ಮಂಗಳೂರು :ಡಿ 2 : ಮಂಗಳೂರಿನ ವ್ಯಕ್ತಿಯೊಬ್ಬರು ಅಪರಿಚಿತ ವ್ಯಕ್ತಿಯ ಮಾತು ನಂಬಿ ತಮ್ಮ ಮೊಬೈಲ್‌ಗೆ ಎನಿ ಡೆಸ್ಕ್ ಆಪ್ ಇನ್‌ಸ್ಟಾಲ್ ಮಾಡಿಸಿಕೊಂಡು 99,900 ರೂಪಾಯಿ ಕಳೆದುಕೊಂಡಿದ್ದಾರೆ.
ಈ ವ್ಯಕ್ತಿಗೆ ಜೂ. 1ರಂದು ಬೆಳಗ್ಗೆ 10 ಗಂಟೆಗೆ 7908256272ನೇ ನಂಬರ್‌ನಿಂದ ಕರೆ ಬ೦ದಿದೆ. ಫೋನಿನಲ್ಲಿ ಹಿ೦ದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ತಾನು ಬಿಎಸ್‌ಎನ್ ಎಲ್ ಕಚೇರಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದನು. ಮೊಬೈಲ್ ರೀಚಾರ್ಜ್ ಅಪ್ ಡೇಟ್ ಮಾಡಲು ಎನಿಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಲು ಹೇಳಿದ್ದನು.
ಅದರಂತೆ ಈ ವ್ಯಕ್ತಿ ಆ್ಯಪ್ ಡೌನ್ ಲೋಡ್ ಮಾಡಿದಾಗ ವೆಬ್ ಪೇಜೊಂದು ಓಪನ್ ಆಗಿದೆ. ಕರೆ ಮಾಡಿದ ವ್ಯಕ್ತಿಯು ಅದರಲ್ಲಿ ಮೊಬೈಲ್ ರೀಚಾರ್ಜ್ ಮಾಡಲು ಬ್ಯಾಂಕ್ ಕಾರ್ಡ್‌ನ ಸಿವಿವಿ ಸಂಖ್ಯೆ ಹಾಕಲು ತಿಳಿಸಿದ್ದನು. ಅದರಂತೆ ಇವರು ಸಿವಿವಿ ಸಂಖ್ಯೆ ಹಾಕಿದ್ದಾರೆ. ಇದಾದ ಕೂಡಲೇ ಇವರ ಬ್ಯಾಂಕ್ ಖಾತೆಯಿಂದ 99,900 ರೂ ವರ್ಗಾವಣೆಗೊಂಡಿದೆ.
ಈ ರೀತಿಯಾಗಿ ಬಿಎಸ್‌ಎನ್‌ಎಲ್ ಕಚೇರಿಯಿಂದ ಕರೆ ಮಾಡುವುದಾಗಿ ಹಣ ವರ್ಗಾಯಿಸಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಇದೀಗ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಏನಿದು ಎನಿ ಡೆಸ್ಕ್ ಆಪ್ ?
AnyDesk ಎನ್ನುವುದು ಡೆಸ್ಕ್‌ಟಾಪ್ / ಮೊಬೈಲ್ ಪೋನಿನಲ್ಲಿ ಬಳಕೆ ಮಾಡುವ ಅಪ್ಲಿಕೇಶನ್ ಆಗಿದ್ದು, ಇದು ಕಂಪ್ಯೂಟರ್ / ಮೊಬೈಲ್ ನ ರಿಮೋಟ್ ಪ್ರವೇಶವನ್ನು ಎದುರಿನ ಪಾರ್ಟಿ ದೃಢೀಕರಿಸಿದ ಬಳಿಕ ಅನುಮತಿಸುತ್ತದೆ. ಇದು ಈಗ ಭಾರತದಲ್ಲಿ ಜನಪ್ರಿಯವಾಗಿ ಬಳಸಲ್ಪಡುತ್ತಿರುವ ಜರ್ಮನ್ ತಂತ್ರಜ್ಞಾನವಾಗಿದೆ. ಸಹೋದ್ಯೋಗಿಗಳು ಅಥವಾ ವೃತ್ತಿಪರರು ಪರಸ್ಪರ ಉತ್ತಮವಾಗಿ ಸಂಪರ್ಕ ಸಾಧಿಸಲು ಇದು ಅನುವು ಮಾಡಿಕೊಡುತ್ತದೆ. AnyDesk ಹೋಸ್ಟ್ ಅಪ್ಲಿಕೇಶನ್ ನ ಚಾಲನೆ ಸಂದರ‍್ಭ ಬಹು ದೂರದಲ್ಲಿ ಕೂತಿರುವ ವ್ಯಕ್ತಿಗೆ ನಮ್ಮ ಕಂಪ್ಯೂಟರ್ ಅಥಾವ ಇತರ ಸಾಧನಗಳ ಸ್ವತಂತ್ರ, ಬಳಕೆಗೆ ಅವಕಾಶ ಒದಗಿಸುತ್ತದೆ.
ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ