Ad Widget

ಡೆತ್ ನೋಟ್ ಬರೆದಿಟ್ಟು ವಿಟ್ಲದ ಯುವತಿ ಆತ್ಮಹತ್ಯೆ ಮಾಡಿಕೊಂಡು 50 ದಿನ ಕಳೆದರೂ ಪೊಲೀಸರು ಆರೋಪಿಗಳ ತನಿಖೆ ನಡೆಸಿಲ್ಲ : ರಮಾನಾಥ ರೈ ಗಂಭೀರ ಆರೋಪ

images (12)
Ad Widget

Ad Widget

Ad Widget

ವಿಟ್ಲ: 50 ದಿನ ಕಳೆದರೂ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಯುವತಿ ಪ್ರಕರಣದಲ್ಲಿ ಆರೋಪಿಗಳ ತನಿಖೆಯನ್ನೇ ವಿಟ್ಲ ಪೊಲೀಸರು ಮಾಡಿಲ್ಲ. ಇದು ಖಂಡನೀಯ, ಇಂತಹ ಬೇಜವಾಬ್ದಾರಿ ಪೊಲೀಸ್ ಠಾಣೆಯ ಅವಶ್ಯಕತೆಯಾದರೂ ಏನು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಪ್ರಶ್ನಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ವಿಟ್ಲಠಾಣಾ ವ್ಯಾಪ್ತಿಯ ವಿಟ್ಲಕಟ್ಟೆ ಎಂಬಲ್ಲಿ ಅ.11 ರಂದು ವಿಟ್ಲಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು ನಾಯ್ಕ ಅವರ ಪುತ್ರಿ ನಿಶ್ಮಿತಾ(22) ಅವರು ಡೆತ್‌ನೋಟಲ್ಲಿ ಮೂವರ ಹೆಸರು ಬರೆದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ತನಕವೂ ನೈಜ ಆರೋಪಿಗಳ ತನಿಖೆ ನಡೆಸದೇ ಇದ್ದು, ತೀರಾ ನಿರ್ಲಕ್ಷ್ಯ ವಹಿಸಿದ್ದಾರೆ. ಇಂತಹ ಬೇಜವಾಬ್ದಾರಿಯುತ ಪೊಲೀಸ್‌ಠಾಣೆ ಜನರಿಗೆ ಅವಶ್ಯಕತೆ ಇದೆಯೇ, ಇದನ್ನು ಕಾಂಗ್ರೆಸ್ ಖಂಡಿಸುತ್ತದೆ. ನೈಜ ಆರೋಪಿಗಳ ಮೇಲೆ ಯಾವುದೇ ಕಾನೂನು ಕ್ರಮ ಜರುಗುತ್ತಿಲ್ಲ, ಪೊಲೀಸರು ತೀರಾ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಅವರು ವಿಟ್ಲ ನಿರೀಕ್ಷಣಾ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಸುಮಾರು ಒಂದೂವರೆ ತಿಂಗಳ ಹಿಂದೆ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲ್ಪಟ್ಟವರ ಮೇಲೆ ಪ್ರಕರಣ ದಾಖಲಾಗಿದೆ ಹೊರತು ಯಾವುದೇ ರೀತಿಯ ಸಮರ್ಪಕ ತನಿಖೆ, ವಿಚಾರಣೆ ನಡೆದಿಲ್ಲ.

ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಪ್ರೇರಣೆಯಾದ ಆರೋಪಿಗಳನ್ನು ಪೊಲೀಸರು ರಾಜಕೀಯ ಒತ್ತಡದಿಂದ ಸರಿಯಾದ ವಿಚಾರಣೆಗೆ ಒಳಪಡಿಸಿಲ್ಲ ಎಂದು ಆರೋಪಿಸಿದರು.

Ad Widget

Ad Widget

Ad Widget

Ad Widget

ಮಂಗಳಪದವು ಎಂಬಲ್ಲಿ ಬ್ಯಾನರ್ ಹಾಕುವ ವಿಚಾರದಲ್ಲಿ ರಘು ಪೂಜಾರಿ ಎಂಬವರ ತೇಜೋವಧೆಗೆ ಪ್ರಯತ್ನಿಸಿದ್ದು, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ, ಸೂರಿಕುಮೇರಿನಲ್ಲಿ ಇತ್ತೀಚೆಗೆ ನಡೆದ ಅಪಘಾತದ ವೇಳೆ ಪೊಲೀಸರ ಎದುರೇ ಕೋಮ ಸಂಘರ್ಷ ನಡೆದಿದ್ದರೂ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳದೇ ಪ್ರಕರಣಕ್ಕೆ ಸಂಬಂಧ ಪಡದ ಇಬ್ಬರನ್ನು ವಶಕ್ಕೆ ಪಡೆದಿರುವುದು ಪೊಲೀಸರ ಕಾರ್ಯದಕ್ಷತೆಯ ಬಗ್ಗೆ ಶಂಕೆ ಮಾಡುವಂತೆ ಮಾಡಿದೆ.

ಅಪರಾಧಿಗಳಿಗೆ ಕಾನೂನುರೀತ್ಯಾ ಕ್ರಮ ನಡೆಯದೇ ಅಮಾಯಕರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಜನರ ಅವಶ್ಯಕತೆ, ನ್ಯಾಯಕ್ಕಾಗಿ ಇರದ ಪೊಲೀಸ್‌ಠಾಣೆ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎಂದು ಆರೋಪಿಸಿದರು.

ಸೂರಿಕುಮೇರಿನಲ್ಲಿ ನಡೆದ ಅಪಘಾತ ಪ್ರಕರಣದ ವೇಳೆ ಜಲೀಲ್ ಹತ್ಯೆ ಪ್ರಕರಣದ ಆರೋಪಿಗಳಿದ್ದರೂ ಅವರನ್ನು ವಿಚಾರಣೆಯನ್ನೇ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ನಿಕಟಪೂರ್ವ ಸದಸ್ಯ ಎಂ.ಎಸ್.ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವಿಟ್ಲ ಸುದೀಪ್ ಕುಮಾರ್ ಶೆಟ್ಟಿ, ಕಾಂಗ್ರೆಸ್ವ ಕ್ತಾರ ರಮಾನಾಥ ವಿಟ್ಲ, ನಗರ ಕಾಂಗ್ರೆಸ್ ಅಧ್ಯಕ್ಷ ವಿಕೆಎಂಅಶ್ರಫ್, ರಘು ಪೂಜಾರಿ, ನಿಶ್ಮಿತಾ ಅವರ ತಾಯಿ ಉಮಾವತಿ ಉಪಸ್ಥಿತರಿದ್ದರು.

ʼಸ್ತನ ಮತ್ತು ಎಂಡೋಕ್ರೈನ್ ಸರ್ಜರಿ ಸ್ಪೆಷಲಿಸ್ಟ್ Mch ಚಿಕಿತ್ಸೆ ನೀಡುತ್ತಿರುವ ಕರ್ನಾಟಕದ ಪ್ರಥಮ ಮಹಿಳಾ ಸರ್ಜನ್ ಎಂಬ ಖ್ಯಾತಿಯ ಪುತ್ತೂರಿನ ಡಾ. ಸ್ಮಿತಾ ಎಸ್‌. ರಾವ್‌

ಸ್ತನ, ಥೈರಾಯ್ಡ್ ಕ್ಯಾನ್ಸರ್‌ ಹಾಗೂ ಅದರ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಮಹಿಳೆಯರು ನೋಡಲೇಬೇಕಾದ ವಿಡಿಯೋ
https://youtu.be/BGu9Xy6gWVE

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: