
ಪೆರ್ಲ: ಡಿ 3 : ದೇಶ ಕಾಯುವ ಯೋಧರಿಗೆ ಕೊಡಮಾಡುವ ಪ್ರತಿಷ್ಠಿತ ‘ಉತ್ಕೃಷ್ಟ್ ಸೇವಾ ಪದಕ್’ ಪುರಸ್ಕಾರಕ್ಕೆ ಬಿಎಸ್‌ಎಫ್ ಯೋಧ ಗಡಿನಾಡ ಕನ್ನಡಿಗ, ಕಾಸರಗೋಡು ಜಿಲ್ಲೆಯ ಪೆರ್ಲದ ಬಾಲಕೃಷ್ಣ ಬಿ.ಪಡ್ರೆ ಭಾಜನರಾಗಿದ್ದಾರೆ.
ಹೊಸದಿಲ್ಲಿಯ ಬಿಎಸ್‌ಎಫ್ ನಿರ್ದೇಶನಾಲಯದ ಮೆಡಲ್ ಡೆಸ್ಕ್ ಈ ಪ್ರಶಸ್ತಿಯನ್ನು ಕೊಡ ಮಾಡುತ್ತದೆ. ಗಡಿ ಭದ್ರತಾ ಪಡೆಯ 75 ನೇ ಸಂಸ್ಥಾಪನಾ ದಿನ ಡಿ.೧, ಬಿಎಸ್ ಎಫ್ ಡೇ -2021 ಅಂಗವಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ
ಎಣ್ಮಕಜೆ ಪಂಚಾಯಿತಿ ಪಡ್ರೆ ಗ್ರಾಮದ ಬದಿ ದಿ.ಕುಂಞಪ್ಪ ನಾಯ್ಕ ಮತ್ತು ಸರಸ್ವತಿ ದಂಪತಿ ಪುತ್ರ ಬಾಲಕೃಷ್ಣ ಬಿ.ಪಡ್ರೆ 2002 ರ ಜೂನ್ 5 ರಂದು ಭಾರತೀಯ ಸೈನ್ಯಕ್ಕೆ ಪಾದಾರ್ಪಣೆ ಮಾಡಿ ಜಾರ್ಖಂಡ್ ಹಜಾರಿಭಾಗ್ ನಲ್ಲಿ ಶಸ್ತ್ರ ಬೋಧಕ ತರಬೇತಿ ಪಡೆದಿದ್ದರು.

ತರಬೇತಿ ಬಳಿಕ 3 ವರ್ಷ ರಾಜಸ್ಥಾನ, 4 ವರ್ಷ ಗುಜರಾತ್, 5 ವರ್ಷ ಕಾಶ್ಮೀರ, 5 ವರ್ಷ ಪಶ್ಚಿಮ ಬಂಗಾಳದ ಗಡಿಗಳಲ್ಲಿ ಹಾಗೂ ಪ್ರಸ್ತುತ ಛತ್ತೀಸ್ ಗಢ 81ನೇ ಬೆಟೇಲಿಯನ್ ಯುನಿಟ್ ನಲ್ಲಿ ಸೇವೆಯಲ್ಲಿದ್ದಾರೆ. ಹಲವು ಸರಕಾರಿ ಪದಕ, ಪುರಸ್ಕಾರಗಳನ್ನು ಪಡೆದ ಅವರು ನಾನಾ ಸಂಘ ಸಂಸ್ಥೆಗಳ ಗೌರವ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಸ್ಥಳೀಯವಾಗಿ ಅವರು ಪ್ರಸಿದ್ದರಾಗಿದ್ದರು

ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ :