ಪುತ್ತೂರು: ಡಿ 3 : ಸುಮಾರು ಒಂದೂವರೆ ವರ್ಷ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ಅಪಘಾತಕ್ಕೀಡಾದ ಪ್ರಕರಣದಲ್ಲಿ ಆತನಿಗೆ ದ್ವಿ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ಸ್ಕೂಟರ್ ಮಾಲಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಹೊರವಲಯದ ಮುಕ್ತ೦ಪಾಡಿಯ ಜಮಾಲುದ್ದೀನ್ ದಂಡಕ್ಕೆ ತುತ್ತಾದ ಸ್ಕೂಟರ್ ಮಾಲಕ. ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯವೂ ದಂಡ ವಿಧಿಸಿ ಡಿ 1 ರಂದು ಆದೇಶಿಸಿತ್ತು. ಜಮಾಲುದ್ದೀನ್ ಅವರು ಡಿ.2ರಂದು ನ್ಯಾಯಾಲಯಕ್ಕೆ ದಂಡ ಪಾವತಿಸಿದ್ದಾರೆ
ಏನಿದು ಪ್ರಕರಣ ?
2020ನೇ ಮೇ 15ರಂದು ಸೂತ್ರಬೆಟ್ಟು ಸಮೀಪ ಸಂಪ್ಯ ಮೂಲೆ ನಿವಾಸಿ ಅಪ್ರಾಪ್ತರೊಬ್ಬರು ಚಲಾಯಿಸುತ್ತಿದ್ದ ಸ್ಕೂಟರ್ ಮತ್ತು ನಾಲ್ಕು ಚಕ್ರದ ವಾಹನದ ನಡುವೆ ಅಪಘಾತ ಸಂಭವಿಸಿತ್ತು. ಘಟನೆಯ ಕುರಿತು ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅಪ್ರಾಪ್ತನಿಗೆ ಚಲಾಯಿಸಲು ವಾಹನವನ್ನು ನೀಡಿದ್ದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದ ಮಾಲಕ ಮುಕ್ತ೦ಪಾಡಿಯ ಜಮಾಲುದ್ದೀನ್ ಅವರ ವಿರುದ್ಧ ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಎಸಿಜೆಎಂ ರಮೇಶ್ ಅವರು ವಾಹನ ಮಾಲಕ ಜಮಾಲುದ್ದೀನ್ ಅವರು ರೂ.20 ಸಾವಿದೆ ದಂಡ ಪಾವತಿಸುವಂತೆ ಡಿ.1ರಂದು ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕ ಕವಿತಾ ವಾದಿಸಿದ್ದರು.
ವಾರದ ಹಿಂದೆ ಇಂತಹುದೇ ಪ್ರಕರಣ ಕೊಡಗು ಜಿಲ್ಲೆಯಲ್ಲೂ ನಡೆದಿತ್ತು ಅಲ್ಲಿ ಅಪ್ರಾಪ್ತನಿಗೆ ವಾಹನ ನೀಡಿದ ತಂದೆಗೆ ರೂ. 25000 ದಂಡ ವಿಧಿಸಾಗಿತ್ತು. ಹೀಗಾಗಿ ಅಪ್ರಾಪ್ತರಿಗೆ ವಾಹನ ಕೊಡೋದಿರೊ ನಿಯಮವನ್ನು ಎಲ್ಲರು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ
ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ :