ಕೊಚ್ಚಿ (ನ.21): ಭಾರತದಲ್ಲಿ ಅತೀ ಹೆಚ್ಚು ಫುಟ್ಬಾಲ್ ಪ್ರೇಮಿಗಳಿರುವ ರಾಜ್ಯ ಎಂಬ ಕೀರ್ತಿಗೆ ಕೇರಳ ಸೇರಿದೆ. ಈ ಬಾರಿ ಫಿಫಾ ವರ್ಲ್ಡ್ ಕಪ್ (FIFA WorldCup2022) ಕತಾರ್‌ನಲ್ಲಿ ನಡೆಯುತ್ತಿದ್ದು ಮಾತ್ರವಲ್ಲ ಕೇರಳದಲ್ಲೂ ಕೂಡ ಫಿಫಾ ಫೀವರ್ ಜೋರಾಗಿದೆ.
ಕೇರಳದ ವಿವಿಧ ಜಿಲ್ಲೆಗಳಲ್ಲಿ ಆಯಾ ದೇಶಗಳನ್ನು ಬೆಂಬಲಿಸಿ, ಆದೇಶದ ಧ್ವಜಗಳನ್ನು ಹಾಕಿ ಅಭಿಮಾನಿಗಳು ಸಪೋರ್ಟ್ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಪೋರ್ಚುಗಲ್, ಅರ್ಜೆಂಟೀನಾ, ಬ್ರೆಜಿಲ್ ದೇಶಗಳಿಗೆ ಕೇರಳದಲ್ಲಿ ಬೆಂಬಲ ಹೆಚ್ಚು. ಈ ನಡುವೆ ಪೋರ್ಚುಗಲ್ ದೇಶದ ಧ್ವಜವನ್ನು ವಿವಾದಿತ ಇಸ್ಲಾಮಿಕ್ ಗುಂಪು ಎಸ್‌ಡಿಪಿಐನ ಧ್ವಜ ಎಂದು ಭಾವಿಸಿದ ವ್ಯಕ್ತಿಯೊಬ್ಬ ಇದನ್ನು ಹರಿದುಹಾಕಿದ್ದ. ಇದರಿಂದ ಕುಪಿತಗೊಂಡ ಕ್ರಿಶ್ಚಿಯಾನೋ ರೊನಾಲ್ಡೋ ಅಭಿಮಾನಿಗಳು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
Only in India! Christiano Ronaldo fans in Kerala have beaten up a Hindu supremacist after he tore up the national flag of Portugal, confusing it as the flag of the Social Democratic Party of India. #FIFAWorldCup2022 pic.twitter.com/EfHjtXRVny
— Ashok Swain (@ashoswai) November 20, 2022
ಪ್ರಕರಣಕ್ಕೆ ಸಂಬಂಧಪಟ್ಟಂತೆ ಧ್ವಜವನ್ನು ಹರಿದು ಹಿಗ್ಗಾಮುಗ್ಗ ಥಳಿತಕ್ಕೊಳಕ್ಕಾದ ಬಿಜೆಪಿ ಕಾರ್ಯಕರ್ತ ದೀಪಕ್ ಎಳನ್ಗೋಡ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಕೇರಳದ ಕಣ್ಣೂರಿನ ರಸ್ತೆ ಬದಿಯಲ್ಲಿ ಪೋರ್ಚುಗಲ್ ತಂಡಕ್ಕೆ ಬೆಂಬಲ ನೀಡಿ ಧ್ವಜಗಳನ್ನು ಹಾಕಲಾಗಿತ್ತು. ಕೆಂಪು ಹಾಗೂ ಹಸಿರು ಬಣ್ಣ ಹೊಂದಿರುವ ಈ ಧ್ವಜ, ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜಕೀಯ ಅಂಗಸಂಸ್ಥೆಯಾಗಿರುವ ಎಸ್‌ಡಿಪಿಐನ ಧ್ವಜವನ್ನೇ ಹೋಲುತ್ತದೆ.
ಪೋರ್ಚುಗಲ್ ಧ್ವಜವನ್ನು ಎಸ್‌ಡಿಪಿಐ ಧ್ವಜ ಎಂದುಕೊಂಡ ದೀಪಕ್, ರಸ್ತೆಯ ಪಕ್ಕ ಹಾಕಿದ್ದ ಎಲ್ಲಾ ಧ್ವಜವನ್ನು ಹರಿದು ಹಾಕಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೋರ್ಚುಗಲ್ ಹಾಗೂ ರೊನಾಲ್ಡೋ ಅಭಿಮಾನಿಗಳು ದೀಪಕ್ ಮೇಲೆ ಹಲ್ಲೆ ಮಾಡಿದ್ದಾರೆ.
Man mistakes Portugal flag for SDPI banner, rips it to shreds!
— TNIE Kerala (@xpresskerala) November 16, 2022
Incident happened in Kannur's Panoor last Tuesday. The man named Dileep also got into an argument with the Portugal fans in the area. A case was registered against him by the police for destroying public property. pic.twitter.com/7aiCuyPxyz
ದೀಪಕ್ ಹರಿಯುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಘಟನೆ ರಾಜಕೀಯ ಮತ್ತು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.