗಿದ್ದು, ಅನುಸರಿಸದಿದ್ದಲ್ಲಿ ದಂಡ ಮತ್ತು ಜೈಲು ಶಿಕ್ಷೆಗೆ ಒಳಗಾಗಬಹುದು.
ಹೊಸ ಸಿಮ್ ಕಾರ್ಡ್ ಪಡೆಯಲು ಸಾಮಾನ್ಯವಾಗಿ ಗುರುತಿನ ಚೀಟಿಯನ್ನು ಕೊಟ್ಟರೆ ಕೆಲವು ಗಂಟೆಗಳ ನಂತರ ಸಿಮ್ ಕಾರ್ಡ್ ಆಕ್ಟಿವೇಶನ್ ಆಗುತ್ತಿತ್ತು, ಆದರೆ ಈಗ ಅದು ಸಾಧ್ಯವಿಲ್ಲ.ದೂ ಇನ್ನು ಮುಂದೆ, ಮಾರಾಟಗಾರರು ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವಲ್ಲಿ ಅನೇಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ದೂರಸಂಪರ್ಕ ಇಲಾಖೆಯ ಈ ನಿಯಮವನ್ನು ಪಾಲಿಸದಿದ್ದರೆ 10 ಲಕ್ಷ ರೂಪಾಯಿಗಳವರೆಗೆ ದಂಡ ಕಟ್ಟಬೇಕು. ದೇಶದಲ್ಲಿ ಹೆಚ್ಚುತ್ತಿರುವ ಸಿಮ್ ಕಾರ್ಡ್ ವಂಚನೆ ದರವನ್ನು ತಡೆಯಲು ಸರ್ಕಾರದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಕಲಿ ಸಿಮ್ ಕಾರ್ಡ್ಗಳ ಮಾರಾಟವನ್ನು ತಡೆಯಲು ಮಾರಾಟಗಾರರಿಗೆ ಈ ನಿಯಮ ತಂದಿದ್ದರೂ, ಇದು ಖರೀದಿದಾರರ ಮೇಲೂ ಪರಿಣಾಮ ಬೀರುತ್ತದೆ.
ಪ್ರಮುಖವಾಗಿ ಪ್ರಿ-ಆಕ್ಟಿವೇಟೆಡ್ ಸಿಮ್ ಕಾರ್ಡ್ಗಳು ದೇಶದಲ್ಲಿ ಮಾರಾಟವಾಗುತ್ತಿರುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ, ಆ ಸಿಮ್ಗಳನ್ನು ಬೇರೆಯವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈಗ ಸಿಮ್ ಕಾರ್ಡ್ ಮಾರಾಟವನ್ನು ಕಟ್ಟುನಿಟ್ಟಾಗಿ ಮಾಡಲು ಸಾಧ್ಯವಾದರೆ, ಅಂತಹ ವಂಚನೆಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಸರ್ಕಾರ ಹೇಳಿದೆ.
ಹೊಸ ಸಿಮ್ ಕಾರ್ಡ್ ಪಡೆಯಲು ನಿಯಮಗಳು :
*ವ್ಯಾಪಾರ ಸಂಪರ್ಕದ ಮೂಲಕ ಮಾತ್ರ ಸಿಮ್ ಕಾರ್ಡ್ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿಸಲಾಗಿದೆ. ಸಾಮಾನ್ಯ ಬಳಕೆದಾರರು ಹಿಂದಿನಂತೆ ಈಗಲೂ ಕೂಡ ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್ಗಳನ್ನು ಪಡೆಯಬಹುದು.
*ಸಿಮ್ ಕಾರ್ಡ್ ಅನ್ನು ಕ್ಲೋಸ್ ಆದ 90 ದಿನಗಳ ಅವಧಿಯ ನಂತರವೇ ಆ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಲಾಗುತ್ತದೆ.
*ಅಸ್ತಿತ್ವದಲ್ಲಿರುವ ತಮ್ಮ ಫೋನ್ ಸಂಖ್ಯೆಗಳಿಗೆ ಸಿಮ್ ಕಾರ್ಡ್ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ ಮತ್ತು ಇತರ ಡೆಮೊಗ್ರಾಫಿಕ್ ಡೇಟಾವನ್ನು ಸಲ್ಲಿಸಬೇಕಾಗುತ್ತದೆ.
*ರಿಜಿಸ್ಟರ್ ಆಗದ ಡೀಲರ್ಗಳ ಮೂಲಕ ಸಿಮ್ ಕಾರ್ಡ್ಗಳ ಮಾರಾಟ ಮಾಡಿಸಿದರೆ ಟೆಲಿಕಾಂ ಆಪರೇಟರ್ಗಳ ಮೇಲೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
*ರಿಜಿಸ್ಟರ್ ಆಗದ ಡೀಲರ್ಗಳ ಮೂಲಕ ಪಡೆದ ಸಿಮ್ ಕಾರ್ಡ್ ಹಾಗೂ ಫೋನ್ ನಂಬರ್ಗಳನ್ನು ಮರುಪರಿಶೀಲಿಸಲಾಗುತ್ತದೆ.
*ಅಸ್ತಿತ್ವದಲ್ಲಿರುವ ಪಾಯಿಂಟ್ ಆಫ್ ಸೇಲ್ (ಪಿಒಎಸ್) ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಪಿಒಎಸ್ ಅಥವಾ ಚಿಲ್ಲರೆ ವ್ಯಾಪಾರಿಗಳು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಲಿಮಿಟೆಟ್ ಲಯಾಬಿಲಿಟಿ ಪಾರ್ಟ್ನರ್ಶಿಪ್ ಐಡೆಂಟಿಫಿಕೇಶನ್ ನಂಬರ್ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್, ಪಾನ್ ಕಾರ್ಡ್, ಸರಕು ಮತ್ತು ಸೇವಾ ತೆರಿಗೆ (GST) ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.
*ಪಿಒಎಸ್ CIN, LLPIN, ಇನ್ಕಾರ್ಪೊರೇಶನ್ ಪ್ರಮಾಣಪತ್ರ, ಪಾನ್ ಮತ್ತು ಜಿಎಸ್ಟಿ ಪ್ರಮಾಣಪತ್ರವಿಲ್ಲದಿದ್ದರೆ, ಅದು ಅಫಿಡವಿಟ್ ಸಲ್ಲಿಸಬೇಕು. ಮತ್ತು ಈ ದಾಖಲೆಗಳನ್ನು ಲಭ್ಯವಾದ ತಕ್ಷಣವೇ ಸಲ್ಲಿಸಬೇಕಾಗುತ್ತದೆ.
* ಒಂದು ವೇಳೆ ಪಿಒಎಸ್ ನಕಲಿ ದಾಖಲೆಗಳನ್ನು ಸಲ್ಲಿಸಿದರೆ ಟೆಲಿಕಾಂ ಆಪರೇಟರ್ಗಳು ಅದರ ಐಡಿ ಅನ್ನು ನಿರ್ಬಂಧಿಸಬೇಕಾಗುತ್ತದೆ ಮತ್ತು ಪಿಒಎಸ್ ನಿಂದ ನೋಂದಾಯಿಸಲ್ಪಟ್ಟ ಎಲ್ಲಾ ಗ್ರಾಹಕರ ಸಿಮ್ಗಳನ್ನು ಮರುಪರಿಶೀಲಿಸಬೇಕಾಗುತ್ತದೆ.
Uncategorized
Yettinahole project: ಎತ್ತಿನಹೊಳೆ ಯೋಜನೆ ಪ್ರಾಯೋಗಿಕ ಪರೀಕ್ಷೆ : ಪೈಪ್ ಗಳಿಂದ ಭಾರಿ ಪ್ರಮಾಣದ ನೀರು ಸೋರಿಕೆ – ನಡುಗಿದ ಭೂಮಿ, ಅದುರಿದ ಮನೆಗಳು – 6 ಕಿಮೀಗೆ ಹೀಗಾದರೇ ನೂರಾರು ಕಿಮೀ ಹರಿಯುವಾಗ ಏನಾಗಬಹುದು?

ಹಾಸನ: ಎತ್ತಿನಹೊಳೆ ಯೋಜನೆಯ (Yettinahole project) ಅಂಗವಾಗಿ ಕಟ್ಟಲಾಗಿರುವ ಸಕಲೇಶಪುರ (Sakleshpur) ತಾಲ್ಲೂಕಿನ ಕಾಡುಮನೆ ಚೆಕ್ ಡ್ಯಾಂನಿಂದ ದೊಡ್ಡ ನಾಗರ ಶೇಖರಣಾ ಘಟಕಕ್ಕೆ ಅಧಿಕಾರಿಗಳು ನಿನ್ನೆ ಪ್ರಾಯೋಗಿಕವಾಗಿ ನೀರು ಹರಿಸಿದ್ದಾರೆ. ಇದುವರೆಗೆ ಪೈಪ್‌ಲೈನ್ ಪೂರ್ಣಗೊಂಡಿರುವ 6 ಕಿ.ಮೀಗಳಷ್ಟು ದೂರದವರೆಗೆ ಪ್ರಾಯೋಗಿಕವಾಗಿ ನೀರು ಹರಿಸಿದ್ದಾರೆ.
ಹೀಗೆ ಪ್ರಾಯೋಗಿಕವಾಗಿ ನೀರು ಹರಿಸಿದ ವೇಳೆ ಭಾರಿ ಪ್ರಮಾಣದ ನೀರು (Water leakage) ಸೋರಿಕೆಯಾಗಿದೆ. ಅರ್ಧಕ್ಕೂ ಹೆಚ್ಚು ನೀರು ಪೈಪ್‌ಲೈನ್‌ನಿಂದ ಆಚೆ ಬಂದಿದೆ. ಹಲವೆಡೆ ರಸ್ತೆ ಕುಸಿತವುಂಟಾಗಿದೆ. ಹಾಸನ ಜಿಲ್ಲೆಯ ದೇಖಲ, ಕುಂಬರಡಿ, ಮಲ್ಲಾಗದ್ದೆ ಗ್ರಾಮಗಳಲ್ಲಿ ರಸ್ತೆಗಳು ಕುಸಿದಿವೆ. ಈ ಎಲ್ಲ ಕಡೆ ರಸ್ತೆ ಹಾನಿಯಿಂದ ಜನರ ಓಡಾಟಕ್ಕೆ ತೊಂದರೆಯಾಯಿತು. ಪೈಪ್ ನಿಂದ ನೀರು ಸೋರಿಕೆಯ ರಭಸಕ್ಕೆ ದೇಖಲ ಗ್ರಾಮದಲ್ಲಿ ಮುಖ್ಯ ರಸ್ತೆಯೊಂದು ಕುಸಿದಿದೆ. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಕಾಫಿ ಮಂಡಳಿಯ ಜೀಪು ಈ ಗುಂಡಿಯೊಳಗೆ ಸಿಕ್ಕಿಕೊಂಡು ಹರಸಾಹಸದಿಂದ ಮೇಲೆತ್ತಲಾಗಿದೆ.
ಕಾಡಮನೆಯಿಂದ ದೊಡ್ಡನಾಗರ ನೀರು ಶೇಖರಣಾ ಕೇಂದ್ರದವರೆಗೆ, ಕಾಡಮನೆ, ಮಲ್ಲಾಗದ್ದೆ, ನಡಹಳ್ಳಿ, ದೇಖಲ, ಕುಂಬರಡಿ, ಹೆಬ್ಬಸಾಲೆ ಮುಖ್ಯ ರಸ್ತೆಯ ಬದಿಯಲ್ಲಿಯೇ ಪೈಪ್‌ಗಳನ್ನು ಜೋಡಿಸಲಾಗಿದೆ.. ಭೂಮಿಯೊಳಗೆ ಜೋಡಣೆ ಮಾಡಿರುವ ಪೈಪ್‌ನಲ್ಲಿ ನೀರು ಹರಿಯುವ ವೇಗ ಹಾಗೂ ಒತ್ತಡಕ್ಕೆ ಮೇಲ್ಬಾಗದ ಭೂಮಿ ನಡುಗುತ್ತದೆ. ಮನೆಯೇ ಅದುರುತ್ತಿದ್ದು, ಭಯದಿಂದ ಮನೆಯೊಳಗಿನಿಂದ ಹೊರಗೆ ಓಡಿ ಬಂದಿದ್ದಾಗಿ’ ದೇಖಲ ಗ್ರಾಮಸ್ಥರು ಹೇಳಿದ್ದಾರೆ.
ಈ ʼಪ್ರಾಯೋಗಿಕ ಅನಾಹುತʼದ ಪರಿಣಾಮ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ನೀರು ಹರಿಸುವಿಕೆ ನಿಲ್ಲಿಸಿದ್ದಾರೆ. ಆರು ಕಿಲೋಮೀಟರ್ ಕಾಮಗಾರಿಗೇ ಇಷ್ಟು ಅನಾಹುತ ಆದರೆ, ಇನ್ನು ಕೋಲಾರದವರೆಗೂ ತಲುಪಬೇಕಿರುವ ನೂರಾರು ಕಿಲೋಮೀಟರ್ ಕಾಮಗಾರಿ ಹೇಗಿರಬಹುದು, ಏನೇನು ಅನಾಹುತ ಉಂಟುಮಾಡಬಹುದು ಎಂದು ಸ್ಥಳೀಯರು ಪ್ರಶ್ನಿಸುವಂತಾಗಿದೆ.

ಒಟ್ಟು 8 ಪಂಪ್‌ಗಳಿಂದ, 5 ಪೈಪ್‌ಗಳಲ್ಲಿ ದೊಡ್ಡನಾಗರ ಶೇಖರಣಾ ಕೇಂದ್ರಕ್ಕೆ ನೀರು ಹರಿಸಲಾಗುತ್ತದೆ. ಕಾಡಮನೆ ವೈರ್ 5 ರಿಂದ ಡಿಸಿ 2 ರವರೆಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ. ನೀರು ಯಾವ ರೀತಿ ಹರಿಯುತ್ತದೆ ಎಂಬುದನ್ನು ಪರೀಕ್ಷೆ ಮಾಡಲು, ಈ ಮಾರ್ಗದ 6 ಕಿ.ಮೀ. ಪ್ರದೇಶದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.
‘ಭೂಮಿಯೊಳಗೆ ಪೈಪ್‌ಗಳನ್ನು ಜೋಡಣೆ ಮಾಡಿ 5 -6 ವರ್ಷಗಳಾಗಿವೆ. ಹಾಗಾಗಿ ಕೆಲವೆಡೆ ವೆಲ್ಡಿಂಗ್ ಬಿಟ್ಟು ಹೋಗಿರುವುದು, ಮತ್ತೆ ಕೆಲವು ತಾಂತ್ರಿಕ ಕಾರಣಗಳಿಂದ ಕೆಲವೆಡೆ ನೀರು ಸೋರಿಕೆ ಆಗಿದೆ. ನೀರು ಹರಿಸಿ ಪರೀಕ್ಷೆ ಮಾಡುವುದರಿಂದ ಇಂತಹ ಸೋರಿಕೆ, ನೀರು ಹರಿವಿನ ಒತ್ತಡ ಗೊತ್ತಾಗುತ್ತದೆ’ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ತಿಳಿಸಿದ್ದಾರೆ.
“ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಲಾಗಿದೆ. ದುರಸ್ತಿ ಕಾಮಗಾರಿಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ. ರಸ್ತೆ ಹಾಗೂ ಇನ್ನಿತರ ಯಾವುದೇ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿ ಹಾನಿ ಆಗಿದ್ದರೆ ದುರಸ್ತಿ ಮಾಡಲಾಗುವುದು. ಈ ಬಗ್ಗೆ ಸುತ್ತಲಿನ ಗ್ರಾಮಸ್ಥರು ಆತಂಕ ಪಡುವುದು ಬೇಡ. ಯಾವುದೇ ಸಮಸ್ಯೆಗಳಿದ್ದರೂ ಇಲಾಖೆ ತಕ್ಷಣ ಸ್ಪಂದಿಸುತ್ತದೆ’ ಎಂದು ಭರವಸೆ ನೀಡಿದ್ದಾರೆ.

ಸಕಲೇಶಪುರ (Sakleshpura) ತಾಲೂಕಿನ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಮತ್ತು ಹೊಂಗಡಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹ ನೀರನ್ನು ಏಳು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ 6,657 ಗ್ರಾಮಗಳ 75.59 ಲಕ್ಷ ಜನ-ಜಾನುವಾರುಗಳಿಗೆ 13.931 ಟಿಎಂಸಿ ಕುಡಿಯುವ ನೀರು ಒದಗಿಸುವುದು ಎತ್ತಿನ ಹೊಳೆ ಯೋಜನೆಯ ಪ್ರಮುಖ ಉದ್ದೇಶ
ಇದರ ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ಐದು ಜಿಲ್ಲೆಯ ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 10.064 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ 50% ರಷ್ಟು ತುಂಬಿಸಿ ಅಂತರ್ಜಲ ಮರುಪೂರ್ಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
Uncategorized
DK Shivakumar ನಿಗಮ ಮಂಡಳಿಯಲ್ಲಿ ಶಾಸಕರಿಗೆ ಅವಕಾಶ ನೀಡುವ ಬಗ್ಗೆ ಡಿಕೆ. ಶಿವಕುಮಾರ್ ಮಹತ್ವದ ಹೇಳಿಕೆ

ಬೆಂಗಳೂರು: ನಿಗಮ-ಮಂಡಳಿಯಲ್ಲಿ (Corporation Board) ಮೊದಲ ಬಾರಿ ಶಾಸಕರಾದವರು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆದವರಿಗೆ ಸ್ಥಾನ ಕೊಡುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಸ್ಪಷ್ಟಪಡಿಸಿದ್ದಾರೆ.
ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರವಾಗಿ ಮಾಧ್ಯಮಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ ಅವರು ನಾನು, ಸಿಎಂ ಸಿದ್ದರಾಮಯ್ಯ (CM Siddaramaiah), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಎಲ್ಲರೂ ಸೇರಿ ಚರ್ಚೆ ಮಾಡಿ ಪಟ್ಟಿಯನ್ನು ಅಂತಿಮ ಮಾಡಿದ್ದೇವೆ. ಸುರ್ಜೇವಾಲ ಅವರು ಹೈಕಮಾಂಡ್ (Congress High Command) ಬಳಿ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಇವತ್ತು ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಮುಗಿಯುತ್ತದೆ. ಆದಷ್ಟು ಬೇಗ ಪಟ್ಟಿ ಬಿಡುಗಡೆ ಆಗುತ್ತದೆ ಎಂದರು.
ಮೊದಲ ಬಾರಿ ಶಾಸಕರಾದವರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ ಇಲ್ಲ. ಅದೇ ರೀತಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ತೆಗೆದುಕೊಂಡು ಸ್ಪರ್ಧೆ ಮಾಡಿದವರಿಗೂ ನಿಗಮ-ಮಂಡಳಿ ಸ್ಥಾನ ಇಲ್ಲ ಎಂದರು. ಮೊದಲ ಹಂತದಲ್ಲಿ ಶಾಸಕರಿಗೆ ಕೊಡಲಾಗುತ್ತದೆ. ಕಾರ್ಯಕರ್ತರಿಗೆ ಎರಡನೇ ಹಂತದಲ್ಲಿ ಸ್ಥಾನ ಕೊಡುತ್ತೇವೆ ಎಂದು ತಿಳಿಸಿದರು.
-
ಅಪರಾಧ8 hours ago
ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ
-
ಬಿಗ್ ನ್ಯೂಸ್13 hours ago
ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಕುಟುಂಬಕ್ಕೆ ಚೆಕ್ ವಿತರಣೆ : ಮೊತ್ತ ತಾಯಿ-ಪತ್ನಿಗೆ ಸಮಪಾಲು ಮಾಡಿದ ಸರ್ಕಾರ
-
ಕ್ರೀಡೆ12 hours ago
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?
-
ಕ್ರೀಡೆ9 hours ago
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?
-
ರಾಜಕೀಯ10 hours ago
Harish Poonja Moved Privilege motion ತನ್ನ ಮೇಲೆ ಎಫ್ ಐ ಆರ್ ದಾಖಲಿಸಿದ ಅರಣ್ಯ ಅಧಿಕಾರಿಗಳ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಹರೀಶ್ ಪೂಂಜಾ – ಏನಿದು ಪ್ರಕರಣ ? ಮುಂದೇನಾಯಿತು?
-
ಸಿನೆಮಾ1 day ago
Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
-
ಸಾಮಾಜಿಕ ಮಾಧ್ಯಮ17 hours ago
Dasara Elephant Arjun Dies ಅರ್ಜುನ ಸಾವಿನ ಸುತ್ತ ಹಲವು ಅನುಮಾನ – ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ – ಅದರಲ್ಲಿದೆ ಗುಂಡೇಟಿನ ವಿಚಾರ
-
ಚಿನ್ನ-ಬೆಳ್ಳಿ ದರ18 hours ago
Gold Rate Hike:ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ : ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಜಿಗಿತ – ಮುಂದಿನ ದಿನಗಳಲ್ಲಿ ರೇಟ್ ಹೇಗಿರಲಿದೆ?