ಅಕ್ರಮ ಗೋಸಾಗಟ ತಡೆಯಲು ಹೋದ ಯುವಕರ ಮೇಲೆಯೇ ವಾಹನ ಹತ್ತಿಸಿದ ಘಟನೆ: ಇಬ್ಬರು ಗಂಭೀರ: ಮಣಿಪಾಲ ಆಸ್ಪತ್ರೆಗೆ ದಾಖಲು

InShot_20211201_091315923
Ad Widget

Ad Widget

Ad Widget

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಿಂದ ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿರುವ ದನಗಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಪಿಕ್ ಅಪ್ ವ್ಯಾನ್ ಹತ್ತಿಸಿದ ಪರಿಣಾಮ ಯುವಕರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ನ.30ರಂದು ನಡೆದಿದೆ.

Ad Widget

ಮೇಳಿಗೆಯಿಂದ ಫಾಲೋ ಮಾಡಿದ ಯುವಕರ ಮೇಲೆ ಬೆಜ್ಜವಳ್ಳಿಯಲ್ಲಿ ಪಿಕ್ ಅಪ್ ವಾಹನ ಹತ್ತಿಸಲಾಗಿದೆ. ಕುಡುಮಲ್ಲಿಗೆ ರೈಸ್ ಮಿಲ್ ಬಳಿಯೂ ಕೆಲವರ ಮೇಲೆ ಹತ್ತಿಸಿದ ಘಟನೆಯೂ ನಡೆದಿದೆ.

Ad Widget

Ad Widget

Ad Widget

ಸಹೋದರರಾದ ಕಿರಣ್ (23), ಚರಣ್ (24) ಗಂಭೀರ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ತಾಲೂಕಿನ ಕಿತ್ತನಗದ್ದೆ ಮಂಜುನಾಥ್ ಅವರ ಪುತ್ರರು. ಘಟನೆ ನಡೆದ ಬಳಿಕ ಆಸ್ಪತ್ರೆಯ ಮುಂದೆ ನೂರಾರು ಜನ ಸೇರಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ.

Ad Widget

ಅಕ್ರಮ ಗೋ ಸಾಗಣೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.ಇಬ್ಬರು ಯುವಕರ ಚಿಕಿತ್ಸೆಗೆ ಮಣಿಪಾಲದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Ad Widget

Ad Widget

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: