Ad Widget

ಭಜರಂಗ ದಳ ಕಾರ್ಯಕರ್ತರ ಮೇಲೆ ಅಕ್ರಮ ಗೋ ಸಾಗಾಟಗಾರರು ವಾಹನ ಹತ್ತಿಸಿದನ್ನು ಖಂಡಿಸಿ ಹಿಂದೂ ಸಂಘಟನೆಗಳು ಹಾಗೂ ಗೋ ಪ್ರೇಮಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ –ರಾಷ್ಟ್ರೀಯ ಹೆದ್ದಾರಿ ತಡೆ

vijaya-karnataka
Ad Widget

Ad Widget

Ad Widget

ತೀರ್ಥಹಳ್ಳಿ (ಶಿವಮೊಗ್ಗ): ಅಕ್ರಮ ಜಾನುವಾರು ಸಾಗಣೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ತೀರ್ಥಹಳ್ಳಿ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌, ಭಜರಂಗದಳ, ಗೋ ಪ್ರೇಮಿಗಳ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

Ad Widget

Ad Widget

Ad Widget

Ad Widget

Ad Widget

ಪ್ರತಿಭಟನಾಕಾರರು ಸುಮಾರು ಒಂದೂವರೆ ಗಂಟೆ ಶಿವಮೊಗ್ಗ – ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 169 ಮಾರ್ಗದ ಆಜಾದ್‌ ರಸ್ತೆ ತಡೆ ನಡೆಸಿದರು. ಬೆಜ್ಜವಳ್ಳಿಯಲ್ಲಿ ಅಕ್ರಮ ಜಾನುವಾರು ಸಾಗಣೆ ತಡೆಯಲು ಮುಂದಾದ ಭಜರಂಗ ದಳ ಕಾರ್ಯಕರ್ತರ ಮೇಲೆ ಅಕ್ರಮ ಜಾನುವಾರು ಸಾಗಣೆದಾರರು ವಾಹನ ಹತ್ತಿಸಲು ಯತ್ನಿಸಿದ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಪ್ರತಿಭಟನಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Ad Widget

Ad Widget

Ad Widget

Ad Widget

Ad Widget

ರಾತ್ರಿ ವೇಳೆ ರಸ್ತೆ ಮಾರ್ಗದಲ್ಲಿ ಪೊಲೀಸ್‌ ಬೀಟ್‌ ವ್ಯವಸ್ಥೆ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಿಲ್ಲ. ಜಾನುವಾರು ಅಪಹರಣ, ಅಕ್ರಮ ಸಾಗಣೆ ದಂಧೆಗೆ ಕಡಿವಾಣ ಇಲ್ಲವಾಗಿದೆ. ಹಲವು ದಿನಗಳಿಂದ ದಂಧೆ ನಿರಂತರವಾಗಿದ್ದು ಅಕ್ರಮ ಜಾನುವಾರು ಸಾಗಣೆದಾರರ ಜತೆ ಕೆಲ ಪೊಲೀಸರು ಶಾಮೀಲಾಗಿರುವುದೇ ಇದಕ್ಕೆ ಕಾರಣ. ತನಿಖೆ ನಡೆಸಿದರೆ ದಂಧೆಯ ಪೂರ್ಣ ಸತ್ಯಾಂಶ ಹೊರಬರಲಿದ್ದು ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳು ಗಮನ ಹರಿಸಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಕ್ರಮ ಜಾನುವಾರು ಸಾಗಣೆ ತಡೆಯಲು ಮುಂದಾದ ಹಿಂದೂ ಕಾರ‍್ಯಕರ್ತರುಗಳಾದ ಚರಣ್‌, ಕಿರಣ್‌ ಮೇಲೆ ವಾಹನ ಹತ್ತಿಸಲು ಯತ್ನಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಗೋ ಮಾತೆ ಸಂರಕ್ಷಣೆಗೆ ಪ್ರಾಣ ಕೊಡಲು ಸಿದ್ದ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನಾ ಸಭೆ ಉದ್ದೇಶಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮ ಚಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಆರ್‌ಎಸ್‌ಎಸ್‌ ಪ್ರಮುಖರಾದ ಭಾರತೀಪುರ ದಿನೇಶ್‌, ಕ್ಯಾದಿಗೆರೆ ಲೋಹಿತಾಶ್ವ ಮತ್ತಿತರರು ಮಾತನಾಡಿದರು. ಭಜ ರಂಗದಳ ಸಂಚಾಲಕ ಬಾಳೇಬೈಲು ಸಂತೋಷ್‌ ಪೂಜಾರಿ, ಬಿಜೆಪಿ ಮುಖಂಡರಾದ ನಾಗ ರಾಜ ಶೆಟ್ಟಿ, ಸಂದೇಶ ಜವಳಿ, ಚಂದವಳ್ಳಿ ಸೋಮಶೇಖರ್‌, ಪ್ರಶಾಂತ್‌ ಕುಕ್ಕೆ, ರಾಘವೇಂದ್ರ ನಾಯಕ್‌, ಕುರುವಳ್ಳಿ ಪೂರ್ಣೇಶ್‌ ಪೂಜಾರಿ ಮತ್ತಿತರರು ಇದ್ದರು.

Ad Widget

Ad Widget

Ad Widget

Ad Widget

ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ ಎಸ್ಪಿ

ಜಿಲ್ಲಾ ಪೊಲೀಸ್‌ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್‌ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಅಕ್ರಮ ಜಾನುವಾರು ಸಾಗಣೆ, ಇತರೆ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್‌ ಇಲಾಖೆ ಕಠಿಣ ಕಾನೂನು ಕ್ರಮ ಜರುಗಿಸುತ್ತಿದೆ. ಆರೋಪಿಗಳನ್ನು ರಕ್ಷಿಸುವ ಯಾವುದೇ ಇರಾದೆ ಇಲಾಖೆಗಿಲ್ಲ. ಪೊಲೀಸರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ತಪ್ಪು ಆಗದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಲಕ್ಷ್ಮೀ ಪ್ರಸಾದ್‌ ಭರವಸೆ ನೀಡಿದರು.

ಸ್ತನ ಕ್ಯಾನ್ಸರ್‌ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: