ಹಾವೇರಿ, ಡಿಸೆಂಬರ್ 01: ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರ, ನೈತಿಕತೆಯನ್ನು ಹೇಳಿಕೊಡುವ ಮೂಲಕ ಆದರ್ಶ ನಡವಳಿಕೆ ತೋರಬೇಕಾದ ಗುರುವಿನ ಮೇಲೆಯೇ ಗುರುತರ ಆರೋಪವೊಂದು ಹಾವೇರಿ ಜಿಲ್ಲೆಯಲ್ಲಿ ಕೇಳಿ ಬಂದಿದೆ
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿರುವ ಶಾಲಾ ಶಿಕ್ಷಕ ತಾನು ಓದು ಕಲಿಸುತ್ತಿರುವ ವಿದ್ಯಾರ್ಥಿನಿಗೆ ಕಾಮ ಪಾಠ ಮಾಡಲು ಹೋಗಿ ತಗಲಾಕಿಕೊಂಡಿದ್ದಾನೆ. ಅನ್ ಲೈನ್ ಕ್ಲಾಸಿಗೆಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ನೀಡಿದ ಮೊಬೈಲ್ ನಂಬರನ್ನು ದುರ್ಬಳಕೆ ಮಾಡಿಕೊಂಡು ಆಕೆಯ ಪೋಷಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ .
ಈ ಹಳ್ಳಿ ಮೇಷ್ಟ್ರು ಮಲ್ಲಪ್ಪ ತಳವಾರ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿಷಯ ತಿಳಿಯುತ್ತಲೇ ಶಾಲೆ ಮುಂದೆ ಸೇರಿದ ಪೋಷಕರು ಮತ್ತು ಗ್ರಾಮಸ್ಥರ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಷ್ಟಕ್ಕೂ ಆದ್ದದ್ದು ಏನೇಂದರೆ ವರಗುಡ್ಡ ಗ್ರಾಮದ ಪ್ರೌಢಶಾಲೆ ಶಿಕ್ಷಕ ಮಲ್ಲಪ್ಪ ತಳವಾರ 10ನೇ ತರಗತಿ ವಿದ್ಯಾರ್ಥಿನಿಯ ಫೋನ್ ನಂಬರ್ ಅನ್ನು ತೆಗೆದುಕೊಂಡ ಆಕೆಗೆ ಅಶ್ಲೀಲ ಮೆಸೇಜ್ ಗಳನ್ನ ಕಳಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ.
ಆತ ವಿದ್ಯಾರ್ಥಿನಿಗೆ ಕಳುಹಿಸಿದ ಪೋಲಿ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ. ಈ ಸಂದೇಶಗಳನ್ನು ಓದಿರುವ ಪ್ರಜ್ನಾವಂತರು ಒಬ್ಬ ಶಿಕ್ಷಕ ಈ ರೀತಿಯೂ ಅಶ್ಲೀಲ ಸಂದೇಶ ಬರೆಯಬಹುದೆ ಎಂದು ಬೆಕ್ಕಸ ಬೆರಗಾಗಿದ್ದಾರೆ .

ಈತನ ವರ್ತನೆಯಿಂದ ಕೆಂಡಮಂಡಲಾರದ ಊರಿನ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು, ಕೂಡಲೇ ಆ ಶಿಕ್ಷಕನನ್ನು ಬಂಧಿಸಿ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸದ್ಯ ವಿದ್ಯಾರ್ಥಿನಿಯ ಕುಟುಂಬ ಮಲ್ಲಪ್ಪನ ವಿರುದ್ಧ ದೂರು ನೀಡಿದ್ದು, ಆತನನ್ನು ಶಾಲೆಯಿಂದ ಅಮಾನತು ಮಾಡಲಾಗಿದ್ದು, ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಪಿಎಸ್‍ಐ ವಸಂತ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.