ಪುತ್ತೂರು : ನ 24 : ಪುತ್ತೂರು – ವಿಟ್ಲ ರಸ್ತೆಯ ಕಂಬಳಬೆಟ್ಟುವಿನಿಂದ ಅರ್ಕೆಚ್ಚಾರು, ನೇರ್ಲಾಜೆ, ಮುಂಡ್ರಬೈಲು, ನಾಯ್ತೊಟ್ಟು, ಮತ್ತು ಸೂರ್ಯಕ್ಕೆ ಹೋಗುವ ರಸ್ತೆಯೂ ಹದಗೆಟ್ಟಿದ್ದು, ಹಲವು ಪ್ರಯತ್ನಗಳ ಬಳಿಕವೂ ದುರಸ್ತಿಯಾಗದ ಹಿನ್ನಲೆಯಲ್ಲಿ ಗ್ರಾಮಸ್ಥರು ಮುಂದಿನ ವಿಧಾನಸಭಾ ಚುಣಾವಣೆಯನ್ನು ಬಹಿಷ್ಕರಿಸಲು ಚಿಂತಿಸಿದ್ದಾರೆ. ಶಾಸಕರು ರಸ್ತೆ ರಿಪೇರಿ ಮಾಡಿಕೊಡುವ ಭರವಸೆ ನೀಡಿದ್ದು , ಆದರೇ ಅದು ಕೇವಲ ಅಶ್ವಾಸನೆಯಾಗಿ ಮಾತ್ರ ಉಳಿದಿರುವ ಹಿನ್ನಲೆಯಲ್ಲಿ ತಾವು ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
, ಸುಮಾರು 400 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದು , ಇಲ್ಲಿ ವಾಸಿಸುವ ಬಹುತೇಕರು ಕೆಲ ಮಧ್ಯಮ ವರ್ಗದವರು ಹಾಗೂ ದಿನಗೂಲಿ ಕೆಲಸಗಾರರು. ಒ0ದು ವರ್ಷದ ಮೊದಲು ಇಲ್ಲಿನ ಜನರ ಮನವಿಯ ಮೇರೆಗೆ ಶಾಸಕರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಸಂಬಂಧ ಪಟ್ಟಂತೆ ಸ್ಥಳೀಯ ಅಧಿಕಾರಿಗಳನ್ನು ಕರೆಸಿ ತಡೆಗೋಡೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಆಶ್ವಾಸನೆ ನೀಡಿ ಒಂದು ವರ್ಷವಾದರೂ ಈ ಬಗ್ಗೆ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಗಮನಹರಿಸಲಿಲ್ಲ. ದಿನಕೂಲಿ ನಡೆಸುತ್ತಿರುವ ಇಲ್ಲಿನ ಸ್ಥಳೀಯರು ಅನೇಕ ಬಾರಿ ಸ್ಥಳೀಯ ಪಂಚಾಯತ್ ಬಳಿ ತಮ್ಮ ಅಳಲನ್ನು ಹೇಳಿಕೊಂಡರೂ ಇದಕ್ಕೆ ಬೇಕಾದ ಯಾವುದೇ ಪರಿಹಾರ ವ್ಯವಸ್ಥೆ ಸಿಗದೆ ನಿರಾಸೆ ಹೊಂದಿದ್ದಾರೆ.
ಈ ರಸ್ತೆಯನ್ನು ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು ಮತ್ತು ಸಾರ್ವಜನಿಕರು ಅವಲಂಬಿಸಿದ್ದಾರೆ. ಹೊಳೆ ಬದಿಯಲ್ಲಿ ಕಾಂಕ್ರೀಟ್ ಹಾಕಿದ ರಸ್ತೆ ಸಂಪೂರ್ಣ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಮಕ್ಕಳು ಸೇರಿದಂತೆ ಸಾರ್ವಜನಿಕರು ನಡೆದಾಡಲೂ ಭಯಪಡುವಂತಹ ಪರಿಸ್ಥಿತಿ ಎದುರಾಗಿದೆ.


ಉದ್ಯಮಿ ಬಳಿ ನೆರವು ಯಾಚನೆ :
ಶಾಸಕರ ಆಶ್ವಾಸನೆ ಠೊಳ್ಳೆಂದು ಮನಗಂಡ ಇಲ್ಲಿನ “ನಮಗೆ ಯಾವುದೂ ಬೇಡ, ನಮ್ಮ ರಸ್ತೆಗೆ ಯಾರಿಂದಲೂ ಏನೂ ಪ್ರಯೋಜನವಿಲ್ಲ, ಅದಕ್ಕಾಗಿ ನಮಗೆ ಚುಣಾವಣೆಯ ಅವಶ್ಯಕತೆಯೂ ಇಲ್ಲ, ಎಂಬುದಾಗಿ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಸಭೆ ಸೇರಿದ ಗ್ರಾಮಸ್ಥರು ಅದೇ ಗ್ರಾಮದ ನೇರ್ಲಾಜೆ ನಿವಾಸಿ ಉದ್ಯಮಿ ದಿವಾಕರ ದಾಸ್‌ರವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.

“ನಮಗೆ ರಾಜಕೀಯದವರ ಮೇಲೆ ವಿಶ್ವಾಸವಿಲ್ಲ, ನೀವೇ ನಮಗೆ ಈ ಕೆಟ್ಟುಹೋದ ರಸ್ತೆಯನ್ನು ದುರಸ್ಥಿ ಮಾಡಿ ಕೊಡಬೇಕೆಂದು ದಿವಾಕರ್ ರಾಸ್‌ರವರಲ್ಲಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ದಿವಾಕರ್‌ದಾಸ್‌ರವರು ಈ ಬಗ್ಗೆ ಮುಂದಿನ ದಿನಗಳಲ್ಲಿ , ಪರಿಶೀಲಿಸಿ ನಾನು ನಿಮ್ಮೊಂದಿಗೆ ಸದಾ ಇದ್ದೇನೆ ಎಂಬುದಾಗಿ ಭರವಸೆ ನೀಡಿದ್ದಾರೆ.