ಮಣಿಪಾಲ, ನ 30: ಮೆಕ್ಯಾನಿಕ್ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 29 ರ ಸೋಮವಾರ ಮಣಿಪಾಲದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿ ಬೈಂದೂರು ಕಳವಾಡಿಯ ಚಿಕ್ಕಯ್ಯ ಪೂಜಾರಿ ಅವರ ಪುತ್ರ ಮಣಿಪಾಲದ ಈಶ್ವರನಗರದಲ್ಲಿ ಖಾಸಗಿ ಪಾಲಿಟೆಕ್ನಿಕ್ ಕಾಲೇಜಿನ 1ನೇ ವರ್ಷದ ಮೆಕ್ಯಾನಿಕ್ ಡಿಪ್ಲೋಮಾ ಓದುತ್ತಿದ್ದ ವಿದ್ಯಾರ್ಥಿ ಸುನೀಲ್ ಕುಮಾರ್ (18) .
ಒಂದು ತಿಂಗಳ ಹಿಂದೆ ಕಾಲೇಜು ಪ್ರಾರಂಭವಾದ ಕಾರಣ ಸುನೀಲ್ ಕುಮಾರ್ ಪಿ.ಜಿ ಒಂದರಲ್ಲಿ ವಾಸವಿದ್ದ. ಆದರೆ ಪಿ ಜಿ ಯಲ್ಲಿ ಉಳಿದುಕೊಳ್ಳಲು ಮನಸಿಲ್ಲದಿರುವ ಕಾರಣ ತಂದೆ- ತಾಯಿಯವರಲ್ಲಿ ಹೇಳಿದಾಗ ಅವರು ಮುಂದಿನ ವರ್ಷ ಹಾಸ್ಟೆಲ್ ಸಿಗುತ್ತದೆ ಅಲ್ಲಿಯವರೆಗೂ ಪಿ ಜಿ ಯಲ್ಲಿ ಇರುವಂತೆ ಸಮಾಧಾನಪಡಿಸಿದ್ದರು. ಇದೇ ಚಿಂತೆಯಿಂದ ಅಥವಾ ಇತರೆ ಯಾವುದೋ ಹೇಳೀಕೊಳ್ಳಲಾಗದ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನ.29 ರ ಬೆಳಿಗ್ಗೆ ತಾನು ವಾಸವಿದ್ದ ಪಿಜಿ ಯ ಕೋಣೆಯ ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಚಿಕ್ಕಪ್ಪ ದೂರು ನೀಡಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 40/2021 ಕಲಂ: 174 ಸಿ ಆರ್ ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.