Connect with us

Uncategorized

ಶಬರಿಮಲೆ : ಅಯ್ಯಪ್ಪ ಸ್ವಾಮಿಗೆ ಗೋಗಲ್ ಪೇ ಮೂಲಕ ಕಾಣಿಕೆ ಸಲ್ಲಿಸಲು ಅವಕಾಶ

Ad Widget

Ad Widget

ಶಬರಿಮಲೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶಸಿಂದ ತಿರುವಾಂಕೂರು ದೇವಸ್ವಂ ಮಂಡಳಿಯು ‘ಗೂಗಲ್ ಪೇ‘ ಮೂಲಕ ಕಾಣಿಕೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.

Ad Widget

Ad Widget

Ad Widget

Ad Widget

ಹಿಂದಿನ ವರ್ಷಗಳಂತೆ ಈ ವರ್ಷವೂ ಟಿಡಿಬಿ ತನ್ನ ಅಧಿಕೃತ ಧನಲಕ್ಷ್ಮಿ ಬ್ಯಾಂಕ್‌ನ ಸಹಯೋಗದಲ್ಲಿ ಡಿಜಿಟಲ್ ಪಾವತಿಯ ಈ ವ್ಯವಸ್ಥೆ ಮಾಡಿದೆ. ಇದಕ್ಕಾಗಿ ಸನ್ನಿಧಾನಂ, ದೇವಾಲಯದ ಸಂಕೀರ್ಣ ಮತ್ತು ನಿಲಕ್ಕಲ್‌ ತಪ್ಪಲಿನ ಹಲವು ಸ್ಥಳಗಳಲ್ಲಿ ಕ್ಯೂಆರ್‌ ಕೋಡ್‌ ಅನ್ನು ಪ್ರದರ್ಶಿಸಲಾಗಿದೆ.

Ad Widget

Ad Widget

Ad Widget

ಇಲ್ಲಿಯವರೆಗೆ ವಿವಿಧೆಡೆ 22 ಕ್ಯೂಆರ್‌ ಕೋಡ್‌ಗಳನ್ನು ಅಳವಡಿಸಲಾಗಿದೆ. ಶಬರಿಮಲೆ ಯಾತ್ರೆಯ ಮಾರ್ಗದ ವಿವಿಧ ಸ್ಥಳಗಳಲ್ಲಿ ಇನ್ನೂ ಹೆಚ್ಚಿನ ಕ್ಯೂಆರ್‌ ಕೋಡ್‌ಗಳನ್ನು ಪ್ರದರ್ಶಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟಿಡಿಬಿ ಕಾರ್ಯನಿರ್ವಾಹಕ ಅಧಿಕಾರಿ ವಿ. ಕೃಷ್ಣಕುಮಾರ್ ವಾರಿಯರ್ ಹೇಳಿದ್ದಾರೆ.

Ad Widget
Click to comment

Leave a Reply

Uncategorized

loan write off ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂ. ರೈಟ್-ಆಫ್….

Ad Widget

Ad Widget

ನವದೆಹಲಿ: ದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂಪಾಯಿ ಸಾಲವನ್ನು ರೈಟ್ ಆಫ್ ಮಾಡಿದ್ದು, ಇದರಲ್ಲಿ 5.52 ಲಕ್ಷ ಕೋಟಿ ರೂ. ದೊಡ್ಡ ಕೈಗಾರಿಕೆಗಳಿಗೆ ಸಂಬಂಧಿಸಿರುವುದಾಗಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ನಿನ್ನೆ (ಡಿ.05) ಮಾಹಿತಿಯನ್ನು ನೀಡಿದೆ.

Ad Widget

Ad Widget

Ad Widget

Ad Widget

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾಹಿತಿಯ ಪ್ರಕಾರ ದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳು ಕಳೆದ ಐದು ಹಣಕಾಸು ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂಪಾಯಿಯನ್ನು ರೈಟ್ ಆಫ್ ಮಾಡಿವೆ ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ವಿತ್ತ ಖಾತೆಯ ರಾಜ್ಯ ಸಚಿವ ಭಾಗವತ್ ಕರದ್ ಈ ರೀತಿಯಾಗಿ ಸಂಸತ್ತಿನಲ್ಲಿ ಮಾಹಿತಿ ನೀಡಿದರು.ಇದೇ ಅವಧಿಯಲ್ಲಿ ವಸೂಲಾಗದ ಒಟ್ಟು ಸಾಲದಲ್ಲಿ (ಎನ್‌ಪಿಎ) ₹7.15 ಲಕ್ಷ ಕೋಟಿಯನ್ನು ವಸೂಲಿ ಮಾಡಲಾಗಿದೆ ಎಂದು ಹೇಳಿದರು.

Ad Widget

Ad Widget

Ad Widget

ರೈಟ್ ಆಫ್ ಮತ್ತು ಸಾಲಮನ್ನಾ ನಡುವೆ ಒಂದು ವ್ಯತ್ಯಾಸವಿದೆ. ಅದೇನೆಂದರೆ, ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ನಿಂದ ಮರುಪಾವತಿಯಾದ ಸಾಲವನ್ನು ತೆಗದುಹಾಕಿ ಎನ್ಪಿಎ ವರ್ಗಕ್ಕೆ ಸೇರಿಸುತ್ತದೆ. ಅಂದರೆ, ಸಾಲವನ್ನು ಬ್ಯಾಂಕ್ನ ಆಸ್ತಿ ಎಂದು ಪರಿಗಣಿಸುವುದಿಲ್ಲ. ಆದರೆ, ಸಾಲವನ್ನು ರೈಟ್ ಆಫ್ ಮಾಡಿದ ನಂತರವೂ ಸಾಲ ಮರುಪಾವತಿ ಪ್ರಕ್ರಿಯೆ ಮುಂದುವರಿಯುತ್ತದೆ. ಆದರೆ, ಸಾಲಮನ್ನಾ ವಿಚಾರಕ್ಕೆ ಬಂದಾಗ ಬ್ಯಾಂಕ್ ನೀಡಿದ ಸಾಲವನ್ನು ಸಂಪೂರ್ಣವಾಗಿ ವಜಾಗೊಳಿಸಲಾಗುತ್ತದೆ. ಅಂದರೆ, ಬ್ಯಾಂಕ್ ಮತ್ತು ಸಾಲ ಪಡೆದವನ ನಡುವೆ ಯಾವುದೇ ಒಪ್ಪಂದ ಇರುವುದಿಲ್ಲ. ಹೀಗಾಗಿ ಸಾಲವನ್ನು ಮರುಪಾವತಿ ಮಾಡುವ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.

Ad Widget

Heart Attack deaths Increased in India ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಭಾರೀ ಏರಿಕೆ – ಇಲ್ಲಿದೆ ಎನ್​ಸಿಆರ್​ಬಿ ವರದಿ ವಿವರ; Heart attack ಹೆಚ್ಚಳದ ಹಿಂದಿದೆ ಈ ಕಾರಣ

Ad Widget

Ad Widget

ಸುಮಾರು 2300 ಕಂಪನಿಗಳು ವಿವಿಧ ವಾಣಿಜ್ಯ ಬ್ಯಾಂಕ್‌ಗಳಿಂದ 5 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದು ಮರುಪಾವತಿ ಮಾಡಿಲ್ಲ. ಈ ಮೊತ್ತವೇ ಸುಮಾರು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳು ಮತ್ತು ನೀತಿಯ ಪ್ರಕಾರ, ಬ್ಯಾಂಕ್‌ಗಳು ಈ ಮೊತ್ತವನ್ನು ಎನ್‌ಪಿಎ ವರ್ಗಕ್ಕೆ ಸೇರಿಸಿವೆ.
ಸರ್ಕಾರದ ಸೂಕ್ತ ಕ್ರಮಗಳ ಅನುಷ್ಠಾನದಿಂದ ಇದು ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

2018-19ನೇ ಹಣಕಾಸು ವರ್ಷದಿಂದ 2022-23ನೇ ಹಣಕಾಸು ವರ್ಷದವರೆಗೆ ಕಳೆದ ಐದು ವರ್ಷಗಳಲ್ಲಿ ಬೃಹತ್ ಕೈಗಾರಿಕೆಗಳು ಮತ್ತು ಇತರೆ ಸೇವೆಗಳಿಗೆ ಸಂಬಂಧಿಸಿದ 5.52 ಲಕ್ಷ ಕೋಟಿ ರೂ.ಗಳನ್ನು ವಾಣಿಜ್ಯ ಬ್ಯಾಂಕುಗಳು ರೈಟ್ ಆಫ್ ಮಾಡಿವೆ. ಇದರಲ್ಲಿ 93,874 ಕೋಟಿ ರೂ. ವಂಚನೆಯ ಹಣವೂ ಸೇರಿದೆ. ಒಟ್ಟು 10.57 ಲಕ್ಷ ಕೋಟಿ ರೂ.ಗಳು ಅಂದರೆ, ಶ್ರೀಮಂತರ ಲಕ್ಷಾಂತರ ಕೋಟಿ ರೂಪಾಯಿ ಕೂಡ ಮನ್ನಾವಾದಂತೆ.

Gold Rate Hike:ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ : ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಜಿಗಿತ – ಮುಂದಿನ ದಿನಗಳಲ್ಲಿ ರೇಟ್‌ ಹೇಗಿರಲಿದೆ?

Continue Reading

Uncategorized

New Simcard Rules :ಸಿಮ್‌ ಕಾರ್ಡ್‌ ಖರೀದಿಗೆ ಕೇಂದ್ರ ಸರಕಾರ ಜಾರಿಗೆ ತಂದಿದೆ ಕಠಿಣ ನಿಯಮಗಳು – ಬೇಕಾಬಿಟ್ಟಿ ಅಕ್ಟಿವೇಶನ್‌ ಗೆ ಕಡಿವಾಣ – ಇಲ್ಲಿದೆ ಕಂಪ್ಲಿಟ್‌ ಡಿಟೈಲ್‌

Ad Widget

Ad Widget

New simcard Rules: ಒಂದು ಕಾಲದಲ್ಲಿ ನಾಯಿ ಕೊಡೆಗಳಂತೆ ಬೇಕಾಬಿಟ್ಟಿಯಾಗಿ ಸಿಗುತ್ತಿದ್ದ ಮೊಬೈಲ್ ಸಿಮ್ ಕಾರ್ಡ್ (Sim card) ಗಳ ಖರೀದಿ ಎನ್ನುವುದು ಮುಂದಿನ ದಿನಗಳಲ್ಲಿ ಗಜ ಪ್ರಸವ ಆಗಲಿದೆ. ಈ ಹಿಂದೆ ಯಾರು ಯಾರದೋ ಗುರುತಿನ ಚೀಟಿ (ID Card) ಭಾವಚಿತ್ರಕ್ಕೆ ಇನ್ಯಾರಿಗೋ ಸಿಮ್ ಕಾರ್ಡ್ ನೀಡುತ್ತಿದ್ದ ಹಲವು ನಿದರ್ಶನಗಳು ಕಂಡು ಬಂದಿದ್ದವು . ವಂಚಕರು ಕಾಳ ಸಂತೆಯಲ್ಲಿ ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿ , ಅದನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದನ್ನು ನಾವು ಕಾಣಬಹುದು . ಸದ್ಯ ಪೊಲೀಸರಿಗೆ ಅಪರಾಧ ತನಿಖೆಯಲ್ಲಿ ಸಿಮ್ ಕಾರ್ಡ್ ಅತೀ ದೊಡ್ಡ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಅಲ್ಲದೇ ದೇಶದಲ್ಲಿ ದಿನೇದಿನೆ ಸೈಬರ್ ಪ್ರಾಡ್ ಗಳು ಹೆಚ್ಚುತ್ತಿದ್ದು, ವಂಚಕರು ಪೊಲೀಸ್ ತನಿಖೆಯಿಂದ ತಪ್ಪಿಸಿಕೊಳ್ಳಲು ನಕಲಿ ಸಿಮ್ ಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ.

Ad Widget

Ad Widget

Ad Widget

Ad Widget

ಹೀಗಾಗಿ ಸಿಮ್ ಕಾರ್ಡ್ಗಳ ಮೋಸದ ಮಾರಾಟವನ್ನು ತಡೆಯಲು ಭಾರತದ ಟೆಲಿಕಾಂ ಇಲಾಖೆ ಈ ವರ್ಷದ ಆಗಸ್ಟ್ನಲ್ಲಿ ಟೆಲಿಕಾಂ ಆಪರೇಟರ್ಗಳಿಗೆ ಹೊಸ ನಿಯಮಗಳನ್ನು ಘೋಷಿಸಿತ್ತು. ಆರಂಭದಲ್ಲಿ, ಈ ನಿಯಮಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ನಿಯಮಗಳ ಜಾರಿಯನ್ನು ಎರಡು ತಿಂಗಳ ಕಾಲ ಮುಂದೂಡಲಾಯಿತು.

Ad Widget

Ad Widget

Ad Widget

ದೂರಸಂಪರ್ಕ ಇಲಾಖೆ (DoT) ನಕಲಿ ಸಿಮ್ ಕಾರ್ಡ್ಗಳಿಗೆ ಸಂಬಂಧಿಸಿದ ವಂಚನೆಗಳನ್ನು ತಡೆಗಟ್ಟಲು ಡಿಸೆಂಬರ್ 1, 2023 ರಿಂದ ಹೊಸ ಸಿಮ್ ಕಾರ್ಡ್ ನಿಯಮಗಳನ್ನು ಜಾರಿಗೆ ಬಂದಿದೆ. ನಕಲಿ ಸಿಮ್ ಕಾರ್ಡ್ಗಳಿಗೆ ಲಿಂಕ್ ಮಾಡಲಾದ ವಂಚನೆಗಳನ್ನು ಪರಿಹರಿಸಲು ಈ ನಿಯಮಗಳನ್ನು ರೂಪಿಸಲಾಗಿದ್ದು, ಅನುಸರಿಸದಿದ್ದಲ್ಲಿ ದಂಡ ಮತ್ತು ಜೈಲು ಶಿಕ್ಷೆಗೆ ಒಳಗಾಗಬಹುದು.

Ad Widget

ಹೊಸ ಸಿಮ್ ಕಾರ್ಡ್ ಪಡೆಯಲು ಸಾಮಾನ್ಯವಾಗಿ ಗುರುತಿನ ಚೀಟಿಯನ್ನು ಕೊಟ್ಟರೆ ಕೆಲವು ಗಂಟೆಗಳ ನಂತರ ಸಿಮ್ ಕಾರ್ಡ್ ಆಕ್ಟಿವೇಶನ್ ಆಗುತ್ತಿತ್ತು, ಆದರೆ ಈಗ ಅದು ಸಾಧ್ಯವಿಲ್ಲ.ದೂ ಇನ್ನು ಮುಂದೆ, ಮಾರಾಟಗಾರರು ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವಲ್ಲಿ ಅನೇಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

Ad Widget

Ad Widget

ದೂರಸಂಪರ್ಕ ಇಲಾಖೆಯ ಈ ನಿಯಮವನ್ನು ಪಾಲಿಸದಿದ್ದರೆ 10 ಲಕ್ಷ ರೂಪಾಯಿಗಳವರೆಗೆ ದಂಡ ಕಟ್ಟಬೇಕು. ದೇಶದಲ್ಲಿ ಹೆಚ್ಚುತ್ತಿರುವ ಸಿಮ್ ಕಾರ್ಡ್ ವಂಚನೆ ದರವನ್ನು ತಡೆಯಲು ಸರ್ಕಾರದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಕಲಿ ಸಿಮ್ ಕಾರ್ಡ್ಗಳ ಮಾರಾಟವನ್ನು ತಡೆಯಲು ಮಾರಾಟಗಾರರಿಗೆ ಈ ನಿಯಮ ತಂದಿದ್ದರೂ, ಇದು ಖರೀದಿದಾರರ ಮೇಲೂ ಪರಿಣಾಮ ಬೀರುತ್ತದೆ.
ಪ್ರಮುಖವಾಗಿ ಪ್ರಿ-ಆಕ್ಟಿವೇಟೆಡ್ ಸಿಮ್ ಕಾರ್ಡ್ಗಳು ದೇಶದಲ್ಲಿ ಮಾರಾಟವಾಗುತ್ತಿರುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ, ಆ ಸಿಮ್ಗಳನ್ನು ಬೇರೆಯವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈಗ ಸಿಮ್ ಕಾರ್ಡ್ ಮಾರಾಟವನ್ನು ಕಟ್ಟುನಿಟ್ಟಾಗಿ ಮಾಡಲು ಸಾಧ್ಯವಾದರೆ, ಅಂತಹ ವಂಚನೆಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಸರ್ಕಾರ ಹೇಳಿದೆ.

ಹೊಸ ಸಿಮ್ ಕಾರ್ಡ್ ಪಡೆಯಲು ನಿಯಮಗಳು :

*ವ್ಯಾಪಾರ ಸಂಪರ್ಕದ ಮೂಲಕ ಮಾತ್ರ ಸಿಮ್ ಕಾರ್ಡ್ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿಸಲಾಗಿದೆ. ಸಾಮಾನ್ಯ ಬಳಕೆದಾರರು ಹಿಂದಿನಂತೆ ಈಗಲೂ ಕೂಡ ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್ಗಳನ್ನು ಪಡೆಯಬಹುದು.
*ಸಿಮ್ ಕಾರ್ಡ್ ಅನ್ನು ಕ್ಲೋಸ್ ಆದ 90 ದಿನಗಳ ಅವಧಿಯ ನಂತರವೇ ಆ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಲಾಗುತ್ತದೆ.
*ಅಸ್ತಿತ್ವದಲ್ಲಿರುವ ತಮ್ಮ ಫೋನ್ ಸಂಖ್ಯೆಗಳಿಗೆ ಸಿಮ್ ಕಾರ್ಡ್ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ ಮತ್ತು ಇತರ ಡೆಮೊಗ್ರಾಫಿಕ್ ಡೇಟಾವನ್ನು ಸಲ್ಲಿಸಬೇಕಾಗುತ್ತದೆ.
*ರಿಜಿಸ್ಟರ್ ಆಗದ ಡೀಲರ್ಗಳ ಮೂಲಕ ಸಿಮ್ ಕಾರ್ಡ್ಗಳ ಮಾರಾಟ ಮಾಡಿಸಿದರೆ ಟೆಲಿಕಾಂ ಆಪರೇಟರ್ಗಳ ಮೇಲೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
*ರಿಜಿಸ್ಟರ್ ಆಗದ ಡೀಲರ್ಗಳ ಮೂಲಕ ಪಡೆದ ಸಿಮ್ ಕಾರ್ಡ್ ಹಾಗೂ ಫೋನ್ ನಂಬರ್ಗಳನ್ನು ಮರುಪರಿಶೀಲಿಸಲಾಗುತ್ತದೆ.
*ಅಸ್ತಿತ್ವದಲ್ಲಿರುವ ಪಾಯಿಂಟ್ ಆಫ್ ಸೇಲ್ (ಪಿಒಎಸ್) ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಪಿಒಎಸ್ ಅಥವಾ ಚಿಲ್ಲರೆ ವ್ಯಾಪಾರಿಗಳು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಲಿಮಿಟೆಟ್ ಲಯಾಬಿಲಿಟಿ ಪಾರ್ಟ್ನರ್ಶಿಪ್ ಐಡೆಂಟಿಫಿಕೇಶನ್ ನಂಬರ್ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್, ಪಾನ್ ಕಾರ್ಡ್, ಸರಕು ಮತ್ತು ಸೇವಾ ತೆರಿಗೆ (GST) ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.
*ಪಿಒಎಸ್ CIN, LLPIN, ಇನ್ಕಾರ್ಪೊರೇಶನ್ ಪ್ರಮಾಣಪತ್ರ, ಪಾನ್ ಮತ್ತು ಜಿಎಸ್ಟಿ ಪ್ರಮಾಣಪತ್ರವಿಲ್ಲದಿದ್ದರೆ, ಅದು ಅಫಿಡವಿಟ್ ಸಲ್ಲಿಸಬೇಕು. ಮತ್ತು ಈ ದಾಖಲೆಗಳನ್ನು ಲಭ್ಯವಾದ ತಕ್ಷಣವೇ ಸಲ್ಲಿಸಬೇಕಾಗುತ್ತದೆ.

* ಒಂದು ವೇಳೆ ಪಿಒಎಸ್ ನಕಲಿ ದಾಖಲೆಗಳನ್ನು ಸಲ್ಲಿಸಿದರೆ ಟೆಲಿಕಾಂ ಆಪರೇಟರ್ಗಳು ಅದರ ಐಡಿ ಅನ್ನು ನಿರ್ಬಂಧಿಸಬೇಕಾಗುತ್ತದೆ ಮತ್ತು ಪಿಒಎಸ್ ನಿಂದ ನೋಂದಾಯಿಸಲ್ಪಟ್ಟ ಎಲ್ಲಾ ಗ್ರಾಹಕರ ಸಿಮ್ಗಳನ್ನು ಮರುಪರಿಶೀಲಿಸಬೇಕಾಗುತ್ತದೆ.

Continue Reading

Uncategorized

Yettinahole project: ಎತ್ತಿನಹೊಳೆ‌  ಯೋಜನೆ  ಪ್ರಾಯೋಗಿಕ ಪರೀಕ್ಷೆ : ಪೈಪ್‌ ಗಳಿಂದ  ಭಾರಿ ಪ್ರಮಾಣದ ನೀರು ಸೋರಿಕೆ – ನಡುಗಿದ ಭೂಮಿ, ಅದುರಿದ ಮನೆಗಳು – 6 ಕಿಮೀಗೆ ಹೀಗಾದರೇ  ನೂರಾರು ಕಿಮೀ ಹರಿಯುವಾಗ ಏನಾಗಬಹುದು?

Ad Widget

Ad Widget

ಹಾಸನ: ಎತ್ತಿನಹೊಳೆ ಯೋಜನೆಯ (Yettinahole project) ಅಂಗವಾಗಿ ಕಟ್ಟಲಾಗಿರುವ ಸಕಲೇಶಪುರ (Sakleshpur) ತಾಲ್ಲೂಕಿನ  ಕಾಡುಮನೆ  ಚೆಕ್ ಡ್ಯಾಂನಿಂದ  ದೊಡ್ಡ ನಾಗರ ಶೇಖರಣಾ ಘಟಕಕ್ಕೆ ಅಧಿಕಾರಿಗಳು ನಿನ್ನೆ ಪ್ರಾಯೋಗಿಕವಾಗಿ ನೀರು ಹರಿಸಿದ್ದಾರೆ. ಇದುವರೆಗೆ ಪೈಪ್‌ಲೈನ್ ಪೂರ್ಣಗೊಂಡಿರುವ 6 ಕಿ.ಮೀಗಳಷ್ಟು ದೂರದವರೆಗೆ ಪ್ರಾಯೋಗಿಕವಾಗಿ ನೀರು ಹರಿಸಿದ್ದಾರೆ.

Ad Widget

Ad Widget

Ad Widget

Ad Widget

ಹೀಗೆ ಪ್ರಾಯೋಗಿಕವಾಗಿ ನೀರು ಹರಿಸಿದ ವೇಳೆ ಭಾರಿ ಪ್ರಮಾಣದ ನೀರು (Water leakage) ಸೋರಿಕೆಯಾಗಿದೆ. ಅರ್ಧಕ್ಕೂ ಹೆಚ್ಚು ನೀರು ಪೈಪ್‌ಲೈನ್‌ನಿಂದ ಆಚೆ ಬಂದಿದೆ. ಹಲವೆಡೆ ರಸ್ತೆ ಕುಸಿತವುಂಟಾಗಿದೆ. ಹಾಸನ ಜಿಲ್ಲೆಯ ದೇಖಲ, ಕುಂಬರಡಿ, ಮಲ್ಲಾಗದ್ದೆ ಗ್ರಾಮಗಳಲ್ಲಿ ರಸ್ತೆಗಳು ಕುಸಿದಿವೆ. ಈ ಎಲ್ಲ ಕಡೆ ರಸ್ತೆ ಹಾನಿಯಿಂದ ಜನರ ಓಡಾಟಕ್ಕೆ ತೊಂದರೆಯಾಯಿತು.   ಪೈಪ್‌  ನಿಂದ ನೀರು ಸೋರಿಕೆಯ ರಭಸಕ್ಕೆ ದೇಖಲ ಗ್ರಾಮದಲ್ಲಿ ಮುಖ್ಯ ರಸ್ತೆಯೊಂದು ಕುಸಿದಿದೆ. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಕಾಫಿ ಮಂಡಳಿಯ ಜೀಪು ಈ ಗುಂಡಿಯೊಳಗೆ ಸಿಕ್ಕಿಕೊಂಡು ಹರಸಾಹಸದಿಂದ ಮೇಲೆತ್ತಲಾಗಿದೆ.

Ad Widget

Ad Widget

Ad Widget

ಕಾಡಮನೆಯಿಂದ ದೊಡ್ಡನಾಗರ ನೀರು ಶೇಖರಣಾ ಕೇಂದ್ರದವರೆಗೆ, ಕಾಡಮನೆ, ಮಲ್ಲಾಗದ್ದೆ, ನಡಹಳ್ಳಿ, ದೇಖಲ, ಕುಂಬರಡಿ, ಹೆಬ್ಬಸಾಲೆ ಮುಖ್ಯ ರಸ್ತೆಯ ಬದಿಯಲ್ಲಿಯೇ ಪೈಪ್‌ಗಳನ್ನು ಜೋಡಿಸಲಾಗಿದೆ.. ಭೂಮಿಯೊಳಗೆ ಜೋಡಣೆ ಮಾಡಿರುವ ಪೈಪ್‌ನಲ್ಲಿ ನೀರು ಹರಿಯುವ ವೇಗ ಹಾಗೂ ಒತ್ತಡಕ್ಕೆ ಮೇಲ್ಬಾಗದ ಭೂಮಿ ನಡುಗುತ್ತದೆ. ಮನೆಯೇ ಅದುರುತ್ತಿದ್ದು, ಭಯದಿಂದ ಮನೆಯೊಳಗಿನಿಂದ ಹೊರಗೆ ಓಡಿ ಬಂದಿದ್ದಾಗಿ’ ದೇಖಲ ಗ್ರಾಮಸ್ಥರು ಹೇಳಿದ್ದಾರೆ.

Ad Widget

ಈ ʼಪ್ರಾಯೋಗಿಕ ಅನಾಹುತʼದ ಪರಿಣಾಮ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ನೀರು ಹರಿಸುವಿಕೆ ನಿಲ್ಲಿಸಿದ್ದಾರೆ. ಆರು ಕಿಲೋಮೀಟರ್‌ ಕಾಮಗಾರಿಗೇ ಇಷ್ಟು ಅನಾಹುತ ಆದರೆ, ಇನ್ನು ಕೋಲಾರದವರೆಗೂ ತಲುಪಬೇಕಿರುವ ನೂರಾರು ಕಿಲೋಮೀಟರ್‌ ಕಾಮಗಾರಿ ಹೇಗಿರಬಹುದು, ಏನೇನು ಅನಾಹುತ ಉಂಟುಮಾಡಬಹುದು ಎಂದು ಸ್ಥಳೀಯರು ಪ್ರಶ್ನಿಸುವಂತಾಗಿದೆ.

Ad Widget

Ad Widget

ಒಟ್ಟು 8 ಪಂಪ್‌ಗಳಿಂದ, 5 ಪೈಪ್‌ಗಳಲ್ಲಿ ದೊಡ್ಡನಾಗರ ಶೇಖರಣಾ ಕೇಂದ್ರಕ್ಕೆ ನೀರು ಹರಿಸಲಾಗುತ್ತದೆ. ಕಾಡಮನೆ ವೈರ್ 5 ರಿಂದ ಡಿಸಿ 2 ರವರೆಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ. ನೀರು ಯಾವ ರೀತಿ ಹರಿಯುತ್ತದೆ ಎಂಬುದನ್ನು ಪರೀಕ್ಷೆ ಮಾಡಲು, ಈ ಮಾರ್ಗದ 6 ಕಿ.ಮೀ. ಪ್ರದೇಶದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.

‘ಭೂಮಿಯೊಳಗೆ ಪೈಪ್‌ಗಳನ್ನು ಜೋಡಣೆ ಮಾಡಿ 5 -6 ವರ್ಷಗಳಾಗಿವೆ. ಹಾಗಾಗಿ ಕೆಲವೆಡೆ ವೆಲ್ಡಿಂಗ್ ಬಿಟ್ಟು ಹೋಗಿರುವುದು, ಮತ್ತೆ ಕೆಲವು ತಾಂತ್ರಿಕ ಕಾರಣಗಳಿಂದ ಕೆಲವೆಡೆ ನೀರು ಸೋರಿಕೆ ಆಗಿದೆ. ನೀರು ಹರಿಸಿ ಪರೀಕ್ಷೆ ಮಾಡುವುದರಿಂದ ಇಂತಹ ಸೋರಿಕೆ, ನೀರು ಹರಿವಿನ ಒತ್ತಡ ಗೊತ್ತಾಗುತ್ತದೆ’ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯಪಾಲಕ ಎಂಜಿನಿಯ‌ರ್ ವೆಂಕಟೇಶ್ ತಿಳಿಸಿದ್ದಾರೆ.

“ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಲಾಗಿದೆ. ದುರಸ್ತಿ ಕಾಮಗಾರಿಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ. ರಸ್ತೆ ಹಾಗೂ ಇನ್ನಿತರ ಯಾವುದೇ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿ ಹಾನಿ ಆಗಿದ್ದರೆ ದುರಸ್ತಿ ಮಾಡಲಾಗುವುದು. ಈ ಬಗ್ಗೆ ಸುತ್ತಲಿನ ಗ್ರಾಮಸ್ಥರು ಆತಂಕ ಪಡುವುದು ಬೇಡ. ಯಾವುದೇ ಸಮಸ್ಯೆಗಳಿದ್ದರೂ ಇಲಾಖೆ ತಕ್ಷಣ ಸ್ಪಂದಿಸುತ್ತದೆ’ ಎಂದು ಭರವಸೆ ನೀಡಿದ್ದಾರೆ.

ಸಕಲೇಶಪುರ (Sakleshpura) ತಾಲೂಕಿನ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಮತ್ತು ಹೊಂಗಡಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹ ನೀರನ್ನು ಏಳು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ 6,657 ಗ್ರಾಮಗಳ 75.59 ಲಕ್ಷ ಜನ-ಜಾನುವಾರುಗಳಿಗೆ 13.931 ಟಿಎಂಸಿ ಕುಡಿಯುವ ನೀರು ಒದಗಿಸುವುದು ಎತ್ತಿನ ಹೊಳೆ ಯೋಜನೆಯ ಪ್ರಮುಖ ಉದ್ದೇಶ

ಇದರ ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ಐದು ಜಿಲ್ಲೆಯ ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 10.064 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ 50% ರಷ್ಟು ತುಂಬಿಸಿ ಅಂತರ್ಜಲ ಮರುಪೂರ್ಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

Continue Reading

Trending

error: Content is protected !!