ಪ್ರೋ ಕಬಡ್ಡಿ ಸೀಸನ್‌ 8 – ಮೊದಲ ಹಂತದ ವೇಳಾಪಟ್ಟಿ ಪ್ರಕಟ | ಪ್ರೇಕ್ಷಕರಿಗಿಲ್ಲ ಪ್ರವೇಶ

Ad Widget

Ad Widget

Ad Widget

 ಬೆಂಗಳೂರು: ಡಿ 1 : ಮಾಷಾಲ್ ಸ್ಪೋರ್ಟ್ಸ್ ಆಯೋಜಿಸುತ್ತಿರುವ ಪ್ರೊ ಕಬಡ್ಡಿ ಟೂರ್ನಿಯ ಎಂಟನೇ ಆವೃತ್ತಿಯ ಪಂದ್ಯಗಳು ಹೋಟೆಲ್‌ನಲ್ಲಿ ನಡೆಯಲಿವೆ. ಇದೇ ತಿಂಗಳ 22ರಂದು ಟೂರ್ನಿ ಆರಂಭವಾಗಲಿದ್ದು ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

Ad Widget

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರೆಟಾನ್ ಗ್ರ್ಯಾಂಡ್ ಹೋಟೆಲ್‌ನ ಸಭಾಂಗಣವನ್ನೇ ಕ್ರೀಡಾಂಗಣದ ಮಾದರಿಯಲ್ಲಿ ಸಿದ್ಧಗೊಳಿಸಿ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ.  ಕೋವಿಡ್‌–19ರ ಆತಂಕದಿಂದಾಗಿ ಈ ಕ್ರಮಕ್ಕೆ ಆಯೋಜಕರು ಮುಂದಾಗಿದ್ದಾರೆ. ಪ್ರೇಕ್ಷಕರಿಗೆ ಪ್ರವೇಶ ನೀಡದೇ ಇರಲು ನಿರ್ಧರಿಸಲಾಗಿದೆ. ಈಗಾಗಲೇ ಕ್ರೀಡಾಂಗಣ ಸಜ್ಜುಗೊಳಿಸುವ ಕಾರ್ಯ ಅಂತಿಮ ಹಂತದಲ್ಲಿದೆ

Ad Widget

Ad Widget

Ad Widget

ಮೊದಲ ನಾಲ್ಕು ದಿನ ಟ್ರಿಪಲ್ ಹೆಡರ್ಸ್‌ (ಪ್ರತಿ ದಿನ ಮೂರು ಪಂದ್ಯ) ಮತ್ತು ಶನಿವಾರಗಳಲ್ಲಿ ಟ್ರಿಪಲ್ ಪಂಗಾ (ಮೂರು ಪಂದ್ಯ) ಈ ಬಾರಿಯ ವೈಶಿಷ್ಟ್ಯವಾಗಿದೆ. ಮೂರು ಪಂದ್ಯಗಳು ಇರುವ ದಿನಗಳಲ್ಲಿ ಮೊದಲ ಹಣಾಹಣಿ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಎರಡನೇ ಪಂದ್ಯ 8.30ಕ್ಕೆ ಮತ್ತು ಕೊನೆಯ ಪಂದ್ಯ 9.30ಕ್ಕೆ ಆರಂಭವಾಗಲಿದೆ.

Ad Widget

ಎಂಟನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳು ಸೆಣಸಲಿದೆ. ’ದಕ್ಷಿಣ ಡರ್ಬಿ‘ ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ತಮಿಳ್ ತಲೈವಾಸ್ ಹಣಾಹಣಿ ನಡೆಯಲಿದೆ. ಯುಪಿ ಯೋಧಾ ಮತ್ತು ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಕೊನೆಯ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಎರಡನೇ ಹಂತದ ವೇಳಾಪಟ್ಟಿ ಜನವರಿ ಎರಡನೇ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Ad Widget

Ad Widget

‘ದೇಶಿ ಸೊಬಗಿನ ಕಬಡ್ಡಿಯನ್ನು ಹೆಚ್ಚು ರೋಮಾಂಚಕವಾಗಿಸುವುದಕ್ಕಾಗಿ ಹೊಸ ಮಾದರಿಯನ್ನು ಜಾರಿಗೆ ತರಲಾಗಿದೆ. ‘ಟ್ರಿಪಲ್‌’ ಪಂದ್ಯಗಳು ಪ್ರೇಕ್ಷಕರಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಲು ನೆರವಾಗಲಿದೆ. ಎರಡು ಹಂತಗಳಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡುವುದರಿಂದ ತಂಡಗಳಿಗೆ ರಣತಂತ್ರಗಳನ್ನು ಹೆಣೆಯುವುದು ಸುಲಭವಾಗಲಿದೆ’ ಎಂದು ಲೀಗ್ ಕಮಿಷನರ್‌ ಅನುಪಮ್ ಗೋಸ್ವಾಮಿ ಅಭಿಪ್ರಾಯಪಟ್ಟರು.

ವೇಳಾಪಟ್ಟಿ
ವೇಳಾಪಟ್ಟಿ

ಮೊದಲ ಹಂತದಲ್ಲಿ ಬೆಂಗಳೂರು ಬುಲ್ಸ್ ಪಂದ್ಯಗಳು

ದಿನಾಂಕ;ಎದುರಾಳಿ;ಸಮಯ

ಡಿ.22;ಯು ಮುಂಬಾ;7.30

ಡಿ.24;ತಮಿಳ್‌ ತಲೈವಾಸ್;8.30

ಡಿ.26;ಬೆಂಗಾಲ್ ವಾರಿಯರ್ಸ್‌;8.30

ಡಿ.30;ಹರಿಯಾಣ ಸ್ಟೀಲರ್ಸ್‌;8.30

ಜ.1;ತೆಲುಗು ಟೈಟಾನ್ಸ್;8.30

ಜ.2;ಪುಣೇರಿ ಪಲ್ಟನ್‌;8.30

ಜ.6;ಜೈಪುರ್ ಪಿಂಕ್ ‍ಪ್ಯಾಂಥರ್ಸ್‌;8.30

ಜ.9;ಯು.ಪಿ.ಯೋಧಾ;8.30

ಜ.12;ದಬಾಂಗ್ ಡೆಲ್ಲಿ;8.30

ಜ.14;ಗುಜರಾತ್ ಜೈಂಟ್ಸ್‌;8.30

ಜ.16;ಪಟ್ನಾ ಪೈರೇಟ್ಸ್‌;8.30

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: