Connect with us

ಅಪರಾಧ

ಪುತ್ತೂರು : ಬಸ್ಸು ನಿಲ್ದಾಣದ ಸಮೀಪ ವಿದ್ಯಾರ್ಥಿಗಳ ತಂಡಗಳ ಮಧ್ಯೆ ತಳ್ಳಾಟ

Ad Widget

ಪುತ್ತೂರಿನ ಬಸ್ಸು ನಿಲ್ದಾಣದ ಬಳಿ ಭಿನ್ನ ಕೋಮಿಗೆ ಸೇರಿದ ಕೆಲ ವಿದ್ಯಾರ್ಥಿಗಳ ಮಧ್ಯೆ ಹೊಯ್ ಕೈ ನಡೆದ ಪೊಲೀಸರು ಬಂದ ವೇಳೆ ಆ ವಿದ್ಯಾರ್ಥಿಗಳು ಜಾಗ ಖಾಲಿ ಮಾಡಿದ ಘಟನೆ ಡಿ . 2 ರಂದು ಮಧ್ಯಾಹ್ನ ನಡೆದಿದೆ.

Ad Widget

Ad Widget

Ad Widget

Ad Widget

ಕಳೆದ ಕೆಲ ದಿನಗಳ ಹಿಂದೆ ಪುತ್ತೂರಿನ ಸರಕಾರಿ ಜ್ಯೂನಿಯರ್‌ ಕಾಲೇಜಿನಲ್ಲಿ ಸರಣಿ ಅಹಿತಕರ ಘಟನೆಗಳು ನಡೆದಿದ್ದವು . ಇಂದು ಮತ್ತೆ ಆ ಕಾಲೇಜಿನ ಒಂದು ಕೋಮಿಗೆ ಸೇರಿದ ವಿದ್ಯಾರ್ಥಿ ಹಾಗೂ ಪುತ್ತೂರಿನ ಮತ್ತೊಂದು ಸರಕಾರಿ ಕಾಲೇಜಿನ ಇನ್ನೊಂದು ಕೋಮಿಗೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ತಳ್ಳಾಟ ನಡೆದಿಂದೆ ಎಂದು ತಿಳಿದು ಬಂದಿದೆ.

Ad Widget

Ad Widget

ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಬಾವನೆ ಕೆರಳಿಸುವ ಪೋಸ್ಟನ್ನು ಕಾಲೇಜಿನ ವಿದ್ಯಾರ್ಥಿ ಹಾಕಿದ್ದಾನೆ ಎಂದು ಜಿಡೆಕಲ್ಲು ಸಮೀಪದ ಇಬ್ಬರು ಕಾಲೇಜ್ ವಿದ್ಯಾರ್ಥಿಗಳು ಆಕ್ಷೇಪಿಸಿದ್ದು ಇದು ಮಾತಿನ ಚಕಮಕಿಗೆ ಕಾರಣವಾಗಿ ತಳ್ಳಾಟ ನಡೆದಿದೆ ಎಂದು ಹೇಳಲಾಗಿದೆ.

Ad Widget

Ad Widget

ಈ ಬಗ್ಗೆ ಸಾರ್ವಜನಿಕರಿಂದ ಮಾಹಿತ ಪಡೆದ ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಈ ವೇಳೆ ವಿದ್ಯಾರ್ಥಿಗಳು ಅಲ್ಲಿಂದ ಜಾಗ ಖಾಲಿ ಮಾಡಿದ್ದರು.

Ad Widget

Ad Widget

ಧಾರ್ಮಿಕ ಬಾವನೆಗೆ ಅವಹೇಳನ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಹಾಕಿದ ಬಗ್ಗೆ ವಿದ್ಯಾರ್ಥಿಯೊಬ್ಬ ಪುತ್ತೂರು ಠಾಣೆಗೆ ದೂರು ನೀಡಿರುವುದಾಗಿಯೂ, ಹೋಯ್ ಕೈ ನಡೆಸಿದ ಮೂರು ವಿದ್ಯಾರ್ಥಿಗಳನ್ನು ಪೊಲೀಸರು ಕರೆಸಿ ವಿಚಾರಿಸುವ ಸಾಧ್ಯತೆ ಇರುವುದಾಗಿಯೂ ತಿಳಿದು ಬಂದಿದೆ

Click to comment

Leave a Reply

ಸುಳ್ಯ

Kadaba-ಕಡಬ : ಕುಮಾರಧಾರ ನದಿಯಲ್ಲಿ ಮೊಸಳೆ ಮೃತಪಡಲು ಪ್ಲಾಸ್ಟಿಕ್ ಸೇವನೆ ಯೇ ಕಾರಣ – ನದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಪರಿಸರ ಪ್ರೇಮಿಗಳ ಕಿಡಿ

Ad Widget

ಕಡಬ ಸಮೀಪದ ಪುಳಿಕುಕ್ಕು ಬಳಿ ಕುಮಾರಧಾರ ನದಿಯಲ್ಲಿ ಮೃತಪಟ್ಟ ಮೊಸಳೆಯ ಸಾವಿಗೆ ಪ್ಲಾಸ್ಟಿಕ್ ಸೇವನೆ ಮಾಡಿರುವುದೇ ಕಾರಣ ಎನ್ನುವುದು ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆ ವೇಳೆ ಮೃತ ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಹಾಗೂ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ.

Ad Widget

Ad Widget

Ad Widget

Ad Widget

ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು ಸೇತುವೆ ಕೆಳಭಾಗದ ಕುಮಾರಧಾರ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿತ್ತು.. ಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬ ತಾಲೂಕು ಪಶು ವೈದ್ಯಾಧಿಕಾರಿ ಡಾ.ಅಜಿತ್ ನಡೆಸಿದರು.

Ad Widget

Ad Widget

ಮರಣೋತ್ತರ ಪರೀಕ್ಷೆ ವೇಳೆ ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್ ಪತ್ತೆಯಾಗಿತ್ತು. . ಈ ತ್ಯಾಜ್ಯ ಮೊಸಳೆಯ ಹೊಟ್ಟೆಯಲ್ಲಿ ಜೀರ್ಣಗೊಳ್ಳದೆ ಅಸೌಖ್ಯಗೊಂಡು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಇದೊಂದು ಹೆಣ್ಣು ಮೊಸಳೆಯಾಗಿದ್ದು ನಾಲ್ಕು ವರ್ಷ ವಯಸ್ಸಿನದ್ದು ಎಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಏನೆಕಲ್ಲಿನ ನರ್ಸರಿ ಪ್ರದೇಶದಲ್ಲಿ ಮೊಸಳೆ ಕಳೆಬರಹದ ಅಂತ್ಯ ಕ್ರಿಯೆ ನಡೆಸಲಾಯಿತು.

Ad Widget

Ad Widget

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಅರಣ್ಯ ಉಪವಿಭಾಗ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಪಂಜ ವಲಯ ಅರಣ್ಯಾಕಾರಿ ಗಿರೀಶ್, ಉಪ ವಲಯಾರಣ್ಯಾಕಾರಿಗಳಾದ ಸುಬ್ರಹ್ಮಣ್ಯ, ಅಜಿತ್ ಮತ್ತಿತರರು ಭಾಘವಹಿಸಿದ್ದರು.
ಕೆಲವು ಕಿಡಿಗೇಡಿಗಳು ಕೋಳಿ ತ್ಯಾಜ್ಯ, ದನ ಕಡಿದು ಮಾಂಸ ಮಾಡಿರುವುದರ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಎಸೆಯುತ್ತಾರೆ. ಗೋ ಕಳ್ಳರು ರಾತ್ರಿ ಹೊತ್ತು ಯಾರೂ ಇಲ್ಲದ ವೇಳೆ ನದಿಗೆ ತ್ಯಾಜ್ಯ ಎಸೆದರೆ, ಕೋಳಿ ತ್ಯಾಜ್ಯ ಎಸೆಯುವವರು ರಾತ್ರಿ ತಮ್ಮ ಅಂಗಡಿ ಬಂದ್ ಮಾಡಿದ ಬಳಿಕ ಜನಸಂದಣೀ ಇಲ್ಲದಿದ್ದ ಸಮಯ ಗಮನಿಸಿ ನದಿಗೆ ಅಥವಾ ತೋಡಿಗೆ ಎಸೆದು ಬರುತ್ತಾರೆ. ಇದರಿಂದ ನೀರು ಕಲುಷಿತಗೊಂಡು, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಇನ್ನು ಇದನ್ನು ಸೇವಿಸುವ ಜಲಚರಗಳು ಸಾವನ್ನಪ್ಪುತ್ತಿವೆ. ಇದರ ವಿರುದ್ದ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ

Ad Widget

Ad Widget
Continue Reading

ಅಪರಾಧ

Bantwal-ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನ – ರವಿ ನಾವೂರು ವಿರುದ್ದ ಪ್ರಕರಣ ದಾಖಲು

Ad Widget

ಹಿಂದೂ ಸಂಘಟನೆಯ ಮುಖಂಡನಿಗೆ ಚೂರಿಯಿಂದ ಇರಿದು ಹತ್ಯೆ ಯತ್ನಿಸಿದ ಬಗ್ಗೆ ರವಿ ನಾವೂರು ಎಂಬಾತನ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕಾಸಿನ ಮನಸ್ತಾಪದಲ್ಲಿ ಉಂಟಾದ ಜಗಳ ಕೊಲೆಯತ್ನದವರೆಗೆ ಮುಂದುವರಿದಿದೆ ಎಂದು ಬಡ್ಡಕಟ್ಟೆ, ಬಿ.ಕಸ್ಬಾ ಗ್ರಾಮ, ಬಂಟ್ವಾಳ ನಿವಾಸಿ ಗುರುರಾಜ್ (32) ಎಂಬವರು ಠಾಣೆಗೆ ದೂರು ನೀಡಿದ್ದಾರೆ.

Ad Widget

Ad Widget

Ad Widget

Ad Widget

ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಬಡ್ಡಕಟ್ಟೆ ಎಂಬಲ್ಲಿ ಏ. 14ರಂದು ರಾತ್ರಿ ಪುಷ್ಪರಾಜ್ ಎಂಬವರ ಮೇಲೆ ಹಲ್ಲೆ ನಡೆದಿತ್ತು. ಪರಸ್ಪರ ಪರಿಚಿತರಾದ ರವಿ ನಾವೂರು ಹಾಗೂ ಪುಷ್ಪರಾಜ್ ಎಂಬವರ ನಡುವೆ ಗಲಾಟೆ ನಡೆದಿದ್ದು, ಆರೋಪಿ ರವಿ ನಾವೂರು ಪುಷ್ಪರಾಜ್ ರವರಿಗೆ ಚೂರಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

Ad Widget

Ad Widget

ಹಲ್ಲೆಯಿಂದ ಗಾಯಗೊಂಡ ಪುಷ್ಪರಾಜ್ ರವರನ್ನು, ಗುರುರಾಜ್ ಹಾಗೂ ಮತ್ತೋರ್ವರು ಸೇರಿ, ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ, ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ಗಲಾಟೆ ಕುರಿತಾಗಿ ಪುಷ್ಪರಾಜ್ ಬಳಿ ಗುರುರಾಜ್‌ರವರು ವಿಚಾರಿಸಿದಾಗ, ಹಣಕಾಸಿನ ವಿಚಾರದಲ್ಲಿ ಆರೋಪಿ ಹಲ್ಲೆ ನಡೆಸಿರುವುದಾಗಿ ತಿಳಿಸಿರುತ್ತಾನೆ ಎಂಬುದಾಗಿ ಗುರುರಾಜ್‌ರವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ದ ಐಪಿಸಿ ಕಲಂ 504, 506, 307 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Ad Widget

Ad Widget
Continue Reading

ಅಪರಾಧ

Rameswaram café-ರಾಮೇಶ್ವರಂ ಕೆಫೆ ಬಾಂಬರ್ ಮತ್ತು ಮಾಸ್ಟರ್ ಮೈಂಡ್ ಕೋಲ್ಕತ್ತಾದಲ್ಲಿ ಎನ್ಐಎ ಬಲೆಗೆ

Ad Widget

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬಾಂಬರ್ ಮತ್ತು ಮಾಸ್ಟರ್ ಮೈಂಡ್ ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದ್ದ ಇಬ್ಬರನ್ನು ಎನ್ಐಎ ಅಧಿಕಾರಿಗಳು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಅಬ್ದುಲ್ ಮಥೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್ ಅವರನ್ನು ಕೋಲ್ಕತ್ತಾದ ಬಳಿ ಅವರ ಅಡಗುದಾಣದಲ್ಲಿ ಪತ್ತೆಹಚ್ಚಲಾಗಿದೆ.

Ad Widget

Ad Widget

ಮುಸ್ಸಾವಿರ್ ಹುಸೇನ್ ಶಾಜಿಬ್ ಕೆಫೆಯಲ್ಲಿ ಐಇಡಿ ಇರಿಸಿದ ಆರೋಪಿಯಾಗಿದ್ದು, ಸ್ಫೋಟದ ಕಾರ್ಯಗತಗೊಳಿಸುವಿಕೆ ಮತ್ತು ನಂತರ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುವ ಮಾಸ್ಟರ್ ಮೈಂಡ್ ಆಗಿರುವ ಅಬ್ದುಲ್ ಮಥೀನ್ ತಾಹಾನನ್ನು ಬಂಧಿಸಲಾಗಿದೆ.

Ad Widget

Ad Widget

ಎ. 12ರಂದು ಮುಂಜಾನೆ, ಎನ್‌ಐಎ ಕೋಲ್ಕತ್ತಾದ ಬಳಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದೆ ಎಂದು ಎನ್ಐಎ ಪ್ರಕಟಣೆ ತಿಳಿಸಿದೆ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading