ಮಂಗಳೂರು: ನ.19ರಂದು ಮಂಗಳೂರಿನ ನಾಗೋರಿಯಲ್ಲಿ ಅಟೋದಲ್ಲಿ ನಿಗೂಢ ಸ್ಪೋಟ (Mangalore Blast) ಘಟನೆಯ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. ಇದು ಆಕಸ್ಮಿಕ ಘಟನೆ ಅಲ್ಲ , ಇದು ಭಯೋತ್ಪಾದಕರ ಕೃತ್ಯ ಎಂದು ಡಿಜಿಪಿ (DGP karnataka) ಇದೀಗ ಹೇಳಿಕೆ ಕೊಟ್ಟಿದ್ದಾರೆ.

ಆಟೋದಲ್ಲಿ ಆಗಮಿಸಿದ ನಿಗೂಢ ಪ್ರಯಾಣಿಕನ ಬಗ್ಗೆಯೇ ಅನುಮಾನ ಹೆಚ್ಚಿದೆ. ಆತನಿಗೆ ಸ್ಪೋಟದಿಂದ 50% ಸುಟ್ಟ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾನೆ ಮತ್ತು ರಿಕ್ಷಾ ಚಾಲಕನಿಗೂ ಗಂಭೀರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಆಕಸ್ಮಿಕ ಘಟನೆಯಲ್ಲ, ಭಯೋತ್ಪಾದನೆ ಕೃತ್ಯ ಎಂದು ಡಿಜಿಪಿ ಟ್ವಿಟ್ ಮಾಡಿದ್ದಾರೆ. ತೀವ್ರ ತರಹದ ಹಾನಿ ಮಾಡಲೆಂದೇ ಉದ್ದೇಶದಿಂದ ಬಂದಿದ್ದರು. ರಾಜ್ಯ ಪೋಲಿಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದಿದ್ದಾರೆ.
ಅಟೋ ಪ್ರಯಾಣಿಕ ಉತ್ತರ ಪ್ರದೇಶದ ಕಾರ್ಮಿಕನಂತಿದ್ದ ಹುಬ್ಬಳ್ಳಿಯ ವಿಳಾಸ ಹೊಂದಿರುವ ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ.
KA19 AA 8471 ಸಂಖ್ಯೆಯ ದುರ್ಗಾಪರಮೇಶ್ವರಿ ಹೆಸರಿನ ಆಟೋ ರಿಕ್ಷಾದ ಒಳಭಾಗದಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ.
ನಿನ್ನೆ ಸಂಜೆ 4.29ರ ಸುಮಾರಿಗೆ ಮಂಗಳೂರಿನ ನಾಗುರಿ ಸ್ಪೋಟ ಸಂಭವಿಸಿದ್ದು, ಸ್ಪೋಟದ ತೀವ್ರತೆಗೆ ಭಾರೀ ಪ್ರಮಾಣದಲ್ಲಿ ಹೊಗೆ ಹಬ್ಬಿದ್ದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಮಂಗಳೂರಿನಲ್ಲಿ ಸ್ಫೋಟವಾಗಿದ್ದು ಕುಕ್ಕರ್ ಬಾಂಬ್?
ಬಾಂಬ್ ತಯಾರಿ ಮಾದರಿ ವಸ್ತು ಕುಕ್ಕರ್ ನೊಳಗೆ ಪತ್ತೆಯಾಗಿದೆ , ಮ್ಯಾಟ್ ಮಾದರಿ ವಸ್ತು ಪತ್ತೆ , ನಾಲ್ಕು ಡ್ಯೂರೆಸೆಲ್ ಬ್ಯಾಟರಿ,ಸರ್ಕೀಟ್ ಮಾದರಿಯ ವೈರ್ ಸೇರಿದಂತೆ ಬ್ಲಾಸ್ಟ್ ಗೆ ಬೇಕಾದ ಸಾಧನ ಪತ್ತೆಯಾಗಿದೆ.
ಈ ಹಿಂದೆ ಹೈದರಾಬಾದ್, ದೆಹಲಿಯಲ್ಲೂ ನಡೆದಿದ್ದ ಕುಕ್ಕರ್ ಬಾಂಬ್ ಮಾದರಿಯಂತಿದೆ ಎನ್ನಲಾಗಿದೆ.
ಉನ್ನತ ಮಟ್ಟದ ತನಿಖೆಗೆ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ. ಇಂದು ಅವರು ಮಂಗಳೂರಿಗೆ ಆಗಮಿಸುತ್ತಿದ್ದಾರೆ.
ಆಟೋ ಪ್ರಯಾಣಿಕನ ತನಿಖೆ ವೇಳೆ ಅಸ್ಪಷ್ಟ ಮಾಹಿತಿ!
ಪೊಲೀಸರ ಎದುರು ಪ್ರಯಾಣಿಕ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದ. ಅಣ್ಣ ಬಾಬುರಾವ್ ಗೆ ಕರೆ ಮಾಡಿ ಅಂತ ನಂಬರ್ ನೀಡಿದ್ದ ಪ್ರಯಾಣಿಕ.
ಆದರೆ ಆ ನಂಬರ್ ಗೆ ಕರೆ ಮಾಡಿದಾಗ ಆ ವ್ಯಕ್ತಿ ಈತ ತನ್ನ ಸಂಬಂಧಿಕನೇ ಅಲ್ಲ ಅಂದಿದ್ದ. ಆತ ತನ್ನ ರೂಮ್ ನಲ್ಲಿದ್ದ, ಬೆಂಗಳೂರಿಗೆ ಹೋಗ್ತೇನೆಂದು ಹೋಗಿದ್ದ ಎಂದಿದ್ದಾನೆ.
ಮಂಗಳೂರು ಆಟೋ ಸ್ಪೋಟದ ತನಿಖೆಗೆ ಎನ್.ಐ.ಎ ಟೀಂ..?
ಇಂದು ಮಂಗಳೂರಿಗೆ ಎನ್.ಐ.ಎ ತಂಡ ಆಗಮನ ಸಾಧ್ಯತೆ ಇದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ನಿನ್ನೆ ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ ಬೆನ್ನಲ್ಲೇ ಸ್ಪೋಟ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.