ಬೆಳ್ತಂಗಡಿ; ಬಸ್ ಮತ್ತು ಬೊಲೋರೊ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು ಏಳು ಮಂದಿ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳದ ಕುದ್ರಾಯ ಎಂಬಲ್ಲಿ ನ 24 ರಂದು ನಡೆದಿದೆ. ಮಂಡ್ಯ ಜಿಲ್ಲೆಯ ಚೆನ್ನಸಾಂದ್ರ ನಿವಾಸಿ ಮಾಹದೇವ(63) ಅಪಘಾತದಲ್ಲಿ ಮೃತಪಟ್ಟವರು.
ಅಪಘಾತದಲ್ಲಿ ಐವರು ಮಹಿಳೆಯರು ಮಗು ಸೇರಿ ಏಳು ಮಂದಿಗೆ ಗಂಭೀರ ಗಾಯವಾಗಿದ್ದು,ಇವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರು ಹಾಗೂ ಮೃತಪಟ್ಟವರು ಒಂದೇ ಕುಟುಂಬದ ಸದಸ್ಯರು. ಧರ್ಮಸ್ಥಳದಲ್ಲಿ ದೀಪೋತ್ಸವದ ಹಿನ್ನೆಲೆ ಮಂಡ್ಯ ಜಿಲ್ಲೆಯಿಂದ ಒಂದೇ ಕುಟುಂಬದ ಹತ್ತು ಮಂದಿ ಬೊಲೋರೊ ವಾಹನದಲ್ಲಿ ಆಗಮಿಸಿದ್ದರು
ಕುದ್ರಾಯ ಎಂಬಲ್ಲಿ ಬೊಲೋರೊ ವಾಹನವನ್ನು ರಸ್ತೆಯ ಬಲಕ್ಕೆ ನಿಲ್ಲಿಸಿ ಇಳಿದು ಅಂಗಡಿಗೆ ಹೋಗುತ್ತಿದ್ದ ವೇಳೆ ಧರ್ಮಸ್ಥಳ ಡಿಪೋದಿಂದ ಮೈಸೂರಿಗೆ ತೆರಳುತ್ತಿದ್ದ ksrtc ಬಸ್ ನಿಂತಿದ್ದವರಿಗೆ ಹಾಗೂ ಬೊಲೋರೊ ವಾಹನಕ್ಕೆ ಢಿಕ್ಕಿ ಹೊಡೆದಿದೆ.ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.