ಪುತ್ತೂರಿನ ಬಸ್ಸು ನಿಲ್ದಾಣದ ಬಳಿ ಭಿನ್ನ ಕೋಮಿಗೆ ಸೇರಿದ ಕೆಲ ವಿದ್ಯಾರ್ಥಿಗಳ ಮಧ್ಯೆ ಹೊಯ್ ಕೈ ನಡೆದ ಪೊಲೀಸರು ಬಂದ ವೇಳೆ ಆ ವಿದ್ಯಾರ್ಥಿಗಳು ಜಾಗ ಖಾಲಿ ಮಾಡಿದ ಘಟನೆ ಡಿ . 2 ರಂದು ಮಧ್ಯಾಹ್ನ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆ ಪುತ್ತೂರಿನ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಸರಣಿ ಅಹಿತಕರ ಘಟನೆಗಳು ನಡೆದಿದ್ದವು . ಇಂದು ಮತ್ತೆ ಆ ಕಾಲೇಜಿನ ಒಂದು ಕೋಮಿಗೆ ಸೇರಿದ ವಿದ್ಯಾರ್ಥಿ ಹಾಗೂ ಪುತ್ತೂರಿನ ಮತ್ತೊಂದು ಸರಕಾರಿ ಕಾಲೇಜಿನ ಇನ್ನೊಂದು ಕೋಮಿಗೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ತಳ್ಳಾಟ ನಡೆದಿಂದೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಬಾವನೆ ಕೆರಳಿಸುವ ಪೋಸ್ಟನ್ನು ಕಾಲೇಜಿನ ವಿದ್ಯಾರ್ಥಿ ಹಾಕಿದ್ದಾನೆ ಎಂದು ಜಿಡೆಕಲ್ಲು ಸಮೀಪದ ಇಬ್ಬರು ಕಾಲೇಜ್ ವಿದ್ಯಾರ್ಥಿಗಳು ಆಕ್ಷೇಪಿಸಿದ್ದು ಇದು ಮಾತಿನ ಚಕಮಕಿಗೆ ಕಾರಣವಾಗಿ ತಳ್ಳಾಟ ನಡೆದಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಸಾರ್ವಜನಿಕರಿಂದ ಮಾಹಿತ ಪಡೆದ ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಈ ವೇಳೆ ವಿದ್ಯಾರ್ಥಿಗಳು ಅಲ್ಲಿಂದ ಜಾಗ ಖಾಲಿ ಮಾಡಿದ್ದರು.
ಧಾರ್ಮಿಕ ಬಾವನೆಗೆ ಅವಹೇಳನ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಹಾಕಿದ ಬಗ್ಗೆ ವಿದ್ಯಾರ್ಥಿಯೊಬ್ಬ ಪುತ್ತೂರು ಠಾಣೆಗೆ ದೂರು ನೀಡಿರುವುದಾಗಿಯೂ, ಹೋಯ್ ಕೈ ನಡೆಸಿದ ಮೂರು ವಿದ್ಯಾರ್ಥಿಗಳನ್ನು ಪೊಲೀಸರು ಕರೆಸಿ ವಿಚಾರಿಸುವ ಸಾಧ್ಯತೆ ಇರುವುದಾಗಿಯೂ ತಿಳಿದು ಬಂದಿದೆ