
ಪುತ್ತೂರು: ಡಿ 3 : ಪುತ್ತೂರು ತಾಲೂಕಿನ ಕಾರಣೀಕ ಪ್ರಸಿದ್ದ ಆರಾಧನ ಕ್ಷೇತ್ರ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ
ವರ್ಷಾವಧಿ ಪಂಚಮಿ ಹಾಗೂ ಷಷ್ಠಿ ಉತ್ಸವವು ಡಿ.8 ಹಾಗೂ 9 ರಂದು ನಡೆಯಲಿದೆ.
ಈ ಪ್ರಯುಕ್ತ ಗೊನೆ ಮುಹೂರ್ತವು ಗುರುವಾರ ಬೆಳಗ್ಗೆ 9.20 ಕ್ಕೆ ನಡೆಯಿತು.
ಸ್ಥಳೀಯ ಕೆಮ್ಮಿಂಜೆ ವೇ.ಮೂ. ನಾಗೇಶ್ ತಂತ್ರಿಗಳ ತೋಟದಲ್ಲಿ ಗೊನೆ ಕಡಿಯುವ ಮೂಲಕ ಗೊನೆ ಮುಹೂರ್ತವನ್ನು ದೇವಸ್ಥಾನದ ಅರ್ಚಕ ಸದಾಶಿವ ಮುಡಂಬಡಿತ್ತಾಯ ಅವರು ನೆರವೇರಿಸಿದರು.
ಬಳಿಕ ಜಾತ್ರ ಸಂದರ್ಭದಲ್ಲಿ ದೈವಗಳಿಗೆ ನರ್ತನ ಸೇವೆ ಮಾಡುವವರಿಗೆ ವೀಳ್ಯದೆಲೆ ಅಡಿಕೆ ಹಾಗೂ ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಆಮಂತ್ರಿಸಿದರು..

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಂತ್ರಿ ಕೆ.ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಸದಸ್ಯರಾದ ದಯಾನಂದ ಎಂ., ವಿಶ್ವನಾಥ ನಾಯ್ಕ್, ವಿನುತಾ ಮೋಹನ್, ಪ್ರೇಮಲತಾ ರಾವ್, ವಿಶ್ವನಾಥ ಗೌಡ, ಚಂದ್ರಶೇಖರ ಮಾಸ್ಟರ್, ಪಿ.ಆನಂದ ಪೂಜಾರಿ, ಕೆ.ವೆಂಕಟೇಶ್, ದೇವಸ್ಥಾನದ ಕಚೇರಿ ಗುಮಾಸ್ತ ಪ್ರಶಾಂತ್ ಕೆಮ್ಮಿಂಜೆ ಮತ್ತಿತರರು ಉಪಸ್ಥಿತರಿದ್ದರು.



ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ :