Connect with us

ಮಂಗಳೂರು

Mangalore Blast | ಮಂಗಳೂರಿನ ಸ್ಪೋಟಕ್ಕೆ ಬಲಿಪಶುವಾದ ರಿಕ್ಷಾ ಚಾಲಕನಿಗೆ ಈ ರಿಕ್ಷಾವೇ ಜೀವನಾಧಾರವಾಗಿತ್ತು : ಕಿರಿ ಮಗಳನ್ನು ಸಿಎ ಓದಿಸುತ್ತಾ ಹಿರಿ ಮಗಳ ಮದುವೆ ಖರ್ಚಿಗಾಗಿ ರಾತ್ರಿ ಹಗಲೆನ್ನದೇ ದುಡಿಯುತಿದ್ದವರ ಜೀವನ ಕಸಿದುಕೊಂಡ ಶಂಕಿತ ಉಗ್ರ

Ad Widget

ಇಪ್ಪತ್ತೈದು ವರ್ಷಗಳಿಂದ ತನ್ನ ಪಾಡಿಗೆ ತಾನು ರಿಕ್ಷಾ ಚಾಲಕನಾಗಿ ದುಡಿದು ಕುಟುಂಬದ ಬಂಡಿಯನ್ನು ಸಾಗಿಸುತ್ತಿದ್ದರು. ರಿಕ್ಷಾದಲ್ಲೇ ದುಡಿದು ಇಬ್ಬರು ಹೆಣ್ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದರು. ಆ ರಿಕ್ಷಾವೇ ಮಂಗಳೂರಿನ ಶಂಕಿತ ಉಗ್ರನ ಬಾಂಬ್‌ ದಾಳಿಗೆ ಬಲಿಪಶುವಾಗಿದೆ (Mangalore Blast) . ರಿಕ್ಷಾದ ಮಾಲೀಕ ಪುರುಷೋತ್ತಮ ಪೂಜಾರಿ(55) ಅವರು ಸುಟ್ಟ ಗಾಯದೊಂದಿಗೆ ಆಸ್ಪತ್ರೆ ಸೇರಿದ್ದಾರೆ.

Ad Widget

Ad Widget

Ad Widget

Ad Widget

ಗೋರಿಗುಡ್ಡ ನಿವಾಸಿಯಾದ ಪುರುಷೋತ್ತಮ ಪೂಜಾರಿ ಅವರು ಶನಿವಾರ ಸಂಜೆ 5.29ರ ವೇಳೆ ಮಂಗಳೂರು ರೈಲ್ವೆ ನಿಲ್ದಾಣದಿಂದ ಕಂಕನಾಡಿ ಬರುತ್ತಿರುವಾಗ ಶಂಕಿತ ಭಯೋತ್ಪಾದಕ ಶಾರೀಕ್‌ ಪಂಪ್‌ವೆಲ್‌ಗೆ ಕರೆದುಕೊಂಡು ಬಿಡಲು ಹೇಳಿದ್ದಾನೆ. ಆತನನ್ನು ರಿಕ್ಷಾದಲ್ಲಿ ಕರೆದುಕೊಂಡು ಬರುತ್ತಿರುವಾಗ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡು ಇಬ್ಬರು ಗಾಯಗೊಂಡಿದ್ದಾರೆ.

Ad Widget

Ad Widget

ಪತ್ನಿ, ಇಬ್ಬರು ಹೆಣ್ಮಕ್ಕಳ ಜತೆ ಪುರುಷೋತ್ತಮ ಗೋರಿಗುಡ್ಡ ಬಳಿ ವಾಸವಿದ್ದಾರೆ. ಅವರ ಹಿರಿಯ ಮಗಳು ಖಾಸಗಿ ಆಸ್ಪತ್ರೆಯಲ್ಲಿಅಕೌಂಟೆಂಟ್‌ ಆಗಿದ್ದರೆ, ಕಿರಿಯ ಮಗಳು ಸಿಎ ಪರೀಕ್ಷೆ ಬರೆದಿದ್ದಾರೆ. ಪತ್ನಿ ಮನೆಯೊಡತಿಯಾಗಿದ್ದಾರೆ. ಪುರುಷೋತ್ತಮ ಅವರು 25 ವರ್ಷಗಳಿಂದ ರಿಕ್ಷಾದಲ್ಲೇ ದುಡಿದು ಕುಟುಂಬವನ್ನು ಮುನ್ನಡೆಸುತ್ತಿದ್ದರು. ಇದೀಗ ರಿಕ್ಷಾವನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದು, ಭಯೋತ್ಪಾದಕ ಕೃತ್ಯವಾದ ಕಾರಣ ಸದ್ಯ ಬಿಡುಗಡೆಯಾಗುವ ಭಾಗ್ಯವಿಲ್ಲ.

Ad Widget

Ad Widget
ಸ್ಪೋಟ ಸಂಭವಿಸಿದ ತಕ್ಷಣ ಗಾಯಗೊಂಡ ಶಂಕಿತ ಉಗ್ರನ ದೃಶ್ಯ

ಹಿರಿಯ ಮಗಳಿಗೆ ಮದುವೆ ಸಂಬಂಧ ಕೂಡಿ ಬಂದಿದ್ದು, ಮಾರ್ಚ್‌ನಲ್ಲಿ ಮದುವೆ ನಿಗದಿಯಾಗಿದೆ. ಇದಕ್ಕೆ ಹಣ ಹೊಂದಿಸಿಕೊಳ್ಳಲು ಪುರುಷೋತ್ತಮ ಪೂಜಾರಿಯವರು ರಾತ್ರಿ-ಹಗಲೆನ್ನದೆ ದುಡಿಯುತ್ತಿದ್ದರು. ಆದರೆ, ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡ ಕಾರಣ ಕುಟುಂಬದ ಆದಾಯಕ್ಕೆ ಹೊಡೆತ ಬಿದ್ದಿದೆ ಎನ್ನುತ್ತಾರೆ ಕಾರ್ಪೊರೇಟರ್‌ ಸಂದೀಪ್‌ ಗರೋಡಿ.

Ad Widget

Ad Widget

ತನ್ನ ತಂದೆಗೆ ರಿಕ್ಷಾ ಅಂದರೆ ಪಂಚಪ್ರಾಣವಾಗಿತ್ತು, ಅದರ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು ಅದೇ ಅವರ ಆದಾಯದ ಮೂಲವೂ ಆಗಿತ್ತು ಎನ್ನುತ್ತಾರೆ ಪುರುಷೋತ್ತಮರ ಮಗಳು.

ಮಂಗಳೂರು ಸ್ಪೋಟ- ಎಡಿಜಿಪಿ ಅಲೋಕ್ ಹೇಳಿಕೆ

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡ ಪುರುಷೋತ್ತಮ ಪೂಜಾರಿ ಅವರ ಚಿಕಿತ್ಸೆ ಹಾಗೂ ಅವರ ಮನೆಯ ಸಂಕಷ್ಟಕ್ಕೆ ಸಂಪೂರ್ಣ ನೆರವು ನೀಡುವುದಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಭರವಸೆ ನೀಡಿದ್ದಾರೆ. ಭಯೋತ್ಪಾದಕರ ದುಷ್ಕೃತ್ಯಕ್ಕೆ ಅಮಾಯಕರು ಮತ್ತು ಕುಟುಂಬ ಬಲಿಪಶುವಾಗುತ್ತಿದೆ. ತನ್ನಿಂದಾದಷ್ಟು ಅವರ ಕುಟುಂಬಕ್ಕೆ ನೆರವು ನೀಡಲು ಬದ್ಧನಾಗಿದ್ದೇನೆ. ಈ ಸ್ಫೋಟ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ಶಂಕಿತ ಉಗ್ರನಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

Click to comment

Leave a Reply

ಮಂಗಳೂರು

ಇಂದಿನಿಂದ ವೈದ್ಯಕೀಯ ವೃತ್ತಿ ಆರಂಭಿಸಬೇಕಾಗಿದ್ದ ಮಂಗಳೂರಿನ ಯುವ ವೈದ್ಯೆ ಡಾ.ಸ್ವಾತಿ ಶೆಟ್ಟಿ ಮಲಗಿದ್ದಲ್ಲೇ ಸಾವು

Ad Widget

ಮಂಗಳೂರು : ಇಂದಿನಿಂದ ವೈದ್ಯ ವೃತ್ತಿಗೆ ಹಾಜರಾಗಬೇಕಾಗಿದ್ದ ಯುವ ದಂತ ವೈದ್ಯೆ ಡಾ. ಸ್ವಾತಿ ಶೆಟ್ಟಿ (24) ಎಂಬವರು ಹಠತ್ತಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಪಾಂಡೇಶ್ವರ ಪಿಜಿಯಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

ನಗರದ ಎ.ಜೆ. ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಎ.16ರಂದು ನಗರದ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಲಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ತನಕ ಆಳ್ವರಬೆಟ್ಟು ಮನೆಯಲ್ಲಿ ತಂಗಿದ್ದ ಸ್ವಾತಿ ಸೋಮವಾರ ಸಂಜೆ ಮನೆಯಿಂದ ಪಾಂಡೇಶ್ವರದ ಪಿಜಿಗೆ ಬಂದು ತಂಗಿದ್ದರು.

Ad Widget

Ad Widget

ರಾತ್ರಿ ತಾಯಿ ತಂದೆ ಜತೆಗೆ ಮೊಬೈಲ್ ನಲ್ಲಿ ಮಾತನಾಡಿ ಬಳಿಕ ವಿಪರೀತ ತಲೆನೋವು ಎಂದೇಳಿ ಜತೆಗೆ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಫೋನ್ ಕರೆ ಕಟ್ ಮಾಡಿದ್ದರು.

Ad Widget

Ad Widget

ಪಕ್ಕದ ಸಹಪಾಠಿ ಕೂಡ ತಲೆನೋವು ಇರೋದ್ರಿಂದ ತೊಂದರೆ ಕೊಡೋದು ಬೇಡ ಎಂದು ಎಚ್ಚರಿಸಲಿಲ್ಲ ಎನ್ನಲಾಗಿದೆ. ಬೆಳಗ್ಗೆ ದೇಹ ತಣ್ಣಗಾಗಿದ್ದನ್ನು ಕಂಡು ಪಿಜಿ ಸೂಪರ್ ವೈಸರ್ ಮಾಹಿತಿ ನೀಡಿ ತಕ್ಷಣ ಆಂಬ್ಯುಲೆನ್ಸ್ ತರಿಸಿ ವೆನ್ ಲಾಕ್ ಗೆ ದಾಖಲಿಸುವಷ್ಟರಲ್ಲಿ ಸ್ವಾತಿಯ ಪ್ರಾಣಪಕ್ಷಿ ಹಾರಿಹೋಗಿತ್ತು.

Ad Widget

Ad Widget

ಅವಿವಾಹಿತೆಯಾಗಿರುವ ಸ್ವಾತಿ ಶೆಟ್ಟಿ ಅವರಿಗೆ ಪೋಷಕರು ಈ ವರ್ಷಾಂತ್ಯದೊಳಗೆ ಮದುವೆ ಮಾಡುವ ತಯಾರಿ ನಡೆಸಿದ್ದರು. ಅಪರೂಪಕ್ಕೊಮ್ಮೆ ತಲೆನೋವು ಬಿಟ್ರೆ ಬೇರೆ ಯಾವುದೇ ತೊಂದರೆ ಇರಲಿಲ್ಲ ಎನ್ನಲಾಗಿದೆ.

Continue Reading

ಮಂಗಳೂರು

Padmaraj R Poojary-ನಾರಾಯಣ ಗುರುಗಳು ಸ್ಥಾಪಿಸಿದ ಕ್ಷೇತ್ರದಲ್ಲಿ 27 ವರ್ಷ ಸೇವೆ ಸಲ್ಲಿಸಿದವ ಕಾಂಗ್ರೆಸ್ ನ ಅಭ್ಯರ್ಥಿಯಾಗುತ್ತಲೇ ಗುರುಗಳ ಪ್ರತಿಮೆಗೆ ಪ್ರಧಾನಿ ಹಾರ ಹಾಕಿದ್ದಾರೆ. ಜಿಲ್ಲೆಗೆ 14 ಸಲ ಭೇಟಿ ನೀಡಿರುವ ಅವರಿಗೆ ಗುರುಗಳು ಸ್ಥಾಪನೆ ಮಾಡಿದ ಕುದ್ರೋಳಿ ಎಲ್ಲಿದೆ ಎಂಬುದು ಗೊತ್ತಿರಲಿಕ್ಕಿಲ್ಲ : ಪದ್ಮರಾಜ್ ಆರ್ ಪೂಜಾರಿ

Ad Widget

ಪ್ರಧಾನಮಂತ್ರಿಗಳು 14 ಸಲ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಆದರೆ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪನೆ ಮಾಡಿದ ಕ್ಷೇತ್ರ ಎಲ್ಲಿದೆ ಎಂಬುದು ಗೊತ್ತಿರಲಿಕ್ಕಿಲ್ಲ. ಅವರಿಗೆ ಅದನ್ನು ಬಿಜೆಪಿಯವರು ಹೇಳಿರಲಿಕ್ಕಿಲ್ಲ. ಆದರೆ ಕಾಂಗ್ರೆಸ್‌ನ ಅಭ್ಯರ್ಥಿ ನಾರಾಯಣ ಗುರುಗಳು ಸ್ಥಾಪನೆ ಮಾಡಿದ ಕ್ಷೇತ್ರದಲ್ಲಿ 27 ವರ್ಷಗಳಿಂದ ಕೆಲಸ ಮಾಡಿದವರು. ಅವನಿಗೆ ರಾಷ್ಟ್ರೀಯ ಪಕ್ಷವೊಂದು ಅವಕಾಶನ್ನು ಕೊಟ್ಟಿದೆ ಎನ್ನುವಾಗ ಇಲ್ಲಿನ ಬಿಜೆಪಿಯವರು ಪ್ರಧಾನ ಮಂತ್ರಿಗಳಿಗೆ ನಾರಾಯಣ ಗುರುಗಳನ್ನು ನೆನಪಿಸುತ್ತಾರೆ. ನಾರಾಯಣ ಗುರುಗಳ ಪ್ರತಿಮೆಗೆ ಹಾರ ಹಾಕುವಂತಹ ಕೆಲಸವನ್ನು ಅವರು ಮಾಡುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಟೀಕಿಸಿದ್ದಾರೆ .

Ad Widget

Ad Widget

Ad Widget

Ad Widget

ಕೋಟಿ ಚೆನ್ನಯರ ವಂಶಸ್ಥರು
ನಾವು ನಾರಾಯಣ ಗುರುಗಳ ಕುಲದಿಂದ ಬಂದವರು. ಕೋಟಿ ಚೆನ್ನಯರ ವಂಶಸ್ಥರು. ತುಳುನಾಡು ದೈವ ದೇವರುಗಳ ನೆಲೆಬೀಡು. ಬಹಳಷ್ಟು ಪೂಜೆ ಪುರಸ್ಕಾರಗಳನ್ನು ಮಾಡುತ್ತಾರೆ. ಸುಮಾರು ಮಸೀದಿಗಳಿದೆ, ಚರ್ಚ್ ಗಳಿವೆ. ಇಲ್ಲಿ ಪೂಜೆ ನಡೆಯುತ್ತದೆ. ಜನರಿಗೆ ದೇವರು ಯಾವುದು ಸರಿ ಯಾವುದು ತಪ್ಪು ಅನ್ನುವುದನ್ನು ತಿಳಿಯುವ ಶಕ್ತಿ ದೇವರು ಕೊಟ್ಟಿದ್ದಾನೆ. ದೇವರು ಜನರ ಮೂಲಕ ಇದಕ್ಕೆ ಸರಿಯಾದ ಉತ್ತರ ಎ. 26ರಂದು ನಡೆಯಲಿರುವ ಚುನಾವಣೆಯಲ್ಲಿ ಕೊಡುತ್ತಾನೆ.

Ad Widget

Ad Widget

Rally ಕ್ಯಾನ್ಸಲ್ ಮಾಡಿದ್ದೇಕೆ ?
ಭಾರತ ದೇಶದ ಪ್ರಧಾನ ಮಂತ್ರಿಗಳಾಗಿ ಮೋದಿಯವರು ಮಂಗಳೂರಿಗೆ ಬಂದಿರುವುದನ್ನು ನಾವು ಸ್ವಾಗತಿಸುತ್ತೇವೆ. ನಿನ್ನೆ ಅವರು ಇಲ್ಲಿ ಬಂದು Rally ಮಾಡಬೇಕಿತ್ತು ಅದನ್ನು ಅವರು ಕ್ಯಾನ್ಸಲ್ ಮಾಡಿದ್ದಾರೆ. ಅದಕ್ಕೆ ಕಾರಣ ಮತ್ತು ಉದ್ದೇಶ ಏನು ಎನ್ನುವುದನ್ನು ಅವರೇ ಹೇಳಬೇಕು.

Ad Widget

Ad Widget

33 ವರ್ಷಗಳ ಸಾಧನೆಯೇನು?
33 ವರ್ಷಗಳಲ್ಲಿ ಬಿಜೆಪಿಯ ಸಂಸದರು ನಮ್ಮನ್ನು ಪಾರ್ಲಿಮೆಂಟ್ನಲ್ಲಿ ರೆಪ್ರೆಸೆಂಟ್ ಮಾಡ್ತಾ ಇದ್ದಾರೆ. 33 ವರ್ಷಗಳಲ್ಲಿ ಇವರು ಮಾಡಿದ ಸಾಧನೆಗಳು ಏನು? ಬರೀ ಜಾತಿ ಧರ್ಮದ ಹೆಸರಿನಲ್ಲಿ ಎಷ್ಟೋ ಹಿಂದುಳಿದ ವರ್ಗಗಳ ಜನರ ಮನೆಗಳನ್ನು ಒಡೆದು ಅನಾಥರನ್ನಾಗಿ ಮಾಡಿದ್ದಾರೆ. ಅದು ಅಲ್ಲದಿದ್ದರೆ ಅವರು ಅದನ್ನು ನಿನ್ನೆ ಹೇಳಬೇಕಿತ್ತು. ಆದರೆ ಹೇಳಲಿಲ್ಲ.

Ad Widget

Ad Widget

ಪ್ರಧಾನ ಮಂತ್ರಿಯವರು ನಿನ್ನೆ ಇಲ್ಲಿಗೆ ಭೇಟಿ ನೀಡಿದ ಸುಸಂದರ್ಭ ಬಿಜೆಪಿ ನಾಯಕರು ಇಲ್ಲಿಯ ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸಿರುತ್ತಾರೆ. ಮೋದಿಯವರಿಗೆ ರಾಜಕೀಯವಾಗಿ ನಾರಾಯಣ ಗುರುಗಳನ್ನು ಬಳಸುವುದನ್ನು ಬಿಟ್ಟರೆ, ನಿಜವಾಗಿ ನಾರಾಯಣ ಗುರುಗಳ ತತ್ತ್ವ ಆದರ್ಶಗಳನ್ನು ಜಗತ್ತಿಗೆ ತಿಳಿಸುವುದು ಅಗತ್ಯವಿದೆ. ಇದರ ಬಗ್ಗೆ ಅವರಿಗೆ ಕಾಳಜಿ ಇಲ್ಲ.

ಜಿಲ್ಲೆಗೆ ಆಗಮಿಸಿದ ಪ್ರಧಾನ ಮಂತ್ರಿಗಳಿಂದ ತಾವು ನಿರಂತರವಾಗಿ 33 ವರ್ಷಗಳಿಂದ ಗೆಲ್ಲಿಸಿದ ಬಿಜೆಪಿ ಸಂಸದರು. ಜನರಿಗೆ ಏನು ಮಾಡಿದ್ದಾರೆ, ಎಷ್ಟು ಉದ್ಯೋಗ ಒದಗಿಸಿದ್ದಾರೆ ಎಂಬೆಲ್ಲಾ ಪ್ರಶ್ನೆಗಳಿಗೆ ಜನರು ಉತ್ತರ ನಿರೀಕ್ಷಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಅತೀ ಹೆಚ್ಚು ಟ್ಯಾಕ್ಸ್ ಕಟ್ಟುವಂತಹ ಜಿಲ್ಲೆಯಾಗಿದ್ದು, ಇವತ್ತು ಮೋದಿಯವರು ಜನರ ನಿರೀಕ್ಷೆಗೆ ತುಟ್ಟಿ ಬಿಚ್ಚದೆ ಹೋಗಿದ್ದಾರೆ. ಜನರು ಇದನ್ನು ಅರ್ಥ ಮಾಡಿಕೊಂಡಿದ್ದಾರೆ  ಎಂದು ಹೇಳಿದರು.

Continue Reading

ಮಂಗಳೂರು

Congress roadshow-ಉಳ್ಳಾಲದಲ್ಲಿ ರಾರಾಜಿಸಿದ ಕಾಂಗ್ರೆಸ್ ರೋಡ್ ಶೋ; ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಜನತೆ

Ad Widget

ಉಳ್ಳಾಲ: ರೋಡ್ ಶೋ ಮೂಲಕ ನಡೆಸಿದ ಚುನಾವಣಾ ಪ್ರಚಾರ ಕಾರ್ಯ ಕಾಂಗ್ರೆಸ್’ಗೆ ಹೊಸ ಉತ್ಸಾಹ ತುಂಬುವಲ್ಲಿ ಸಫಲವಾಗಿದೆ.

Ad Widget

Ad Widget

Ad Widget

Ad Widget

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

Ad Widget

Ad Widget

ಸಂಜೆ ಹೊತ್ತಿಗೆ ಮುಡಿಪು ತಲುಪಿದ ರೋಡ್ ಶೋಗೆ ಕಾರ್ಯಕರ್ತರು, ಮುಖಂಡರು ಭರ್ಜರಿ ಸ್ವಾಗತ ಕೋರಿದರು. ಅಲ್ಲಿ ಪ್ರಚಾರ ಕಾರ್ಯ ನಡೆಸಿ, ಪೂಪಾಡಿಕಲ್ಲು, ನರಿಂಗಾನ, ಕೈರಂಗಳ, ಮಂಜನಾಡಿ, ನಾಟೆಕಲ್ಲು, ಕಿನ್ಯಾ, ಮೀನಾದಿ, ಮಿಂಪ್ರಿ ಮೊದಲಾದ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು.

Ad Widget

Ad Widget

ಅಭ್ಯರ್ಥಿ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಹೂಮಾಲೆ ಹಾಕಿ ಗೆಲುವಿಗೆ ಹಾರೈಸಿದರು. ತೆರೆದ ವಾಹನದಲ್ಲಿ ಅಭ್ಯರ್ಥಿ ತೆರಳುತ್ತಿದ್ದರೆ ತುಂಬಿದ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಹರ್ಷೋದ್ಘಾರ ಮಾಡಿದರು.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading