ಬೆಂಗಳೂರು: ವಿಶ್ವದೆಲ್ಲೆಡೆ ಮತ್ತಷ್ಟು ತಲ್ಲಣ ಮೂಡಿಸಿರುವ ಜನರ ನಿದ್ದೆಗೆಡಿಸಿರುವ ಕೊರೊನಾ ವೈರಸ್ ನ ರೂಪಾಂತರಿ ತಳಿ ಒಮಿಕ್ರಾನ್ ಕರ್ನಾಟಕಕ್ಕೂ ವಕ್ಕರಿಸಿದೆ. ರೂಪಾಂತರಿ ಹೊಸ ವೈರಸ್ ಒಮಿಕ್ರಾನ್ ಗುರುವಾರ ರಾಜ್ಯದ ಇಬ್ಬರಲ್ಲಿ ದೃಢಪಟ್ಟಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸೋಂಕಿತರ ಪೈಕಿ ಒಬ್ಬನ ವಯಸ್ಸು 66, ಮತ್ತೊಬ್ಬನ ವಯಸ್ಸು 46. ಇವರಿಬ್ಬರೂ ಅಮೆರಿಕಾದಿಂದ ಕರ್ನಾಟಕಕ್ಕೆ ಬಂದಿದ್ದಾರೆ. ತಪಾಸಣೆ ಮಾಡಿದಾಗ ಇಬ್ಬರಲ್ಲೂ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಆ ಮೂಲಕ ಭಾರತ ದೇಶದಲ್ಲೇ ಇದು ಮೊದಲ ಪ್ರಕರಣ ಆಗಿದೆ.
ಸುಮಾರು 29 ದೇಶಗಳಲ್ಲಿ ಇಲ್ಲಿಯವರೆಗೆ ಒಮಿಕ್ರಾನ್ ರೂಪಾಂತರದ 373 ಪ್ರಕರಣಗಳು ವರದಿಯಾಗಿವೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಭಾರತ ಮತ್ತು ಇತರ 11 ದೇಶಗಳನ್ನು ಒಳಗೊಂಡಿರುವ ಆಗ್ನೇಯ ಏಷ್ಯಾದ ದೇಶಗಳು ಕಳೆದ ಒಂದು ವಾರದಲ್ಲಿ ಕೇವಲ 1.2 ಲಕ್ಷ ಪ್ರಕರಣಗಳನ್ನು ವರದಿ ಮಾಡಿದೆ. ವಿಶ್ವದ ಪ್ರಕರಣಗಳಲ್ಲಿ ಕೇವಲ ಶೇ. 3.1ರಷ್ಟು ಮಾತ್ರ ಈ ದೇಶಗಳಲ್ಲಿ ಪತ್ತೆಯಾಗಿವೆ. ಆಗ್ನೇಯ ಏಷ್ಯಾದ ದೇಶಗಳಲ್ಲಿ ಪ್ರಕರಣಗಳು ಇಳಿಕೆಯಾಗುತ್ತಿವೆ ಎಂದರು.
ಒಟ್ಟಾರೆ ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ಯುರೋಪ್ ವಿಶ್ವದ ಶೇ.70ರಷ್ಟು ಪ್ರಕರಣಗಳನ್ನು ವರದಿ ಮಾಡಿದೆ. ನವೆಂಬರ್ 28ಕ್ಕೆ ಕೊನೆಗೊಂಡ ವಾರದಲ್ಲಿ, ಯುರೋಪಿಯನ್ ದೇಶದಲ್ಲಿ ಸುಮಾರು 2.75 ಲಕ್ಷ ಹೊಸ ಪ್ರಕರಣಗಳು ಮತ್ತು 31,000ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ ಎಂದು ಲವ್ ಅಗರ್ವಾಲ್ ಹೇಳಿದರು.

ಸ್ತನ ಕ್ಯಾನ್ಸರ್ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ