ಪುತ್ತೂರು
Puttur | ಅರ್ಥ್ ವರ್ಕ್ ಮಾಡದೇ ಡಾಮಾರನ್ನೇ ಬಳಸಿಕೊಂಡು ಕಾಂಕ್ರಿಟ್..! – ಇದು ಹೊಸ ಅವಿಷ್ಕಾರ ಎಂದ ನೆಟ್ಟಿಗರು : ಪುತ್ತೂರಿನ ಬೆಳ್ಳಿಪ್ಪಾಡಿಯಲ್ಲಿ ನಡೆಯುತ್ತಿರುವುದು ಬ್ರಹ್ಮಾಂಡ ಭ್ರಷ್ಟಾಚಾರ ಎಂದ ಆಮ್ ಆದ್ಮಿ ಪಕ್ಷ : ಆಪ್ ದಿಡೀರ್ ದಾಳಿಗೆ ಹೆದರಿ ರಾತ್ರೋರಾತ್ರಿ ಸಿಮೆಂಟ್ ಬದಲಾವಣೆ

ಪುತ್ತೂರು: ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಗಂಭೀರವಾಗಿರುವಾಗಲೇ ಪುತ್ತೂರಿನಲ್ಲೊಂದು (Puttur) ವಿನೂತನ ಕಾಂಕ್ರಿಟಿಕರಣದ ಪ್ರಯೋಗ ನಜೆಯುತ್ತಿದೆ..! ಯಾವಾ ಇಂಜಿನಿಯರಿಂಗ್ ಕೂಡ ಕಣ್ಣಿದ್ದರೆ ಇದಕ್ಕೆ ಜನರ ತೆರಿಗೆ ಹಣ ಮಂಜೂರು ಮಾಡಲು ಸಾಧ್ಯವಿಲ್ಲ.
ಈ ವಿನೂತನ ಟೆಕ್ನಾಲಾಜಿಯ ಕಾಂಕ್ರಿಟಿಕರಣ ಎಲ್ಲಿ ನಡೆಯುತ್ತಿದೆ ಗೊತ್ತಾ..? ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಈ ಹೊಸ ಅವಿಷ್ಕಾರದ ಕಾಂಕ್ರಿಟಿಕರಣ ನಡೆಯುತ್ತಿದೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಅನುದಾನದಲ್ಲಿ 1 ಕೋಟಿ 70 ಲಕ್ಷ ಅನುದಾನದಲ್ಲಿ ಬೆಳ್ಳಿಪ್ಪಾಡಿ ಮುಖ್ಯ ರಸ್ತೆಗೆ ಕಾಂಕ್ರಿಟಿಕರಣ ಮಂಜೂರುಗೊಂಡು ಕಾಮಗಾರಿ ನಡೆಯುತ್ತಿದೆ.
ಸಾಮಾನ್ಯ ಕಾಂಕ್ರಿಟಿಕರಣ ಅಂದರೆ ಇಂಜಿನಿಯರ್ ಅಂದಾಜುಪಟ್ಟಿ ಕೊಡುವಾಗಲೇ ಅದರಲ್ಲಿ ಹಳೆಯ ಡಾಮಾರು ತೆಗೆದು ಅರ್ಥ್ ವರ್ಕ್ , ನಂತರ ಜಲ್ಲಿ ಹಾಕಿ ರೋಲರ್ ಹಾಕಿ ಅದರ ಮೇಲೆ ಜಿಎಸ್ಬಿ ಮಿಕ್ಸ್ ಹಾಕಿ ನಂತರ ಕಾಂಕ್ರಿಟಿಕರಣ ನಡೆಯುವುದು ಭಾರತದಲ್ಲಿ ಇಲ್ಲಿಯವರೆಗೆ ನಡೆದುಬಂದ ಕ್ರಮ.
ಬೆಳ್ಳಿಪ್ಪಾಡಿ ರಸ್ತೆಯಲ್ಲಿ ಹೇಗೆ ನಡೆಯುತ್ತಿದೆ ಎಂದರೆ ಹಳೆಯ ಡಾಮರನ್ನು ಜೆಸಿಬಿ ಮೂಲಕ ತೆಗೆದು ಅದನ್ನೇ ಹುಡಿ ಮಾಡಿ ಅದಕ್ಕೆ ಸ್ವಲ್ಪ ಜಲ್ಲಿ ಮಿಕ್ಸ್ ಣಾಡಿ ಅದರ ಮೇಲೆ ಮಿಕ್ಸ್ ಹಾಕಿ ಕಾಂಕ್ರಿಟಿಕರಣ
ನಡೆಯುತ್ತಿದೆ.
ಹೀಗೆ ನಡೆಯುತ್ತಿದ್ದರೂ ಯಾರೂ ಇದರ ಬಗ್ಗೆ ಮಾತನಾಡದಿದ್ದಾಗ ಮಾಹಿತಿ ಪಡೆದ ಪುತ್ತೂರಿನ ಆಮ್ ಆದ್ಮಿ ಪಕ್ಷದ ನಾಯಕರು ದಿಡೀರ್ ದಾಳಿ ಮಾಡಿ ಸ್ಥಳದ ಅವ್ಯವಸ್ಥೆಯ ವಿಡಿಯೋ ಮಾಡಿದ್ದಾರೆ.
ಅವರು ಸ್ಥಳೀಯರಲ್ಲಿ ಮಾಹಿತಿ ಕೇಳಿದರೂ ಅವರಿಗೂ ಮಾಹಿತಿ ಇರಲಿಲ್ಲ.
ಆಗ ಕಳಪೆ ಗುಣಮಟ್ಟದ ಸಿಮೆಂಟ್ , ಮರಳು ಉಪಯೋಗಿಸುವುದು ಆಪ್ ನಾಯಕರು ಪತ್ತೆ ಹಚ್ಚಿದ್ದಾರೆ. ಡಾಮರನ್ನೇ ಹುಡಿ ಮಾಡಿ ಹಾಕುವ ಈ ಕಾಂಕ್ರಿಟಿಕರಣ ಬಗ್ಗೆ ಆಪ್ ನಾಯಕರು ಗಂಭೀರ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.
ಆಪ್ ನಾಯಕರು ಈ ಕಾಮಗಾರಿಯ ಬಗ್ಗೆ ಹರಿಯಬಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ . ಇದೊಂದು ಡಾಮಾರು ಬಳಸಿ ಕಾಂಕ್ರಿಟಿಕರಣದ ವಿನೂತನ ಟೆಕ್ನಾಲಾಜಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಪ್ ನವರ ದಾಳಿ ನಂತರ ರಾತ್ರೋರಾತ್ರಿ ಕಾಂಕ್ರೀಟ್ ಗೆ ಉಪಯೋಗಿಸುವ ಸಿಮೆಂಟ್ ಬದಲಾಯಿಸಲಾಗಿದೆ ಎಂದು ಪುತ್ತೂರು ಆಪ್ ನಾಯಕರು ಹೇಳಿದ್ದಾರೆ.
ಈ ಕಾಮಗಾರಿಯ ವಿರುದ್ಧ ಆಪ್ ನಾಯಕರು ಲೋಕಾಯುಕ್ತ ದೂರು ನೀಡುವ ಬಗ್ಗೆ ನಿರ್ಧರಿಸಿದ್ದಾರೆ.
ದಕ್ಷಿಣ ಕನ್ನಡ
Muliya Jwellers: ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರ ದಿನಾಚರಣೆ: ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ 78 ವರ್ಷ

ಪುತ್ತೂರು: ನಾಡಿನ ಹೆಸರಾಂತ ಆಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಇಂದು ಸಂಸ್ಥಾಪಕರ ದಿನ ಆಚರಿಸಲಾಯಿತು. ಪುತ್ತೂರು, ಬೆಳ್ತಂಗಡಿ, ಗೋಣಿಕೊಪ್ಪಲ್, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಮಳಿಗೆಗಳನ್ನು ಹೊಂದಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆ ಕಳೆದ 78 ವರ್ಷಗಳಿಂದ ನಿರಂತರ ಗ್ರಾಹಕರ ಸೇವೆ ಮತ್ತು ಸಂತೃಪ್ತಿಯಲ್ಲಿ ಮನೆಮಾತಾಗಿದೆ.
ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಡಿಸೆಂಬರ್ 7, 8 ಮತ್ತು 9ರಂದು ಗ್ರಾಹಕರು ಮುಳಿಯ ಜ್ಯುವೆಲ್ಸ್‌ನಲ್ಲಿ ಖರೀದಿಸುವ ಪ್ರತಿ ಗ್ರಾಂ ಚಿನ್ನದಲ್ಲಿ 50 ರೂ.ಗಳನ್ನು ಸಾಮಾಜಿಕ ಉದ್ದೇಶಗಳಿಗೆ ವಿನಿಯೋಗಿಸಲಾಗುತ್ತದೆ. ದಿವಂಗತ ಮುಳಿಯ ಕೇಶವ ಭಟ್ಟರು ಸ್ಥಾಪಿಸಿದ ಮುಳಿಯ ಜ್ಯುವೆಲ್ಸ್ ಸಂಸ್ಥೆ ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ ಇಂದು ಬೃಹತ್ತಾಗಿ ಬೆಳೆದಿದೆ.
ಗ್ರಾಹಕರು ಹೇಗೆ ಮುಖ್ಯವೋ ಹಾಗೆಯೇ ಸಂಸ್ಥಾಪಕರು ಕೂಡ ಮುಖ್ಯ. ಅವರ ಆಶಯಕ್ಕೆ ಅನುಗುಣವಾಗಿ ಸಂಸ್ಥೆಯನ್ನು ಸಮಾಜಮುಖಿಯಾಗಿ ಮುನ್ನಡೆಸುವುದು ನಮ್ಮ ಧ್ಯೇಯ. ನಮ್ಮ ಲಾಭಾಂಶದಲ್ಲಿ ಒಂದು ಅಂಶವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತೇವೆ. ಆ ಮೂಲಕ ಅವರ ಸೇವಾ ಮನೋಭಾವವನ್ನು ಮುಂದುವ್ರರಿಸಲು ನಾವು ಬಧ್ಡರಾಗಿದ್ದೇವೆ ಎಂದು ಮುಳಿಯ ಜ್ಯುವೆಲ್ಸ್ ಸಂಸ್ಥೆಯ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.

ಸುಳ್ಯ
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು

Arecanut Yellow leaf diseases Remedy ಕರಾವಳಿ ಕರ್ನಾಟಕದ ಜೀವನಾಡಿ, ಇಲ್ಲಿನ ಬದುಕಿನ ಆಧಾರ ಸ್ಥಂಭ ಎನಿಸಿಕೊಂಡಿರುವ ಅಡಿಕೆಗೆ (Arecanut) ಕಂಟಕವಾಗಿ ಪರಿಣಮಿಸಿರುವ ಹಳದಿ ಎಲೆ ರೋಗ (Yellow leaf diseases) ಮೊತ್ತ ಮೊದಲ ಬಾರಿ ಈ ಭಾಗದಲ್ಲಿ ಕಾಣಿಸಿಕೊಂಡದ್ದು ಸುಳ್ಯ ತಾಲೂಕಿನ ಸಂಪಾಜೆಯಲ್ಲಿ (Sampaje). ಪಶ್ಚಿಮ ಘಟ್ಟದ ಅಂಚಿನಲ್ಲಿರುವ ದ.ಕ ಹಾಗು ಕೊಡಗು ಜಿಲ್ಲೆಯ ಗಡಿ ಭಾಗವಾದ ಸಂಪಾಜೆಯಲ್ಲಿ ಈ ರೋಗ ಕಾಣಿಸಿಕೊಂಡು ಸರಿ ಸುಮಾರು ಅರ್ಧ ಶತಮಾನವಾಗುತ್ತ ಬಂದಿದೆ. ಬಳಿಕದ ದಿನಗಳಲ್ಲಿ ಇದು ಇತರ ಭಾಗಗಳಿಗೂ ನಿಧಾನವಾಗಿ ಪಸರಿಸಲು ಆರಂಭಿಸಿದ್ದು ಪೂರ್ತಿ ಸುಳ್ಯ ತಾಲೂಕನ್ನು ಅಕ್ರಮಿಸಿತ್ತು ಹಾಗೂ ಇತ್ತೀಚಿನ ವರ್ಷಗಳಲ್ಲಿ ಇದು ಇನ್ನಷ್ಟು ವ್ಯಾಪಿಸಿ ಅಕ್ಕ ಪಕ್ಕದ ತಾಲೂಕುಗಳಾದ ಕಡಬ ಬೆಳ್ತಂಗಡಿ ಹಾಗು ಪುತ್ತೂರು ತಾಲೂಕಿಗೂ ಪಸರಿಸಿದೆ. ಪ್ರಸ್ತುತ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ಹಳದಿ ಎಲೆ ರೋಗ ಬಂದಿದೆ.
ಅಡಿಕೆ ಕೃಷಿಗೆ ಬೆನ್ನು ಹಾಕಿದ ರೈತರು
ಸಂಪಾಜೆ ಅಸುಪಾಸಿನಲ್ಲಿ ಹಳದಿ ರೋಗದ ಹಾವಳಿ ಹೇಗಿತು ಎಂದರೆ ಬಹುತೇಕ ತೋಟಗಳು ಈ ರೋಗದಿಂದ ನಾಶವಾಗಿ ಹೋಯಿತ್ತು. ಉಳಿದ ಅಲ್ಪ ತೋಟದಲ್ಲೂ ಫಸಲು ಇಲ್ಲ. ಹಳದಿ ರೋಗ ಭಾದಿತ ಗಿಡಗಳನ್ನು ಕಡಿದು ತೆಗೆದು ಅಲ್ಲಿ ಹೊಸತಾಗಿ ಅಡಿಕೆ ಕೃಷಿ ಮಾಡಿದರೂ ಮತ್ತೆ ಆ ಮರಗಳನ್ನು ಹಳದಿ ರೋಗ ಬೆಂಬಿಡದೆ ಕಾಡುತಿತ್ತು. ಹೀಗಾಗಿ ಅಡಿಕೆಯ ಕೃಷಿಯ ಸಹವಾಸವೇ ಬೇಡ ಎಂದು ಆ ಭಾಗದ ರೈತರು ಬೇರೆ ಕೃಷಿಯತ್ತ ಮುಖ ಮಾಡಿದರು.
ವಿಫಲ ಪ್ರಯತ್ನಗಳು
ಈ ರೋಗ ನಿಯಂತ್ರಣಕ್ಕೆ ತೋಟಗಾರಿಕೆ, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ) ಸೇರಿದಂತೆ ಕೃಷಿಕರ ಸಂಘಟನೆಗಳೂ ಸಾಕಷ್ಟು ಪ್ರಯತ್ನ ನಡೆಸಿವೆಯಾದರು ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಹಲವು ಕಂಪೆನಿಗಳು ಹಾಗೂ ಸರಕಾರದ ಇಲಾಖೆಗಳು ವಿವಿಧ ನಮೂನೆಯ ಪರಿಹಾರೋಪಾಯಗಳನ್ನು ಔಷಧಿಗಳನ್ನು ನೀಡಿತಾದರೂ ಅದರಿಂದ ಕೃಷಿಕರಿಗೆ ಲಾಭಕ್ಕಿಂತ ನಷ್ಟವಾದದ್ದೆ ಹೆಚ್ಚು. ರೋಗ ನಿಯಂತ್ರಣಕ್ಕೂ ಬಂದಿಲ್ಲ. ಈಗ ಈ ರೋಗ ಕರಾವಳಿ ಮಲೆನಾಡಿಗೂ ಹಬ್ಬಿದ್ದು , ಅಲ್ಲಿನ ರೋಗ ಬಾಧಿತ ತೋಟದ ಪರಿಸ್ಥಿತಿ ಇಲ್ಲಿನದಕ್ಕಿಂತ ಭಿನ್ನವಾಗಿಲ್ಲ. ಕೆಲವು ಔಷಧಿ ಕಂಪೆನಿಗಳಂತೂ ರೈತರ ಅಸಹಾಯಕತೆಯನ್ನು ಬಳಸಿಕೊಂಡು ಲಾಭ ಮಾಡಿಕೊಂಡದ್ದು ಇದೆ. ಇನ್ನು ರಾಜಕಾರಣಿಗಳು ಚುನಾವಣೆಯ ಸಂದರ್ಭ ಮತಗಳಿಕೆಗೆ ಇದನ್ನು ಸಾಧನವಾಗಿಸಿದ್ದು ಬಿಟ್ರೆ ರೈತರಿಗೆ ಅವರಿಂದ ದೊಡ್ಡ ಲಾಭವಾಗಿಲ್ಲ.

ಆಶಾಕಿರಣ
ಆದರೆ ಈಗ ಕಾಲ ಚಕ್ರ ಒಂದು ಸುತ್ತು ತಿರುಗಿದಂತೆ ಕಾಣುತ್ತಿದೆ. ಮೊದಲ ಬಾರಿ ಹಳದಿ ರೋಗಕ್ಕೆ ತುತ್ತಾದ ಸಂಪಾಜೆಯಲ್ಲೆ ಈ ರೋಗಕ್ಕೆ ಶಾಶ್ವತ ಪರಿಹಾರದ ಆಶಾಕಿರಣವೊಂದು ಕಾಣಿಸಿದೆ. ಇಂದೋರ್‌ನಲ್ಲಿ ಸ್ವಂತ ರಾಸಾಯನಿಕ ಗೊಬ್ಬರದ ಘಟಕ ನಿರ್ವಹಿಸುತ್ತಿರುವ ( ಶ್ರೀ ಸಿದ್ದಿ ಎಗ್ರಿ ಕೆಮಿಕಲ್ ಪ್ರೈವೇಟ್ ಲಿಮಿಟೆಡ್, ಇಂದೋರ್) ದ.ಕ. ಮೂಲದ ಕೃಷಿ ಉದ್ಯಮಿ ಪಿ.ಎನ್.ಭಟ್ ಪೆರುವೊಡಿ ಈ ರೋಗದ ಕುರಿತಾಗಿ ಸ್ವತ: ಸಂಶೋಧನೆ ನಡೆಸಿದ್ದು, ಅದನ್ನು ತನ್ನ ಸಹೋದರ ಸಂಪಾಜೆ ಗ್ರಾಮದ ಪೆರುವೊಡಿ ಸತ್ಯನಾರಾಯಣ ಭಟ್ ಹಾಗೂ ಜೇಡ್ಲ ಶ್ರೀಧರ ಭಟ್ ರವರ ಹಳದಿ ಎಲೆ ರೋಗ ಪೀಡಿತ ಅಡಕೆ ತೋಟದಲ್ಲಿ ಪ್ರಾಯೋಗಿಕವಾಗಿ ಬಳಸಿದ್ದಾರೆ. ಕಳೆದೊಂದು ವರ್ಷದಿಂದ ಸಂಪಾಜೆಯ ಈ ಆಯ್ದ ತೊಟಗಳಲ್ಲಿ ಪ್ರಯೋಗ ಚಾಲ್ತಿಯಲ್ಲಿದ್ದು ನಿರೀಕ್ಷಿತ ಯಶಸ್ಸು ಸಿಕ್ಕಿದೆ. ಹಾಗಾಗಿಯೂ ಪ್ರಯೋಗ ಆರಂಭಿಕ ಹಂತದಲ್ಲಿದ್ದು ಎರಡು ವರ್ಷಗಳ ಕಾಲ ಇದೇ ಔಷಧಿಯನ್ನು ಬಳಸಿ ನೋಡಿದ ಬಳಿಕ ಇನ್ನಷ್ಟು ಖಚಿತತೆ ಸಿಗಬಹುದು.

ಮಣ್ಣಿನ ಸ್ಯಾಂಪಲ್ ಪರೀಕ್ಷೆ
ಪಿ.ಎನ್.ಭಟ್ ಅವರು ಮೊದಲಿಗೆ ಪೆರುವೊಡಿ ಸತ್ಯನಾರಾಯಣ ಭಟ್ ಹಾಗೂ ಜೇಡ್ಲ ಶ್ರೀಧರ ಭಟ್ ರವರ ತೋಟದ ಮಣ್ಣಿನ ಸ್ಯಾಂಪಲ್ ಪಡೆದು ಇಂದೋರ್‌ನ ತನ್ನ ಘಟಕದಲ್ಲಿ ಪರೀಕ್ಷೆ ನಡೆಸಿದ್ದಾರೆ. 90ರ ದಶಕದ ಕೊನೆಯಲ್ಲಿ ಈ ಎರಡು ತೋಟಗಳು ಹಳದಿ ರೋಗಕ್ಕೆ ತುತ್ತಾಗಿತ್ತು. ಸರಿ ಸುಮಾರು 150 ಕ್ವಿಂಟ್ವಾಲ್ ಅಡಿಕೆ ಫಸಲು ಬರುತ್ತಿದ್ದ ತೋಟ ಬರುಬರುತ್ತಾ ಶೂನ್ಯ ಫಸಲಿನತ್ತ ಸಾಗಿತ್ತು. ಜೇಡ್ಲ ಶ್ರೀಧರ ಭಟ್ ರವರು 2015ರಲ್ಲಿ ಅದೇ ಜಾಗದಲ್ಲಿ ಹೊಸ ತೋಟಕ್ಕೆ ತಯಾರಿ ನಡೆಸಿದ್ದು, 2017ರಲ್ಲಿ 400 ಅಡಿಕೆ ಸಸಿಗಳನ್ನು ಅಲ್ಲಿ ನೆಟ್ಟಿದ್ದರು. ಇದರಲ್ಲೂ ವರ್ಷಗಳ ಹಿಂದೆ 4-5 ಗಿಡಗಳ ಸೋಗೆ ಹಳದಿ ಬಣ್ಣಕ್ಕೆ ತಿರುಗಿದಂತೆ ಕಂಡು ಬಂದಿತ್ತು. ಅದು ಹಳದಿ ರೋಗವಾಗಿರಬಹುದು ಎಂಬ ಶಂಕೆ ನನ್ನಲ್ಲಿತ್ತು ಎನ್ನುತ್ತಾರೆ ಶ್ರೀಧರ ಭಟ್.

2 ವರ್ಷ ಬೇಕು
ಇಂದೋರ್ ನಲ್ಲಿ ನಡೆಸಿದ ಪರೀಕ್ಷೆ ವೇಳೆ ಹಳದಿ ಎಲೆರೋಗ ಪೀಡಿತ ಅಡಕೆ ತೋಟಗಳ ಮಣ್ಣಿನಲ್ಲಿ ಮೆಗ್ನೆಶಿಯಂ, ಕ್ಯಾಲ್ಸಿಯಂ ಹಾಗೂ ಪೊಟಾಷ್ ಅಂಶ ಗಣನಿಯ ಪ್ರಮಾಣದಲ್ಲಿ ಕೊರತೆ ಇರುವುದು ಕಂಡುಬಂದಿದೆ. ಇದನ್ನು ಹೋಗಲಾಡಿಸಲು ತಾವೇ ತಯಾರಿಸಿದ ರಾಸಾಯನಿಕ ಔಷಧವನ್ನು ಪಿಎನ್ ಭಟ್ ಅವರು ಈ ಇಬ್ಬರು ರೈತರಿಗೆ ನೀಡಿದ್ದಾರೆ. ಅವರ ಸಲಹೆಯಂತೆ ಕಳೆದ ಡಿಸೆಂಬರ್‌ನಿಂದ ಪ್ರತಿ ತಿಂಗಳು ಈ ಔಷಧ ಸಿಂಪರಣೆ ಮಾಡಿ ಹಳದಿ ಎಲೆ ರೋಗದಿಂದ ಶ್ರೀಧರ ಭಟ್ ಹಾಗೂ ಸತ್ಯನಾರಾಯಣ ಭಟ್ ಮುಕ್ತಿ ಪಡೆದಿದ್ದಾರೆ. ಸದ್ಯ ಇವರ ತೋಟಗಳು ಹಸಿರಿನಿಂದ ಕಂಗೋಳಿಸುತ್ತಿದ್ದು, ಹಳದಿ ಎಲೆ ರೋಗವಿದ್ದ ಪ್ರದೇಶದಲ್ಲಿ ಫಸಲು ನಳನಳಿಸುತ್ತಿದೆ. ಆದರೇ ಇನ್ನೂ 2 ವರ್ಷ ಬಳಸಿ ನೋಡಿದಾಗ ಮಾತ್ರ ಸಂಪೂರ್ಣ ಫಲಿತಾಂಶ ಸಿಗಬಹುದು. ಈ ರೋಗ ಭಾದಿತ ತೋಟದ ರೈತರು ಕೃಷಿಯ ಬಗ್ಗೆ ನಂಬಿಕೆ ಕಳಕೊಂಡಿದ್ದು ಅವರಿಗೆ ಈ ಬೆಳವಣಿಗೆ ಚೇತೊಹರಿ ಎನಿಸಿದೆ.
ಇಂದೋರ್‌ನ ಈ ರಸಗೊಬ್ಬರ ಕಂಪನಿ ಅಲ್ಪಕಾಲಿಕ ಬೆಳೆಗಳಾದ ಟೊಮೆಟೋ, ಖರ್ಜೂರ ಮುಂತಾದ ಬೆಳೆಗಳಲ್ಲಿ ಕಾಡುವ ಹಳದಿ ಎಲೆ ರೋಗಕ್ಕೆ ಈ ಹಿಂದೆ ಔಷಧ ಒದಗಿಸಿ ಯಶಸ್ಸು ಕಂಡಿತ್ತು. ಹೀಗಾಗಿ ದೀರ್ಘಕಾಲಿಕ ಬೆಳೆಯಾದ ಅಡಕೆ ಮರದ ಮೇಲೂ ಪ್ರಯೋಗ ನಡೆಸಲು ಮುಂದಾಯಿತು. ಪ್ರಸಕ್ತ ಈ ಪ್ರಯೋಗವನ್ನು ಇತರೆ ರೋಗಪೀಡಿತ ತೋಟಗಳಿಗೂ ವಿಸ್ತರಿಸಲಾಗಿದೆ.
ಹಳದಿ ರೋಗದ ಲಕ್ಷಣಗಳು ಮರದ ಕಾಂಡದ ಗಾತ್ರ ಕುಗ್ಗುವುದು, ಗರಿಗಳ ಬೆಳವಣಿಗೆ ಕುಂಠಿತವಾಗುತ್ತವೆ ನಂತರ ಹಳದಿಯಾಗಿ ತುದಿಯಿಂದ ಒಣಗುವುದು, ಬೇರು ಭಾಗ ಕೊಳೆಯುವುದು, ಎಲೆಗಳು ಬೆಳೆಯದೆ ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ ಸುಳಿ ಮುರಿದು ಬೀಳುವುದು, ವಿಶೇಷವಾಗಿ ಕಾಯಿ ಬಲಿಯುವ ಸಮಯದಲ್ಲಿ ಗಾತ್ರದಲ್ಲಿ ಏರುಪೇರಾಗುವುದು, ಕಾಯಿಯ ಒಳಗಡೆ ಕಪ್ಪಾಗಿ ಅಂಟಿನಿಂದ ಕೂಡುವುದು ನಂತರ ಕಾಯಿಗಳು ಉದುರಿಹೋಗುವುದು. ಈ ವೇಳೆ ಮರಗಳನ್ನು ಸರಿಯಾಗಿ ಆರೈಕೆ ಮಾಡದಿದ್ದಾರೆ ಮರಗಳು ಸತ್ತು ಹೋಗುತ್ತವೆ.
ಹಳದಿ ಎಲೆರೋಗಕ್ಕೆ ಔಷಧ ಸಿಂಪರಣೆ ಮೊದಲು ಕಡ್ಡಾಯ ಮಣ್ಣು ಪರೀಕ್ಷೆ ಮಾಡಿಸಬೇಕು. ನನ್ನಲ್ಲಿ ವಿವಿಧ ಬಗೆಯ ಪೋಷಕಾಂಶಯುಕ್ತ ಔಷಧ ಸಿಂಪರಣೆಯಿಂದ ಹಳದಿ ಎಲೆರೋಗ ನಿಯಂತ್ರಣ ಸಾಧ್ಯವಾಗಿದೆ. ಈ ಮಾದರಿ ಹಳದಿ ಎಲೆರೋಗ ಪೀಡಿತ ತೋಟಗಳಲ್ಲಿ ಬಳಕೆಯಾದರೆ ಎಲ್ಲ ಬೆಳೆಗಾರರಿಗೂ ಉಪಯುಕ್ತವಾಗಲಿದೆ
ಶ್ರೀಧರ ಭಟ್ ಜೇಡ್ಲ, ಸಂಪಾಜೆ, ಅಡಕೆ ಬೆಳೆಗಾರ
ಸುಳ್ಯ
College student rape case ಪುತ್ತೂರು : ಕಾಲೇಜ್ ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ ಪ್ರಕರಣ – ಬಂಧಿತ ಆರೊಪಿಗೆ 2 ತಿಂಗಳ ಬಳಿಕ ಜಾಮೀನು

ಪುತ್ತೂರು: ಎರಡು ತಿಂಗಳ ಹಿಂದೆ ಪುತ್ತೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು, ಅಪಹರಿಸಿ, ಅತ್ಯಾಚಾರಗೈದ ಪ್ರಕರಣದ ಆರೋಪಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕಡಬದ ಯಜ್ಞೇಶ್ ಜಾಮೀನು ಮಂಜೂರಾದ ಆರೋಪಿ .
ಆರೋಪಿಯು ಸಂತ್ರಸ್ತೆಯನ್ನು ಪುತ್ತೂರಿನ ಬೊಳ್ವಾರ್ ನಿಂದ ಅಪಹರಿಸಿ ಮಡಿಕೇರಿಯ ಅತ್ತೆ ಮನೆಗೆ ಕರೆದು ಕೊಂಡು ಹೋಗಿ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿತ್ತು. ಸಂತ್ರಸ್ಥೆಯ ಹೇಳಿಕೆಯ ಅನ್ವಯ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 376 ಮತ್ತು ಪೋಕ್ಸೋ ಕಾಯಿದೆಯ ಕಲಂ 4ರನ್ವಯ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಪ್ರಕರಣದ ಹಿನ್ನಲೆ
ಅ 10 ರಂದು ಸಂತ್ರಸ್ತೆಯು ತನ್ನ ಮನೆಯಿಂದ ಹೊರಡುವಾಗ ತನಗೆ ಇನ್ನು ಮೂರು ದಿನ ವಿಶೇಷ ಬೊಳುವಾರಿನ ತನ್ನ ಗೆಳತಿಯ ಮನೆಗೆ ಹೋಗಿ ಶುಕ್ರವಾರದಂದು ಸಂಜೆ ಮನೆಗೆ ಬರುವುದಾಗಿ ತಿಳಿಸಿ ಕಾಲೇಜಿಗೆ ಹೋಗಿರುತ್ತಾಳೆ. ಬಳಿಕ ಅಪ್ರಾಪ್ತ ಬಾಲಕಿಯು ಮನೆಗೆ ಫೋನ್ ಮಾಡದೆ ಇರುವುದರಿಂದ, ಅವಳ ಸ್ನೇಹಿತೆಯಲ್ಲಿ ವಿಚಾರಿಸಿದಾಗ, ಅವಳು ಸ್ನೇಹಿತೆಯ ಮನೆಗೆ ಹೋಗದೆ ಇರುವುದನ್ನು ತಿಳಿದು ಬಂದಿರುತ್ತದೆ.
ಬಳಿಕ ಮನೆಯವರು ಕಾಲೇಜಿನಲ್ಲಿ ವಿಚಾರಿಸಿದಾಗ, ಮಧ್ಯಾಹ್ನದವರೆಗೆ ಕಾಲೇಜಿಗೆ ಬಂದ ಆಕೆ ಬಳಿಕ ಬಂದಿರುವುದಿಲ್ಲ ಎಂಬ ಮಾಹಿತಿ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಅಪ್ರಾಪ್ತ ಬಾಲಕಿಯ ತಂದೆಯು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಐಪಿಸಿ ಕಲಂ 363 ರಂತೆ ಪ್ರಕರಣ ದಾಖಲಾಗಿತ್ತು.
ಇದಾದ ಮೂರು ದಿನದ ಬಳಿಕ ಸಂತ್ರಸ್ತೆಯು ತಂದೆಯೊಂದಿಗೆ ಠಾಣೆಗೆ ಹಾಜರಾಗಿ ಆರೋಪಿಯನ್ನು ಕಳೆದ ಮೂರು ತಿಂಗಳಿನಿಂದ ಪ್ರೀತಿಸುತ್ತಿದ್ದು, ಅ 10 ರಂದು ಮಡಿಕೇರಿಗೆ ಹೋಗಿ ಅಲ್ಲಿ ಆರೋಪಿಯ ಅತ್ತೆ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿದ್ದಳು. ಅದರನ್ವಯ ಪ್ರಕರಣ ದಾಖಲಾಗಿತ್ತು
-
ದಕ್ಷಿಣ ಕನ್ನಡ2 days ago
ಪುತ್ತೂರು : ಕುಡಿದು ಟೈಟಾಗಿದ್ದ ಚಾಲಕ ವಿವೇಕಾನಂದ ವಿದ್ಯಾ ಸಂಸ್ಥೆಯ ಬಸ್ಸನ್ನು ಯದ್ವಾತದ್ವಾ ಚಲಾಯಿಸಿ ಸರಣಿ ಅಪಘಾತ – ಮಾಜಿ ಶಾಸಕಿಯ ಪುತ್ರನ ಕಾರು ಸೇರಿ 3 ವಾಹನಕ್ಕೆ ಢಿಕ್ಕಿ – ಪಾನಮತ್ತ ಚಲಾಯಿಸುತ್ತಿದ್ದ ಬಸ್ಸಿನಲ್ಲಿದ್ದರು ವಿದ್ಯಾರ್ಥಿಗಳು..̆
-
ದಕ್ಷಿಣ ಕನ್ನಡ2 days ago
ವಿಟ್ಲ : ಅಡಿಕೆ ಮರ ಮುರಿದು ಬಿದ್ದು ಮಹಿಳೆ ಸಾವು
-
ಸುಳ್ಯ1 day ago
College student rape case ಪುತ್ತೂರು : ಕಾಲೇಜ್ ವಿದ್ಯಾರ್ಥಿನಿಯ ಅಪಹರಿಸಿ ಅತ್ಯಾಚಾರ ಪ್ರಕರಣ – ಬಂಧಿತ ಆರೊಪಿಗೆ 2 ತಿಂಗಳ ಬಳಿಕ ಜಾಮೀನು
-
ರಾಜಕೀಯ2 days ago
CM Siddaramaiah: ಐಸಿಸ್ ಉಗ್ರ ಸಂಘಟನೆಯ ಬೆಂಬಲಿಗನ ಜತೆ ಹುಬ್ಬಳಿಯಲ್ಲಿ ವೇದಿಕೆ ಹಂಚಿಕೊಂಡ ಸಿ. ಎಂ.ಸಿದ್ದರಾಮಯ್ಯ : ಚಿತ್ರ ಸಹಿತ ಯತ್ನಾಳ್ ಗಂಭೀರ ಆರೋಪ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
-
ಉದ್ಯೋಗ1 day ago
Job Alert: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ – ಸದ್ಯದಲ್ಲೆ ಸಾರಿಗೆ ಇಲಾಖೆಗೆ 9 ಸಾವಿರ ಸಿಬ್ಬಂದಿಗಳ ನೇಮಕ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
-
Uncategorized2 days ago
loan write off ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂ. ರೈಟ್-ಆಫ್….
-
ಪುತ್ತೂರು1 day ago
Puthila Parivara | ಪುತ್ತೂರು ನಗರಸಭೆ 2 ವಾರ್ಡ್ ಮರುಮತದಾನ – ಬಿಜೆಪಿ ಕಾಂಗ್ರೇಸ್ ನಡುವೆ ಕಾರ್ಯಕರ್ತರ ಒತ್ತಾಯದಂತೆ ಪುತ್ತಿಲ ಪರಿವಾರ ಮತ್ತೊಂದು ಚುನಾವಣೆ ಎದುರಿಸುವುದು ಬಹುತೇಕ ಫಿಕ್ಸ್ : ವಿಧಾನಸಭಾ ಚುನಾವಣೆಯಲ್ಲಿ ಈ ವಾರ್ಡ್ ಗಳಲ್ಲಿ ಯಾರಿಗೆ ಎಷ್ಟು ಮತದಾನವಾಗಿತ್ತು ಗೊತ್ತೇ.?
-
ಅಪರಾಧ21 hours ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?