Ad Widget

ಮಂಗಳೂರು : ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ – ಇರ್ಫಾನ್ ಗೆ ಏಳು ವರ್ಷಗಳ ಕಠಿನ ಸಜೆ ವಿಧಿಸಿ ತೀರ್ಪು

Court Order
Ad Widget

Ad Widget

Ad Widget

ಮಂಗಳೂರು : ನ 30 : ಅಪ್ರಾಪ್ತ ಪಿಯುಸಿ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿದವನಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ ಟಿಎಸ್‌ಸಿ -1 ನ್ಯಾಯಾಲಯವೂ ಏಳು  ವರ್ಷಗಳ ಕಠಿನ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ದೇರಳಕಟ್ಟೆಯ ನಿವಾಸಿ ಇರ್ಫಾನ್ ( 28 ) ಶಿಕ್ಷೆಗೊಳಗಾದವನು.   ಈತ 2014 ರ ಅಗಷ್ಟ್‌ʼನಲ್ಲಿ ಪರೀಕ್ಷೆ ಬರೆಯಲು ತೆರಳುತ್ತಿದ್ದ   ಪಿಯುಸಿ ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಿ ಚಿಕ್ಕಮಗಳೂರಿನ  ಲಾಡ್ಜ್ ನಲ್ಲಿ ಕೂಡಿ ಹಾಕಿ ಅತ್ಯಾಚಾರವೆಸಗಿದ.

Ad Widget

Ad Widget

Ad Widget

Ad Widget

 ಇರ್ಫಾನ್   ಸಂತ್ರಸ್ತೆಯ ಪರಿಚಯ ಮಾಡಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಬಳಿಕ ತಾನೂ ಆಕೆಯನ್ನು  ಪ್ರೀತಿಸುತ್ತಿರುವುದಾಗಿಯೂ, ತನ್ನನ್ನೂ  ಮದುವೆಯಾಗಬೇಕಾಗಿಯೂ ಎಂದು ಒತ್ತಾಯಿಸುತ್ತಿದ್ದ.   2014 ರ ಆಗಸ್ಟ್‌ನಲ್ಲಿ ಪರೀಕ್ಷೆ ಬರೆಯಲೆಂದು ಕಾಲೇಜಿಗೆ ಹೋಗುತ್ತಿದ್ದ  ವಿದ್ಯಾರ್ಥಿನಿಯನ್ನು ನಾಟೆಕಲ್‌ ಎಂಬಲ್ಲಿ  ತಡೆದು ಅಪಹರಿಸಿ  ಕಾರಿನಲ್ಲಿ   ಚಿಕ್ಕಮಗಳೂರಿನ ಲಾಡ್ಜ್‌ಗೆ ಕರೆದೊಯ್ದಿದ್ದಾನೆ.   ಅಲ್ಲಿ ಆಕೆಯನ್ನು  ಕೂಡಿ ಹಾಕಿ ಅತ್ಯಾಚಾರವೆಸಗಿದ್ದಾನೆ . ಅಲ್ಲದೇ  ಈ ವಿಚಾರವನ್ನು  ಹೊರಗೆ ಬಾಯ್ಬಿಟ್ಟರೆ  ಕೊಲೆ ಮಾಡುವ ಬೆದರಿಕೆಯನ್ನು ಒಡ್ಡಿದ್ದಾನೆ.

ವಿದ್ಯಾರ್ಥಿನಿ ನಾಪತ್ತೆಯಾಗಿದ್ದ ಬಗ್ಗೆ ಆಕೆಯ ಹೆತ್ತವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು, ಬಳಿಕ ಪೊಲೀಸರು ಪತ್ತೆ ಹಚ್ಚಿ ಆರೋಪಿ ಇರ್ಫಾನ್ ನನ್ನು ಬಂಧಿಸಿದ್ದರು . ಆಗಿನ ಉಳ್ಳಾಲ ಇನ್‌ಸ್ಪೆಕ್ಟರ್ ಸವಿತ್ರ ತೇಜ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು .

Ad Widget

Ad Widget

ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ  ನ್ಯಾಯಾಧೀಶರಾದ  ಸಾವಿತ್ರಿ ವಿ . ಭಟ್ ಅವರು ಪೂರಕ ಸಾಕ್ಷ್ಯಗಳನ್ನು ಪರಿಗಣಿಸಿ ಆರೋಪಿಯ ಅಪರಾಧ ಎಸಗಿರುವುದು  ದೃಢಪಟ್ಟಿರುವುದಾಗಿ ಘೋಷಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ .

ಶಿಕ್ಷೆಯ ಪ್ರಮಾಣ :

ಅಪಹರಣ ಕೃತ್ಯಕ್ಕೆ 3 ವರ್ಷ ಸಜೆ ಮತ್ತು 5,000 ರೂ . ದಂಡ , ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 15 ದಿನ ಹೆಚ್ಚುವರಿ ಸಜೆ , ತಡೆದು ನಿಲ್ಲಿಸಿದ ಕೃತ್ಯಕ್ಕೆ 5 ತಿಂಗಳು ಸಜೆ ಮತ್ತು 1,000 ರೂ . ದಂಡ , ದಂಡ ಪಾವತಿಸಲು ತಪ್ಪಿದರೆ ಮತ್ತೆ 15 ದಿನ ಸಜೆ , ಕೊಲೆ ಬೆದರಿಕೆಯೊಡ್ಡಿರುವುದಕ್ಕೆ 1 ವರ್ಷ ಸಜೆ ಮತ್ತು 2,000 ರೂ . ದಂಡ , ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ತಿಂಗಳು ಸಜೆ , ಅಪ್ರಾಪ್ತ ವಯಸ್ಕಳ ಮೇಲಿನ ಅತ್ಯಾಚಾರಕ್ಕೆ ಪೋಕ್ಸ್ ಕಾಯ್ದೆಯಡಿ 7 ವರ್ಷ ಸಜೆ ಮತ್ತು 15,000 – ರೂ . ದಂಡ , ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 2 ತಿಂಗಳ ಸಜೆ

Ad Widget

Leave a Reply

Recent Posts

error: Content is protected !!
%d bloggers like this: