ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ (Raj Kundra) ವಿರುದ್ಧ ಮಹಾರಾಷ್ಟ್ರದ ಸೈಬರ್ ಪೊಲೀಸರು (Cyber Police) ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.. ಅದರಲ್ಲಿ ರಾಜ್ ಕುಂದ್ರಾ ಮುಂಬೈನ ಪಂಚತಾರಾ ಹೋಟೆಲ್ಗಳಲ್ಲಿ (Panchatara Hotel) ನಟಿಯರನ್ನು ಬಳಸಿ ಬಯೋ ತಯಾರಿಸುತ್ತಿದ್ದರು ಎಂಬ ಸ್ಪೋಟಕ ವಿಷಯ ಬಹಿರಂಗವಾಗಿದೆ.
ನಟಿ ರೂಪದರ್ಶಿಯರಾದ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ (Poonam Pandey), ಚಿತ್ರ ನಿರ್ಮಾಪಕ ಮೀತಾ ಜುಂಜುನ್ವಾಲಾ ಹಾಗೂ ಕ್ಯಾಮೆರಾ ಮ್ಯಾನ್ ರಾಜು ದುಬೆ ಎಂಬವರು ಕುಂದ್ರಾ ಜೊತೆ ಸೇರಿಕೊಂಡು ಪಂಚತಾರಾ ಹೋಟೆಲ್ಗಳಲ್ಲಿ ಅಶ್ಲೀಲ ಸಿನಿಮಾಗಳನ್ನು (Cinema) ಚಿತ್ರಿಸುತ್ತಿದ್ದರು. ಇದನ್ನು ಹಣಕಾಸು ಲಾಭಕ್ಕೆ ಒಟಿಟಿ (OTT) ಪ್ಲಾಟ್ಫಾರ್ಮ್ಗಳು ಬಿಡುಗಡೆ ಮಾಡುತ್ತಿದ್ದವು. ಪೊಲೀಸರು (Police) ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
`ಪ್ರೇಮ್ ಪಗ್ಲಾನಿ’ ಎಂಬ ಅಶ್ಲೀಲ ವೆಬ್ಸೀರಿಸ್ ತಯಾರಿಸಿ, ಒಟಿಟಿಗೆ ಅಪ್ಲೋಡ್ ಮಾಡಲಾಗಿತ್ತು. ಪೂನಂ ಪಾಂಡೆ `ದಿ ಪೂನಂ ಪಾಂಡೆ’ ಎಂಬ ಸ್ವಂತ ಆ್ಯಪ್ ಹೊಂದಿದ್ದರು. ತನ್ನ ವೀಡಿಯೋ ಸೆರೆಹಿಡಿದು ಕುಂದ್ರಾ ಸಹಾಯದಿಂದ ಅದನ್ನು ಬಿಡುಗಡೆ ಮಾಡುತ್ತಿದ್ದರು.

2021ರ ಫೆಬ್ರವರಿಯಲ್ಲಿ ಮಧ್ ದ್ವೀಪದ ಬಂಗಲೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆ ಬಯಲಾಗಿತ್ತು. ಕುಂದ್ರಾ 100ಕ್ಕೂ ಹೆಚ್ಚು ಅಶ್ಲೀಲ ಸಿನಿಮಾಗಳನ್ನು ತಯಾರಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಬಳಿಕ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. 2 ತಿಂಗಳು ಜೈಲು ಬಳಿಕ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಿದ್ದರು.