ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘವು ಕಳೆದ 25 ವರ್ಷಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘವು ರಾಜ್ಯದ ಯಾವುದೇ ಇತರ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಪುತ್ತೂರು ಪತ್ರಕರ್ತರ ಸಂಘಕ್ಕೆ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ತಡೆ ನೀಡುವ ಅಧಿಕಾರವೂ ರಾಜ್ಯದ ಯಾವುದೇ ಸಂಘಗಳಿಗೆ ಇಲ್ಲ ಎನ್ನುವ ವಿಚಾರವನ್ನು ಪುತ್ತೂರು ಪತ್ರಕರ್ತರ ಸಂಘ ಸ್ಪಷ್ಟಪಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಐ.ಬಿ. ಸಂದೀಪ್ ಕುಮಾರ್ ಮತ್ತು ಕಾರ್ಯದರ್ಶಿ ಅಜಿತ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆಗೆ ತಡೆ ನೀಡಲಾಗಿದೆ ಎನ್ನುವ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ. ಸಂಘವನ್ನು ಒಡೆಯಲು, ನಾಶ ಮಾಡಲು ಹವಣಿಸುತ್ತಿರುವ ಕೆಲ ವಿಚ್ಛಿದ್ರಕಾರಕ ಶಕ್ತಿಗಳು ಈ ವದಂತಿ ಹಬ್ಬಿಸುತ್ತಿವೆ. ಈ ಮೊದಲು ಸಂಘದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿದ ಸಂಚಿನ ಒಂದು ಭಾಗ ಇದಾಗಿದೆಯೇ ಹೊರತು ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.
ಎಂದು ಅಧ್ಯಕ್ಷ ಐ.ಬಿ.ಸಂದೀಪ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರು ಇಂಥ ಸುಳ್ಳು ಸುದ್ಧಿಗಳಿಂದ ಗೊಂದಲಕ್ಕೀಡಾಗಬಾರದೆಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಪುತ್ತೂರಿನ ಪತ್ರಿಕಾ ಭವನದಲ್ಲಿ ಸಂಘದ ಸದಸ್ಯರು ಸಭೆ ನಡೆಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದರು. ಆದರೇ ಇದರ ಮಾಹಿತಿಗಳು ವಿವಿಧ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಸಂಜೆಯ ವೇಳೆಗೆ ಈ ಅಯ್ಕೆಗೆ ರಾಜ್ಯದ ಸಂಘವೊಂದು ತಡೆ ನೀಡಿದೆ ಎಂಬ ಸಂದೇಶಗಳು ಹರಿದಾಡಲಾರಂಭಿಸಿತ್ತು. ಆದರೇ ಇದಕ್ಕೆ ಪುತ್ತೂರು ತಾಲೂಕು ಪತ್ರಕರ್ತರ ಸಂಘ ಸ್ಪಷ್ಟನೆ ನೀಡಿ ಗೊಂದಲ ನಿವಾರಿಸುವ ಪ್ರಯತ್ನ ನಡೆಸಿದೆ