ಪುತ್ತೂರು: ನ. 30 : ಪುತ್ತೂರಿನ ಸರಕಾರಿ ಜ್ಯೂ. ಕಾಲೇಜ್ ಕೊಬೆಟ್ಟುವಿನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವಿನ ಹೊಡೆದಾಟದ ವಿವಾದ ವಿದ್ಯಾರ್ಥಿಗಳ ನಡುವೆ ಶಮನವಾದಂತೆ ಮೆಲ್ನೋಟಕ್ಕೆ ಕಂಡು ಬರುತ್ತಿದ್ದೂ , ಆದರೆ ಅದರ ಕಿಡಿ ಆರದಂತೆ ಅದಕ್ಕೆ ಮತ್ತೆ ಬೆಂಕಿ , ತುಪ್ಪ ಹಾಕುವ ಕೆಲಸವನ್ನು ಬಾಹ್ಯ ಶಕ್ತಿಗಳು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣವಾದ Instagram ನಲ್ಲಿ ಒಂದು ಕೋಮಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಗುರಿಯಾಗಿಸಿಕೊಂಡು ಕೆಲವು ಟ್ರೋಲ್ ಪೇಜುಗಳ ಮೂಲಕ ನಿಂದಿಸಲಾಗುತ್ತಿದೆ. ಅವಾಚ್ಯವಾಗಿ ಹಾಗೂ ಅಸಭ್ಯ ಭಾಷೆಯಲ್ಲಿ ಟ್ರೋಲಿನ ಹೆಸರಿನಲ್ಲಿ ಈ ಅಪ್ರಾಪ್ತ ವಿದ್ಯಾರ್ಥಿಗಳ ಮಾನಹಾನಿಯನ್ನು ನಿರಂತರವಾಗಿ ಮಾಡುತ್ತಿರುವುದು ಕಂಡು ಬಂದಿದೆ .
ಅದರಲ್ಲೂ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯಯೊಬ್ಬಳ ಭಾವ ಚಿತ್ರವನ್ನು ಹಾಕಿ ಅದಕ್ಕೆ ಆಶ್ಲೀಲವಾಗಿ ಕಾಮೇಂಟ್ ಬರೆಯಲಾಗಿದೆ ಎಂಥಾ ಫಿಗರ್ ಮಾರ್ರೆ ಇವಳು ‘ಇವಳಿಗೆ ಲವ್ ಜಿಹಾದ್ ಮಾಡಬೇಕಿತ್ತು , ನಿನ್ನನ್ನು ಬಿಡೆವು’ಎಂದು ಕೋಮು ಪ್ರಚೋಧನಕಾರಿಯಾಗಿ ಹಾಗೂ ಆಶ್ಲೀಲವಾಗಿ ಪೋಸ್ಟ್ ಹಾಕಲಾಗಿದೆ . ಅಲ್ಲದೇ ಕೆಲ ಹಿಂದೂ ವಿದ್ಯಾರ್ಥಿಗಳ ಪೊಟೋ ಹಾಕಿ ತ್ರಿಶೂಲ ದಾಳಿ ನಡೆಸಿದ ABVP ಗೂಂಡಾಗಳು ಎಂದು ನಿಂದಿಸಲಾಗಿದೆ.

ಕಾಲೇಜಿನಲ್ಲಿ ನಡೆದ ಹೊಡೆದಾಟದ ವಿಚಾರವಾಗಿ ಒಂದು ಕೋಮಿನ ವಿದ್ಯಾರ್ಥಿಗಳಿಗೆ ಹಿಂಸೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಇರಿತಕ್ಕೆ ಒಳಗಾದ ವಿದ್ಯಾರ್ಥಿಯ ತಂದೆ ಜಿಲ್ಲೆಯ ಪ್ರಮುಖ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಹಿಂದೂ ಜಾಗರಣೆ ವೇದಿಕೆ ಸಂಘಟಕರ ವಿರುದ್ದ ದೂರು ನೀಡಿದ್ದು ಆ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೀಗ ಈ ವಿಚಾರವನ್ನು ಹಿಡಿದುಕೊಂಡು ಈ ಟ್ರೋಲ್ ಪೇಜುಗಳು ಪುತ್ತಿಲ ಅವರನ್ನು ಕೂಡ ಟ್ರೋಲ್ ಮಾಡಿದೆ. ಪುತ್ತಿಲರವರನ್ನು ಏಕವಚನದಲ್ಲಿ ಉಲ್ಲೇಖಿಸಿ ಪೋಸ್ಟ್ ಹಾಕಿದ್ದು ಅದರಲ್ಲಿ ತುಳುವಿನಲ್ಲಿ “ ಅರುಣ್ ಕುಮಾರ್ ಪುತ್ತಿಲ, ದಾಯೆಗ್ ನಿಕ್ ಉಂದು ಪೂರ ಇಲ್ಲಡ್ ಕುಲ್ಲರ ಅಯಿಜ ಇತ್ತೆ ತೂಲ FIR ಪಾಡುದೆರ್ , ಉಂದು ಪೂರ ಬೋಡ ನಿಕ್ಕ್ “ ( ಅರುಣ್ ಕುಮಾರ್ ಪುತ್ತಿಲ ಇದೆಲ್ಲಾ ಯಾಕೇ ನಿನಗೆ ? ಸುಮ್ಮನೆ ಮನೆಯಲ್ಲಿ ಕೂರಬಹುದಿತ್ತು ಅಲ್ವಾ ? ಈಗ ನೋಡು FIR ಹಾಕಿದ್ದಾರೆ ) ಎಂದು ಬರೆಯಲಾಗಿದೆ . ಪುತ್ತಿಲರವರನ್ನು ಉಲ್ಲೇಖಿಸಿ ಹಾಕಿದ ಇನ್ನೊಂದು ಪೋಸ್ಟ್ ನಲ್ಲಿಯಂತು ಅತ್ಯಂತ ಕೆಟ್ಟದಾಗಿ , ಅವಾಚ್ಯವಾಗಿ ಬೈದಿದ್ದಾರೆ.

ಟ್ರೋಲ್ ಡೆವಿಲ್, ಟ್ರೋಲ್ ಬ್ಲ್ಯಾಕ್ ಡೆವಿಲ್, ಟ್ರೋಲ್ ಚೆಡ್ಡಿಗಳು ಹಾಗು ಇನ್ನು ಕೆಲವು ಇನ್ಸ್ಟಾಗ್ರಾಮ್ ಪೇಜುಗಳು ಈ ಕುಕೃತ್ಯ ಎಸಗಿವೆ . ಈ ಮೂರು ಪೇಜುಗಳ ತುಂಬಾ ಕೋಮು ದ್ವೇಷ ಬೀರುವ ಹಲವು ಪೊಸ್ಟ್ ಗಳನ್ನು ಕಾಣಬಹುದು . ರಾಜ್ಯದ ಯಾವುದೇ ಮೂಲೆಯಲ್ಲಿ ಭಿನ್ನ ಕೋಮಿಗೆ ಸೇರಿದ ವ್ಯಕ್ತಿಗಳ ಪರವಾಗಿ ತಕರಾರುಗಳು ಉಂಟಾದಾಗ ಆ ಬಗ್ಗೆ ಒಂದು ಕೋಮಿನ ಪರವಾಗಿ ಪೋಸ್ಟ್ ಹಾಕುವ ಚಾಳಿಯನ್ನು ಈ ಪೇಜುಗಳು ಅಳವಡಿಸಿಕೊಂಡಿವೆ.

ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಮಾನಹಾನಿ ಮಾಡಿ, ಅವರನ್ನು ಮಾನಸಿಕ ಕುಗ್ಗುವಂತೆ ಮಾಡುವ ಈ ರೀತಿಯ ಪೋಸ್ಟ್ ಗಳಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ, ಅವರ ಭವಿಷ್ಯದ ಮೇಲೆ ಅಗಾಧ ಪರಿಣಾಮ ಬೀರುವ ಆತಂಕ ಇದೀಗ ಎದುರಾಗಿದೆ. ಕೆಲವು ವಿದ್ಯಾರ್ಥಿಗಳಂತೂ ಈ ಹೊಡೆದಾಟ ಪ್ರಕರಣದಲ್ಲಿ ಠಾಣೆಯಲ್ಲಿ ದೂರು ದಾಖಲಾಗಿ ಕಾನೂನು ಸಂಘರ್ಷಕ್ಕೂ ಒಳಗಾಗಿದ್ದಾರೆ. ಇದರ ನಡುವೆ ಇಂತಹ ಟ್ರೋಲ್ ಗಳು ಅವರ ಶೈಕ್ಷಣಿಕ ಬದುಕನ್ನೆ ಹಾಳು ಮಾಡುವ ಭೀತಿ ಎದುರಾಗಿದೆ.

ಹೀಗಾಗಿ ಈ ಟ್ರೋಲ್ ಪೇಜುಗಳ ಮೇಲೆ , ಹಾಗೂ ಈ ಕೃತ್ಯ ಎಸಗಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ವಿದ್ಯಾರ್ಥಿಗಳ ಪೋಷಕರಿಂದ ಹಾಗು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
