Connect with us

ಆರೋಗ್ಯ

Blocked Nose : ಚಳಿಗಾಳದಲ್ಲಿ ಅತಿಯಾಗಿ ಕಾಡುವ ಮೂಗು ಕಟ್ಟುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

Ad Widget

Ad Widget

Ad Widget

Ad Widget Ad Widget

Nasal Congestion: ಚಳಿಗಾಲ ಪ್ರಾರಂಭವಾದ ತಕ್ಷಣ, ನಮ್ಮನ್ನು ಅನೇಕ ರೋಗಗಳು ಕಾಡಲು ಆರಂಭಿಸುತ್ತದೆ.
ಈ ಸಮಯದಲ್ಲಿ ಶೀತ, ಕೆಮ್ಮು ಅತಿಯಾಗಿ ಕಾಣಿಸುತ್ತದೆ. ನಿಮಗೆ ಆಗಾಗ ಮೂಗು ಕಟ್ಟಿದ ಅನುಭವವು ಆಗಬಹುದು . ಇದು ತೀವ್ರಗೊಂಡರೆ ಉಸಿರಾಟದ ಸಮಸ್ಯೆಗೂ ಒಳಗಾಗಬಹುದು. ಇದಕ್ಕೆ ಗಾಬರಿಯಾಗುವ ಅಗತ್ಯವಿಲ್ಲದಿದ್ದರೂ, ಕೆಲವು ಮನೆಮದ್ದುಗಳ ಸಹಾಯದಿಂದ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು.

Ad Widget

Ad Widget

Ad Widget

Ad Widget

Ad Widget

ಕಟ್ಟಿದ ಮೂಗಿಗೆ ಈ ಮನೆಮದ್ದುಗಳು :

Ad Widget

Ad Widget
  1. ಸ್ಟೀಮ್ ಥೆರಪಿ

ಮೂಗು ಕಟ್ಟುವಿಕೆ, ಶೀತ, ಕೆಮ್ಮು ಮತ್ತು ನೆಗಡಿಗಾಗಿ ಈ ವಿಧಾನ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ, ಇದು ಸಾಕಷ್ಟು ಪರಿಹಾರವನ್ನು ನೀಡುತ್ತದೆ, ಅದರ ಪರಿಣಾಮವೂ ತ್ವರಿತವಾಗಿರುತ್ತದೆ. ಇದಕ್ಕಾಗಿ ನೀವು ಪಾತ್ರೆಯಲ್ಲಿ ನೀರನ್ನು ಕುದಿಸಿ ನಂತರ ಟವೆಲ್‌ನಿಂದ ತಲೆಯನ್ನು ಮುಚ್ಚಿ ನಂತರ ಹಬೆಯನ್ನು ಉಸಿರಾಡಿ, ಮೂಗನ್ನು ತ್ವರಿತವಾಗಿ ತೆರವುಗೊಳಿಸುತ್ತದೆ.

Ad Widget

Ad Widget
  1. ಬಿಸಿ ನೀರು ಕುಡಿಯಿರಿ :

ಮೂಗು ಮುಚ್ಚಿದ ಕಾರಣ, ನಾವು ಆಗಾಗ್ಗೆ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಆದರೆ ನೀವು ಅದನ್ನು ಸುಲಭವಾಗಿ ನಿವಾರಿಸಬಹುದು. ಇದಕ್ಕಾಗಿ ನೀವು ಬಿಸಿನೀರನ್ನು ಕುಡಿಯಲು ಪ್ರಾರಂಭಿಸಿ. ಪರಿಣಾಮ ಸ್ವಲ್ಪ ಬೇಗ ಆಗಬೇಕೆಂದರೆ ಬಿಸಿ ನೀರಿಗೆ ಜೇನುತುಪ್ಪ ಮತ್ತು ಶುಂಠಿಯ ರಸವನ್ನು ಬೆರೆಸಿ ಕುಡಿಯಿರಿ. ಇದು ಕಟ್ಟಿದ ಮೂಗನ್ನು ತೆರೆಯುತ್ತದೆ. ಇದರ ಜೊತೆಗೆ ಕೆಮ್ಮು ಸಹ ಕಡಿಮೆಯಾಗುತ್ತದೆ.

Ad Widget

Ad Widget

ನೇಸಲ್ ಸ್ಪ್ರೇ ಬಳಸಿ :

ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ನೇಸಲ್ ಸ್ಪ್ರೇಗಳು ಮಾರುಕಟ್ಟೆಯಲ್ಲಿ ಬರಲಾರಂಭಿಸಿವೆ, ಅದು ಬ್ಲಾಕ್ ಆಗಿರುವ ಮೂಗನ್ನು ತೆರೆಯುತ್ತದೆ. ನೀವು ಬಯಸಿದರೆ, ವೈದ್ಯರ ಸಲಹೆಯ ಮೇರೆಗೆ ಇದನ್ನು ಬಳಸಬಹುದು.

ಮಸಾಲೆಯುಕ್ತ ಆಹಾರವನ್ನು ಸೇವಿಸಿ :

ಉತ್ತಮ ಆರೋಗ್ಯಕ್ಕಾಗಿ ಮಸಾಲೆಯುಕ್ತ ಆಹಾರವನ್ನು ತಪ್ಪಿಸಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ, ಆದರೆ ಮಸಾಲೆಯುಕ್ತ ಆಹಾರವು ಕಟ್ಟಿದ ಮೂಗನ್ನು ತೆರೆಯಲು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಶೀಘ್ರ ಪರಿಹಾರ ಸಿಗುವ ನಿರೀಕ್ಷೆ ಇದೆ.

Click to comment

Leave a Reply

ಆರೋಗ್ಯ

Bourn Vita | ಬೋರ್ನ್ ವಿಟಾವನ್ನು ಎಲ್ಲಾ ಹೆಲ್ತ್ ಡ್ರಿಂಕ್ಸ್ ವರ್ಗದಿಂದ ತೆಗೆದುಹಾಕುವಂತೆ ಆದೇಶಿಸಿದ ಕೇಂದ್ರ ಸರ್ಕಾರ : ಅಧಿಕ ಪ್ರಮಾಣದ ಸಕ್ಕರೆ ಅಂಶವನ್ನು ಬಯಲಿಗೆಳೆದ ಯೂಟ್ಯೂಬರ್

Ad Widget

Ad Widget

Ad Widget

Ad Widget Ad Widget

ನವದೆಹಲಿ ಎ.14: ಮಕ್ಕಳಿಗೆ ಕುಡಿಸುವ ಬೋರ್ನ್ ವಿಟಾ (Bourn Vita) ಇನ್ನು ಮುಂದೆ ಹೆಲ್ತ್ ಡ್ರಿಂಕ್ಸ್ ವರ್ಗದಿಂದ ತೆಗೆದು ಹಾಕುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಸಲಹೆ ನೀಡಿದೆ. ಪೋರ್ಟಲ್ ಮತ್ತು ಪ್ಲಾಟ್‍ಫಾರ್ಮ್‍ಗಳಲ್ಲಿ ಬೋರ್ನ್‍ವಿಟಾ ಸೇರಿದಂತೆ ಎಲ್ಲಾ ಪಾನೀಯಗಳು ಈ ವರ್ಗದಿಂದ ಕೈಬಿಡುವಂತೆ ಆದೇಶ ನೀಡಲಾಗಿದೆ.

Ad Widget

Ad Widget

Ad Widget

Ad Widget

Ad Widget

ಒಬ್ಬ ಯುಟ್ಯೂಬರ್ ಬೋರ್ನ್ ವೀಟಾದಲ್ಲಿ ಹೆಚ್ಚಿನ ಪ್ರಮಾಣ ಸಕ್ಕರೆ ಅಂಶ ಇರುವ ಬಗ್ಗೆ ವಿಡಿಯೋ ಮಾಡಿದ್ದ, ಅಲ್ಲದೆ ಪ್ರಯೋಗ ಮೂಲಕ ಆತ ಅದನ್ನು ತೋರಿಸಿದ್ದ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್‌ನ ತನಿಖೆಯಯಲ್ಲಿ ಬೋರ್ನ್‍ವಿಟಾ ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Ad Widget

Ad Widget

ಕಂಪನಿಗಳು ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾಗಿವೆ. ಅಲ್ಲದೇ ಆರೋಗ್ಯಕರ ಪಾನೀಯಗಳು ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಎನ್‍ಸಿಪಿಸಿಆರ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಸೂಚಿಸಿತ್ತು.

Ad Widget

Ad Widget
Continue Reading

ಆರೋಗ್ಯ

Paracetamol-ಸಣ್ಣ ತೊಂದರೆಗೂ ಪ್ಯಾರಸಿಟಮಲ್ ಸೇವಿಸುತ್ತಿದ್ದೀರಾ? ಮಿತಿಮೀರಿದ ಸೇವನೆಯಿಂದ ಕಿಡ್ನಿ, ಲಿವರ್‌ಗೆ ಸಮಸ್ಯೆಯಾಗುತ್ತಂತೆ.

Ad Widget

Ad Widget

Ad Widget

Ad Widget Ad Widget

ಜ್ವರ, ತಲೆ ನೋವು, ಮೈಕೈ ನೋವು, ಹಲ್ಲು ನೋವಿನಂತಹ ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳಿಗೂ ಮಾತ್ರೆ ತೆಗೆದುಕೊಳ್ಳುತ್ತಿರುವವರಿಗೆ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಅಧ್ಯಯನವೊಂದು ಶಾಕ್ ನೀಡಿದೆ.

Ad Widget

Ad Widget

Ad Widget

Ad Widget

Ad Widget

ಹೌದು.. ಸಣ್ಣ ತೊಂದರೆಗಳಿಗೂ ಪ್ಯಾರಸಿಟಮಲ್‌ ನುಂಗುವ ಅಭ್ಯಾಸ ಹೆಚ್ಚಿರುವ ಈ ಹೊತ್ತಿನಲ್ಲಿ, ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಅಧ್ಯಯನಕಾರರು ಮಹತ್ವದ ವರದಿ ನೀಡಿದ್ದು, ಹೆಚ್ಚು ಪ್ಯಾರಸಿಟಮಲ್ ಸೇವನೆಯಿಂದ ನಮ್ಮ ಲಿವರ್ ಗೆ ಹಾನಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ‌ಏಕೆಂದರೆ ಇದು ಪ್ರಿಸ್ಕ್ರಿಪ್ಷನ್‌ಇಲ್ಲದೆಯೂ ಸಹ ಮೆಡಿಕಲ್‌ಗಳಲ್ಲಿ ಲಭ್ಯವಿದೆ. ಇದು ನೋವು ನಿವಾರಕ ಮತ್ತು ಜ್ವರವನ್ನು ಕಡಿಮೆ ಮಾಡುವುದಾದರೂ ಶಿಫಾರಸು ಮಾಡಲಾದ ಡೋಸೇಜ್‌ಗಿಂತ ಅಧಿಕ ಸೇವಿಸಿದರೆ ಹಲವಾರು ಹಾನಿಕಾರಕ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.

Ad Widget

Ad Widget

ಪ್ಯಾರಸಿಟಮಲ್‌ ಮಿತಿಮೀರಿದ ಸೇವನೆಯು ನಮ್ಮ ಯಕೃತ್ತಿನ ಔಷಧವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ನಾಶಪಡಿಸುತ್ತದೆ. ಇದು ಯಕೃತ್ತಿನ ಹಾನಿಗೆ ಕಾರಣವಾಗುತ್ತದೆ. ಅಲ್ಲದೆ ವಾಕರಿಕೆ, ವಾಂತಿ, ಹೊಟ್ಟೆನೋವು ಮತ್ತು ಹಸಿವಿನ ಕೊರತೆಯಂತಹ ರೋಗ ಲಕ್ಷಣಕ್ಕೆ ಕಾರಣವಾಗಬಹುದು. ಅಲ್ಲದೆ ನಮ್ಮ ಆರೋಗ್ಯವನ್ನೇ ನುಂಗಿ ಹಾಕುತ್ತವೆ ಎಂದು ಇತ್ತೀಚಿನ ಅಧ್ಯಯನಗಳು ಬಹಿರಂಗ ಪಡಿಸಿವೆ.

Ad Widget

Ad Widget

ಎಡಿನ್‌ಬರ್ಗ್‌ವಿಶ್ವವಿದ್ಯಾಲಯದ ಅಧ್ಯಯನದಲ್ಲೇನಿದೆ?
ಪ್ರತಿ ಸಣ್ಣ ವಿಷಯಕ್ಕೂ, ವೈದ್ಯರ ಸಲಹೆ ಇಲ್ಲದೆ ಪ್ಯಾರಸಿಟಮಲ್ ಅಥವಾ ನೋವಿನ ಮಾತ್ರೆಗಳನ್ನು ನುಂಗುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಕೆಲವೊಮ್ಮೆ ಶಾಶ್ವತವೂ ಆಗಬಹುದು. ಇದು ಅಂಗಾಂಗ ವೈಫಲ್ಯಕ್ಕೂ ದಾರಿ ಮಾಡುತ್ತದೆ ಎಂದು ಅಧ್ಯಯನದಲ್ಲಿ ಎಚ್ಚರಿಸಲಾಗಿದೆ. ಪ್ರಮುಖವಾಗಿ ಭಾರತದಲ್ಲಿ ಬಳಸುವ ಪ್ಯಾರಸಿಟಮಲ್ ಪ್ರಮಾಣಕ್ಕಿಂತ ಪಶ್ಚಿಮ ದೇಶಗಳಲ್ಲಿ ಪ್ಯಾರಸಿಟಮಲ್ ಅಥವಾ ಅಸೆಟೋಮೆನೊಫಿನ್ ಬಳಸುವ ಪ್ರಮಾಣ ಹೆಚ್ಚು. ಆದರೆ ಕೋವಿಡ್‌ನಂತರದ ದಿನಗಳಲ್ಲಿ ಪ್ಯಾರಸಿಟಮಲ್ ಬಳಸುವ ಪ್ರಮಾಣ ಎಲ್ಲಾ ದೇಶಗಳಲ್ಲಿ ಮೊದಲಿಗಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಇಂಥ ಅಧ್ಯಯನಗಳು ಮಹತ್ವ ಪಡೆದಿವೆ.

Ad Widget

Ad Widget

ಯಕೃತ್ತಿಗೆ ಹಾನಿ
ರೋಗದ ಉಪಶಮನಕ್ಕಾಗಿ ಬಳಸುವ ಈ ಔಷಧಗಳು ಮಿತಿ ಮೀರಿದರೆ ಅಪಾಯಗಳಿಗೆ ಆಹ್ವಾನ ನೀಡುತ್ತವೆ ಎಂಬುದು ಸಾಬೀತಾಗಿದೆ. ಕೆಲವು ಸಂದರ್ಭಗಳಲ್ಲಿ, ಯಕೃತ್ತಿನ ಮೇಲೆ ದುಷ್ಟಪರಿಣಾಮ ಬೀರುವ ಈ ಔಷಧಗಳು, ಅಲ್ಲಿನ ಆರೋಗ್ಯವಂತ ಕೋಶಗಳನ್ನು ಹಾಳು ಮಾಡುತ್ತವೆ ಹಾಗೂ ಅಂಗದ ವೈಫಲ್ಯಕ್ಕೂ ಕಾರಣವಾಗಬಹುದು. ಯಾವುದೇ ಕೋಶಗಳು ತಮ್ಮ ಅಂಗಗಳ ಗೋಡೆಯ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡರೆ ಆಪತ್ತು ಎದುರಾಗುತ್ತದೆ. ಇದರಿಂದ ಆ ಕೋಶಗಳು ಕ್ರಮೇಣ ಸಾಯಬಹುದು. ಇಂಥ ಸಂದರ್ಭಗಳಲ್ಲಿ ಅಂಗಗಳು ಪೂರ್ಣ ಅಥವಾ ಭಾಗಶಃ ಹಾನಿಗೊಂಡು ವಿಫಲವೂ ಆಗಬಹುದು ಎಂದು ಹೇಳಲಾಗಿದೆ.

ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು
ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆಯು ತೀವ್ರವಾದ ಪಿತ್ತಜನಕಾಂಗದ ವೈಫಲ್ಯಕ್ಕೆ ಕಾರಣವಾಗಬಹುದು ಮತ್ತು ದೀರ್ಘಾವಧಿಯ ಬಳಕೆಯು ಯಕೃತ್ತಿನ ಕಸಿ ಅಗತ್ಯವಿರುವ ಬದಲಾಯಿಸಲಾಗದ ಯಕೃತ್ತಿನ ಗಾಯಕ್ಕೆ ಕಾರಣವಾಗಬಹುದು. ಇದು ಜೀವಕ್ಕೆ ಅಪಾಯಕಾರಿ ಸ್ಥಿತಿಯಾಗಿದೆ. ಇದು ಕಾಮಾಲೆ ಮತ್ತು ಕೋಮಾಗೆ ಕಾರಣವಾಗಬಹುದು. ಚಿಕಿತ್ಸೆ ನೀಡದಿದ್ದರೆ, ಅದು ಮಾರಣಾಂತಿಕವಾಗಬಹುದು. ಕೆಲವೊಮ್ಮೆ ಇದು ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು.

Continue Reading

ಆರೋಗ್ಯ

Bad breath-ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ ಈ ತರಕಾರಿ! ಇಲ್ಲಿದೆ ಉಪಯುಕ್ತ ಮಾಹಿತಿ

Ad Widget

Ad Widget

Ad Widget

Ad Widget Ad Widget

ಬೆಂಗಳೂರು: ಸಾಮಾನ್ಯವಾಗಿ ಬೆವರಿದಾಗ ದೇಹ ದರ್ವಾಸನೆ ಬರುತ್ತದೆ. ಇದು ಇತರರಿಗೆ ಕಿರಿಕಿರಿ ಜತೆಗೆ ಮುಜುಗರವನ್ನು ಉಂಟುಮಾಡುತ್ತದೆ. ಇದಕ್ಕೆ ನಾವು ಸುಗಂಧ ದ್ರವ್ಯ ಇತ್ಯಾದಿಗಳನ್ನು ಬಳಸಿ, ವಾಸನೆ ತಡೆಗಟ್ಟುತ್ತೇವೆ. ಆದರೆ, ಬಾಯಿ ವಾಸನೆ ಸಮಸ್ಯೆಗೆ ಏನಪ್ಪಾ ಮಾಡೋದು? ಇದರಿಂದ ಮುಕ್ತಿ ಹೊಂದುವುದು ಹೇಗೆ ಎಂದು ಹಲವರು ಚಿಂತಿಸುತ್ತಾರೆ. ಅದಕ್ಕೆ ಇಲ್ಲಿದೆ ಸರಳ ಉಪಾಯ.

Ad Widget

Ad Widget

Ad Widget

Ad Widget

Ad Widget

ಬೆಳಗ್ಗೆ ಎದ್ದಾಗ ನಮ್ಮ ಬಾಯಿ ವಾಸನೆ ಬರುವುದು ಸಾಮಾನ್ಯ. ಕೂಡಲೇ ಬ್ರಶ್ ಮಾಡಿ, ಹಲ್ಲು-ನಾಲಿಗೆಯನ್ನು ಉಜ್ಜಿ ಬಾಯನ್ನು ಸ್ವಚ್ಛಗೊಳಿಸುತ್ತೇವೆ. ಆದರೂ ಸಹ ಕೆಲವರಿಗೆ ಬಾಯಿಯಿಂದ ಬರುವ ದರ್ವಾಸನೆ ಕಡಿಮೆಯಾಗುವುದಿಲ್ಲ. ಇದರಿಂದ ಇತರರೊಂದಿಗೆ ಬಾಯ್ಬಿಟ್ಟು ಮಾತನಾಡುವುದಕ್ಕೆ ಅನೇಕರು ಮುಜುಗರ ಪಡುತ್ತಾರೆ.

Ad Widget

Ad Widget

ಬಾಯಿಯನ್ನು ಸ್ವಚ್ಛವಾಗಿರಿಸಿಕೊಳ್ಳದಿದ್ದರೆ ಬ್ಯಾಕ್ಟೀರಿಯಾ ಆವರಿಸಿಕೊಳ್ಳುತ್ತದೆ. ಇದರಿಂದ ಬಾಯಿಯ ವಾಸನೆ ಕೂಡ ಹೆಚ್ಚಾಗುತ್ತದೆ. ಹಾಗಾದ್ರೆ ಈ ಸಮಸ್ಯೆಯನ್ನು ಸೌತೆಕಾಯಿ ಹೇಗೆ ನಿವಾರಿಸುತ್ತದೆ ಎಂಬುದನ್ನು ನೋಡುವುದಾದರೆ, ಸೌತೆಕಾಯಿಯ ಒಂದು ತುಂಡು ನಿಮ್ಮ ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಒಂದು ಸೌತೆಕಾಯಿಯ ತುಂಡನ್ನು ನಾಲಿಗೆ ಮತ್ತು ನಾಲಿಗೆಯ ಮೇಲ್ಭಾಗಕ್ಕೆ ತಗಲುವಂತೆ 90ಸೆಕೆಂಡ್ ಅಥವಾ ಒಂದು ನಿಮಿಷ ಇಟ್ಟುಕೊಳ್ಳಿ. ಇದರಿಂದ ಫೈಟೋಕೆಮಿಕಲ್ ಅಂಶವು ಬ್ಯಾಕ್ಟಿರೀಯಾವನ್ನು ನಾಶಪಡಿಸುವ ಮೂಲಕ ಬಾಯಿಯಿಂದ ಬರುವ ದರ್ವಾಸನೆಯನ್ನು ತಡೆಗಟ್ಟುತ್ತದೆ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading