Ad Widget

ಮಂಗಳೂರು : ಕುಕ್ಕರ್ ನಲ್ಲಿ ಬಾಂಬ್ ತಂದಿದ್ದ ಆರೋಪಿ ಮಂಗಳೂರಿನ ಹಲವು ಭಾಗಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ- ನಟೋರಿಯಸ್ ಕ್ರಿಮಿನಲ್ ಹಿನ್ನಲೆಯ ಈತ ತುಂಗಾ ಬ್ಲಾಸ್ಟ್ ಹಾಗೂ ಉಗ್ರ ಪರ ಗೋಡೆ ಬರಹದ ಪ್ರಮುಖ ಆರೋಪಿ

WhatsApp Image 2022-11-21 at 13.28.32
Ad Widget

Ad Widget

Ad Widget

Mangalore Bomb Blast : ಮಂಗಳೂರು : ನ 21 : ಶಾರೀಕ್ ಆರೋಗ್ಯ ಮೊಹಮ್ಮದ್‌  ಶಾರೀಕ್ (24 )  ಮಂಗಳೂರಿನ ಹಲವು ಭಾಗಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕಛೇರಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಢಿ ನಡೆಸಿ ಮಹತ್ವದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

Ad Widget

Ad Widget

Ad Widget

Ad Widget

Ad Widget

ನ 19 ರ ಸಂಜೆ   ಮಂಗಳೂರಿನ ನಾಗುರಿ ಎಂಬಲ್ಲಿ  ಚಲಿಸುತ್ತಿದ್ದ  ಆಟೋದಲ್ಲಿ  ನಡೆದ ಕುಕ್ಕರ್ ಬಾಂಬ್ ಸ್ಫೋಟದ  ಕುರಿತಾದ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರು ಮಹತ್ವದ ಬೆಳವಣಿಗೆ ಸಾಧಿಸಿದ್ದಾರೆ. ಸ್ಪೋಟದಲ್ಲಿ ಆಟೋದಲ್ಲಿ  ಚಲಿಸುತ್ತಿದ್ದ ಪ್ರಯಾಣಿಕ ಮೊಹಮ್ಮದ್‌  ಶಾರೀಕ್ ಹಾಗೂ ಆಟೋ ಚಾಲಕ ಪುರುಷೋತ್ತಮ್ ಪೂಜಾರಿ (60) ಯವರಿಗೆ ಗಾಯಗಳಾಗಿತ್ತು.ಅವರಿಬ್ಬರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.   ಪುರುಷೋತ್ತಮ್‌ ಅವರು ನೀಡಿದ ದೂರಿನಂತೆ ಆರೋಪಿ ಪ್ರಯಾಣಿಕನ ವಿರುದ್ದ  Explosive Substances Act ರಲ್ಲಿ ಪ್ರಕರಣ ದಾಖಲಾಗಿತ್ತು.    

Ad Widget

Ad Widget

Ad Widget

Ad Widget

Ad Widget

ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಯ ವಿರುದ್ಧ ಮಂಗಳೂರಿನಲ್ಲಿ ಎರಡು ಮತ್ತು ಶಿವಮೊಗ್ಗದಲ್ಲಿ ಒಂದು ಒಟ್ಟು ಮೂರು ಪ್ರಕರಣಗಳಿವೆ. ಮಂಗಳೂರಿನಲ್ಲಿ ದಾಖಲಾದ ಎರಡು ಪ್ರಕರಣಗಳು ಉಗ್ರ ಸಂಘಟನೆಯ ಪರ ಗೋಡೆ ಬರಹ ಬರೆದುದರ ಬಗ್ಗೆಯಾಗಿತ್ತು.   ಎರಡು ಪ್ರಕರಣಗಳಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರನೇ ಪ್ರಕರಣವೊಂದರಲ್ಲಿ ನಾಪತ್ತೆಯಾಗಿದ್ದ ಆತನಿಗಾಗಿ ಪೊಲೀಡರು ಹುಡುಕಾಟ ನಡೆಸಿದ್ದರು. ಶಿವಮೊಗ್ಗದಲ್ಲಿ ನಡೆದ ತುಂಗಾ ಬ್ಲಾಸ್ಟ್‌ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ.

ಕುಕ್ಕರ್‌ ಬಾಂಬ್‌ ಜತೆಗೆ ಆರೋಪಿ ಶಾರಿಕ್‌ – ಕೃತ್ಯಕ್ಕೂ ಮೊದಲು ಪೋಸ್‌ ನೀಡಿದ ಫೋಟೊ

ಈತನ ಮೇಲೆ ಮಂಗಳೂರಿನ ಪೂರ್ವ ಮತ್ತು ಉತ್ತರ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 27-11-2020 ರಂದು ಮಂಗಳೂರು ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಪ್ರಚೋದನಾಕಾರಿ ಗೋಡೆ ಬರಹ ಬರೆದಿದ್ದು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 28-11-2020 ರಂದು ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ ಪ್ರಚೋದನಾಕಾರಿ ಗೋಡೆ ಬರಹ ಬರೆದಿದ್ದು ಪ್ರಕರಣ ದಾಖಲಾಗಿರುತ್ತದೆ. ಮೇಲಿನ ಎರಡು ಪ್ರಕರಣದಲ್ಲಿ ದಸ್ತಗಿರಿಯಾಗಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುತ್ತಾನೆ.

Ad Widget

Ad Widget

Ad Widget

Ad Widget

ದಿನಾಂಕ:19-09-2022 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ UNLAWFUL ACTIVITIES (PREVENTION) ACT 1967 ಪ್ರಕರಣದಲ್ಲಿ ಈತನು 1ನೇ ಆರೋಪಿಯಾಗಿರುತ್ತಾನೆ. ಪ್ರಕರಣ ದಾಖಲಾದ ನಂತರ ಆರೋಪಿತನು ಅಲ್ಲಿಂದ ತಲೆಮರೆಸಿಕೊಂಡು ಪರಾರಿಯಾಗಿರುತ್ತಾನೆ

 ಪ್ರಕರಣದ ಬಗ್ಗೆ ಎಡಿಜಿಪಿ ಹೇಳಿದ್ದೇನು ?

“ ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ್ ಪೂಜಾರಿಯವರಿಗೆ ಸುಟ್ಟ ಗಾಯಗಳಾಗಿವೆ.ಶಂಕಿತ ಉಗ್ರ ಶಾರೀಕ್ ಗೆ 45% ದಷ್ಟು ಸುಟ್ಟ ಗಾಯಗಳಾಗಿವೆ.ಶಾರೀಕ್  ಜೇಬು‌ನಲ್ಲಿದ್ದ ಆಧಾರ್ ಕಾರ್ಡ್ ನಲ್ಲಿ ಹೆಸರು ವಿಳಾಸ ಫೇಕ್ ಮಾಡಲಾಗಿದೆ..ಪ್ರೇಮ್ ರಾಜ್ ಹೆಸರಿನ ವ್ಯಕ್ತಿಯ ಆಧಾರ್ ಕಾರ್ಡ್ ನ್ನು ಹುಬ್ಬಳ್ಳಿ-ಧಾರಾವಾಡದ ವಿಳಾಸದಲ್ಲಿ ಮಾಡಲಾಗಿತ್ತು.ಆದೆ ಪ್ರೇಮ್ ರಾಜ್ ಹುಬ್ಬಳಿ ಬಿಟ್ಟು ಮೂರು ವರ್ಷಗಳಾಗಿವೆ.ನಿಜವಾದ ಪ್ರೇಮ್ ನನ್ನು ನಾನೇ ಸಂಪರ್ಕ ಮಾಡಿದ್ದೇನೆ.ಆತ ತುಮಕೂರು ರೈಲ್ವೇಯಲ್ಲಿ ಗ್ಯಾಂಗ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ.ಈತನ ಆಧಾರ್ ಕಾರ್ಡ್ ಆರು ತಿಂಗಳ ಹಿಂದೆ ಮಿಸ್ ಆಗಿದ್ದು,ಈತನ ಆಧಾರ್ ಕಾರ್ಡ್ ನ್ನು ಶಾರೀಕ್ಆಧಾರ್ ಕಾರ್ಡ್ ಫೇಕ್ ಮಾಡಿಸಿ ಫೋಟೋ ಹಾಕಿಸಿಕೊಂಡಿದ್ದಾನೆ  ಎಂದು ಎಡಿಜಿಪಿ ವಿವರಿಸಿದರು.

ಶಾರೀಕ್ ಗುರುತು ಪತ್ತೆ:

ಶಾರೀಕ್ ಗುರುತು ಪತ್ತೆಯಾಗುವ ಮುನ್ನ ಶಾರೀಕ್ ಯಾರೂ ಎಂಬುವುದಕ್ಕೆ ಭಾರೀ ತಲೆಕೆಡೆಸಿಕೊಂಡಿದ್ದೇವೆ.ಶಾರೀಕ್ ಸೆ.20ರಿಂದ ಮೈಸೂರಿನಲ್ಲಿ ಮೋಹನ್ ಕುಮಾರ್ ಎಂಬುವವರ ಬಾಡಿಗೆ ಮನೆ ಪಡೆದುಕೊಂಡಿದ್ದ.ಅಲ್ಲಿ ಇದೇ ಫೇಕ್ ಆಧಾರ್ ಕಾರ್ಡ್ ನ್ನು ಕೊಟ್ಟಿದ್ದ.ಮೈಸೂರಿನಲ್ಲಿ ಮೊಬೈಲ್ ರಿಪೇರಿ ಟ್ರೈನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಅಂತಾ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಅಗಸ್ಟ್  15 2022ರಲ್ಲಿ ಶಿವಮೊಗ್ಗ ಗಲಾಟೆ ಸಂಧರ್ಭದಲ್ಲಿ ಶಿವಮೊಗ್ಗ ದಲ್ಲಿ ಜಬೀವುಲ್ಲಾ ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು.ಈ ಸಂಧರ್ಭದಲ್ಲಿ ಶಾರೀಕ್ ಅಲರ್ಟ್ ಆಗಿ ಊರು ಬಿಟ್ಟು ಹೋಗಿದ್ದ‌ .ಕೊಯಂಬತ್ತೂರು, ಕೇರಳ,ಮೈಸೂರು ಗೆ ಹೋಗಿದ್ದಾನೆ. ಶಾರೀಕ್ ಕುಕ್ಕರ್ ಬಾಂಬ್ ಸ್ಫೋಟ ಮಾಡಿದ ಬಳಿಕ ಆತನ ದೇಹಕ್ಕೆ ಸುಟ್ಟ ಗಾಯಗಳಾಗಿವೆ.ಮುಖ ಸುಟ್ಟು ಹೋಗಿದೆ.ಈಗಿನ ಮುಖ ಮತ್ತು ಹಳೇಯ ಫೋಟೋ ಹೊಲಿಕೆ ಮಾಡಿ ನೋಡಿದಾದ ಸ್ಪಷ್ಟವಾದ ಗುರುತು ಲಭ್ಯ ಆಗಿರಲಿಲ್ಲ.ಹೀಗಾಗಿ ಆತನ ಸಂಬಂಧಿಕರಿಗೆ ಮನವಿ ಮಾಡಿ ಗುರುತಿಸಿದ್ದೇವೆ.ಶಾರೀಕ್ ನ ಮಲತಾಯಿ ಸಬನಾ,ಅಕ್ಕ ಆಫೀಯಾ, ಚಿಕ್ಕಮ್ಮ ಯಾಸ್ಮೀನ್ ಆತನ ಗುರುತು ಪತ್ತೆ ಮಾಡಿದ್ದೇರೆ.ಅವರ ಜೊತೆಯೂ ನಾವು ಮಾತನಾಡಿದ್ದೇವೆ.ಅವರು ಬುದ್ದಿ ಮಾತು ಹೇಳಿದ್ದರೂ ಶಾರೀಕ್ ಸರಿಯಾಗಿಲ್ಲ ಅಂತಾ ಹೇಳಿದ್ದಾರೆ..

ಶಾರೀಕ್ ವಿರುದ್ದ 2020 ರಲ್ಲಿ ಮಂಗಳೂರಿನ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಗ್ರ ಸಂಬಂಧ ಗೋಡೆ ಬರಹ ಬರೆದು ಸಿಕ್ಕಿಬಿದ್ದಿದ್ದ..ಈ ಪ್ರಕರಣದ ಎ೧ ಆರೋಪಿಯಾಗಿ ಶಾರೀಕ್,ಎ೨ಮಾಝ್,ಎ೩ಅರಾಫತ್ ಅಲಿ,ಎ೪ ಆರೋಪಿಯಾಗಿಸಾದತ್ ಅಲಿಯ  ಬಂಧನವಾಗಿತ್ತು. ಈ ಪ್ರಕರಣದ ಆರೋಪಿಅರಾಫತ್ ಅಲಿ ದುಬೈ ನಲ್ಲಿ ತಲೆಮರೆಸಿಕೊಂಡಿದ್ದಾನೆ ಅಂತಾ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಪ್ರಕರಣ ಸಂಬಂಧ ಸೆ.19ರಂದು ಜಬೀವುಲ್ಲಾ ವಿಚಾರಣೆ ಮಾಡುವ ಸಂಧರ್ಭದಲ್ಲಿ ಶಾರೀಕ್ ಹೆಸರು ಬಾಯಿಬಿಟ್ಟಿದ್ದಾನೆ.ತುಂಗಾ ತೀರ ಬ್ಲಾಸ್ಟ್ ಮಾಡಿದವರಲ್ಲಿ ಶಾರೀಕ್ ಪಾತ್ರ ದೊಡ್ಡದಿದೆ.ಶಾರೀಕ್ ಮೈಸೂರು ಬಾಡಿಗೆ ಮನೆಯಲ್ಲಿ 151ಮ್ಯಾಚ್ ಬಾಕ್ಸ್,ಬ್ಯಾಟರಿ,ನೆಟ್, ಬೋಲ್ಟ್ ಸರ್ಪೇಸ್ ಅಂಶಗಳು ಸಿಕ್ಕಿದೆ ಅಂತಾ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ..

ನವೆಂಬರ್ 19 ರಂದು ಶಾರೀಕ್ ಕುಕ್ಕರ್ ಬಾಂಬ್ ನ್ನು ಹಿಡಿದುಕೊಂಡು ಮೈಸೂರು, ಮಡಿಕೇರಿ ಮಾರ್ಗ ವಾಗಿ ಬಸ್ ನಲ್ಲಿ ಬಂದು ಮಂಗಳೂರಿ ನಾಗುರಿಯಲ್ಲಿ ಬಸ್ ನಿಂದ ಇಳಿದಿದ್ದಾನೆ.ಸೆಪ್ಟೆಂಬರ್ 8 ರಂದೇ ಮಂಗಳೂರಿಗೆ ಬಂದು ನಗರದ ಕೆಲವು ಏರಿಯಾಗಳ ಪರಿಶೀಲನೆ ಮಾಡಿದ್ದಾನೆ.ಈ ಬಗ್ಗೆಯೂ ತನಿಖೆ ಮಾಡೋದಾಗಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಕೊಯಂಬತ್ತೂರು ನಲ್ಲಿ ಶಾರೀಕ್

ಸುರೇಂದ್ರ ಹೆಸರಲ್ಲಿ ಸಿಮ್ ಕಾರ್ಡ್ ಪಡೆದಿದ್ದಾರೆ.ಕೊಯಂಬತ್ತೂರುನಲ್ಲಿ ಅರುಣ್ ಕುಮಾರ್ ಗೌಲಿ ಯ ಫೇಕ್ ಅಧಾರ್ ಮಾಡಿಸಿದ್ದಾರೆ.ಅರುಣ್ ಕುಮಾರ್ ಕೊಯಂಬತ್ತೂರು ನಿವಾಸಿಯಾಗಿದ್ದು ಸುಮಾರು ವರ್ಷಗಳ ಹಿಂದೆಯೇ ಕೊಯಂಬತ್ತೂರು ತೊರೆದಿದ್ದರು.ಆಧಾರ್ ಕಾರ್ಡ್ ಫೇಕ್ ಮಾಡಿದರ ಬಗ್್ಎ ಪ್ರತ್ಯೇಕ ಪ್ರಕರಣ ದಾಖಲಿಸೋದಾಗಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ..

ಈ ಪ್ರಕರಣದ ಸಂಬಂಧ ಮೈಸೂರುನಲ್ಲಿ ಇಬ್ಬರು,ಮಂಗಳೂರಿನಲ್ಲಿ ಒರ್ವ ನನ್ನು ವಶಕ್ಕೆ ಪಡೆದಿದ್ದೇವೆ‌.ಪ್ರಕರಣ ದ ಸಂಬಂಧಿಸಿದಂತೆ ನಾಲ್ಕು ಕಡೆ ಶಿವಮೊಗ್ಗದಲ್ಲಿ ಮಂಗಳೂರಿನಲ್ಲಿ ಒಂದು ಕಡೆ,ಮೈಸೂರಿನಲ್ಲಿ ಎರಡು ಕಡೆಗಳಲ್ಲಿ ದಾಳಿ ಮಾಡಿರೋದಾಗಿ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆರೋಪಿ‌ ಶಾರೀಕ್ ಮನೆಯನ್ನು ಶೋಧಿಸಿದಾಗ ಸಾಕಷ್ಟು ಸ್ಫೋಟಕ ಸಾಮಗ್ರಿಗಳು, ಬೆಂಕಿಕಡ್ಡಿಗಳು, ನಟ್ ಬೋಲ್ಟ್‌ಗಳು, ಸರ್ಕ್ಯೂಟ್‌ಗಳು ಪತ್ತೆಯಾಗಿವೆ. ಈ ಪೈಕಿ ಕೆಲವು ವಸ್ತುಗಳನ್ನು ಆತ ಆನ್‌ಲೈನ್‌ನಲ್ಲಿ ಮತ್ತು ಇನ್ನೂ ಕೆಲವು ವಸ್ತುಗಳನ್ನು ನೇರವಾಗಿ ಖರೀದಿ ಮಾಡಿದ್ದಾನೆ. ನಾವು ಅದರ ಮೂಲಗಳನ್ನು ತಿಳಿದುಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟಪಡಿಸಿದರು

ಶಾರೀಕ್ ಬ್ಯಾಂಕ್ ಅಕೌಂಟ್ ಪರಿಶೀಲನೆ ಮಾಡುತ್ತೇವೆ.ಶಾರೀಕ್ ನ ಗ್ರೂಪ್ ಉಗ್ರ ಕೆಲಸದಿಂದ ಪ್ರಭಾವಿತವಾಗಿದೆ‌.ಇವರಿಗೆ ಹಣದ ಮೂಲದ ಬಗ್ಗೆ ತನಿಖೆ ಮಾಡುತ್ತೇವೆ.ಅಲ್ಲದೇ ಶಾರೀಕ್ ಮೈಸೂರು ಬಿಟ್ಟು ಬೇರೆ ಕಡೆ ಶೆಲ್ಟರ್ ಪಡೆದ ಬಗ್ಗೆಯೂ ತನಿಖೆ ಮಾಡುತ್ತೇವೆ.ಎಫ್‌ಎಸ್ ಎಲ್ ಸೇರಿದಂತೆ ಬೇರೆ ಬೇರೆ ತನಿಖಾ ತಂಡಗಳನ್ನು ರಚಿಸಿದ್ದೇವೆ ಅಂತಾ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ..

ದೊಡ್ಡ ಅನಾಹುತ ತಪ್ಪಿತ್ತು

ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿದ್ದರಿಂದ ದೊಡ್ಡ ಮಟ್ಟದಅನಾಹುತ ತಪ್ಪಿದೆ.ಬೇರೆ ಕಡೆ ಬ್ಲಾಸ್ಟ್ ಆಗಿದ್ದರೆ ದೊಡ್ಡ ಮಟ್ಟದ ಡ್ಯಾಮೇಜ್ ಆಗಬಹುದಿತ್ತು.ಕರಾವಳಿಯಲ್ಲಿ ಮೂರು ತಿಂಗಳಿನಿಂದ ಶಾಂತಿ ಇದೆ.ಸಣ್ಣ ವಿಷಯ ಆದರೂ ಇಲ್ಲಿ ಕಮ್ಯುನಲ್ ವಿಚಾರವನ್ನು ಪಡೆದುಕೊಳ್ಳುತ್ತದೆ..ಉದ್ವಿಗ್ನ ವಾತಾವರಣ ನಿರ್ಮಾಣ ಆಗೋದನ್ನು ತಪ್ಪಿದೆ.ಬಹಳ ಜನರ ಜೀವ ರಕ್ಷಣೆ ಆಗಿದೆ.ದೇವರಿಗೆ ಧನ್ಯವಾದ ಹೇಳುತ್ತೇವೆ ಅಂತಾ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ..

ಶಾರೀಕ್ ಆರೋಗ್ಯ ಈಗ ಹೇಗಿದೆ ?

ಶಾರೀಕ್ ಆರೋಗ್ಯ ಸ್ಥಿರವಾಗುತ್ತಿದೆ.ಆತನನ್ನು ಪ್ರಶ್ನೆ ಮಾಡುವ ಸ್ಟೇಜ್ ಗೆ ತರಬೇಕಾಗಿದೆ.ಇದಕ್ಕೆಕೆಲವು ದಿನ ಬೇಕಾಗುತ್ತದೆ.ಆತ ಬದುಕೋದು ಬಹಳ ಪ್ರಮುಖವಾಗಿದೆ.ಸಣ್ಣ ಸೋಂಕು ಹರಡಿದರೂ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.ಹೀಗಾಗಿ ಹೆಚ್ಚಿನ ನಿಗಾ ವಹಿಸಿದ್ದೇವೆ ಅಂತಾ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ..

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: