ಉಳ್ಳಾಲ, ಡಿ.2: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಸಹೋದರಿಯರಿಗೆ ತಲಪಾಡಿ ಬಳಿ ಕೈ ಹಿಡಿದೆಳೆದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವಿಕೃತ ಕಾಮಿಯನ್ನು ಮಂಗಳೂರು ಪೊಲೀಸರು ಡಿ.2 ರಂದು ಬಂಧಿಸಿದ್ದಾರೆ. ಕೆ.ಸಿ.ರೋಡ್ ಮುಳ್ಳುಗುಡ್ಡೆ ನಿವಾಸಿ ರಾಶಿಕ್ (22) ಬಂಧಿತ ಆರೋಪಿ. ಆರೋಪಿಯ ವಿರುದ್ದ ಪೋಕ್ಸೋ ಪ್ರಕರಣದಡಿ ಪ್ರಕರಣ ದಾಖಲಾಗಿತ್ತು
14ರ ಹರೆಯದ ವಿದ್ಯಾರ್ಥಿನಿ ತನ್ನ ತಂಗಿ ಜತೆ ಕಾಲ್ನಡಿಗೆಯಲ್ಲಿ ತಲಪಾಡಿ ಅಲಂಕಾರ ಗುಡ್ಡೆಯಿಂದ ತಲಪಾಡಿ ಚೆಕ್ ಪೋಸ್ಟ್ ಒಳ ರಸ್ತೆಯ ಮೂಲಕ ಶಾಲೆಗೆ ತೆರಳುತ್ತಿದ್ದ ವೇಳೆ ಸ್ಕೂಟರಿನಲ್ಲಿ ಬಂದ ಯುವಕನೊಬ್ಬ ಆಕೆಯ ಕೈ ಹಿಡಿದೆಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಈ ವೇಳೆ ಅಕ್ಕ ತಂಗಿಯರು ಆತನನ್ನು ದೂರಕ್ಕೆ ತಳಿ ಜೋರಾಗಿ ಕಿರಿಚಾಡಿದ್ದಾರೆ ಈ ವೇಳೆ ಆರೋಪಿಯೂ ಅಲ್ಲಿಂದ ತನ್ನ ದ್ವಿ ಚಕ್ರ ವಾಹನದಲ್ಲಿ ಪರಾರಿಯಾಗಿದ್ದ .
ಸಹೋದರಿಯರು ಈ ವಿಚಾರವನ್ನು ಮನೆಯವರಲ್ಲಿ ಹೇಳಿದ ಬಳಿಕ ಅವರ ಹೆತ್ತವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧಿಸಿ ಉಳ್ಳಾಲ ಮತ್ತು ಸಿಸಿಬಿ ಪೊಲೀಸರು ಸ್ಥಳೀಯ ಸಿಸಿಟಿವಿ ಪರಿಶಿಲನೆ ನಡೆಸಿ ಆರೋಪಿ ರಾಶಿಕ್ ನನ್ನು ಬಂಧಿಸಿದ್ದಾರೆ. ಆರೋಪಿಯೂ ಸ್ಕೂಟರಲ್ಲಿ ಬಂದು ಹೋಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಇದೇ ಆರೋಪಿಯೂ ಉಚ್ಚಿಲದಲ್ಲಿಯೂ ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿ ಇಂದು ಉಳ್ಳಾಲ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ
.