ಉಪ್ಪಿನಂಗಡಿ: ಮನೆಯ ಹಿಂಬಾಗಿಲು ಮುರಿದು ಒಳ ಪ್ರವೇಶಿದ ಕಳ್ಳರು ಮನೆಯಲ್ಲಿದ್ದ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದ ಘಟನೆ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಉರುವಾಲು ಪದವು ಎಂಬಲ್ಲಿ ಡಿ. 1 ರಂದು ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೊಂಚು ಹಾಕಿ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ.
ಉರುವಾಲು ಪದವು ನಿವಾಸಿ ಹಮೀದ್ ಎಂಬವರ ಮನೆಯಲ್ಲಿ ಕಳ್ಳ ತನ ನಡೆದಿದೆ. ಅವರು ತಮ್ಮ ಪತ್ನಿ ಮಕ್ಕಳೊಂದಿಗೆ ನೆಲ್ಯಾಡಿಯಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದ ವೇಳೆ ಈ ಕೃತ್ಯವೂ ಜರುಗಿದೆ.
ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಮನೆಯೊಳಗಿದ್ದ ಕವಾಟಿನ ಬೀಗ ಮುರಿದು ನೆಕ್ಲೇಸ್, ಎರಡು ಉಂಗುರ ಸೇರಿದಂತೆ ಆರು ಪವನ್ ತೂಕದ ಚಿನ್ನಾಭರಣವನ್ನು ಹಾಗೂ ಸ್ವಲ್ಪ ನಗದು ಹಣವನ್ನು ಕದ್ದೊಯಿದ್ದಾರೆ.

ಕೃತ್ಯವೂ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದೂ ಹಮೀದ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ