ಮಂಗಳೂರು : ನ 21: ಮಂಗಳೂರಿನಲ್ಲಿ ನಡೆದ ಆಟೋ ಬಾಂಬ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡಿದ ಶಂಕಿತ ಭಯೋತ್ಪಾದಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೊಗಳು ಮಾಧ್ಯಮಗಳಿಗೆ ದೊರೆತಿದೆ. ಈತ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಸ್ಫೋಟ ಸಂಭವಿಸಿತ್ತು.ಗಾಯಾಳುವನ್ನು ಮಹಮ್ಮದ್ ಶಾರೀಕ್ ಎಂದು ಗುರುತಿಸಲಾಗಿದೆ. ಈತನ ದೇಹ ಶೇ 45 ರಷ್ಟು ಸುಟ್ಟು ಹೋಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ನಿನ್ನೆ ರಾತ್ರಿ ಮಾಹಿತಿ ನೀಡಿದ್ದರು.
ದಕಿಣ ಏಷ್ಯಾದ ಪ್ರಮುಖ ವಾರ್ತಾ ಏಜೆನ್ಸಿ ANI ಚಿಕಿತ್ಸೆ ಪಡೆಯುತ್ತಿರುವ ಆತನ ಪೋಟೊವನ್ನು ಟ್ವೀಟ್ ಮಾಡಿದ್ದು ಈತನ ಗುರುತು ಪತ್ತೆಗಾಗಿ ಆತನ ಕುಟುಂಬಸ್ಥರು ಶಿವಮೊಗ್ಗದಿಂದ ಬಂದಿರುವುದಾಗಿಯೂ ಆದು ತಿಳಿಸಿದೆ . ಆರೋಪಿ ಶಾರೀಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು ಎಂದು ಹೇಳಲಾಗುತ್ತಿದೆ. 2020 ರಲ್ಲಿ ಮಂಗಳೂರಿನಲ್ಲಿ ಕಂಡು ಬಂದ ವಿವಾದಾತ್ಮಕ ಗೋಡೆ ಬರಹ ಪ್ರಕರಣದ ಮೂವರು ಆರೋಪಿಗಳ ಪೈಕಿ ಈತನು ಒಬ್ಬನಾಗಿದ್ದು ರಾಜ್ಯ ಮಾಧ್ಯಮಗಳು ವರದಿ ಮಾಡಿವೆ . ಆದರೇ ಈ ಬಗ್ಗೆ ಪೊಲೀಸ್ ಇಲಾಖೆ ತುಟಿ ಬಿಚ್ಚಿಲ್ಲ.
Mangaluru autorickshaw blast | Sharik, accused in the matter, admitted to Father Muller Hospital in Mangaluru. #Karnataka pic.twitter.com/pwM4bqjKkU
— ANI (@ANI) November 21, 2022
• ಆರೋಪಿ ಶಾರೀಕ್ ಮೈಸೂರಿನಿಂದ ಬಾಂಬ್ ತಯಾರಿಸಿ ತಂದಿದ್ದ ಎನ್ನಲಾಗುತ್ತಿದೆ. ಅಲ್ಲಿ ತುಮಕೂರಿನ ವ್ಯಕ್ತಿಯೊಬ್ಬರು ಕಳೆದು ಕೊಂಡಿದ್ದ ಆಧಾರ್ ಕಾರ್ಡ್ ಬಳಸಿ ರೂಮ್ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದರು. ಮೈಸೂರಿನಿಂದ ಬಸ್ ಮೂಲಕ ಮಂಗಳೂರು ತಲುಪಿದ್ದು, ಮಂಗಳೂರು ಹೊರವಲಯದ ಪಡೀಲ್ ನಲ್ಲಿ ಬಸ್ ಇಳಿದು ಪಂಪ್ ವೆಲ್ ಕಡೆ ನಡೆದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಡೆದು ಕೊಂಡು ಪಂಪ್ ವೆಲ್ ನತ್ತ ತೆರಳುತ್ತಿದ್ದಾಗ ಆರೋಪಿ ರಸ್ತೆ ಮದ್ಯೆ ಆಟೋ ಹತ್ತಿದ್ದು, 3 ಶರ್ಟ್ ಹಾಕಿ ಕೊಂಡು ಬಂದಿದ್ದ ಎಂದು ವರದಿಯಾಗಿದೆ. ಆರೋಪಿಯು ಕುಕ್ಕರ್ ನಲ್ಲಿ ಬಾಂಬ್ ಹಿಡ್ಕೊಂಡು ಬೇರೆಲ್ಲಿಯೂ ಬಾಂಬ್ ಸ್ಪೋಟಿಸಲು ತೆರಳುತ್ತಿದ್ದಾಗ ಅಚಾನಕ್ ಆಗಿ ಸ್ಪೋಟ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸ್ಪೋಟದಿಂದ ಆರೋಪಿಯು ಗಂಭೀರವಾಗಿ ಗಾಯಗೊಂಡಿದ್ದು ಶಂಕಿತ ಶಾರೀಕ್ ಮಂಗಳೂರಿನ ಫಾದರ್ಆ ಮುಲ್ಲಾರ್ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Karnataka | Family of Mangaluru autorickshaw blast accused, Sharik arrives at Father Muller Hospital in Mangaluru where he is admitted. pic.twitter.com/3EU73mnckZ
— ANI (@ANI) November 21, 2022

ಇನ್ನು ಶಿವಮೊಗ್ಗ ತುಂಗಾ ನದಿ ದಡದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ನಟೋರಿಯಸ್ ಕ್ರಿಮಿನಲ್ ಶಾರೀಕ್ ಎಂಬಾತನೇ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಮಾಡಿರುವುದು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
