Ad Widget

Puttur Job Fair | ರಾಜ್ಯಮಟ್ಟದ “ಪುತ್ತೂರು ಉದ್ಯೋಗ ಮೇಳ” ಕ್ಕೆ ಹತ್ತೇ ದಿನದಲ್ಲಿ 2 ಸಾವಿರಕ್ಕೂ ಮಿಕ್ಕಿದ ನೋಂದಾವಣೆ – 2017ರ ಭಾಗವಹಿಸಿದ್ದ 8300 ಉದ್ಯೋಗಾಂಕ್ಷಿಗಳಿಗಿಂತ ಈ ವರ್ಷ ದುಪ್ಪಟ್ಟು ಸಾಧ್ಯತೆ

Screenshot_20221122-200629_Gallery
Ad Widget

Ad Widget

Ad Widget
'ವಿದ್ಯಾಮಾತಾ ಫೌಂಡೇಶನ್' ವತಿಯಿಂದ ಪುತ್ತೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಉದ್ಯೋಗ ಮೇಳಕ್ಕೆ (Puttur Job Fair) ನೋಂದಾವಣೆಯನ್ನು ಕಳೆದ 10 ದಿನಗಳ ಹಿಂದಷ್ಟೇ ಪ್ರಾರಂಭಿಸಲಾಗಿದ್ದು 2ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳು ಈಗಾಗಲೇ ನೋಂದಾವಣೆಯನ್ನು ಮಾಡಿದ್ದಾರೆ.

9772294246 ನಂಬರಿಗೆ ಮಿಸ್ ಕಾಲ್ ಕೊಡುವುದರ ಮೂಲಕ ನೋಂದಾವಣೆ ಪ್ರಾರಂಭವಾಗಿದ್ದು ಆಸಕ್ತರು ಈ ನಂಬರ್ ಗೆ ಮಿಸ್ ಕಾಲ್ ಕೊಡುವುದರ ಮೂಲಕ ತಮ್ಮ ಹೆಸರನ್ನು ನೋಂದಾಯಿಸಲು ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ಮಿಸ್ ಕಾಲ್ ಕೊಟ್ಟು ನೋಂದಾವಣೆ ಮಾಡುವವರಿಗೆ 10 ದಿನದ ಒಳಗಾಗಿ ವಿದ್ಯಾಮಾತಾ ಫೌಂಡೇಶನ್ ಮೂಲಕ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುವುದು.

ಉದ್ಯೋಗ ಮೇಳದಲ್ಲಿ ನೂರಕ್ಕೂ ಹೆಚ್ಚಿನ ವಿವಿಧ ಕ್ಷೇತ್ರದ ಕಂಪನಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್.ಸಿ ಯಿಂದ ಐ.ಟಿ.ಐ., ಪಿ.ಯು.ಸಿ , ಡಿಪ್ಲೊಮಾ, ಪದವಿ , ಸ್ನಾತಕೋತ್ತರ ಪದವಿ ಮುಗಿಸಿರುವ ಅಥವಾ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಮುಕ್ತವಾಗಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗುವುದು. ಉದ್ಯೋಗ ಮೇಳವು ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಸುದಾನ ವಸತಿಯುತ ಶಾಲೆಯಲ್ಲಿ ನಡೆಯಲಿದ್ದು ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಉದ್ಯೋಗ ಮೇಳದ ದಿನಾಂಕವನ್ನು ನೋಂದಾವಣೆ ಮಾಡಿದ ವಿದ್ಯಾರ್ಥಿಗಳಿಗೆ 10 ದಿನದ ಮುಂಚಿತವಾಗಿ ತಿಳಿಸಲಾಗುವುದು ಮತ್ತು ಉದ್ಯೋಗ ನೇರ ಸಂದರ್ಶನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಸಲಾಗುವುದು.
    
2017 ಮತ್ತು 2019ರ ಸಾಲಿನ 'ವಿದ್ಯಾಮಾತಾ ಫೌಂಡೇಶನ್' ನ ವತಿಯಿಂದ ನಡೆದಿದ್ದ ಉದ್ಯೋಗ ಮೇಳಗಳಲ್ಲಿ 10ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ದಾಖಲೆಯ ಪ್ರಮಾಣದಲ್ಲಿ ಸ್ಥಳದಲ್ಲಿಯೇ ಸುಮಾರು 2ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೇಮಕಾತಿಯಾಗಿದ್ದನ್ನು ಸ್ಮರಿಸಿಕೊಳ್ಳಬಹುದು. ಎರಡು ಉದ್ಯೋಗ ಮೇಳಗಳಲ್ಲಿ ಆಯ್ಕೆಯಾಗಿದ್ದ 40ಕ್ಕೂ ಹೆಚ್ಚಿನ ಆಕಾಂಕ್ಷಿಗಳು ಸದ್ಯ ಅಂತಾರಾಷ್ಟ್ರೀಯ/ರಾಷ್ಟ್ರೀಯ ಕಂಪನಿಗಳ ಉನ್ನತ ಹುದ್ದೆಯಲ್ಲಿ ಇರುವುದು ವಿದ್ಯಾಮಾತಾ ಫೌಂಡೇಶನ್ ನಡೆಸಿದ್ದ ಉದ್ಯೋಗಮೇಳಗಳ ಯಶಸ್ಸಿಗೆ ಸಾಕ್ಷಿಯಾಗಿದೆ.

ಈ ವರ್ಷವೂ 8ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದ್ದು ವಿದ್ಯಾಮಾತಾ ಫೌಂಡೇಶನ್ ಜನಪ್ರತಿನಿಧಿಗಳ, ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲು ಉದ್ದೇಶಿಸಿದೆ. ನೋಂದಾವಣೆ ಮಾಡಲು 9772294246 ನಂಬರಿಗೆ ಮಿಸ್ ಕಾಲ್ ಕೊಡಬಹುದು.


ಹೆಚ್ಚಿನ ಮಾಹಿತಿಗಾಗಿ: ವಿದ್ಯಾಮಾತಾ ಅಕಾಡೆಮಿ, ಹಿಂದುಸ್ಥಾನ್ ಕಾಂಪ್ಲೆಕ್ಸ್ , ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು, ದ.ಕ.

ಫೋನ್ ನಂ.: 9620468869 /9148935808

Ad Widget

Ad Widget

Ad Widget

Ad Widget

Ad Widget
Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: