“ಇವಳಿಗೆ ಲವ್ ಜಿಹಾದ್ ಮಾಡಬೇಕಿತ್ತು, ನಿನ್ನನ್ನು ಬಿಡೆವು ” ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿ ವಿರುದ್ಧ ಮಾನಹಾನಿಕಾರ ಪೋಸ್ಟ್ – ಪುತ್ತೂರು ಕಾಂಗ್ರೇಸ್ ನಿಯೋಗದಿಂದ ಪೊಲೀಸರಿಗೆ ದೂರು

IMG-20211201-WA0062
Ad Widget

Ad Widget

Ad Widget

ಪುತ್ತೂರು: ಕೊಂಬೆಟ್ಟುವಿನಲ್ಲಿರುವ ಸರಕಾರಿ ಜ್ಯೂನಿಯರ್ ಕಾಲೇಜಿನ ಕೆಲ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾನಹಾನಿಕರ ಪೋಸ್ಟ್‌ ಗಳನ್ನು ಸಾಮಾಜಿಕ ಜಾಲತಾಣ ದಲ್ಲಿ ಹಂಚುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಅಗ್ರಹಿಸಿ ಡಿ. 1 ರಂದು ಪುತ್ತೂರು ನಗರ ಠಾಣೆಗೆ ಪುತ್ತೂರು ಬ್ಲಾಕ್ ಕಾಂಗ್ರೇಸ್ ವತಿಯಿಂದ ದೂರು ನೀಡಲಾಯಿತು.

Ad Widget

ಈ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ಎರಡು ವಾರದ ಹಿಂದೆ ಸರಣಿ ಅಹಿತಕರ ಘಟನೆ ನಡೆದಿದ್ದು , ಇದರ ಮುಂದುವರಿದ ಭಾಗವಾಗಿ ಕಾಲೇಜಿನ ಕೆಲ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕೆಲ ಕಿಡಿಗೇಡಿಗಳು ಟ್ರೋಲ್ ಪೇಜುಗಳ ಮೂಲಕ ನಿಂದನಾತ್ಮಕ ಹಾಗೂ ಕೋಮು ಭಾವನೆಯನ್ನು ಕೆರಳಿಸುವ ಪೋಸ್ಟ್ ಗಳನ್ನು ಹಂಚಿರುವುದು ಬೆಳಕಿಗೆ ಬಂದಿತ್ತು.

Ad Widget

Ad Widget

ಈ ರೀತಿಯ ವಿದ್ಯಾರ್ಥಿಗಳ ಮಾನ ಹಾನಿ ಮಾಡುವ ಹಾಗೂ ಕೋಮು ದ್ವೇಷ ಉಂಟುಮಾಡುವ ವಿಛಿಧ್ರಕಾರಿ ಶಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೇಸ್ ನಿಯೋಗವು ಪುತ್ತೂರು ನಗರ ಠಾಣೆಯ ಪ್ರಭಾರ ಡಿವೈಎಸ್ ಪಿ ಧನ್ಯ ರವರಲ್ಲಿ ಒತ್ತಾಯಿಸಿತ್ತು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ ಯವರು ಈ ದೂರನ್ನು ಸಲ್ಲಿಸಿದ್ದಾರೆ.

Ad Widget

ಕೆಲ ದಿನಗಳ ಹಿಂದೆ ಈ ಕಾಲೇಜಿನ ಎರಡು ಕೋಮಿಗೆ ಸೇರಿದ ವಿದ್ಯಾರ್ಥಿಗಳ ತಂಡಗಳ ಮಧ್ಯೆ ಹಲ್ಲೆ ಇರಿತ ಪ್ರಕರಣಗಳ ನಡೆದ ಬಳಿಕ ಇದೀಗ ಅವರ ವಿರುದ್ದ ಮಾನಹಾನಿಕರ ಅಭಿಯಾನವೂ ನಡೆಯುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳನ್ನು ನಿಂದಿಸುವ ಹಾಗೂ ಮಾನಹಾನಿಗೊಳಿಸುವ ಬರಹಗಳ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾನಸಿಕ ಹಿಂಸೆ ನೀಡುವಂತ ಕೃತ್ಯಗಳು ನಡೆಯುತ್ತಿವೆ.
ವಿದ್ಯಾಸಂಸ್ಥೆಯ ಹೊರಗಡೆ ಇರುವ ಕೋಮು ಸಂಘಟನೆಗಳು ಈ ರೀತಿ ವಿದ್ಯಾರ್ಥಿಗಳನ್ನು ಪ್ರಚೋದಿಸಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ವಿಷಬೀಜವನ್ನು ಬಿತ್ತಿ ಸಾಮಾಜಿಕ ಸ್ವಾಸ್ಥವನ್ನು ಕೆಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಮಾನಹಾನಿಕಾರಕವಾಗಿ ಟ್ರೋಲ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.

Ad Widget

Ad Widget

ಸಾಮಾಜಿಕ ಜಾಲತಾಣವಾದ Instagram ನಲ್ಲಿ ಒಂದು ಕೋಮಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಗುರಿಯಾಗಿಸಿಕೊಂಡು ಕೆಲವು ಟ್ರೋಲ್‌ ಪೇಜುಗಳ  ಮೂಲಕ ನಿಂದಿಸಲಾಗುತ್ತಿದೆ. ಅವಾಚ್ಯವಾಗಿ ಹಾಗೂ ಅಸಭ್ಯ ಭಾಷೆಯಲ್ಲಿ ಟ್ರೋಲಿನ ಹೆಸರಿನಲ್ಲಿ ಈ ಅಪ್ರಾಪ್ತ ವಿದ್ಯಾರ್ಥಿಗಳ ಮಾನಹಾನಿಯನ್ನು ನಿರಂತರವಾಗಿ ಮಾಡುತ್ತಿರುವುದು ಕಂಡು ಬಂದಿದೆ .

ಅದರಲ್ಲೂ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯಯೊಬ್ಬಳ ಭಾವ ಚಿತ್ರವನ್ನು ಹಾಕಿ ಅದಕ್ಕೆ  ಆಶ್ಲೀಲವಾಗಿ ಕಾಮೇಂಟ್‌ ಬರೆಯಲಾಗಿದೆ “ಎಂಥಾ ಫಿಗರ್‌ ಮಾರ್ರೆ ಇವಳು . ಇವಳಿಗೆ ಲವ್ ಜಿಹಾದ್ ಮಾಡಬೇಕಿತ್ತು ,  ನಿನ್ನನ್ನು ಬಿಡೆವು” ಎಂದು ಕೋಮು ಪ್ರಚೋಧನಕಾರಿಯಾಗಿ ಹಾಗೂ ಆಶ್ಲೀಲವಾಗಿ ಪೋಸ್ಟ್‌  ಹಾಕಲಾಗಿದೆ.

ಟ್ರೋಲ್‌ ಡೆವಿಲ್‌, ಟ್ರೋಲ್‌ ಬ್ಲ್ಯಾಕ್‌ ಡೆವಿಲ್‌, ಟ್ರೋಲ್‌ ಚೆಡ್ಡಿಗಳು  ಹಾಗು ಇನ್ನು ಕೆಲವು  ಇನ್ಸ್ಟಾಗ್ರಾಮ್‌ ಪೇಜುಗಳು ಈ ಕುಕೃತ್ಯ ಎಸಗಿವೆ . ಈ ಮೂರು ಪೇಜುಗಳ ತುಂಬಾ  ಕೋಮು ದ್ವೇಷ ಬೀರುವ ಹಲವು ಪೊಸ್ಟ್‌ ಗಳನ್ನು ಕಾಣಬಹುದು.

ದೂರು ನೀಡುವ ಸಂದರ್ಭ ಕಾಂಗ್ರೇಸ್‍ ನಿಯೋಗದಲ್ಲಿ ಬ್ಲಾಕ್ ಕಾಂಗ್ರೇಸ್‍ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ನಗರ ಕಾಂಗ್ರೇಸ್‍ ಅಧ್ಯಕ್ಷ ಎಚ್.ಮಹಮ್ಮದ್ ಆಲಿ,  ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ,  ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ.ಶಕೂರ್ ಹಾಜಿ, ಸದಸ್ಯ ಜೆರ್ಮಿ ಕುಟಿನ್ಹ, ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ  ಮತ್ತು ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ ಉಪಸ್ಥಿತರಿದ್ದರು.

ಇದನ್ನು ಓದಿ:

ʼಇವಳಿಗೆ ಲವ್ ಜಿಹಾದ್ ಮಾಡಬೇಕಿತ್ತು, ನಿನ್ನನ್ನು ಬಿಡೆವುʼ : ವಿದ್ಯಾರ್ಥಿನಿಗೆ ಟ್ರೋಲ್ ಪೇಜಿನಲ್ಲಿ ಬೆದರಿಕೆ | ಪುತ್ತೂರು ಸರಕಾರಿ ಜೂ. ಕಾಲೇಜಿನ ವಿದ್ಯಾರ್ಥಿಗಳ ನಡುವಿನ ಹೊಡೆದಾಟ ಪ್ರಕರಣದ ಬಳಿಕ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಿಂದನೆ -ವ್ಯಾಪಕ ಆಕ್ರೋಶ
https://nikharanews.in/2021/11/30/puttur-student-troll-love-jihad/

ಸ್ತನ ಕ್ಯಾನ್ಸರ್‌ – ಲಕ್ಷಣಗಳು ಆಧುನಿಕ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವ ಬಗೆ ಇಲ್ಲಿದೆ ಮಾಹಿತಿ : ಮಹಿಳೆಯರು/ ಯುವತಿಯರು ನೋಡಲೇಬೇಕಾದ ವಿಡಿಯೋ :

Leave a Reply

Recent Posts

error: Content is protected !!
%d bloggers like this: